Home
Gadgets

Saltwater Light: ಉಪ್ಪು ನೀರು ಅಥವಾ ಮೂತ್ರದಿಂದಲೇ ಬೆಳಕು ನೀಡುತ್ತೆ ಈ ಡಿವೈಸ್‌!

ತಂತಜ್ಞಾನ ಅಭಿವೃದ್ಧಿಯಾದಂತೆ ಹೊಸ ಹೊಸ ಸ್ಮಾರ್ಟ್‌ ಡಿವೈಸ್‌ಗಳು ಬಳಕೆಗೆ ಬರುತ್ತಿವೆ. ನಮಗೆಲ್ಲರಿಗೂ ತಿಳಿದಂತೆ ನೀರಿನಿಂದಲೂ ಸಹ ವಿದ್ಯುತ್‌ ಶಕ್ತಿ ಪಡೆಯಲಾಗುತ್ತದೆ. ಆದರೆ, ನೇರವಾಗಿ ಮನೆಯಲ್ಲಿಯೇ ಉಪ್ಪು ನೀರು ಅಥವಾ ಮೂತ್ರದಿಂದಲೇ ಮನೆಯಲ್ಲಿ ಬೆಳಕು ಪಡೆಯಬಹುದು ಎಂಬುದು ನಿಮಗೆ ಗೊತ್ತಾ.?

ಹೌದು, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹಲವಾರು ಜನರು ವಿದ್ಯುತ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ನಗರದಲ್ಲಿಯೂ ಸಹ ವಿದ್ಯುತ್‌ ಸಮಸ್ಯೆ ಇದೆ. ಈ ನಡುವೆ ಜನರಿಗೆ ಉಪ್ಪುನೀರಿನ ದ್ವೀಪಗಳು ಗೊತ್ತಿದ್ದವು. ಆದರೀಗ ಉಪ್ಪು ನೀರಿನ ದೀಪಗಳು ವರದಾನವಾಗಲಿವೆ. ಉಪ್ಪುನೀರಿನ ದೀಪವು ಈ ರೀತಿಯ ಸವಾಲುಗಳಿಗೆ ಪರಿಹಾರವನ್ನು ನೀಡಲಿದೆ. ಹಾಗಿದ್ರೆ, ಈ ಲೈಟ್‌ನ ಬೆಲೆ ಎಷ್ಟು, ಉಪ್ಪುನೀರಿನಿಂದ ಹೇಗೆ ಬೆಳಕು ಪಡೆದುಕೊಳ್ಳಬಹುದು ಎಂಬ ಇಂಟ್ರೆಸ್ಟಿಂಗ್‌ ವಿಷಯಕ್ಕಾಗಿ ಈ ಲೇಖನ ಓದಿರಿ.

ಉಪ್ಪು ನೀರು ಅಥವಾ  ಮೂತ್ರದಿಂದಲೇ ಬೆಳಕು ನೀಡುತ್ತೆ ಈ ಡಿವೈಸ್‌!

ಹೆಚ್ಚಾದ ವಿದ್ಯುತ್‌ ದರ: ಹಣದುಬ್ಬರದ ಹೊರೆ ಜನರ ಹೆಗಲ ಮೇಲೆ ನೇರವಾಗಿ ಬೀಳುತ್ತಿದ್ದು, ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರಗಳು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ನಡುವೆ ಚಾರ್ಜಿಂಗ್‌ ವಿದ್ಯುತ್ ದೀಪಗಳು ಬಳಕೆಯಲ್ಲಿವೆ ಹಾಗೂ ಸೋಲಾರ್‌ ದೀಪಗಳನ್ನೂ ಸಹ ಅಲ್ಲಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ, ವಿದ್ಯುತ್‌ ಇಲ್ಲದೆಯೇ ಬೆಳಕನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಬಗ್ಗೆ ಒಮ್ಮೆಯಾದರೂ ಊಹೆ ಮಾಡಿದ್ದೀರಾ.

ಏನಿದು ಉಪ್ಪು ನೀರಿನ ಲೈಟ್?‌: ಉಪ್ಪು ನೀರಿನಿಂದ ಹಾಗೂ ಮೂತರದಿಂದ ಬೆಳಕು ನೀಡುವ ದೀಪ (Saltwater Light) ಸದ್ಯ ಭಾರೀ ಚರ್ಚೆಯಲ್ಲಿದೆ. ಅಷ್ಟು ಮಾತ್ರವಲ್ಲ ಇದು ಬರೋಬ್ಬರಿ ಎರಡು ವರ್ಷಗಳವರೆಗೆ ಬೆಳಕನ್ನು ನೀಡುತ್ತದೆ. ಕೊಲಂಬಿಯಾದ ಪವರ್ ಸ್ಟಾರ್ಟ್-ಅಪ್ ಇ-ಡಿನಾ ವಾಟರ್‌ಲೈಟ್ ಎಂಬ ಸಂಸ್ಥೆ ಈ ಉಪ್ಪುನೀರಿನ ದೀಪವನ್ನು ಅಭಿವೃದ್ಧಿಪಡಿಸಿದೆ. ಇದು ಬೆಳಕನ್ನು ಬೆಳಗಿಸಲು ನೀರನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಪೋರ್ಟಬಲ್ ಡಿವೈಸ್‌ ಒಂದು ಲೋಟ ಸಮುದ್ರದ ನೀರಿನ ಶಕ್ತಿಯನ್ನು ಬಳಕೆ ಮಾಡಿಕೊಳ್ಳುತ್ತದೆ ಎಂಬುದು ವಿಶೇಷ. ಅಂದರೆ ಒಂದು ಕಪ್‌ ನೀರಲ್ಲಿ ಎಂಟು ಗಂಟೆಗಳವರೆಗೆ ಉಚಿತ ಬೆಳಕನ್ನು ನೀಡುತ್ತದೆ. ಗಮನಿಸಬೇಕಾದ ವಿಷಯ ಏನೆಂದರೆ ಇದು ಮೂತ್ರದಿಂದಲೂ ಸಹ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಈ ತಂತ್ರಜ್ಞಾನವು ಸೌರ ದೀಪಗಳನ್ನು ಸಹ ಮೀರಿಸಲಿದ್ದು, ಹಗಲು ಅಥವಾ ರಾತ್ರಿಯ ಸಮಯವನ್ನು ಲೆಕ್ಕಿಸದೆ ಎಲ್ಲಾ ಸಮಯದಲ್ಲೂ ಬೆಳಕು ನೀಡುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?: ಈ ಉಪ್ಪು ನೀರಿನ ಲೈಟ್‌ ವಾಟರ್‌ಲೈಟ್ ಅಯಾನೀಕರಣ ಎಂಬ ರಾಸಾಯನಿಕ ಪ್ರಕ್ರಿಯೆಯಿಂದ ಕೆಲಸ ಮಾಡಲಿದ್ದು, ಇದರ ಒಳಗೆ ಮೆಗ್ನೀಸಿಯಮ್ ವಿದ್ಯುದ್ವಿಚ್ಛೇದ್ಯಗಳೊಂದಿಗೆ ಸಮುದ್ರದ ನೀರು ಸಂಪರ್ಕಕ್ಕೆ ಬಂದಾಗ ಪ್ರತಿಕ್ರಿಯೆ ಸಂಭವಿಸುತ್ತದೆ. ಅದನ್ನು ಮಿನಿ ಪವರ್ ಜನರೇಟರ್ ಆಗಿ ಪರಿವರ್ತಿಸಲಿದ್ದು, ಈ ಕಾರ್ಯವಿಧಾನವು ದೀಪವನ್ನು ಇಂಧನಗೊಳಿಸಿ ಬೆಳಕನ್ನು ನೀಡಲು ಆರಂಭ ಮಾಡುತ್ತದೆ. ಅಷ್ಟು ಮಾತ್ರವಲ್ಲದೆ ಇದರಿಂದ ಫೋನ್‌ಗಳು ಸೇರಿದಂತೆ ಇತರೆ ಡಿವೈಸ್‌ಗಳನ್ನು ಚಾರ್ಜ್ ಮಾಡಿಕೊಳ್ಳಬಹುದು.

ಉಪ್ಪು ನೀರು ಅಥವಾ  ಮೂತ್ರದಿಂದಲೇ ಬೆಳಕು ನೀಡುತ್ತೆ ಈ ಡಿವೈಸ್‌!

ಉಪ್ಪುನೀರಿನ ಲೈಟ್‌ ಪ್ರಯೋಜನ: ಈ ಲೈಟ್‌ಗಳ ಬಳಕೆಯಿಂದಾಗಿ ವಿದ್ಯುಚ್ಛಕ್ತಿಯ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬಹುದು. ಹಾಗೂ ಮಾಸಿಕ ಬಿಲ್‌ ನಲ್ಲಿ ಕಡಿತಗೊಳಿಸಿಕೊಳ್ಳಬಹುದು. ಅದರಲ್ಲೂ ಸಮುದ್ರ ನೀರನ್ನು ಬಳಕೆ ಮಾಡುವುದರಿಂದಾಗಿ ಇದು ಪರಿಸರ ಸ್ನೇಹಿಯಾಗಿಯೂ ಕೆಲಸ ಮಾಡಲಿದೆ. ಜೊತೆಗೆ ಪೋರ್ಟಬಲ್ ಆಗಿರುವುದರಿಂದ ಎಲ್ಲಿ ವಿದ್ಯುಚ್ಛಕ್ತಿ ಬಳಕೆ ಮಾಡಲು ಸಾಧ್ಯ ಆಗುವುದಿಲ್ಲವೋ ಅಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದು.

ವಿದ್ಯುತ್ ಬಿಲ್‌ಗಳು ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಈ ಲೈಟ್‌ ಜನರ ಜೇಬಿಕೆ ಕತ್ತರಿ ಹಾಕುವುದನ್ನು ತಡೆಯಲಿದೆ. ಜೊತೆಗೆ ವಿದ್ಯುತ್ ಕಡಿತ ಉಂಟಾದಾಗ ಯಾವುದೇ ಸಮಸ್ಯೆ ಆಗದ ಹಾಗೆ ಇವುಗಳನ್ನು ಬಳಕೆ ಮಾಡಿಕೊಳ್ಳಬಹುದು. ಯಾಕೆಂದರೆ ಸಮುದ್ರ ತೀರದಿಂದ ದೂರ ಇರುವ ಜನರು ಮೂತ್ರವನ್ನು ಬಳಸಿಕೊಂಡು ಎರಡು ವರ್ಷಗಳವರೆಗೆ ಬೆಳಕನ್ನು ಪಡೆದುಕೊಳ್ಳಬಹುದು ಎಂದರೆ ನೀವೆ ಒಮ್ಮೆ ಇದರ ವಿಶೇಷ ತಂತ್ರಜ್ಞಾನಕ್ಕೆ ಸೈ ಎನ್ನಲೇಬೇಕು. ಸದ್ಯಕ್ಕೆ ಇದು ಪ್ರಯೋಗ ಹಂತದಲ್ಲಿದ್ದು, ಬೆಲೆ ಹಾಗೂ ಲಭ್ಯತೆ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Best Mobiles in India

English summary
many people in rural areas are still suffering from electricity problems. Not only that, there is also an electricity problem in the city. Meanwhile, people knew about saltwater islands. In the meantime, salt water lamps are going to be a boon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+