ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರುವ ಟಾಪ್ ಬ್ಲೂಟೂತ್ ಸ್ಪೀಕರ್ಸ್!
ಮ್ಯೂಸಿಕ್ ಪ್ರಿಯರಿಗೆ ಅತ್ಯುತ್ತಮ ಸ್ಪೀಕರ್ಸ್‌ಗಳು ಅಂದ್ರೆ ಇಷ್ಟ. ಅದರಲ್ಲಿಯೂ ಇದೀಗ ವಾಯರ್‌ಲೆಸ್ ಸ್ಪೀಕರ್ಸ್‌ಗಳ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ವಾಯರ್‌ಲೆಸ್ ಸ್ಪೀಕರ್‌ಗಳನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಬಹುದಾಗಿದ್ದು, ಆಡಿಯೋ ಔಟ್‌ಪುಟ್ ಸಹ ಅತ್ಯುತ್ತಮವಾದ ಸೌಲಭ್ಯಗಳಿವೆ. ಭಿನ್ನ ಡಿಸೈನ್‌ನಲ್ಲಿದ್ದು, ಹಗುರವಾದ ರಚನೆಯನ್ನು ಸಹ ಹೊಂದಿದೆ. ಜೊತೆಗೆ ಕ್ಯಾರಿ ಸಹ ಮಾಡಬಹುದಾಗಿದೆ.

ಹೌದು, ಸ್ಮಾರ್ಟ್‌ಫೋನ್ ಇರಲಿ ಅಥವಾ ಇತರೆ ಯಾವುದೇ ಡಿವೈಸ್ ಇರಲಿ ಬ್ಲೂಟೂತ್ ಮೂಲಕ ಸರಳವಾಗಿ ವಾಯರ್‌ಲೆಸ್ ಸ್ಪೀಕರ್ಸ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ಇವು ನಿಗದಿತ ವ್ಯಾಪ್ತಿಯನ್ನು ರೇಂಜ್ ಹೊಂದಿದ್ದು, ಪ್ರಮುಖ ಆಡಿಯೊ ಉತ್ಪನ್ನಗಳ ತಯಾರಿಕಾ ಕಂಪನಿಗಳ ಸ್ಪೀಕರ್ಸ್‌ಗಳು ಟ್ರೆಂಡಿಂಗ್‌ನಲ್ಲಿವೆ. ಕಡಿಮೆ ಬೆಲೆಯಿಂದ ಹೈ ಎಂಡ್ ಬೆಲೆಯವರೆಗೂ ವಿವಿಧ ಶ್ರೇಣಿಯಲ್ಲಿ ದೊರೆಯಲಿವೆ. ಹಾಗಾದರೇ ಸದ್ಯ 2000ರೂ. ಬೆಲೆ ಪ್ರೈಸ್ ಟ್ಯಾಗ್‌ನಲ್ಲಿ ಲಭ್ಯವಿರುವ ಕೆಲವು ವಾಯರ್‌ಲೆಸ್ ಸ್ಪೀಕರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬೋಟ್ ಸ್ಟೋನ್ 200
ಜನಪ್ರಿಯ ಬೋಟ್ ಕಂಪನಿಯ ಈ ಸ್ಪೀಕರ್ ಚೌಕಾಕಾರದ ರಚನೆ ಪಡೆದಿದ್ದು, ವಾಯರ್‌ಲೆಸ್ ಸೌಲಭ್ಯ ಪಡೆದಿದೆ. ವಾಟರ್ ಹಾಗೂ ಡಸ್ಟ್ ರೆಸಿಸ್ಟನ್ಸ್ ಸೌಲಭ್ಯವನ್ನು ಒಳಗೊಂಡಿದ್ದು, ಅತ್ಯುತ್ತಮ ಸೌಂಡ್ ಹೊರಹಾಕಲಿದೆ. ಅಮೆಜಾನ್ ತಾಣದಲ್ಲಿ ಖರೀದಿಗೆ ಲಭ್ಯ.

ಸೋನಿ SRS XB01
ಸೋನಿ ಕಂಪನಿಯ SRS XB01 ವಾಯರ್‌ಲೆಸ್ ಸ್ಪೀಕರ್ 200ಗ್ರಾಂ ತೂಕವನ್ನು ಹೊಂದಿದ್ದು, ಅತ್ಯುತ್ತಮ ಬಾಸ್ ಸೌಂಡ್ ಅನ್ನು ಹೊರಸೂಸಲಿದೆ. ಸೈಡ್ ಮೌಟೆಂಡ್ ಯುಎಸ್‌ಬಿ ಕೇಬಲ್‌ನಿಂದ ಚಾರ್ಜ್ ಮಾಡುವ ಆಯ್ಕೆಯನ್ನು ಹೊಂದಿರುವ ಈ ಸಾಧನ ಒಮ್ಮೆ ಚಾರ್ಜ್ ಮಾಡಿದರೇ 6 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಒದಗಿಸಲಿದೆ. ಗ್ರೀನ್, ಬ್ಲ್ಯಾಕ್, ವೈಟ್, ಬ್ಲೂ, ರೆಡ್ ಮತ್ತು ಯೆಲ್ಲೊ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.

Mi ಬೇಸಿಕ್ 2
ಶಿಯೋಮಿ ಕಂಪನಿಯ 'ಮಿ ಬೇಸಿಕ್ 2' ಹೆಸರಿನ ಸ್ಪೀಕರ್ 5 ವ್ಯಾಟ್ ಔಟ್‌ಪುಟ್ ವಿದ್ಯುತ್ ಸಾಮರ್ಥ್ಯದಲ್ಲಿದ್ದು, 1200mAh ಬ್ಯಾಟರಿ ಶಕ್ತಿಯನ್ನು ಪಡೆದಿದೆ. ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾಗಿದ್ದು, ಜೊತೆಗೆ ಮೈಕ್ರೋಫೋನ್ ಆಯ್ಕೆ ಒಳಗೊಂಡಿರುವುದರಿಂದ ವಾಯರ್‌ಲೆಸ್ ಕರೆಗಳನ್ನು ಸ್ವೀಕರಿಸಬಹುದು. ಚಾರ್ಜಿಂಗ್‌ಗಾಗಿ ಮೈಕ್ರೋ ಯುಎಸ್‌ಬಿ ಪೋರ್ಟ್ ಆಯ್ಕೆ ಒದಗಿಸಲಾಗಿದೆ. 10 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ನೀಡಲಿರುವ ಈ ಡಿವೈಸ್ ಮೆಟಲ್ ಮತ್ತು ಪ್ಲಾಸ್ಟಿಕ್‌ನಿಂದ ಬಾಹ್ಯ ರಚನೆಯನ್ನು ಪಡೆದುಕೊಂಡಿದೆ.

LG PH2 ಸ್ಪೀಕರ್
ಎಲ್‌ಜಿ ಕಂಪನಿಯ ಈ ವಾಯರ್‌ಲೆಸ್ ಸ್ಪೀಕರ್ ಧೂಳು ನಿರೋಧಕ ರಚನೆಯನ್ನು ಪಡೆದುಕೊಂಡಿದ್ದು, ಸೌಂಡ್ ಕ್ವಾಲಿಟಿಯಲ್ಲಿಯು ಅತ್ಯುತ್ತಮವಾಗಿದೆ. ಮುಂಬದಿಯಲ್ಲಿ ಫ್ಯಾಬ್ರಿಕ್ ಮೆಸ್ ಡಿಸೈನ್ ಹೊಂದಿದ್ದು, ವೃತ್ತಾಕಾರವಾದ ರಚನೆಯನ್ನು ಪಡೆದಿದೆ. ಎಲ್‌ಇಡಿ ಲೈಟ್ ಇಂಡಿಕೇಷನ್ ಹೊಂದಿದ್ದು, ಯುಎಸ್‌ಬಿ ಪೋರ್ಟ್‌ಗೆ ರಕ್ಷಣೆಗೆ ರಬ್ಬರ್ ಮುಚ್ಚಳಿಗೆ ಇದೆ. ಈ ಡಿವೈಸ್ ಹೆಚ್ಚಾಗಿ ಔಟ್‌ಡೋರ್ ಆಕ್ವಿವಿಟಿಯಲ್ಲಿ ತೊಡಗಿರುವವರಿಗೆ ಮತ್ತು ರಾಫ್ಟಿಂಗ್ ಮಾಡವವರಿಗೆ ಬೆಸ್ಟ್ ಆಯ್ಕೆ ಆಗಿದೆ.


Click it and Unblock the Notifications








