ಬಡವರು ಕೊಳ್ಳಬಹುದು..! ಮೂರು ಹೊಸ Smart TV ಬಿಡುಗಡೆ.. ಕೈಗೆಟುಕುವ ಬೆಲೆ.. ಸುಧಾರಿತ ವೈಶಿಷ್ಟ್ಯಗಳು
ಸ್ಮಾರ್ಟ್ ಟಿವಿ ಪ್ರಿಯರಿಗಾಗಿ ಈ ಸುದ್ದಿ! ಸದ್ದಿಲ್ಲದೆ ಮೂರು ಹೊಸ ಸ್ಮಾರ್ಟ್ ಟಿವಿ (Smart TV) ಮಾರುಕಟ್ಟೆಗೆ ಎಂಟ್ರಿ. ಕೈಗೆಟುಕುವ ಬೆಲೆಯಲ್ಲಿ ಸುಧಾರಿತ ವೈಶಿಷ್ಟ್ಯಗಳು ಲಭ್ಯ. ಹೌದು, ಟೆಕ್ ಬ್ರಾಂಡ್ ಥಾಮ್ಸನ್ (Thomson) ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಥಾಮ್ಸನ್ ಫೀನಿಕ್ಸ್ (Thomson Phoenix) ಸರಣಿಯನ್ನು ವಿಸ್ತರಿಸಿದೆ. ಕಂಪನಿಯು ಭಾರತದಲ್ಲಿ ಮೂರು QLED ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ 50 ಇಂಚು, 55 ಇಂಚು ಮತ್ತು 65 ಇಂಚಿನ ಟಿವಿಗಳು ಸೇರಿವೆ. ಬನ್ನಿ, ಹೊಸ ಟಿವಿಗಳ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ.
ಥಾಮ್ಸನ್ ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್ ಟಿವಿ ಪರಿಚಯಿಸುವಲ್ಲಿ ಹೆಸರುವಾಸಿಯಾಗಿದೆ. ಅದರಂತೆ, ಥಾಮ್ಸನ್ ಫೀನಿಕ್ಸ್ ಸರಣಿಯನ್ನು ಪರಿಚಯಿಸಿದೆ. ಈ ಸ್ಮಾರ್ಟ್ ಟಿವಿಗಳು ಅದ್ಭುತ ಡಿಸ್ಪ್ಲೇ, ಬೊಂಬಾಟ್ ಸ್ಪೀಕರ್‌ಗಳು, ಶಕ್ತಿಶಾಲಿ ಪ್ರೊಸೆಸರ್ ಮತ್ತು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಟಿವಿಗಳು 10 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಬೆಂಬಲಿಸುತ್ತವೆ. ಇದರಲ್ಲಿ 2GB RAM ಮತ್ತು 16GB ಆಂತರಿಕ ಸ್ಟೋರೇಜ್ ಸಹ ಲಭ್ಯವಿರುತ್ತದೆ. ಕಡಿಮೆ ಬಜೆಟ್‌ನಲ್ಲಿ ಹೊಸ ಸ್ಮಾರ್ಟ್ ಟಿವಿ ಹುಡುಕುತ್ತಿರುವವರಿಗೆ ಇವು ಉತ್ತಮ ಆಯ್ಕೆಯಾಗಿವೆ.

ಥಾಮ್ಸನ್ ಫೀನಿಕ್ಸ್ ಸರಣಿ QLED ಟಿವಿಗಳ ಬೆಲೆ ಮತ್ತು ಲಭ್ಯತೆ
50 ಇಂಚಿನ ಟಿವಿ (50QAI1015) = 26,999 ರೂ.
55 ಇಂಚಿನ ಟಿವಿ (55QAI1025) = 30,999 ರೂ.
65 ಇಂಚಿನ ಟಿವಿ (65QAI1035) = 43,999 ರೂ.
ಥಾಮ್ಸನ್ ಫೀನಿಕ್ಸ್ ಸರಣಿಯ ಸ್ಮಾರ್ಟ್ ಟಿವಿಯ ಆರಂಭಿಕ ಬೆಲೆ 26,999 ರೂ. ಆಗಿದೆ. ಇದು 50 ಇಂಚಿನ ಟಿವಿಯ ಬೆಲೆ ಆಗಿದೆ. ಅದೇ ರೀತಿ, 55QAI1025 ಮಾದರಿ 55 ಇಂಚಿನ ಸ್ಮಾರ್ಟ್ ಟಿವಿಯನ್ನು 30,999 ರೂ.ಗೆ ಬಿಡುಗಡೆ ಮಾಡಲಾಗಿದೆ. 65QAI1035 ಮಾದರಿಯ 65 ಇಂಚಿನ ಟಿವಿ 43,999 ರೂ.ಗೆ ಲಭ್ಯವಿದೆ. ಈ QLED ಸ್ಮಾರ್ಟ್ ಟಿವಿಗಳ ಮಾರಾಟ ಮೇ 2 ರಿಂದ ಪ್ರಾರಂಭವಾಗಲಿದೆ. ನೀವು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು ಅಥವಾ ಬುಕ್ ಮಾಡಬಹುದು.
ಥಾಮ್ಸನ್ ಫೀನಿಕ್ಸ್ ಸರಣಿಯ QLED ಟಿವಿ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಥಾಮ್ಸನ್ ಫೀನಿಕ್ಸ್ ಸರಣಿಯ QLED ಸ್ಮಾರ್ಟ್ ಟಿವಿಗಳು 50 ಇಂಚಿನ, 55 ಇಂಚಿನ ಮತ್ತು 65 ಇಂಚಿನ QLED 4k ಡಿಸ್ಪ್ಲೇ ಹೊಂದಿವೆ. ಇದು HDR 10, ಡಾಲ್ಬಿ ಡಿಜಿಟಲ್ ಪ್ಲಸ್, ಡಾಲ್ಬಿ ಅಟ್ಮೋಸ್ ಜೊತೆಗೆ ಟ್ರೂಸರೌಂಡ್ ಅನ್ನು ಒಳಗೊಂಡಿದೆ. ಮೂರು QLED ಟಿವಿಗಳು ಲೋಹೀಯ ಅಂಚಿನಿಲ್ಲದ ವಿನ್ಯಾಸದೊಂದಿಗೆ ಬರುತ್ತವೆ.
ಪ್ರೊಸೆಸರ್ ಸಾಮರ್ಥ್ಯ
ಥಾಮ್ಸನ್ ಫೀನಿಕ್ಸ್ ಸರಣಿಯ QLED ಟಿವಿಗಳು 2GB RAM ಮತ್ತು 16GB ಆಂತರಿಕ ಸ್ಟೋರೇಜ್ ಹೊಂದಿವೆ. ಈ ಸ್ಮಾರ್ಟ್ ಟಿವಿಗಳು AI PQ ಪ್ರೊಸೆಸರ್ ಹೊಂದಿವೆ. ಮತ್ತು ARM ಕಾರ್ಟೆಕ್ಸ್ A55 ಕ್ವಾಡ್ ಕೋರ್ ಚಿಪ್‌ಸೆಟ್ ಅಳವಡಿಸಲಾಗಿದೆ. ಗ್ರಾಫಿಕ್ಸ್‌ಗಾಗಿ, ಇದರಲ್ಲಿ ಮಾಲಿ G312 ಜಿಪಿಯು ಸಹ ಲಭ್ಯವಿದೆ.
ಬೊಂಬಾಟ್ ಸ್ಪೀಕರ್‌ಗಳು
50 ಇಂಚಿನ ಟಿವಿಯಲ್ಲಿ 50 ವ್ಯಾಟ್‌ಗಳ ಎರಡು ಸ್ಪೀಕರ್‌ಗಳಿವೆ. ಆದರೆ, 55 ಇಂಚಿನ ಮತ್ತು 65 ಇಂಚಿನ ಸ್ಮಾರ್ಟ್ ಟಿವಿಗಳು 60 ವ್ಯಾಟ್‌ಗಳ ನಾಲ್ಕು ಸ್ಪೀಕರ್‌ಗಳನ್ನು ಹೊಂದಿವೆ. ಮೂರು ಸ್ಮಾರ್ಟ್ ಟಿವಿಗಳು ಡಾಲ್ಬಿ ಅಟ್ಮಾಸ್ + ಟ್ರೂಸರೌಂಡ್ ನೊಂದಿಗೆ ಬರುತ್ತವೆ. ಇದು ಬಹು ಧ್ವನಿ ವಿಧಾನಗಳನ್ನು ಹೊಂದಿದೆ.
10,000ಕ್ಕೂ ಹೆಚ್ಚು ಆಪ್‌ಗಳು ಮತ್ತು ಗೇಮ್‌ಗಳು
ಥಾಮ್ಸನ್ ಫೀನಿಕ್ಸ್ ಸರಣಿಯ ಟಿವಿಗಳು 10 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಬೆಂಬಲಿಸುತ್ತವೆ. ಇವುಗಳಲ್ಲಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ ಹಾಟ್‌ಸ್ಟಾರ್, ಆಪಲ್ ಟಿವಿ, ವೂಟ್, ಝೀ5, ಸೋನಿ ಎಲ್‌ಐವಿ ಮತ್ತು ಗೂಗಲ್ ಪ್ಲೇ ಸ್ಟೋರ್ ಸೇರಿವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇವು ಡ್ಯುಯಲ್ ಬ್ಯಾಂಡ್ 2.4 + 5 GHz ವೈ-ಫೈ, ಬ್ಲೂಟೂತ್ 5.0, 3 HDMI ಪೋರ್ಟ್‌ಗಳು ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿವೆ.


Click it and Unblock the Notifications








