ಅತೀ ಅಗ್ಗದ ಬೆಲೆಯಲ್ಲಿ ಗಮನ ಸೆಳೆದ 5 ಇಯರ್‌ಫೋನ್‌ಗಳು!

|

ಹಾಡು ಕೇಳುವುದು ಎಂದರೇ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ ಈ ನಿಟ್ಟಿನಲ್ಲಿ ಏಕಾಂತದಲ್ಲಿ ಹಾಡು ಕೇಳಲು ಸ್ಮಾರ್ಟ್‌ಫೋನ್‌ ಜೊತೆಗೆ ಒಂದು ಇಯರ್‌ಫೋನ್ ಹೊಂದಿರುತ್ತಾರೆ. ಜರ್ನಿ ಸಮಯದಲ್ಲಿ ಇಯರ್‌ಫೋನ್‌ ಧರಿಸಿಕೊಂಡು ನೆಚ್ಚಿನ ಹಾಡುಗಳನ್ನು ಗುನುಗುವುದು ಖುಷಿ ನೀಡುತ್ತದೆ. ಹೀಗಾಗಿ ಇಯರ್‌ಫೋನ್‌ಗಳಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದ್ದು, ಕಡಿಮೆ ಬೆಲೆಯಿಂದ ದುಬಾರಿ ಪ್ರೈಸ್‌ಟ್ಯಾಗ್‌ವರೆಗೂ ತರಹೇವಾರಿ ಇಯರ್‌ಫೋನ್‌ಗಳು ಲಭ್ಯ ಇವೆ.

ಆಫ್‌ಲೈನ್ ಹಾಗೂ ಆನ್‌ಲೈನ್‌

ಹೌದು, ಆಫ್‌ಲೈನ್ ಹಾಗೂ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬಗೆ ಬಗೆಯ ಇಯರ್‌ಫೋನ್‌ಗಳು ಸಿಗುತ್ತವೆ. ಆದರೆ ಬಹುತೇಕ ಗ್ರಾಹಕರು ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಬ್ರ್ಯಾಂಡೆಡ್‌ ಕಂಪನಿಯಗಳ ಇಯರ್‌ಫೋನ್‌ಗಳ ಖರೀದಿಗೆ ಆಸಕ್ತಿ ತೋರುತ್ತಾರೆ. ಒಂದು ಸಾವಿರ ರೂಪಾಯಿ ಒಳಗೂ ಸಹ ಹಲವು ಅತ್ಯುತ್ತಮ ಇಯರ್‌ಫೋನ್‌ ಸಿಗುತ್ತವೆ. ಅಂತಹ ಅತೀ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಸಿಗುವ 5 ಬೆಸ್ಟ್‌ ಇಯರ್‌ಫೋನ್‌ಗಳು ಬಗ್ಗೆ ಮುಂದೆ ತಿಳಿಯಿರಿ.

ಸೋನಿ MDR AS210AP

ಸೋನಿ MDR AS210AP

ಸೋನಿ MDR AS210AP ಸಹ ಅಗ್ಗದ ಬೆಲೆಯ ಇಯರ್‌ಫೋನ್‌ ಆಗಿದೆ. ಕಿವಿ ಧರಿಸಿದಾಗ ಕಂಫರ್ಟ್‌ ಗ್ರೀಪ್ ಕೂಡುವ ರಚನೆಯನ್ನು ಪಡೆದಿದೆ. ಫಿಜಿಕಲ್ ಆಕ್ಟಿವಿಟಿ ಮಾಡುವಾಗ ಕಿವಿಯಿಂದ ಜಾರುವುದಿಲ್ಲ. 13.5mm ಆಡಿಯೋ ಡ್ರೈವರ್‌ಗಳ ಬೆಂಬಲವನ್ನು ಹೊಂದಿದ್ದು, ಅತ್ಯುತ್ತಮ ಸೌಂಡ್‌ ಹೊರಹಾಕಲಿದೆ. ಸ್ಮಾರ್ಟ್‌ ಕೀ ಮೂಲಕ ನಿಯಂತ್ರಿಸಬಹುದಾಗಿದೆ. ಬೆಲೆಯು 1000ರೂ.ಗಳ ಒಳಗೆ ಇದೆ.

ಜೆಬಿಎಲ್‌(JBL T210)

ಜೆಬಿಎಲ್‌(JBL T210)

ಜನಪ್ರಿಯ ಆಡಿಯೊ ಕಂಪನಿಯ ಜೆಬಿಎಲ್‌ನ ಈ ಇಯರ್‌ಫೋನ್ 8.7mm ಆಡಿಯೋ ಡ್ರೈವರ್‌ ಸಾಮರ್ಥ್ಯವನ್ನು ಪಡೆದಿದ್ದು, Neodymium ಮ್ಯಾಗ್ನೆಟ್‌ ಬೆಂಬಲದೊಂದಿಗೆ ಸೌಂಡ್‌ ಉತ್ತಮಗೊಳಿಸುತ್ತದೆ. ಫ್ಲಾಟ್‌ ಮಾದರಿಯ ಕೇಬಲ ರಚನೆಯನ್ನು ಈ ಇಯರ್‌ಫೋನ್ ಹೊಂದಿದ್ದು, ಧರಿಸಲು ಕಂಫರ್ಟ್‌ ಎನಿಸಲಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆಯು 1000ರೂ.ಗಳ ಒಳಗೆ ಇದೆ.

ರಿಯಲ್‌ ಮಿ ಬಡ್ಸ್‌ 2

ರಿಯಲ್‌ ಮಿ ಬಡ್ಸ್‌ 2

ಚೀನಾ ಮೂಲದ 'ರಿಯಲ್‌ ಮಿ' ಕಂಪನಿಯ ರಿಯಲ್‌ ಮಿ ಬಡ್ಸ್‌ 2 ಇಯರ್‌ಫೋನ್‌ಗಳು ಹಗುರವಾದ ರಚನೆಯನ್ನು ಪಡೆದಿದ್ದು, ಅತ್ಯುತ್ತಮ ಹಿತಕರ ಸೌಂಡ್‌ ಹೊಎಸೂಸಲಿವೆ. ಇನ್‌ಬಿಲ್ಟ್‌ ಮೈಕ್ರೋಫೋನ್‌ ಒಳಗೊಂಡಿದ್ದು, ಆಡಿಯೊ ಡ್ರೈವರ್ಸ್‌ಗಳು ಸಹ ಉತ್ತಮ ಬೆಂಬಲ ನೀಡಲಿವೆ. ಮಾರುಕಟ್ಟೆಯಲ್ಲಿ ಈ ಇಯರ್‌ಫೋನ್ ಬೆಲೆಯು 1000ರೂ.ಗಳ ಒಳಗೆ ಇದೆ.

ಒನ್‌ಮೋರ್‌ ಪಿಸ್ಟನ್ ಫಿಟ್

ಒನ್‌ಮೋರ್‌ ಪಿಸ್ಟನ್ ಫಿಟ್

ಒನ್‌ಮೋರ್‌ ಕಂಪನಿಯ ಈ ಪಿಸ್ಟನ್ ಫಿಟ್‌ ಇಯರ್‌ಫೋನ್ ಅತ್ಯುತ್ತಮವಾಗಿದ್ದು, 45 ಡಿಗ್ರಿ ಆಕಾರದಲ್ಲಿ ಕಿವಿಯ ಬಡ್ಸ್‌ ಗ್ರೀಮ್ ಪಡೆದಿದೆ. ಅಲ್ಯೂಮಿನಿಯಮ್ ಅಲೋಯ್ ಚೇಂಬರ್‌ ರಚನೆಯೊಂದಿಗೆ ಮೆಟಲ್ ಡಯಾಫ್ರಾಮ್ ಹೊಂದಿದೆ. ಹಾಗೆಯೇ ಆಡಿಯೊ ಕಂಟ್ರೋಲ್‌ಗಾಗಿ 'ಸ್ಮಾರ್ಟ್‌ ಬರ್ನ್ ಇನ್' ಆಪ್‌ ಸಹ ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆಯು 699ರೂ.ಗಳಾಗಿವೆ.

ಸೋನಿ MDR EX155

ಸೋನಿ MDR EX155

ಸೋನಿಯು ಈ ಇಯರ್‌ಫೋನ್‌ 9mm ಆಡಿಯೋ ಡ್ರೈವರ್ಸ್‌ಗಳನ್ನು ಹೊಂದಿದ್ದು, ಬೆಸ್ಟ್‌ ಇನ್‌ ಕ್ಲಾಸ್‌ ಸೌಂಡ್‌ ಔಟ್‌ಪುಟ್‌ ನೀಡಲಿವೆ. ಕಂಫರ್ಟ್‌ ಗ್ರೀಪ್ ರಚನೆಯನ್ನು ಪಡೆದಿದ್ದು, ಸೌಂಡ್‌ ಉತ್ತಮಗೊಳಿಸಲು Neodymium ಹೊಂದಿದೆ. ಇದರೊಂದಿಗೆ ನಾಲ್ಕು ವಿಭಿನ್ನ ಗಾತ್ರದ ಟಿಪ್ಸ್‌ಗಳ ಆಯ್ಕೆಯನ್ನು ನೀಡಲಿದೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಈ ಡಿವೈಸ್‌ ಬೆಲೆಯು 1000ರೂ.ಗಳ ಒಳಗೆ ಇದೆ.

Most Read Articles
Best Mobiles in India

English summary
There are many types of earphones available in the offline and online market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more