Home
Gadgets

Summer Gadgets: ಬಿರು ಬಿಸಿಲಿಗೆ ಹೇಳಿ ಗುಡ್‌ಬೈ.. ಈ ಡಿವೈಸ್‌ಗಳು ಮಾಡಲಿವೆ ನಿಮ್ಮನ್ನು ಕೂಲ್‌.. ಕೂಲ್‌..

ರಸ್ತೆ ಬದಿಗಳಲ್ಲಿ ಹೊಸ ಹೊಸ ಜ್ಯೂಸ್‌ ಅಂಗಡಿಗಳು ತಲೆ ಎತ್ತುತ್ತಿವೆ. ಅಲ್ಲದೆ ಎಲೆಕ್ಟ್ರಾನಿಕ್ಸ್‌ ಸ್ಟೋರ್‌ಗಳ ಮುಂದೆ ಸಾಲು ಸಾಲು ಕೂಲರ್‌ಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಈಗಾಗಲೇ ಈ ಸ್ಟೋರ್‌ಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಆದರೆ, ನಾವು ತಿಳಿಸುವ ಕೆಲವು ಸ್ಮಾರ್ಟ್‌ ಡಿವೈಸ್‌ಗಳನ್ನು (Summer Gadgets) ಖರೀದಿ ಮಾಡುವ ಮೂಲಕ ನೀವು ಈ ಸುಡುವ ಬಿಸಿಲಿನ ಶಾಖದಿಂದ ಪಾರಾಗಬಹುದು.

ಹೌದು, ಬೇಸಿಗೆ ಬಂದ್ರೆ ಸಾಕು ಹೊಸ ಹೊಸ ಸ್ಮಾರ್ಟ್‌ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತವೆ. ಇವು ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯಲ್ಲಿ ಲಭ್ಯ ಇವೆ. ಈ ನಡುವೆ ನೀವೇನಾದರೂ ನಿತ್ಯವೂ ಮನೆಯಿಂದ ಎಲ್ಲಾದರೂ ಸಂಚಾರ ಮಾಡುತ್ತಿದ್ದರೆ ಅಥವಾ ಆಫೀಸ್‌ಗೆ ಹೋಗುತ್ತಿದ್ದರೆ ಬಿಸಿಲಿನಿಂದ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಕೆಲವು ಅಗ್ಗದ ಬೆಲೆಯ ಸ್ಮಾರ್ಟ್‌ಡಿವೈಸ್‌ಗಳನ್ನು ಬಳಕೆ ಮಾಡಬಹುದು. ಹಾಗಿದ್ರೆ, ಬನ್ನಿ ಯಾವೆಲ್ಲಾ ಡಿವೈಸ್‌ಗಳು ಹೇಗೆಲ್ಲಾ ಪ್ರಯೋಜನಕಾರಿ ಅನ್ನೋದನ್ನು ನೋಡೋಣ.

ಬಿರು ಬಿಸಿಲಿಗೆ ಹೇಳಿ ಗುಡ್‌ಬೈ.. ಈ ಡಿವೈಸ್‌ಗಳು ಮಾಡಲಿವೆ ನಿಮ್ಮನ್ನು ಕೂಲ್‌...

ಧರಿಸಬಹುದಾದ ಪೋರ್ಟಬಲ್ ಫ್ಯಾನ್: ಈ ಫ್ಯಾನ್‌ (Wearable portable fan) ಖಂಡಿತಾ ನಿಮಗೆ ಇಷ್ಟ ಆಗುತ್ತದೆ. ಇದನ್ನು ನೆಕ್‌ಬ್ಯಾಂಡ್‌ ಧರಿಸುವ ರೀತಿಯಲ್ಲೇ ಬಳಕೆ ಮಾಡಮಾಡಬಹುದು. ಬ್ಯಾಟರಿ ಚಾಲಿತ ಡಿವೈಸ್‌ ಇದಾಗಿದ್ದು, ನೇರವಾಗಿ ಮುಖದ ಮೇಲೆ ಗಾಳಿಯನ್ನು ಬೀಸುತ್ತದೆ. ಇದರಿಂದ ಎಂತಹುದೇ ಬಿಸಿ ಗಾಳಿ ಬಂದರೂ ಸಹ ತಂಪಾದ ಅನುಭವ ಪಡೆಯಬಹುದಾಗಿದೆ. ಇವುಗಳ ಬೆಲೆ 150 ರೂ.ಗಳಿಂದ ಆರಂಭ ಆಗಲಿದೆ.

ಪೋರ್ಟಬಲ್ ಬ್ಯಾಟರಿ ಚಾಲಿತ ಯುಎಸ್‌ಬಿ ಜ್ಯೂಸ್ ಮೇಕರ್: ಈ ಡಿವೈಸ್‌ (USB juice maker​) ಅನ್ನು ಮನೆಯಲ್ಲಿ ಅಥವಾ ಎಲ್ಲಾದರೂ ದೂರದ ಪ್ರಯಾಣ ಮಾಡುವಾಗ ಬಳಕೆ ಮಾಡಬಹುದಾಗಿದೆ. ತಾಜಾ ಮತ್ತು ತಂಪಾಗಿರುವ ಜ್ಯೂಸ್‌ ಅನ್ನು ಕುಡಿಯಲು ಬಯಸುವವರು ಈ ಡಿವೈಸ್‌ ಅನ್ನು ಖರೀದಿ ಮಾಡಬಹುದು. ಇದು ಬ್ಯಾಟರಿ ಚಾಲಿತವಾಗಿದ್ದು, ವಿವಿಧ ಬಣ್ಣಗಳು ಮತ್ತು ಗಾತ್ರಗಳಲ್ಲಿ ಕಂಡುಬರುತ್ತದೆ. ಈ ಡಿವೈಸ್‌ ನಿಮಗೆ 500 ರೂ.ಗಳ ಬೆಲೆಯಿಂದ ಆರಂಭ ಆಗುತ್ತದೆ.

ಬಿರು ಬಿಸಿಲಿಗೆ ಹೇಳಿ ಗುಡ್‌ಬೈ.. ಈ ಡಿವೈಸ್‌ಗಳು ಮಾಡಲಿವೆ ನಿಮ್ಮನ್ನು ಕೂಲ್‌...

ಯುಎಸ್‌ಬಿ ಡೆಸ್ಕ್ ಫ್ಯಾನ್‌: ಈ ಫ್ಯಾನ್‌ (USB Desk Fan) ಬಗ್ಗೆ ನೀವು ಈಗಾಗಲೇ ತಿಳಿದಿರಬಹುದು. ಇವು ಚಿಕ್ಕ ಅಥವಾ ಪುಟ್ಟ ಡಿವೈಸ್‌ ಆಗಿದ್ದು, ವರ್ಕ್‌ ಫ್ರಂ ಹೋಂ ಕೆಲಸಗಾರರಿಗೆ ಅತ್ಯುತ್ತಮವಾಗಿದೆ. ಈ ಫ್ಯಾನ್ 3 ವೇಗದ ಸೆಟ್ಟಿಂಗ್‌ ಆಯ್ಕೆ ಪಡೆದಿದ್ದು, 10pcs ಫ್ಯಾನ್ ಬ್ಲೇಡ್‌ಗಳೊಂದಿಗೆ ಬರುತ್ತವೆ. ಈ ಮೂಲಕ ನಿಮಗೆ ಉತ್ತಮವಾದ ಗಾಳಿಯ ಹರಿವನ್ನು ನೀಡುತ್ತವೆ. ಯುಎಸ್‌ಬಿ ಕೇಬಲ್‌ನಿಂದ ರನ್‌ ಆಗುವುದರಿಂದ ನೀವು ಇದನ್ನು ಲ್ಯಾಪ್‌ಟಾಪ್, ಪವರ್ ಬ್ಯಾಂಕ್‌ ಸೇರಿದಂತೆ ಅನೇಕ ಡಿವೈಸ್‌ಗಳ ಮೂಲಕ ಸಂಪರ್ಕ ಪಡೆಯಬಹುದು. ಈ ಫ್ಯಾನ್ ನಿಮಗೆ 300 ರೂ.ಗಳ ಬೆಲೆಯಿಂದ ಆರಂಭ ಆಗುತ್ತದೆ.

ಸೋಲಾರ್‌ ಕ್ಯಾಪ್ ವಿಥ್‌ ಫ್ಯಾನ್: ಈ ವಿಶೇಷ ಕ್ಯಾಪ್‌ (Solar cap with fan) ಅನ್ನು ಹಳ್ಳಿಗಾಡಿನಲ್ಲಿ ಬಳಕೆ ಮಾಡಬಹುದು. ಕೂಲಿ ಕಾರ್ಮಿಕರು ಈ ಮೂಲಕ ತಂಪಾದ ಗಾಳಿಯನ್ನು ಪಡೆಯಬಹುದಾಗಿದೆ. ಈ ಕ್ಯಾಪ್‌ ಫ್ಯಾನ್ ಆಯ್ಕೆ ಪಡೆದಿದ್ದು, ಸೋಲಾರ್‌ ಪವರ್‌ ಬಳಕೆ ಮಾಡಿಕೊಂಡು ರನ್ ಆಗಲಿದೆ. ನೀವು ಯಾವಾಗ ಕ್ಯಾಪ್‌ ಹಾಕಿಕೊಂಡು ಸೂರ್ಯನ ಬೆಳಕಿಗೆ ತೆರೆದುಕೊಳ್ಳುತ್ತೀರೋ ಆಗ ಆಟೋಮ್ಯಾಟಿಕ್‌ ಆಗಿ ಕಾರ್ಯನಿರ್ವಹಿಸಲಿದೆ. ಇದರ ಬೆಲೆ 1,500ರೂ.ಗಳಿಂದ ಆರಂಭ ಆಗಲಿದೆ.

ಬಿರು ಬಿಸಿಲಿಗೆ ಹೇಳಿ ಗುಡ್‌ಬೈ.. ಈ ಡಿವೈಸ್‌ಗಳು ಮಾಡಲಿವೆ ನಿಮ್ಮನ್ನು ಕೂಲ್‌...

ಪೋರ್ಟಬಲ್ ಮಿನಿ ಮಾಸ್ಕ್ ಕೂಲಿಂಗ್ ಫ್ಯಾನ್‌: ಈ ಫ್ಯಾನ್‌ (Portable Mini Mask Cooling Fan) ಅನ್ನು ಭಾರತದಲ್ಲಿ ಬಳಕೆ ಮಾಡುವುದು ಕಡಿಮೆ ಎನ್ನಬಹುದಾದರೂ ಕೆಲವು ಕಡೆ ಇದನ್ನು ಬಳಕೆ ಮಾಡಲಾಗುತ್ತಿದೆ. ಈ ಮಸ್ಕ್‌ ನಿಮ್ಮನ್ನು ಎಂತಹುದೇ ಬಿಸಿಲಿನಲ್ಲೂ ಕೂಲ್‌ ಕೂಲ್‌ ಆಗಿ ಇರಲು ಸಹಾಯ ಮಾಡಲಿದೆ. ಫೇಸ್ ಮಾಸ್ಕ್‌ನಲ್ಲಿರುವ ಫ್ಯಾನ್ ಒಂದೇ ಚಾರ್ಜ್‌ನಲ್ಲಿ 4 ಗಂಟೆಗಳವರೆಗೆ ರನ್‌ ಆಗಲಿದೆ. ಈ ರೀತಿಯ ಫ್ಯಾನ್‌ಗೆ ಬೆಲೆ ಒಂದು ಸಾವಿರದಿಂದ ಆರಂಭ ಆಗುತ್ತದೆ.

Best Mobiles in India

English summary
Summer has started and meanwhile various smart Summer Gadgets are being sold on leading e-commerce sites. These are portable devices that will provide a cool experience to the users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+