Home
Gadgets

ಇಲ್ಲಿವೇ ನೋಡಿ ನೀವು ಕನಸಲ್ಲಿಯೂ ಊಹಿಸಿರದ ಅದ್ಭುತ ಸ್ಮಾರ್ಟ್‌ ಡಿವೈಸ್‌ಗಳು!

ಪ್ರಸ್ತುತ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ತಂತ್ರಜ್ಞಾನವು ಪ್ರಪಂಚವನ್ನು ಚಿಕ್ಕದಾಗಿಸಿದೆ. ಜಗತ್ತಿನ ಯಾವುದೇ ಸ್ಥಳಕ್ಕೆ ಬೇಕಾದರೋ ಕ್ಷಣಮಾತ್ರದಲ್ಲಿ ವಿಡಿಯೊ ಕರೆ ಕನೆಕ್ಟ್‌ ಮಾಡಬಹುದು. ಇದು ಒಂದೆಡೆಯಾದರೇ, ಸ್ಮಾರ್ಟ್‌ಫೋನ್‌ ಹೊರತುಪಡಿಸಿ ತಂತ್ರಜ್ಞಾನ ಆಧಾರಿತ ದೈನಂದಿನ ಕೆಲಸಗಳ ನಿರ್ವಹಿಸುವ ಅನೇಕ ಉಪಕರಣಗಳು ಮಾರುಕಟ್ಟೆಯಲ್ಲಿವೆ. ತಂತ್ರಜ್ಞಾನದ ಅಂತಹ ಅಚ್ಚರಿಯ ಆವಿಷ್ಕಾರಗಳನ್ನು ನೋಡಿದಾಗ ಮನುಷ್ಯ ಸಂಪೂರ್ಣ ತಂತ್ರಜ್ಞಾನದ ಮೇಲೆ ಅವಲಂಭಿತನಾಗಿದ್ದಾನೆನೋ ಎಂದೆನಿಸಬಹುದು.

ತಂತ್ರಜ್ಞಾನ

ಹೌದು, ತಂತ್ರಜ್ಞಾನದ ಬೆಳವಣಿಗೆಯು ಹಲವು ಅಚ್ಚರಿಯ ಆವಿಷ್ಕಾರಗಳಿಗೆ ಸಾಕ್ಷಿಯಾಗುತ್ತಲೆ ಇದೆ. ಸ್ಮಾರ್ಟ್‌ಫೋನಿನಿಂದ ಫ್ಯಾನ್‌, ಧರಿಸುವ ಬಟ್ಟೆಗಳಲ್ಲಿ ಸೋಲಾರ್, ಮಗುವಿನ ಮೊಪ್‌, ಸ್ಮಾರ್ಟ್‌ ಮಸಾಜ್ ಹೀಗೆ ಹತ್ತು ಹಲವು ಆವಿಸ್ಕಾರಗಳು ನಿಮ್ಮನ್ನು ಚಕಿತಗೊಳಿಸುತ್ತವೆ. ಬಹುಶಃ ನೀವು ಕನಸಲ್ಲಿಯೂ ಊಹಿಸಿರದ ಕೇಲವು ಅದ್ಭುತ ಸ್ಮಾರ್ಟ್‌ ಡಿವೈಸ್‌ಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಲಾಗಿದೆ. ಹಾಗಾದರೇ ಆ ಆಶ್ವರ್ಯಕರ ಡಿವೈಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಕೀಬೋರ್ಡ್‌ ಜಿನ್ಸ್

ಕೀಬೋರ್ಡ್‌ ಜಿನ್ಸ್

ಡಚ್ ದೇಶದ ವಿನ್ಯಾಸ (ಡಿಸೈನ್ ವಿಭಾಗದ) ವಿದ್ಯಾರ್ಥಿ 'ಎರಿಕ್ ಡಿ ನಿಜ್ಸ್' ಈ ಆವಿಸ್ಕಾರ ಮಾಡಿದ್ದು, ಕೀಬೋರ್ಡ್‌ ಜಿನ್ಸ್ ಎಲ್ಲರ ಗಮನಸೆಳೆದಿದೆ. ಈ ಕೀಬೋರ್ಡ್‌ ಜೀನ್ಸ್‌ನಲ್ಲಿ ಕೀಬೋರ್ಡ್ ಜೊತೆಗೆ ಸ್ಪೀಕರ್ ಮತ್ತು ಮೌಸ್ ಕೂಡ ಇದೆ.

ತಿರುಗುವ ಐಸ್‌ಕ್ರೀಮ್ ಕೋನ್

ತಿರುಗುವ ಐಸ್‌ಕ್ರೀಮ್ ಕೋನ್

ಸಾಮಾನ್ಯವಾಗಿ ಕೋನ್ ಐಸ್‌ಕ್ರೀಮ್ ತಿನ್ನುವಾಗ ಕೋನ್‌ ಅನ್ನು ಕೈಯಿಂದ ತಿರುಗಿಸುತ್ತಾರೆ. ಆದ್ರೆ ಇನ್ಮುಂದೆ ಆ ಸಮಸ್ಯೆ ಇರುವುದಿಲ್ಲ. ಏಕೆಂದರೇ ತಿರುಗುವ ಐಸ್‌ಕ್ರೀಮ್ ಕೋನ್ ಡಿವೈಸ್‌ ಆವಿಸ್ಕಾರವಾಗಿದೆ. ಕೋನ್ ಯಾನಾಗಿಯೇ ತಿರುಗುತ್ತದೆ.

ಮೂಗುಗೆ ಸ್ಮಾರ್ಟ್‌ ಧರಿಸು

ಮೂಗುಗೆ ಸ್ಮಾರ್ಟ್‌ ಧರಿಸು

ಇವತ್ತಿನ ಬ್ಯುಸಿ ಲೈಫ್‌ ಸ್ಟೈಲ್‌ನಲ್ಲಿ ಬಹುತೇಕರು ಒಮ್ಮಲೇ ಹಲವು ಕೆಲಸಗಳನ್ನು ಮಾಡುವುದರಲ್ಲಿ ತಲ್ಲಿನರಾಗಿರುತ್ತಾರೆ. ಒಂದು ಕೈಯಲ್ಲಿ ಪುಸ್ತಕ ಓದಿದರೇ ಇನ್ನೊಂದರಲ್ಲಿ ಮೊಬೈಲ್‌ ಇರುತ್ತದೆ. ಹೀಗಾಗಿ ಮೊಬೈಲ್ ಆಪ್ರೇಟ್‌ ಮಾಡಲು ಮೂಗಿಗೆ ಸ್ಮಾರ್ಟ್‌ ಧರಿಸಿ ಆವಿಸ್ಕರಿಸಿದ್ದಾರೆ.

ಬಾಯಿಗೂ ವರ್ಕೌಟ್‌

ಬಾಯಿಗೂ ವರ್ಕೌಟ್‌

ಫಿಟ್ನೆಸ್‌ ಡಿವೈಸ್‌ಗಳು ಇಂದು ಸ್ಮಾರ್ಟ್‌ ರೂಪ ಪಡೆದುಕೊಳ್ಳುತ್ತಿವೆ. ಆದ್ರೆ ಅಚ್ಚರಿಯೆಂದರೇ ಬಾಯಿಯ ಮಸಲ್ಸ್‌ಗೂ ವರ್ಕೌಟ್‌ ಮಾಡಿಸಲು ಜಪಾನ ತಂತ್ರಜ್ಞರು Pao Fit ಎಂಬ ಡಿವೈಸ್‌ ಆವಿಸ್ಕರಿಸಿದ್ದಾರೆ. ನೋಡಲು ಪುರಾತನ ಕಾಲದ ವಸ್ತು ತರಹ ಕಾಣಿಸುತ್ತದೆ.

ಈ ಸೈಕಲ್‌ಗೆ ನಿಮ್ಮ ಕಾಲೇ ಪೆಡಲ್

ಈ ಸೈಕಲ್‌ಗೆ ನಿಮ್ಮ ಕಾಲೇ ಪೆಡಲ್

ಸಾಮಾನ್ಯವಾಗಿ ಸೈಕಲ್ ಎಂದಾಕ್ಷಣ ಸೀಟ್‌ ಮೇಲೆ ಕುಳಿತು ಪೆಡಲ್ ತುಳಿಯುವುದು ನೆನೆಪಾಗುತ್ತೆ. ಆದ್ರೆ ಈ The Fliz ಸೈಕಲ್ ಫ್ರೇಮ್‌ ಒಳಗೆ ಆತುಕೊಳ್ಳಬೇಕು ಮತ್ತು ಕಾಲಿಂದ ಓಡಿಸಬೇಕು. ಕೇಳಿದರೇ ಅಯ್ಯಯ್ಯೋ ಅನಿಸುತ್ತದೆ.

ಗೇಮ್‌ ಆಡ್ತಾ ಮಸಾಜ್ ಮಾಡ್ಬಹುದು

ಗೇಮ್‌ ಆಡ್ತಾ ಮಸಾಜ್ ಮಾಡ್ಬಹುದು

ಗೇಮ್‌ ಆಡ್ತಾ ಮಸಾಜ್ ಮಾಡ್ಬಹುದು ಅಚ್ಚರಿ ಎನಿಸಿದರು ಇದು ಸತ್ಯವೇ. ಗೇಮ್ಸ್‌ ಆಡುತ್ತಾ ಜೊತೆಗಿರುವ ವ್ಯಕ್ತಿಗೆ ಮಸಾಜ್ ಮಾಡುವ ಡಿವೈಸ್‌ ಇದಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೋ ಅದನ್ನು ತಯಾರಿದ ಪುಣ್ಯಾತ್ಮನಿಗೆ ಗೊತ್ತು.

ಗನ್‌ನಲ್ಲಿಯೂ ಕ್ಯಾಮೆರಾ

ಗನ್‌ನಲ್ಲಿಯೂ ಕ್ಯಾಮೆರಾ

ಕ್ಯಾಮೆರಾ ಇಂದಿನ ಅತೀ ಅಗತ್ಯ ಡಿವೈಸ್‌ಗಳಲ್ಲಿ ಒಂದಾಗಿದ್ದು, ಹಲವು ವಿಧದಲ್ಲಿ ಕ್ಯಾಮೆರಾಗಳನ್ನು ನೋಡಿರುತ್ತಿರಿ. ಆದರೆ ಗನ್‌ ಮಾದರಿಯಲ್ಲಿ ಕ್ಯಾಮೆರಾ ಡಿವೈಸ್‌ ಆವಿಸ್ಕರಿಸಿ ಜನರಿಗೆ ಶಾಕ್ ನೀಡಿದ್ದಾರೆ. ಬಹುಶಃ ಈ ಗನ್‌ ಕ್ಯಾಮೆರಾ ಬಳಸಿ ಫೋಟೊ ಕ್ಲಿಕ್ ಮಾಡುವಾಗ ಸ್ಮೈಲ್‌ ಪ್ಲಿಸ್‌ ಬದಲು ಹಾಂಡ್ಸ್‌ ಅಪ್‌ ಅನ್ನಬೇಕೆನೋ.

ಐಫೋನ್‌ ಫ್ಯಾನ್

ಐಫೋನ್‌ ಫ್ಯಾನ್

ಹೊಸದಾಗಿ ಚಿಕ್ಕ ಫ್ಯಾನ್‌ ಆವಿಸ್ಕರಿಸಲಾಗಿದ್ದು, ಈ ಫ್ಯಾನ್‌ ಅನ್ನು ಐಫೋನ್‌ಗೆ ಪ್ಲಗ್ ಮಾಡಿ ಬಳಕೆದಾರರು ಸಣ್ಣ ಪ್ರಮಾಣದಲ್ಲಿ ಗಾಳಿ ಪಡೆಯಬಹುದು. ಈ ಪ್ರಯತ್ನ ಹುಚ್ಚಾಟ ಎನಿಸಬಹುದು ಆದ್ರೆ ಐಫೋನ್‌ಗಾಗಿಯೇ ಇದನ್ನು ತಯಾರಿಸಲಾಗಿದೆ.

ಸ್ಮಾರ್ಟ್‌ ಛತ್ರಿ

ಸ್ಮಾರ್ಟ್‌ ಛತ್ರಿ

ಜನರು ಮಳೆಗಾಲದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನು ಬಳೆಸುತ್ತಾರೆ. ಆದ್ರೆ ಇತ್ತೀಚಿನ ಸ್ಮಾರ್ಟ್‌ ಛತ್ರಿ ಕೇವಲ ಮಳೆಯಿಂದ ರಕ್ಷಣೆ ನೀಡುವುದಿಲ್ಲ ಬದಲಿಗೆ, ಇನ್ನೊಂದು ಸ್ಮಾರ್ಟ್‌ ಛತ್ರಿಗೆ ಡೇಟಾ ಟ್ರಾನ್ಸ್‌ಫರ್ ಮಾಡುತ್ತದೆ. ಸ್ಮಾರ್ಟ್‌ ಕನೆಕ್ಟಿವಿಟಿ ಪಡೆದಿರುತ್ತದೆ.

Best Mobiles in India

English summary
Some inventions are better than others, then there are some that should never have seen the light of day. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+