ಅಚ್ಚರಿ: ನೀವು ಧರಿಸಿರುವ ದಿರಿಸಿನಲ್ಲೇ ಫೋನ್ ಚಾರ್ಜ್ ಮಾಡಿ

By Shwetha
|

ಫೋನ್ ಚಾರ್ಜ್ ಮಾಡುವುದು ಎಂದರೆ ಹೆಚ್ಚಿನವರಿಗೆ ತಲೆನೋವಿನ ಸಮಸ್ಯೆಯಾಗಿದೆ. ಚಾರ್ಜ್ ಪೂರ್ತಿಯಾಗಿ ಮಾಡದೇ ಇದ್ದರೆ ಅದೊಂದು ಸಮಸ್ಯೆ ಇನ್ನು ಫೋನ್ ಪೂರ್ತಿಯಾಗಿ ಚಾರ್ಜ್ ಮಾಡಿದರೆ ಇನ್ನೊಂದು ತಲೆನೋವು. ಹೀಗೆ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಉಸಾಬರಿಯೇ ಬೇಡ ಎಂಬ ಕೊರಗು ಕಾಡುತ್ತಲೇ ಇರುತ್ತದೆ. ಆದರೆ ಇಂದಿನ ಲೇಖನದಲ್ಲಿ ನಿಮಗೊಂದು ಅಚ್ಚರಿ ಕಾದಿದೆ ಗೆಳೆಯರೇ! ಬಬುಕ್ಸ್ ಎಂಬ ಕಂಪೆನಿಯೊಂದು ಜಾಕೆಟ್ ಒಂದನ್ನು ಹೊರತಂದಿದ್ದು ಇದು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡುವ ತಾಕತ್ತನ್ನು ಪಡೆದುಕೊಂಡಿದೆ.

ಓದಿರಿ: ಗೂಗಲ್‌ ಮ್ಯಾಪ್‌ನಲ್ಲಿ ಸ್ಥಳ ಮತ್ತು ಮಾರ್ಗದ ನೈಜ ದೃಶ್ಯ

ಬನ್ನಿ ಈ ವಿಶೇಷ ಜಾಕೆಟ್ ಕುರಿತು ನಮಗೆ ತಿಳಿದಿರುವ ಕೆಲವೊಂದು ಮಾಹಿತಿಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಈ ಜಾಕೆಟ್‌ನ ವಿಶೇಷ ಅಂಶಗಳನ್ನು ನೀವು ತಿಳಿಸುತ್ತಿದ್ದು ಇದು ಫೋನ್ ಚಾರ್ಜ್ ಹೇಗೆ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

#1

#1

ಬುಬುಕ್ಸ್ ಕಂಪೆನಿಯು ಜಾಕೆಟ್‌ಗಳನ್ನು ಸಿದ್ಧಪಡಿಸುತ್ತಿದ್ದು ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಉಡುಪುಗಳನ್ನು ಒದಗಿಸುತ್ತಿದೆ.

#2

#2

ಇದರ ಆನ್‌ಲೈನ್ ಸ್ಟೋರ್‌ನಲ್ಲಿ ಈ ಕಂಪೆನಿಯ ಉಡುಪುಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

#3

#3

ಈ ಜಾಕೆಟ್‌ನ ಒಳಭಾಗದಲ್ಲಿ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ಸ್‌ಗಳಿವೆ. ಸಣ್ಣ ಬ್ಯಾಟರಿ ಬ್ಯಾಂಕ್‌ಗೆ ಇವುಗಳು ಸಂಪರ್ಕಗಳನ್ನು ಪಡೆದುಕೊಂಡಿವೆ. ಇದುವೇ ಫೋನ್ ಚಾರ್ಜ್ ಮಾಡಲು ಅನುಕೂಲವನ್ನು ಒದಗಿಸುವುದು.

#4

#4

ಪೋರ್ಟೇಬಲ್ ಬ್ಯಾಟರಿಯು 4,000mAh ಪವರ್ ಅನ್ನು ತನ್ನಲ್ಲಿ ಇರಿಸಿಕೊಂಡಿದೆ. ಈ ಚಾರ್ಜಿಂಗ್ ಪ್ಯಾಡ್‌ಗಳು ವಾಶೇಬಲ್ ಎಂದೆನಿಸಿದ್ದು, ವಾಶಿಂಗ್ ಮೆಶೀನ್‌ನಲ್ಲಿ ಇದನ್ನು ಒಗೆದಲ್ಲಿ ಕೂಡ ತಲೆಕೆಡಿಸಿಕೊಳ್ಳಬೇಕಾಗಿಲ್ಲ.

#5

#5

ಸ್ಮಾರ್ಟ್‌ವಾಚ್ ಹೊಂದಿರುವವರಿಗೆ ಕೂಡ ಪ್ರತ್ಯೇಕ ಚಾರ್ಜಿಂಗ್ ಕಾಯಿನ್ ಇದ್ದು ನಿಮ್ಮ ಸ್ಲೀವ್‌ನೊಳಗೆ ವಾಚ್‌ಗೆ ಸಂಪರ್ಕವನ್ನು ಪಡೆದುಕೊಂಡು ಚಾರ್ಜಿಂಗ್ ಅನ್ನು ಮಾಡಬಹುದಾಗಿದೆ.

#6

#6

ನೀವು ಜಾಕೆಟ್‌ನೊಳಗಿಟ್ಟು ಇದನ್ನು ಚಾರ್ಜ್ ಮಾಡುತ್ತಿರುವಾಗ ಫೋನ್ ಬಿಸಿಯಾಗುವ ಅನುಭವ ನಿಮಗೆ ಉಂಟಾಗುವುದಿಲ್ಲ.ಇದರ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳು ನಿಮಗೆ ಲಭ್ಯವಿದ್ದು ಅವುಗಳ ಬಳಕೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Apparel startup Baubax made waves last year when it raised $9.1 million on Kickstarter to fund its Travel Jacket, a SCOTTeVEST-like jacket that stuffed 15 different compartments for devices and accessories into one frame.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more