ಬಜೆಟ್ ದರದಲ್ಲಿ ಖರೀದಿಸಬಹುದಾದ ಕೆಲವು ಅತ್ಯುತ್ತಮ ಆಡಿಯೋ ಉತ್ಪನ್ನಗಳು!
ಸದ್ಯ ಹಬ್ಬದ ಸೀಸನ್ ಇದ್ದು, ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಜನರು ಹೊಸ ಗ್ಯಾಡ್ಜೆಟ್ ಉತ್ಪನ್ನಗಳನ್ನು ಖರೀದಿಸಲು ಮುಂದಾಗುತ್ತಾರೆ. ಹೀಗೆ ನೀವು ಏನನ್ನಾದರೂ ಖರೀದಿ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದರೇ, ಆಡಿಯೋ ಉತ್ಪನ್ನ ಖರೀದಿಸಬಹುದು. ಏಕೆಂದರೇ ಪ್ರಸ್ತುತ ಹಬ್ಬದ ಪ್ರಯುಕ್ತ ಇ ಕಾಮರ್ಸ್ ತಾಣಗಳು ಆಡಿಯೋ ಉತ್ಪನ್ನಗಳಿಗೂ ಬೊಂಬಾಟ್ ಕೊಡುಗೆ ನೀಡುತ್ತಿವೆ.

ಹೌದು, ಪ್ರಮುಖ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಗಳು ಆಡಿಯೋ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿ ಘೋಷಿಸಿವೆ. ಸಾಮಾನ್ಯವಾಗಿ ಎಲ್ಲ ವಯೋಮಾನದವರಿಗೂ ಆಡಿಯೋ ಉತ್ಪನ್ನಗಳು ಇಷ್ಟ ಆಗುತ್ತವೆ. ಹೀಗಾಗಿ ಈ ಹಬ್ಬದ ಸಂದರ್ಭದಲ್ಲಿ ಅತ್ಯುತ್ತಮ ಬೆಲೆಗೆ ಆಡಿಯೋ ಉತ್ಪನ್ನ ಖರೀದಿ ಮಾಡಬಹುದು. ಹಾಗಾದರೇ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಆಡಿಯೋ ಉತ್ಪನ್ನಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಲಾಗಿದೆ ಮುಂದೆ ಓದಿರಿ.
ರೆಡ್ಮಿ ಇಯರ್‌ಬಡ್ಸ್ 3 ಪ್ರೊ ಡಿವೈಸ್
ಜನಪ್ರಿಯ ಶಿಯೋಮಿ ಕಂಪನಿ ಸಬ್ ಬ್ರಾಂಡ್ ಆಗಿರುವ ರೆಡ್ಮಿ ನೂತನವಾಗಿ ಭಾರತದಲ್ಲಿ ಬಿಡುಗಡೆ ಮಾಡಿರುವ ರೆಡ್ಮಿ ಇಯರ್‌ಬಡ್ಸ್ 3 ಪ್ರೊ ಡಿವೈಸ್ ಸಾಕಷ್ಟು ಸದ್ದು ಮಾಡಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಟ್ರೆಂಡಿಂಗ್‌ನಲ್ಲಿರುವ ಈ ಡಿವೈಸ್ ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳ ಸೌಲಭ್ಯ ಪಡೆದಿದ್ದು, ಉತ್ತಮ ವಿನ್ಯಾಸ ಮತ್ತು ಆರಾಮವನ್ನು ಟೇಬಲ್‌ಗೆ ಆಯ್ಕೆ ಪಡೆದಿದೆ. ಇನ್ನು ಈ ಇಯರ್‌ಬಡ್‌ಗಳು ಮೂರು ಬಣ್ಣದ ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಿವೆ. ಹಾಗೆಯೇಅವುಗಳು ಕ್ವಾಲ್ಕಾಮ್ ಆಪ್ಟಿಎಕ್ಸ್ ಅಡಾಪ್ಟಿವ್ ತಂತ್ರಜ್ಞಾನ ಸೌಲಭ್ಯವನ್ನು ಒಳಗೊಂಡಿವೆ. ಇನ್ನು ಈ ಡಿವೈಸ್ ಬೆಲೆಯು 2,999ರೂ. ಆಗಿದೆ.

ಯುಬಾನ್ SP-8065 ವಾಯರ್‌ಲೆಸ್ ಸ್ಪೀಕರ್ ಡಿವೈಸ್
ಯುಬಾನ್ ಈ ಡಿವೈಸ್ ಚಿಕ್ಕ ರಚನೆಯ ಸ್ಪೀಕರ್ ಆಗಿದ್ದು, ಅದನ್ನು ಸುಲಭವಾಗಿ ಪಾಕೆಟ್, ಸೂಟ್‌ಕೇಸ್, ಹ್ಯಾಂಡ್‌ಬ್ಯಾಗ್ ಅಥವಾ ಟ್ರಾವೆಲ್ ಬ್ಯಾಗ್‌ಗೆ ಅಳವಡಿಸಿಕೊಳ್ಳಬಹುದು. ರಚನೆಯಲ್ಲಿ ಮಾತ್ರ ಚಿಕ್ಕದಾಗಿದ್ದಯ, ಸೌಲಭ್ಯಗಳು ಅಗಾದ ಆಗಿವೆ. ಇದನ್ನು 2 SP-8065 ಅನ್ನು ಅಂತರ್ಗತ TWS ತಂತ್ರಜ್ಞಾನದೊಂದಿಗೆ ಸಂಪರ್ಕಿಸಬಹುದು. ಅಲ್ಲದೇ ಒಂದು ಸಮಯದಲ್ಲಿ 2 ಗ್ರೆನೇಡ್‌ಗಳ ಶಕ್ತಿಯನ್ನು ಆನಂದಿಸಬಹುದು. ಇದು ಹೆಚ್‌ಡಿ ವಾಯಿಸ್ ಗುಣಮಟ್ಟದೊಂದಿಗೆ ಸಮಗ್ರ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಆಗಿದೆ. ಹಾಗೆಯೇ ಈ ಡಿವೈಸ್ 600 mAh ರೀಚಾರ್ಜ್ ಮಾಡಬಹುದಾದ ಲಿ-ಐಯಾನ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಅಲ್ಲದೇ SP-8065 ಡಿವೈಸ್ ಒಟ್ಟು 4 ಆಕರ್ಷಕ ಬಣ್ಣಗಳ ಆಯ್ಕೆ ಪಡೆದಿದ್ದು, ಅವು ಕ್ರಮವಾಗಿ, ಕಪ್ಪು, ಬಿಳಿ, ಕೆಂಪು ಮತ್ತು ತಿಳಿ ಹಸಿರು ಆಗಿವೆ. ರಚನೆ, ವಿನ್ಯಾಸ ಮತ್ತು ಫಿನಿಶ್ ಉತ್ತಮ ಆಗಿದೆ. ಮೇಲ್ಭಾಗದಲ್ಲಿ ರಬ್ಬರ್ ಲೂಪ್ ಕೂಡ ಇದೆ. ಬಳಕೆದಾರರು ಈ ಡಿವೈಸ್ ಅನ್ನು ಬ್ಲೂಟೂತ್ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಡಿವೈಸ್‌ಗಳಿಗೆ ಕನೆಕ್ಟ್ ಮಾಡಬಹುದು. ಇನ್ನು ಇದರ ಬೆಲೆಯು 1,699ರೂ. ಆಗಿದೆ.

ಜೆಬಿಎಲ್ ಗೋ ಬ್ಲೂಟೂತ್ ಸ್ಪೀಕರ್
ಜನಪ್ರಿಯ ಜೆಬಿಎಲ್ ಕಂಪನಿಯ ಜೆಬಿಎಲ್ ಗೋ ಬ್ಲೂಟೂತ್ ಸ್ಪೀಕರ್ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಇದನ್ನು ಒಂದೇ ಬಾರಿ ಪೂರ್ಣ ಚಾರ್ಜ್ ಮಾಡಿದರೆ ಐದು ಗಂಟೆಗಳ ಪ್ಲೇಟೈಮ್ ಇರುತ್ತದೆ. ಈ ಸ್ಪೀಕರ್ ಕಾಂಪ್ಯಾಕ್ಟ್ ಮತ್ತು ಹಗುರವಾದ ರಚನೆಯನ್ನು ಪಡೆದಿದೆ ಆದರೆ ಪ್ರೀಮಿಯಂ ಸೌಂಡ್ ಗುಣಮಟ್ಟವನ್ನು ನೀಡುತ್ತದೆ. ಈ ಸ್ಪೀಕರ್ 180Hz - 20kHz ಆವರ್ತನ ಪ್ರತಿಕ್ರಿಯೆಯನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಬಳಕೆದಾರರು ವಾಯರ್‌ಲೆಸ್ ಲ್ಯಾಪ್‌ಟಾಪ್ ಅಥವಾ ನಿಮ್ಮ ಮೊಬೈಲ್ ಫೋನಿನಿಂದ ಆಡಿಯೋ ಸ್ಟ್ರೀಮ್ ಮಾಡಬಹುದು. ವಾಯರ್‌ಲೆಸ್ ಕನೆಕ್ಟಿವಿಟಿ ಆಯ್ಕೆ ಪಡೆದಿದ್ದು, ತಡೆ ರಹಿತ ಮ್ಯೂಸಿಕ್ ಅನುಭವ ಪಡೆಯಬಹುದು. ಇದರ ಬೆಲೆಯು 2,699ರೂ. ಆಗಿದೆ.
ರಿಯಲ್‌ಮಿ ಡಿಜೊ ಬಡ್ಸ್ Z
ರಿಯಲ್‌ಮಿ ಡಿಜೊ ಬಡ್ಸ್ Z ಡಿವೈಸ್ ಟ್ರೂಲಿ ವಾಯರ್‌ಲೆಸ್ ಸ್ಟೀರಿಯೋ ಇಯರ್‌ಫೋನ್ ಆಗಿದೆ. ಈ ಡಿವೈಸ್‌ಗಳು 10mm ಡೈನಾಮಿಕ್ ಡ್ರೈವರ್‌ಗಳನ್ನು ಬಾಸ್ ಬೂಸ್ಟ್+ ಅಲ್ಗಾರಿದಮ್ ಹೊಂದಿದೆ. ಈ ಇಯರ್‌ಬಡ್ಸ್‌ಗಳು 43mAh ಬ್ಯಾಟರಿ ಬ್ಯಾಟರಿ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಸುಮಾರು 4.5 ಗಂಟೆಗಳವರೆಗೆ ಬ್ಯಾಕ್‌ಅಪ್ ನೀಡುತ್ತದೆ. ಹಾಗೆಯೇ 10 ನಿಮಿಷಗಳ ಚಾರ್ಜಿಂಗ್ 1.5 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ.


Click it and Unblock the Notifications








