Lens: ನಿಮ್ಮ ಸ್ಮಾರ್ಟ್‌ಫೋನ್ ಫೋಟೋಗ್ರಫಿ ಕ್ರೇಜ್ ಹೆಚ್ಚಿಸಲಿವೆ ಈ ಲೆನ್ಸ್‌ಗಳು: ಅದೂ ಸಹ ಅಗ್ಗದ ದರದಲ್ಲಿ
ಈಗಂತೂ ಸ್ಮಾರ್ಟ್‌ಫೋನ್ ಫೋಟೋಗ್ರಫಿ (Smartphone photography) ಕ್ರೇಜ್ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಒಪ್ಪೋ, ರಿಯಲ್‌ಮಿ, ವಿವೋ, ಮೊಟೊರೊಲಾ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್ ಕಂಪೆನಿಗಳು ಕ್ಯಾಮೆರಾವನ್ನು ಮುಖ್ಯವಾಗಿಸಿಕೊಂಡೇ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬಂದಿದೆ. ಈ ನಡುವೆ ವಿಶೇಷ ಲೆನ್ಸ್ (Lens) ಬಳಕೆ ಮಾಡಿಕೊಂಡು ಫೋಟೋ ಸೆರೆಹಿಡಿದರೆ ಇನ್ನೂ ಅದ್ಭುತ ಅನುಭವ ಪಡೆದುಕೊಳ್ಳಬಹುದಾಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳು ಕೇವಲ ಕರೆ ಮಾಡಲು ಅಥವಾ ಮೆಸೆಜ್ ಮಾಡಲು ಬಳಕೆ ಆಗುತ್ತಿಲ್ಲ. ಬದಲಾಗಿ ಕ್ಯಾಮೆರಾ ಉದ್ದೇಶಕ್ಕೆ ಹಾಗೂ ಬ್ಯಾಂಕ್ ವ್ಯವಹಾರಕ್ಕೆ ಹೆಚ್ಚಿನ ಬಳಕೆ ಆಗುತ್ತಿದೆ. ಈ ನಡುವೆ ಆನ್‌ಲೈನ್ ಮಾರುಕಟ್ಟೆಯಲ್ಲಿ ನಿಮ್ಮ ಫೋಟೋಗ್ರಫಿ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ಲೆನ್ಸ್‌ಗಳು ಲಭ್ಯ ಇವೆ. ಇವುಗಳು ನಿಮಗೆ ಅಗ್ಗದ ದರದಲ್ಲಿ ಲಭ್ಯ ಇದ್ದು, ನಿಮ್ಮ ಸುತ್ತ ಮುತ್ತಲಿನ ಪರಿಸರವನ್ನು ಅತ್ಯದ್ಭುತವಾಗಿ ಸೆರೆಹಿಡಿಯಲು ಸಹಾಯಕವಾಗಿದೆ. ಹಾಗಿದ್ರೆ ತಾವೆಲ್ಲಾ ಲೆನ್ಸಗಳು ಉತ್ತಮವಾಗಿವೆ?, ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಂಡರ್ ವರ್ಲ್ಡ್ 2 in 1 ಕ್ಲಿಪ್-ಆನ್ ಲೆನ್ಸ್: ಇದನ್ನು ನೀವು 530 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಲೆನ್ಸ್ ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಬ್ಯಾಂಕ್ ಆಫರ್ ಸಹ ಇನ್ನೂ ಕಡಿಮೆ ದರದಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಉಳಿದಂತೆ ಇದು ಅದ್ಭುತವಾದ 120° ವೈಡ್ ಆಂಗಲ್ ದೃಷ್ಟಿಕೋನಗಳೊಂದಿಗೆ ಫೋಟೋಗಳನ್ನು ಸೆರೆಹಿಡಿಯಲು ಇದು ಸಹಾಯ ಮಾಡಲಿದ್ದು, ಜೊತೆಗೆ ಅಲ್ಟ್ರಾ-ಶಾರ್ಪ್ 15x ಕ್ಲೋಸ್-ಅಪ್ ಫೋಟೋಗಳನ್ನು ಸಹ ಇದರಲ್ಲಿ ಸೆರೆಹಿಡಿಯಬಹುದಾಗಿದೆ. ಇದು ಐಫೋನ್ 7 / 6S / 6 ಪ್ಲಸ್ / 5S / 5C, ಸ್ಯಾಮ್‌ಸಂಗ್ S8 / S8+ / C7 ಪ್ರೊ / ನೋಟ್ 5 / J7 / S7 / S6, ಗೂಗಲ್ ಪಿಕ್ಸೆಲ್ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳಿಗೆ ಹೊಂದಿಕೆಯಾಗುತ್ತದೆ.
ಮಾಲ್ವೋಕಾ 12X ಜೂಮ್ ಮೊಬೈಲ್ ಫೋನ್ ಟೆಲಿಸ್ಕೋಪ್ ಲೆನ್ಸ್: ಈ ಲೆನ್ಸ್ ಅನ್ನು ನೀವು 739 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು 0.45X ವೈಡ್ ಆಂಗಲ್ ಲೆನ್ಸ್ ಮತ್ತು 15X ಮ್ಯಾಕ್ರೋ ಲೆನ್ಸ್‌ನ ಸಂಯೋಜನೆಯೊಂದಿಗೆ ಕಾಣಿಸಿಕೊಂಡಿದ್ದು, ವಿವರವಾದ ಕ್ಲೋಸ್-ಅಪ್ ಶಾಟ್‌ಗಳು, ಉತ್ತಮ ಸೆಲ್ಫಿಗಳನ್ನು ಸೆರೆಹಿಡಿಯಲು ಅನುಕೂಲವಾಗಿದೆ. ಹಾಗೆಯೇ ಡಿಟ್ಯಾಚೇಬಲ್ ಸಾಫ್ಟ್ ರಬ್ಬರ್ ಕ್ಲಿಪ್‌ನೊಂದಿಗೆ ಸಜ್ಜುಗೊಂಡಿದ್ದು, ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಗೀರುಗಳು ಅಥವಾ ಗುರುತು ಆಗದಂತೆ ತಡೆಯುತ್ತದೆ.

ADCOM AD-8 in1 ಮೊಬೈಲ್ ಫೋನ್ ಲೆನ್ಸ್: ಇದು ಕೊಂಚ ಹೆಚ್ಚಿನ ಬೆಲೆ ಹೊಂದಿದೆ. ಅಂದರೆ 2,490ರೂ.ಗಳ ಬೆಲೆಯಲ್ಲಿ ಇದು ಕಾಣಿಸಿಕೊಂಡಿದ್ದು, ಪ್ರೊಫೆಷನಲ್ 8 ಇನ್ 1 ಕ್ಯಾಮೆರಾ ಲೆನ್ಸ್‌ಗಳು ಮೊಬೈಲ್ ಫೋನ್ ಕ್ಯಾಮೆರಾ ಲೆನ್ಸ್‌ಗಳ ಸಂಪೂರ್ಣ ಸೆಟ್ ಆಗಿದೆ. ಅದರಲ್ಲೂ ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಐಓಎಸ್ ಮೊಬೈಲ್ ಡಿವೈಸ್‌ಗಳಾದ ಐಫೋನ್ X/8/7 ಪ್ಲಸ್/7/6/6 ಪ್ಲಸ್/5/5S/4/4S, ಒನ್‌ಪ್ಲಸ್, ಶಿಯೋಮಿ, ಒಪ್ಪೋ, ವಿವೋ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಸೇರಿದಂತೆ ಅನೇಕ ಡಿವೈಸ್‌ಗಳಿಗೆ ಬೆಂಬಲ ನೀಡಲಿದೆ.
ಮೀನಾಶಾ ಪಾಂಡ 40x60 HD ಮಾನೋಕ್ಯುಲರ್ ಟೆಲಿಸ್ಕೋಪ್: ಈ ಲೆನ್ಸ್ ನಿಮಗೆ ದೊಡ್ಡ ಕ್ಯಾಮೆರಾದ ಅನುಭವ ನೀಡುತ್ತದೆ. ಇದನ್ನು ನೀವು 999ರೂ.ಗಳ ಅಫರ್ ಬೆಲೆಗೆ ಖರೀದಿ ಮಾಡಬಹುದಾಗಿದ್ದು, 40x ಅನ್ನು ಪಡೆಯಲು 40x60 ಆಪ್ಟಿಕಲ್ ಮ್ಯಾಗ್ನಿಫಿಕೇಶನ್ ಆಯ್ಕೆ ನೀಡುತ್ತದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಟ್ರೈಪಾಡ್ ಶೇಕ್ ಅನ್ನು ನಿಯಂತ್ರಣ ಮಾಡಲಿದ್ದು, ಹ್ಯಾಂಡ್ಸ್ ಫ್ರೀ ವೀಕ್ಷಣೆಯನ್ನು ಸಕ್ರಿಯಗೊಳಿಸುತ್ತದೆ. ಈ ಲೆನ್ಸ್ ವಾಟರ್ ರೆಸಿಸ್ಟೆಂಟ್ ಆಗಿದ್ದು, ಮಳೆಯ ಸಂದರ್ಭದಲ್ಲೂ ಸಹ ಬಳಕೆ ಮಾಡಬಹುದಾಗಿದೆ.

ಮಾಲ್ವೋಕಾ 3 in 1 ಕ್ಯಾಮೆರಾ ಲೆನ್ಸ್: ಈ ಲೆನ್ಸ್ ಅನ್ನು 380 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಸಹ ಮೃದುವಾದ ರಬ್ಬರ್‌ನೊಂದಿಗೆ ಡಿಟ್ಯಾಚೇಬಲ್ ಮತ್ತು ಪೋರ್ಟಬಲ್ ಕ್ಲಾಂಪ್‌ಗಳನ್ನು ಹೊಂದಿದೆ. ಅದರಲ್ಲೂ ಸುಧಾರಿತ ಆಪ್ಟಿಕಲ್ ಗ್ಲಾಸ್‌ನೊಂದಿಗೆ ವೃತ್ತಿಪರ ಹೆಚ್‌ಡಿ ಲೆನ್ಸ್ ನಿಮಗೆ ಸ್ಪಷ್ಟವಾದ ಶಾಟ್‌ಗಳನ್ನು ನೀಡುತ್ತದೆ. ಉನ್ನತ ದರ್ಜೆಯ ಅಲ್ಯೂಮಿನಿಯಂನಿಂದ ಇದನ್ನು ಇದನ್ನು ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ದೀರ್ಘ ಬಾಳಿಕೆ ನಿರೀಕ್ಷೆ ಮಾಡಬಹುದಾಗಿದೆ.

ವಿಫ್ಟನ್ ಮೊಬೈಲ್ ಟೆಲಿಸ್ಕೋಪ್ ಕಿಟ್: ಈ ಲೆನ್ಸ್ ಅನ್ನು 830 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಕಟ್ಟಡಗಳು, ಭೂದೃಶ್ಯಗಳು, ಮ್ಯೂಸಿಕ್ ಕಚೇರಿಗಳು, ಪ್ರಯಾಣ, ಪ್ರಾಣಿಗಳ ವೀಕ್ಷಣೆ ಇತ್ಯಾದಿಗಳಂತಹ ದೂರದ ವಸ್ತುಗಳ ಚಿತ್ರಗಳು ಅಥವಾ ವಿಡಿಯೋ ತೆಗೆದುಕೊಳ್ಳಲು ಅತ್ಯುತ್ತಮವಾಗಿದೆ. ಯಾವುದೇ ರೀತಿಯ ಮೊಬೈಲ್ ಫೋನ್ ಗಾತ್ರಕ್ಕೆ ಸರಿಹೊಂದುವಂತೆ 12X ಆಪ್ಟಿಕಲ್ ಜೂಮ್ ಟ್ರೈಪಾಡ್ ಮತ್ತು ಅಡ್ಜಸ್ಟಬಲ್ ಹೋಲ್ಡರ್ ಜೊತೆಗೆ ಟೆಲಿಸ್ಕೋಪ್ ಮೊಬೈಲ್ ಕ್ಯಾಮೆರಾ ಲೆನ್ಸ್ ಕಿಟ್ ಅನ್ನು ನೀವು ಖರೀದಿ ಮಾಡಬಹುದಾಗಿದೆ. ಈ ಟೆಲಿಸ್ಕೋಪ್ ಲೆನ್ಸ್ ನಿಮಗೆ 12X ಆಪ್ಟಿಕಲ್ ಜೂಮ್ ನೀಡುತ್ತದೆ.


Click it and Unblock the Notifications








