ಬಜೆಟ್ ಬೆಲೆಯಲ್ಲಿ ಫೈರ್-ಬೋಲ್ಟ್ ಸ್ಮಾರ್ಟ್‌ವಾಚ್ ಖರೀದಿಸಬೇಕೆ?..ಇಲ್ಲಿ ಗಮನಿಸಿ!
ಪ್ರಸ್ತುತ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಫೈರ್-ಬೋಲ್ಟ್ ಸಂಸ್ಥೆಯು ಬಜೆಟ್ ದರದಲ್ಲಿ ಹಲವು ಉತ್ಪನ್ನ ಪರಿಚಯಿಸುವ ಮೂಲಕ ಗ್ರಾಹಕರ ಗಮನ ಸೆಳೆಯುತ್ತ ಸಾಗಿದೆ. ಫೈರ್-ಬೋಲ್ಟ್ ಸಂಸ್ಥೆಯು ಭಾರತದಲ್ಲಿ ಇದೀಗ ಮತ್ತೆ ಹೊಸದೊಂದು ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸಿದೆ.
ಹೌದು, ಫೈರ್-ಬೋಲ್ಟ್ ಕಂಪನಿಯು ನೂತನವಾಗಿ ಫೈರ್ ಬೋಲ್ಟ್ ನಿಂಜಾ ಫಿಟ್ (Fire-Boltt Ninja Fit) ಸ್ಮಾರ್ಟ್‌ವಾಚ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ವಾಚ್ ಸೇರಿದಂತೆ ಹಲವು ಫೈರ್-ಬೋಲ್ಟ್ ಸ್ಮಾರ್ಟ್ ವಾಚ್‌ಗಳು ಗ್ರಾಹಕಸ್ನೇಹಿ ಬೆಲೆಯನ್ನು ಹೊಂದಿದ್ದು, ಹೆಚ್ಚಿನ ಗ್ರಾಹಕರನ್ನು ಸೆಳೆದಿವೆ.

ಫೈರ್-ಬೋಲ್ಟ್ ಕಂಪನಿಯು ಭಿನ್ನ ಮಾದರಿಯ ಸ್ಮಾರ್ಟ್ ವಾಚ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಇದರೊಂದಿಗೆ ಇಯರ್‌ಬಡ್ಸ್ ಉತ್ಪನ್ನಗಳ ಆಯ್ಕೆ ಸಹ ಒಳಗೊಂಡಿದೆ. ಹಾಗಾದರೇ ಈ ಲೇಖನದಲ್ಲಿ ಬಜೆಟ್ ಬೆಲೆಗೆ ಲಭ್ಯವಿರುವ ಐದು ಬೆಸ್ಟ್ ಫೈರ್ ಬೋಲ್ಟ್ ಸ್ಮಾರ್ಟ್ ವಾಚ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಫೈರ್ ಬೋಲ್ಟ್ ನಿಂಜಾ ಫಿಟ್ ಸ್ಮಾರ್ಟ್‌ವಾಚ್
ಈ ಸ್ಮಾರ್ಟ್‌ವಾಚ್ 1.69 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 123 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಇದು IP68 ರೇಟಿಂಗ್ ಹೊಂದಿದ್ದು, ಬೆವರು ಮತ್ತು ನೀರಿನಿಂದ ರಕ್ಷಣೆಯನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್ ಮಲ್ಟಿ ವಾಚ್ ಫೇಸ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕಪ್ಪು, ನೀಲಿ, ಬೆಳ್ಳಿ, ಗುಲಾಬಿ, ನೀಲಿ, ಕೆಂಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ. ಬೆಲೆ 1,299ರೂ. ಆಗಿದೆ.

ಫೈರ್ ಬೋಲ್ಟ್ ಡ್ಯಾಝಲ್ ಪ್ಲಸ್ ಸ್ಮಾರ್ಟ್‌ವಾಚ್
ಈ ಫೈರ್-ಬೋಲ್ಟ್ ಡ್ಯಾಝಲ್ ಪ್ಲಸ್ ಸ್ಮಾರ್ಟ್ ವಾಚ್ 1.83 ಇಂಚಿನ ಐಪಿಎಸ್ ಡಿಸ್‌ಪ್ಲೇ ಹೊಂದಿದ್ದು, ಸ್ಮಾರ್ಟ್‌ವಾಚ್‌ಗಳ ವಿಭಾಗದಲ್ಲೇ ದೊಡ್ಡ ಡಿಸ್‌ಪ್ಲೇ ಹೊಂದಿರುವ ವಾಚ್ ಎನಿಸಿಕೊಂಡಿದೆ. ಇದರಲ್ಲಿ 60 ಕ್ರೀಡಾ ಮೋಡ್‌ಗಳ ಆಯ್ಕೆಗಳನ್ನು ನೀಡಲಾಗಿದೆ. ಇದರ ಜೊತೆಗೆ SpO2 ಮೇಲ್ವಿಚಾರಣೆ, ಹೃದಯ ಬಡಿತದ ಟ್ರ್ಯಾಕಿಂಗ್ ಹಾಗೂ ನಿದ್ರೆಯ ಮೇಲ್ವಿಚಾರಣೆಯಂತಹ ಪ್ರಮುಖ ಫೀಚರ್ಸ್ ಇದರಲ್ಲಿದೆ. ಬೆಲೆ 1399ರೂ. ಆಗಿದೆ.
ಫೈರ್ ಬೋಲ್ಟ್ ಕೋಬ್ರಾ ಸ್ಮಾರ್ಟ್‌ವಾಚ್
ಈ ಸ್ಮಾರ್ಟ್‌ವಾಚ್ 1.78-ಇಂಚಿನ AMOLED ಹೊಂದಿದ್ದು, 368 × 448 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಪಡೆದಿದೆ. ಹಾಗೆಯೇ ಸುಮಾರು 123 ಕ್ರೀಡಾ ಮೋಡ್‌ಗಳ ಆಯ್ಕೆಗಳನ್ನು ಹೊಂದಿದೆ. ಇದರ ಜೊತೆಗೆ 24 × 7 ಡೈನಾಮಿಕ್ ಹೃದಯ ಬಡಿತ ಮಾನಿಟರಿಂಗ್, SpO2 ಮಾನಿಟರಿಂಗ್, ಸ್ತ್ರೀ ಆರೋಗ್ಯ ರಕ್ಷಣೆ ಮತ್ತು ನಿದ್ರೆಯ ಮೇಲ್ವಿಚಾರಣೆಯಂತಹ ಆರೋಗ್ಯ ಫೀಚರ್ಸ್‌ಗಳನ್ನು ಸಿಲಭವಾಗಿ ಟ್ರ್ಯಾಕ್ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಇದು 3,499 ರೂ. ಬೆಲೆಯನ್ನು ಹೊಂದಿದೆ.

ಫೈರ್ ಬೋಲ್ಟ್ ಕ್ವಾಂಟಮ್ ಸ್ಮಾರ್ಟ್‌ವಾಚ್
ಫೈರ್-ಬೋಲ್ಟ್ ಕ್ವಾಂಟಮ್ ಸ್ಮಾರ್ಟ್‌ವಾಚ್ 1.28 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 x 240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್ SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ಬೀಟ್ ಟ್ರ್ಯಾಕಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲಿಪಿಂಗ್ ಟ್ರ್ಯಾಕ್ ಅನ್ನು ಮಾಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ ಹಲವು ಸ್ಪೋರ್ಟ್ಸ್ ಮೋಡ್‌ಗಳು ಮತ್ತು 50ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಸಹ ನೀಡಲಿದೆ. ಇನ್ನು ಭಾರತದಲ್ಲಿ 2,999ರೂ. ಬೆಲೆಯನ್ನು ಹೊಂದಿದೆ.

ಫೈರ್ ಬೋಲ್ಟ್ ಡಾಗರ್ ಸ್ಮಾರ್ಟ್‌ವಾಚ್
ಫೈರ್ ಬೋಲ್ಟ್ ಡಾಗರ್ 1.4 ಇಂಚಿನ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ದುಂಡಾದ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಬ್ಲೂಟೂತ್ ಕಾಲ್ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, SpO2 ಮಾನಿಟರ್, ಹೃದಯ ಬಡಿತ ಮಾನಿಟರ್, ನಿದ್ರೆ ಟ್ರ್ಯಾಕಿಂಗ್ ಸೇರಿದಂತೆ ಇನ್ನೂ ಹಲವಾರು ಆರೋಗ್ಯ ಸಂಬಂಧಿ ವಿಷಯಗಳ ಮೇಲೆ ಇದು ಕೇಂದ್ರೀಕರಿಸಿದೆ. ಇನ್ನು ಫೈರ್ ಬೋಲ್ಟ್ ಡಾಗರ್ ಸ್ಮಾರ್ಟ್‌ವಾಚ್ ಬೆಲೆ 3,499ರೂ. ಆಗಿದೆ.


Click it and Unblock the Notifications








