ಗೂಗಲ್‌ ಮ್ಯಾಪ್‌ನಲ್ಲಿ ಸ್ಥಳ ಮತ್ತು ಮಾರ್ಗದ ನೈಜ ದೃಶ್ಯ

Written By:

ಇಷ್ಟು ದಿನ ನಿರ್ಧಿಷ್ಟ ಸ್ಥಳಕ್ಕೆ ಹೋಗಲು ಮತ್ತು ಹುಡುಕಲು ಗೂಗಲ್‌ ಮ್ಯಾಪ್‌ ತೆಗೆದರೆ ಕೇವಲ ಮಾರ್ಗ ಮತ್ತು ವಿಳಾಸ ಮಾತ್ರ ಕಾಣುತ್ತಿತ್ತು. ಆದ್ರೆ ಇನ್ನುಮುಂದೆ ಗೂಗಲ್‌ ಮ್ಯಾಪ್‌ನಲ್ಲಿ ಬಳಕೆದಾರರು ಸ್ಥಳದ ನೈಜ ಚಿತ್ರಣವನ್ನು ಮ್ಪಾಪ್‌ನಲ್ಲೇ ನೋಡಬಹುದಾಗಿದೆ.

ಅಲ್ಲದೇ ನೈಜವಾಗಿ ಮ್ಯಾಪ್‌ನಲ್ಲೇ ಬಿಲ್ಡಿಂಗ್‌ಗಳು ಸಹ ಕಾಣಲಿವೆ. ನೀವು ಹೋಗುವ ಮಾರ್ಗದ ಚಿತ್ರಣ ತೀಕ್ಷ್ಣವಾಗಿ ಕಾಣಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಾಗೂ ಚಿತ್ರಣ ಹೇಗೆ ಕಾಣುತ್ತದೆ ಎಂಬುದನ್ನು ತಿಳಿಯಲು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ನೋಡುವುದರಿಂದ ಕುರುಡು ಉಂಟಾಗಬಹುದು!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಫೋಟೋ ಗಣಿಗಾರಿಕೆ

ಗೂಗಲ್‌ ಫೋಟೋ ಗಣಿಗಾರಿಕೆ

1

ಗೂಗಲ್‌ 2013 ರಿಂದ ಉಪಗ್ರಹ ಲಾಂಚ್‌ ಮಾಡುವ ಮುಖಾಂತರ ಫೋಟೋಗಳ ಗಣಿಗಾರಿಕೆ ಆರಂಭಿಸಿತ್ತು. ಅಂದ್ರೆ ಬಾಹ್ಯಾಕಾಶದಿಂದ ತೆಗೆದ ಫೋಟೋಗಳು ಯಾವುದೇ ಮೋಡ ಮುಚ್ಚಿಕೊಳ್ಳದೇ ಉತ್ತಮ ಗುಣಮಟ್ಟದ ಫೋಟೋಗಳನ್ನು ನೀಡುವುದು ಗೂಗಲ್‌ನ ಆಶಯವಾಗಿತ್ತು. ಈ ಫೋಟೋಗಳ ಸೇವೆ ಈಗ ಹೊಸ ತಿರುವು ಪಡೆದುಕೊಂಡಿದೆ.

ಹೊಸ ವರ್ಸನ್‌ ಆರಂಭಿಸಿದ ಗೂಗಲ್‌

ಹೊಸ ವರ್ಸನ್‌ ಆರಂಭಿಸಿದ ಗೂಗಲ್‌

2

ಗೂಗಲ್‌ ಇನ್ನುಮುಂದೆ ನಾಸಾ ಲಾಂಚ್‌ ಮಾಡಿರುವ 'ಲ್ಯಾಂಡ್‌ಸಾಟ್‌8 ಉಪಗ್ರಹ'ದ ಡಾಟಾ ಬಳಸಿಕೊಂಡು ಪ್ರತಿ ದಿನ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಫೋಟೋಗಳನ್ನು ಪಡೆಯಲಿದೆಯಂತೆ.

ಗೂಗಲ್‌ ಮ್ಯಾಪ್‌ ಬಳಕೆದಾರರಿಗೆ ವಿನೂತನ ಅನುಭವ

ಗೂಗಲ್‌ ಮ್ಯಾಪ್‌ ಬಳಕೆದಾರರಿಗೆ ವಿನೂತನ ಅನುಭವ

3

ಗೂಗಲ್‌ ಮ್ಯಾಪ್‌ನ ಒಂದು ಶತಕೋಟಿ ಬಳಕೆದಾರರು ಇನ್ನುಮುಂದೆ ಭೂಮಿಯ ತೀಕ್ಷ್ಣ ಮತ್ತು ಹೆಚ್ಚು ವಿವರವಾದ ಚಿತ್ರಗಳನ್ನು ಪಡೆಯಬಹುದಾಗಿದೆ. ಈ ಫೀಚರ್‌ ನಾಸಾ ಲಾಂಚ್‌ ಮಾಡಿರುವ ಹೊಸ ಉಪಗ್ರಹದ ಡಾಟಾ ಬಳಕೆಯಿಂದ ಸಾಧ್ಯವಾಗಲಿದೆ.

ಗೂಗಲ್‌ ಕಂಪನಿ ಹೇಳಿದ್ದೇನು?

ಗೂಗಲ್‌ ಕಂಪನಿ ಹೇಳಿದ್ದೇನು?

4

ಗೂಗಲ್, ನಾಸಾ ಉಪಗ್ರಹದಿಂದ 700 ಲಕ್ಷ ಕೋಟಿ ಪಿಕ್ಸೆಲ್‌ಗಳನ್ನು ಗಣಿಗಾರಿಕೆ ಮಾಡಿದ್ದು ಅವುಗಳನ್ನು ಒಟ್ಟಿಗೆ ಸೇರಿಸಿ ಪ್ರಪಂಚದ ಒಂದು ಮೊಸಾಯಿಕ್ ಆಗಿ ರಚಿಸಿದೆ. ಇದನ್ನು ಪ್ರಸ್ತುತದಲ್ಲಿ ಗೂಗಲ್‌ ಮ್ಯಾಪ್ ಅನ್ನು ಅಪ್‌ಡೇಟ್‌ ಮಾಡುವ ಮುಖಾಂತರ ಅಥವಾ ಗೂಗಲ್‌ ಅರ್ಥ್‌ ಆಪ್ಸ್‌ ಮೂಲಕ ನೋಡಬಹುದು ಎಂದು ಕಂಪನಿ ಹೇಳಿದೆ.

ಲ್ಯಾಂಡ್‌ಸಾಟ್ ಉಪಗ್ರಹ

ಲ್ಯಾಂಡ್‌ಸಾಟ್ ಉಪಗ್ರಹ

5

ಲ್ಯಾಂಡ್‌ಸಾಟ್‌7 ಕ್ಕಿಂತ, ಲ್ಯಾಂಡ್‌ಸಾಟ್ 8 ಉಪಗ್ರಹವು ಹೆಚ್ಚು ಸಾಮರ್ಥ್ಯ ಉಳ್ಳದಾಗಿದ್ದು, 2013 ರಿಂದ ಇತ್ತೀಚೆಗೆ ಮಾತ್ರ ಮೋಡ ರಹಿತ ಭೂಮಿಯ ಚಿತ್ರಣವನ್ನು ನೀಡಲು ಸಾಧ್ಯವಾಗಿದೆ.

ಹೆಚ್ಚು ವಿವರಗಳೊಂದಿಗೆ ಮ್ಯಾಪ್‌

ಹೆಚ್ಚು ವಿವರಗಳೊಂದಿಗೆ ಮ್ಯಾಪ್‌

6

ಲ್ಯಾಂಡ್‌ಸಾಟ್‌ 8 ಉಪಗ್ರಹವು ಚಿತ್ರಣವನ್ನು ಹೆಚ್ಚು ಮಾಹಿತಿಯೊಂದಿಗೆ ಕ್ಯಾಪ್ಚರ್‌ ಮಾಡಲಿದ್ದು, ಬಣ್ಣಸಹಿತ ಮತ್ತು ಉನ್ನತ ರೆಸಲ್ಯೂಶನ್‌ನೊಂದಿಗೆ ಭೂಮಿಯ ಚಿತ್ರಣ ನೀಡಲಿದೆ.

ನಾಸಾ ನೋಟ್‌

ನಾಸಾ ನೋಟ್‌

7

ಲ್ಯಾಂಡ್‌ಸಾಟ್ 8 ಉಪಗ್ರಹವು ದಿನನಿತ್ಯ 725 ದೃಶ್ಯಗಳನ್ನು ಕ್ಯಾಪ್ಚರ್‌ ಮಾಡುತ್ತಿದ್ದು, ಈ ಹಿಂದಿನ ಲ್ಯಾಂಡ್‌ಸಾಟ್ 7 ಕೇವಲ 438 ದೃಶ್ಯಗಳನ್ನು ಮಾತ್ರ ಕ್ಯಾಪ್ಚರ್‌ ಮಾಡುತ್ತಿತ್ತು ಎಂದು ತಿಳಿಸಿದೆ. ಅಲ್ಲದೇ ಈ ಎರಡು ಉಪಗ್ರಹಗಳ ದೃಶ್ಯಗಳನ್ನು ಒಟ್ಟು ಗೂಡಿಸಿದರೆ ಹೆಚ್ಚು ದೃಶ್ಯಗಳನ್ನು ಕಲೆಹಾಕಿದಂತಾಗುತ್ತದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Google sharpens Maps, Earth with petabyte of crisp NASA satellite imagery. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot