Winter Gadgets: ಚಳಿಗಾಲಕ್ಕೆ ಜೊತೆಯಾಗಿರಲಿ ಈ ಸ್ಮಾರ್ಟ್ ಡಿವೈಸ್‌ಗಳು! ಎಲ್ಲೆಲ್ಲೂ ಬೆಚ್ಚಗಿನ ಅನುಭವ ಪಕ್ಕಾ!
ಚಳಿಗಾಲ (winter season) ಬಂದ್ರೆ ಸಾಕು ಮನೆಯಿಂದ ಆಚೆ ಹೋಗೋದಕ್ಕೆ ಬಹುಪಾಲು ಜನರು ಕಷ್ಟ ಪಡುತ್ತಾರೆ. ಜೊತೆಗೆ ಯಾವುದೇ ಕೆಲಸ ಮಾಡಲು ಸಹ ಉತ್ಸಾಹ ಇರುವುದಿಲ್ಲ. ಆದರೆ ಚಳಿಗಾಲದ ಈ ಸ್ಮಾರ್ಟ್ ಗ್ಯಾಜೆಟ್‌ಗಳು (Winter Gadgets) ಈ ಚಳಿಗಾಲದಲ್ಲೂ ಅದ್ಭುತ ಅನುಭವ ನೀಡುವ ಸಾಮರ್ಥ್ಯ ಪಡೆದುಕೊಂಡಿವೆ.
ಹೌದು, ಯಾವುದೇ ಖುತುವಿಗೂ ಸಹ ಹೊಂದಾಣಿಕೆ ಆಗುವ ಸ್ಮಾರ್ಟ್ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಜನರು ತಮ್ಮ ಅನುಕೂಲಕ್ಕೆ ತಕ್ಕಂತ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ. ಇವು ಚಳಿ ಇರಲಿ ಅಥವಾ ಬಿರು ಬೇಸಿಗೆ ಇರಲಿ ಎಲ್ಲದರಿಂದ ಮುಕ್ತಿ ನೀಡುತ್ತವೆ. ಅದರಂತೆ ಈಗ ಚಳಿ ಆರಂಭ ಆಗಿದ್ದು, ಈ ವೇಳೆ ನೀವು ಈ ಸ್ಮಾರ್ಟ್ ಡಿವೈಸ್‌ಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ನಿಮ್ಮ ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಬಹುದಾಗಿದೆ.

ಅರ್ಕೋವಾ ಹೋಮ್ ಪ್ರೀಮಿಯಂ ಸಿಂಗಲ್ ಎಲೆಕ್ಟ್ರಿಕ್ ಬೆಡ್ ವಾರ್ಮರ್: ಈ ಬ್ಲಾಂಕೆಟ್ (Electric bed warmer) ಅನ್ನು ನೀವು 939 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಪ್ರೀಮಿಯಂ ಅನುಭವ ನೀಡಲಿದ್ದು, ದೀರ್ಘ ಬಾಳಿಕೆ ಬರಲಿದೆ. ಈ ಭಾವೆನ್ ಕ್ರಿಯೇಷನ್ಸ್ ಎಲೆಕ್ಟ್ರಿಕ್ ಬ್ಲಾಂಕೆಟ್‌ಗಳನ್ನು ಅಂಡರ್ ಬೆಡ್ ವಾರ್ಮರ್ ಆಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಹ್ಯಾಂಡಿ ರಿಮೋಟ್ ಕಂಟ್ರೋಲ್ ಆಯ್ಕೆ ಸಹ ನೀಡಲಾಗಿದ್ದು, ತಾಪಮಾನವನ್ನು ಹೊಂದಿಸಲು ಸಹಾಯ ಮಾಡುತ್ತದೆ. ಜೊತೆಗೆ ಈ ಬ್ಲಾಂಕೆಟ್ ಶಾಕ್ ಪ್ರೂಫ್, ಬೆಂಕಿ ನಿರೋಧಕವಾಗಿದೆ.
ಅಮೇಜ್ ಡಿಲಕ್ಸ್ ಡ್ಯುಯಲ್ ಕನ್ವೆಕ್ಷನ್ ಗ್ಲಾಸ್ ಪ್ಯಾನಲ್ ಎಲೆಕ್ಟ್ರಿಕ್ ವಾಲ್ ಮೌಂಟ್ ರೂಮ್ ಹೀಟರ್ : ಈ ರೂಮ್ ಹೀಟರ್ (Room heater) ತುಂಬಾ ವಿಭಿನ್ನವಾಗಿದ್ದು, ಇದನ್ನು 8,999 ರೂ.ಗಳ ದರದಲ್ಲಿ ಅಮೆಜಾನ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಈ ವಾಲ್ ಹೀಟರ್ 240V, 750/1500 ವ್ಯಾಟ್ ಸಾಮರ್ಥ್ಯ ಪಡೆದಿದ್ದು, 250 ರಿಂದ 350 ಚದರ ಅಡಿ ಕೋಣೆಗೆ ಸೂಕ್ತವಾಗಿದೆ. ಹೀಟರ್ ಮೇಲ್ಮೈ ಗಾಜಿನ ಫಲಕವಾಗಿದ್ದು ಅದು ಬೆಚ್ಚಗಿನ ಅನುಭವ ಸಿಗುವಂತೆ ಮಾಡುತ್ತದೆ. ವಯಸ್ಕರು, ಮಕ್ಕಳು ಮತ್ತು ಹಿರಿಯರು ಇದನ್ನು ಯಾವುದೇ ಭಯವಿಲ್ಲದೆ ಬಳಕೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಕೋಣೆಯಲ್ಲಿ ಗಾಳಿಯನ್ನು ಒಣಗಿಸುವುದಿಲ್ಲ. ಪರಿಣಾಮ ಆಸ್ತಮಾ ಮತ್ತು ಧೂಳಿನ ಅಲರ್ಜಿಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಯ್ಕೆ ಆಗಿದೆ.
ಕ್ರೋಂಪ್ಟನ್ ಇನ್‌ಸ್ಟಾ ಕಂಫರ್ಟ್ ಹೀಟರ್ 2000 ವ್ಯಾಟ್ಸ್ ಹೀಟ್ ಕನ್ವೆಕ್ಟರ್: ಈ ಡಿವೈಸ್ (Heat convector) ಅನ್ನು 1,890ರೂ.ಗಳ ಬೆಲೆಯಲ್ಲಿ ಕೊಂಡುಕೊಳ್ಳಬಹುದಾಗಿದೆ. ಇದು 1000 ಗ್ರಾಂ ತೂಕ ಹೊಂದಿದ್ದು, ಇದರ ಹೀಟ್ ಔಟ್ಪುಟ್ 2000 ವ್ಯಾಟ್‌ಗಳಾಗಿದೆ. ಜೊತೆಗೆ ಎರಡು ರೀತಿಯ ಶಾಖದ ಸೆಟ್ಟಿಂಗ್ ಆಯ್ಕೆ ಪಡೆದಿದ್ದು, ತಾಪಮಾನವನ್ನು ನಿಯಂತ್ರಿಸಲು ಥರ್ಮೋಸ್ಟಾಟ್ (Thermostat) ಅನ್ನು ಇದು ಬಳಕೆ ಮಾಡುತ್ತದೆ. ಇದರೊಂದಿಗೆ ಓವರ್‌ಹೀಟ್ ರಕ್ಷಣೆಯೊಂದಿಗೆ ಈ ಡಿವೈಸ್ ಪ್ಯಾಕ್ ಆಗಿದೆ. ಅಷ್ಟೇ ಅಲ್ಲದೆ ಇದನ್ನು ಮುಟ್ಟಿದರೆ ಯಾವುದೇ ಬಿಸಿಯಾದ ಅನುಭವ ಸಹ ಆಗುವುದಿಲ್ಲ. ಆದರೆ ನಿಮ್ಮ ಕೋಣೆಯನ್ನು ತಕ್ಷಣವೇ ಬೆಚ್ಚಗಿನ ವಾತಾವರಣವನ್ನಾಗಿ ಮಾಡುವ ಸಾಮರ್ಥ್ಯ ಪಡೆದಿದೆ.

ಕ್ರಾಂಪ್ಟನ್ ಇನ್ಸ್ಟಾ ಕಾಂಫೈ 800 ವ್ಯಾಟ್ ರೂಮ್ ಹೀಟರ್: ಈ ಡಿವೈಸ್ ಅನ್ನು ನೀವು ಕೇವಲ 1,425 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರಲ್ಲಿನ ಸುಧಾರಿತ ಸ್ಫಟಿಕ ಶಿಲೆ ಟ್ಯೂಬ್‌ಗಳು ತ್ವರಿತವಾಗಿ ಬಿಸಿಯಾಗುತ್ತವೆ ಮತ್ತು ಅದರ ಡ್ಯುಯಲ್ ಹೀಟ್ ಸೆಟ್ಟಿಂಗ್ ಫೀಚರ್ಸ್ ನಿಮ್ಮ ಅಗತ್ಯಕ್ಕೆ ತಮ್ಮ ತಾಪಮಾನವನ್ನು ಸರಿಹೊಂದಿಸಲು ಸಹಾಯ ಮಾಡುತ್ತವೆ. ಇದರೊಂದಿಗೆ 400W+400W ನ ಎರಡು ಸೆಟ್ಟಿಂಗ್ ಆಯ್ಕೆಯೊಂದಿಗೆ ಸುರಕ್ಷಿತ ಅನುಭವಕ್ಕಾಗಿ ಟಿಪ್ ಓವರ್ ರಕ್ಷಣೆಯ ಜೊತೆಗೆ ತುಕ್ಕು ಮುಕ್ತ ಸ್ಟೇನ್‌ಲೆಸ್ ಸ್ಟೀಲ್ ಪ್ರತಿಫಲಕವನ್ನು ಈ ಡಿವೈಸ್ ಪಡೆದಿದೆ. ಈ ISI ಅನುಮೋದಿತ ಉತ್ಪನ್ನವು ಶಾಕ್ ಪ್ರೂಫ್ ಬಾಡಿ (Shock proof body) ಹೊಂದಿದ್ದು, ಯಾರೂ ಬೇಕಾದರೂ ಬಳಕೆ ಮಾಡಬಹುದಾಗಿದೆ.
ಸೇಲ್‌ಆನ್ ಇನ್‌ಸ್ಟಂಟ್ ಕೋಲ್ ಹೀಟರ್ 500W ಚಾರ್ಕೋಲ್ ಬರ್ನರ್: ಇದನ್ನು (Charcoal burner) ಕಡಿಮೆ ಬೆಲೆಗೆ ಅಂದರೆ 748 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಇದ್ದಿಲನ್ನು ಸುಡುವ ಕೆಲಸ ಮಾಡಲಿದ್ದು, ನಿಮಗೆ ಸೌದೆ ಒಲೆ ಮುಂದೆ ಮೈ ಕಾಯಿಸಿಕೊಳ್ಳುವ ಅನುಭವ ನೀಡುತ್ತದೆ. ಆದರೆ, ಇದನ್ನು ಎಚ್ಚರಿಕೆಯಿಂದ ಬಳಕೆ ಮಾಡಬೇಕಿದೆ. ಈ ಹೀಟರ್ ಹೆಚ್ಚಿನ ತಾಪಮಾನವನ್ನು ತಲುಪಿದಾಗ ಶೆಲ್‌ನ ಮುಂಭಾಗದಲ್ಲಿ ಲೈಟ್ ಕಾಣಿಸಿಕೊಳ್ಳುತ್ತದೆ. ಇದು ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.

ರೆಕ್ಸೆರಾ ಹ್ಯಾಂಡಿ ಹೀಟರ್ ನೆಕ್ ವಾರ್ಮರ್: ಇನ್ನು ವಿಭಿನ್ನವಾದ ಡಿವೈಸ್ (REXERA Handy Heater Neck Warmer) ಬೇಕು ಅನ್ನೋರಿಗೆ ಇದು ಉತ್ತಮ ಆಯ್ಕೆ ಆಗಿದೆ. ಇದು ಅಮೆಜಾನ್‌ನಲ್ಲಿ 1,299 ರೂ.ಗಳ ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಡಿವೈಸ್ ನಿಮ್ಮ ಕುತ್ತಿಗೆ ಮತ್ತು ಭುಜವನ್ನು ಬೆಚ್ಚಗಾಗಿಸುವ ಕೆಲಸ ಮಾಡುತ್ತದೆ. ಈ ಮೂಲಕ ದಿನವಿಡೀ ನೀವು ಎಂತಹ ತಣ್ಣನೆಯ ವಾತಾವಣದಲ್ಲಿ ಇದ್ದರೂ ಸಹ ಬೆಚ್ಚಗಿನ ಅನುಭವ ಸಿಗುವಂತೆ ಮಾಡುತ್ತದೆ. ಈ ಹಗುರವಾದ ಮಿನಿ ಹೀಟರ್ ರೀಚಾರ್ಜ್ ಮಾಡಬಹುದಾದ ಬ್ಯಾಟರಿಯಿಂದ ಚಾಲಿತವಾಗಿದ್ದು, 6 ಗಂಟೆಗಳವರೆಗೆ ಬ್ಯಾಕಪ್ ನೀಡಲಿದೆ.


Click it and Unblock the Notifications








