Smartphones: ಈ ವರ್ಷ ಲಾಂಚ್ ಆದ, ಹೆಚ್ಚು ಜನಪ್ರಿಯತೆ ಪಡೆದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿವು!
ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ನಡುವೆ 2023 ಅನ್ನು ಸ್ಮಾರ್ಟ್‌ಫೋನ್ ಪ್ರಿಯರು ಮರೆಯುವ ಹಾಗಿಲ್ಲ, ಅಂದರೆ ಸ್ಮಾರ್ಟ್‌ಫೋನ್(Smartphone) ಪ್ರಿಯರಿಗೆ ಉತ್ತಮ ವರ್ಷ ಎಂದರೆ ತಪ್ಪಾಗಲಾರದು. ಯಾಕೆಂದರೆ ಈ ವರ್ಷ ಸಾಕಷ್ಟು ಬಜೆಟ್ ಬೆಲೆಯ ಫೋನ್‌ಗಳನ್ನು (budget priced Smartphones) ಅತ್ಯುತ್ತಮ ಫೀಚರ್ಸ್‌ನೊಂದಿಗೆ ಲಾಂಚ್ ಮಾಡಲಾಗಿದೆ.
ಹೌದು, ಈ ವರ್ಷ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದ್ದು, ಅದರಲ್ಲಿ ಬಜೆಟ್ ಬೆಲೆಯ ಫೋನ್‌ಗಳು ಗ್ರಾಹಕರನ್ನು ಹೆಚ್ಚು ಸೆಳೆದಿವೆ. ಅದರೆ ಶಿಯೋಮಿ, ಮೊಟೊ, ರಿಯಲ್‌ಮಿ, ಐಟೆಲ್, ಪೊಕೊ, ಸ್ಯಾಮ್‌ಸಂಗ್ ಸೇರಿದಂತೆ ಅನೇಕ ಕಂಪೆನಿಗಳು ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಈ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಿಳಿಯೋಣ ಬನ್ನಿ.

ಶಿಯೋಮಿ ರೆಡ್ಮಿ 13C : ಈ ಫೋನ್ ಅನ್ನು (Xiaomi Redmi 13C) ಡಿಸೆಂಬರ್ ತಿಂಗಳಲ್ಲಿ ಅಂದರೆ ಈ ತಿಂಗಳಲ್ಲಿ ಲಾಂಚ್ ಮಾಡಲಾಗಿದೆ. ಈ ಫೋನ್ ಲಾಂಚ್ ಆಗುವ ಮುನ್ನವೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದು 8,999 ರೂ.ಗಳ ಬೆಲೆ ಹೊಂದಿದ್ದು, 6.74 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರೊಂದಿಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G85 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50 MP + 2 MP + 0.08 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮರಾದೊಂದಿಗೆ ಕಾಣಿಸಿಕೊಂಡಿದೆ.
ಶಿಯೋಮಿ ರೆಡ್ಮಿ 12: ಈ ಶಿಯೋಮಿಯ ಮತ್ತೊಂದು ಫೋನ್ ಅನ್ನು (Xiaomi Redmi 12) ಈ ವರ್ಷದ ಆಗಸ್ಟ್ ತಿಂಗಳಲ್ಲಿ ಲಾಂಚ್ ಮಾಡಲಾಗಿದೆ. ಇದು ಸಹ 8,999 ರೂ.ಗಳ ಬೆಲೆ ಹೊಂದಿದೆ. ಈ ಫೋನ್ 6.79 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 50 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ, 8 MP ಸೆಲ್ಫಿ ಕ್ಯಾಮರಾ ಮತ್ತು 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಬಜೆಟ್ ರೇಂಜ್‌ನಲ್ಲಿ ಅತ್ಯುತ್ತಮ ಎನಿಸಿದೆ.

ಮೊಟೊ G54: ಈ ಸ್ಮಾರ್ಟ್‌ಫೋನ್ (Moto G54) ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಮಾಡಲಾಗಿದೆ. ಇದು 13,999ರೂ.ಗಳ ಬೆಲೆ ಹೊಂದಿದ್ದು, 6.5 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಹಾಗೂ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7020 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಇದರೊಂದಿಗೆ 50 MP + 8 MP ಡ್ಯುಯಲ್ ರಿಯರ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾದೊಂದಿಗೆ 6000 mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಆಯ್ಕೆ ಪಡೆಯುವ ಮೂಲಕ ಜನಪ್ರಿಯ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದೆ.
ಒಪ್ಪೋ ರೆನೋ 8 T 5G: ಈ ಫೋನ್ (OPPO Reno 8 T 5G) ಅನ್ನು ಈ ವರ್ಷದ ಫೆಬ್ರವರಿಯಲ್ಲಿ ಅನಾವರಣ ಮಾಡಲಾಗಿದೆ. ಈ ಫೋನ್ 12,765 ರೂ.ಗಳ ಬೆಲೆ ಹೊಂದಿದ್ದು, 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಬಲ ಹಾಗೂ 8 GB RAM ಆಯ್ಕೆ ಉತ್ತಮ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡಲಿದ್ದು, 108 MP + 2 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 32 MP ಸೆಲ್ಫಿ ಕ್ಯಾಮೆರಾ ಮೂಲಕ ಅತ್ಯುತ್ತಮ ಎನಿಸಿದೆ.

ರಿಯಲ್‌ಮಿ C53 : ಈ ಫೋನ್ (realme C53) ಅನ್ನು ಜುಲೈನಲ್ಲಿ ಅನಾವರಣ ಮಾಡಲಾಗಿದ್ದು, ಇದಕ್ಕೆ 9,950ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದು 6.74 ಇಂಚಿನ IPS LCD ಡಿಸ್‌ಪ್ಲೇ ಜೊತೆಗೆ ಆಕ್ಟಾ ಕೋರ್ ಯುನಿಸೊಕ್ T612 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 108 MP ನ ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಉತ್ತಮ ಬ್ಯಾಕಪ್ ನೀಡಲಿದೆ.
ಐಟೆಲ್ S23 ಪ್ಲಸ್: ಈ ಫೋನ್ ಅನ್ನು (Itel S23 Plus) ಸೆಪ್ಟೆಂಬರ್ ತಿಂಗಳಲ್ಲಿ ಅನಾವರಣ ಮಾಡಲಾಗಿದೆ. ಇದು 13,999 ರೂ.ಗಳ ಬೆಲೆ ಹೊಂದಿದ್ದು, 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಜೊತೆಗೆ ಆಕ್ಟಾ ಕೋರ್ ಯುನಿಸೊಕ್ T616 ಪ್ರೊಸೆಸರ್ ಬಲ ಹಾಗೂ 8 GB RAM ಆಯ್ಕೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿ ಆಗಲಿದೆ. ಉಳಿದಂತೆ ಈ ಫೋನ್ 50 MP ಪ್ರಾಥಮಿಕ ಕ್ಯಾಮೆರಾ, 32 MP ಸೆಲ್ಫಿ ಕ್ಯಾಮರಾ ಹಾಗೂ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯುವ ಮೂಲಕ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಫೋನ್ ಎನಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G: ಈ ಫೋನ್ ಅನ್ನು (Samsung Galaxy A14 5G) ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಲಾಂಚ್ ಮಾಡಲಾಗಿದೆ. ಈ ಫೋನ್ 14,499 ರೂ.ಗಳ ಆರಂಭಿಕ ಬೆಲೆ ಹೊಂದಿದೆ. ಇದು 6.6 ಇಂಚಿನ PLS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಆಕ್ಟಾ ಕೋರ್ ಎಕ್ಸಿನೋಸ್ 1330 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಇದರೊಂದಿಗೆ 50 MP + 2 MP + 2 MP ಯ ಟ್ರಿಪಲ್ ರಿಯರ್ ಕ್ಯಾಮೆರಾ, 13 MP ಸೆಲ್ಫಿ ಕ್ಯಾಮೆರಾದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಈ ಫೋನ್ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ.


Click it and Unblock the Notifications








