Home
Gadgets

smart doorbells: ನಿಮ್ಮ ಮನೆ ಸುರಕ್ಷಿತವಾಗಿರಬೇಕೆ? ಇಲ್ಲಿವೆ ನೋಡಿ ಕ್ಯಾಮೆರಾ ಆಯ್ಕೆಯ ಅತ್ಯುತ್ತಮ ಸ್ಮಾರ್ಟ್ ಡೋರ್‌ಬೆಲ್‌

ಸುಂದರ ಮನೆ ಕಟ್ಟುವುದಷ್ಟೇ ಅಲ್ಲದೆ ಅಥವಾ ಅತ್ಯುತ್ತಮವಾದ ಮನೆಯಲ್ಲಿ ವಾಸ ಮಾಡುವುದು ಅಷ್ಟೇ ಅಲ್ಲದೆ ಆ ಮನೆಯನ್ನು ರಕ್ಷಣೆ ಮಾಡುವುದು ಸಹ ಆಯಾ ಕುಟುಂಬದ ಮುಖ್ಯಸ್ಥರ ಜವಾಬ್ದಾರಿ. ಅದಾಗ್ಯೂ ಇತ್ತೀಚಿನ ದಿನಗಳಲ್ಲಿ ಕಳ್ಳಕಾಕರ ಸಂಖ್ಯೆ ಜಾಸ್ತಿ ಆಗುತ್ತಿದ್ದು, ಮನೆ ಒಳಗೆ ನುಗ್ಗಿ ಹಣ-ಆಭರಣ ಕದಿಯುವ ಅದೆಷ್ಟೋ ವರದಿಗಳನ್ನು ನೀವು ನೋಡಿರಬಹದು.ಈ ರೀತಿಯ ಪ್ರಕರಣಕ್ಕೆ ಕಡಿವಾಣ ಎಂದರೆ ಸ್ಮಾರ್ಟ್‌ ಡೋರ್‌ಬೆಲ್‌ಗಳು.

ಹೌದು, ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಅಥವಾ ಆಫೀಸ್‌ಗಳಲ್ಲಿ ಸಿಸಿಟಿವಿ ಹೇಗೆ ಕೆಲಸ ಮಾಡುತ್ತವೆಯೋ ಅದೇ ರೀತಿ ಸ್ಮಾರ್ಟ್ ಡೋರ್‌ಬೆಲ್‌ಗಳು(Smart doorbells) ಸಹ ಕೆಲಸ ಮಾಡುತ್ತವೆ. ಈ ಬೆಲ್‌ಗಳು ಕ್ಯಾಮೆರಾ ಫೀಚರ್ಸ್‌ ಆಯ್ಕೆ ಪಡೆದಿದ್ದು, ಈ ಮೂಲಕ ಮನೆ ಬಳಿ ಯಾರೆಲ್ಲಾ ಸುಳಿದಿದ್ದಾರೆ ಅನ್ನೋದನ್ನು ಸುಲಭವಾಗಿ ತಿಳಿಯುವಂತೆ ಮಾಡುತ್ತವೆ. ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್ ಡೋರ್‌ಬೆಲ್‌ಗಳು ಲಭ್ಯ ಇದ್ದು ಅವುಗಳಲ್ಲಿ ಪ್ರಮುಖವಾದ ಐದು ಟಾಪ್‌ ಸ್ಮಾರ್ಟ್ ಡೋರ್‌ಬೆಲ್‌ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ ನೋಡಿ.

ಇಲ್ಲಿವೆ ನೋಡಿ ಕ್ಯಾಮೆರಾ ಆಯ್ಕೆಯ ಅತ್ಯುತ್ತಮ ಸ್ಮಾರ್ಟ್ ಡೋರ್‌ಬೆಲ್‌

ಸ್ಮಾರ್ಟ್ ಡೋರ್‌ಬೆಲ್‌: ಸ್ಮಾರ್ಟ್ ಡೋರ್‌ಬೆಲ್‌ಗಳು ಕೆಲವು ಸಂದರ್ಭಗಳಲ್ಲಿ ನೀವು ಮನೆಯಲ್ಲಿ ಇಲ್ಲದಿದ್ದರೂ ಸಹ, ನಿಮ್ಮ ಬಾಗಿಲಿಗೆ ಬರುವವರ ಜೊತೆಗೆ ಸುಲಭವಾಗಿ ಸಂವಹನ ಮಾಡಲು ನಿಮಗೆ ಅನುಮತಿಸುವ ಡಿವೈಸ್‌ಗಳಾಗಿವೆ. ಹಾಗೆಯೆ ಈ ವೇಳೆ ಯಾವುದೇ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆಯೂ ಸಹ ನೀವು ಎಚ್ಚರಿಕೆ ಪಡೆದುಕೊಳ್ಳಬಹುದು. ಅನಧಿಕೃತವಾಗಿ ಒಳನುಗ್ಗುವವರ ದೃಶ್ಯಗಳನ್ನು ದಾಖಲು ಮಾಡಿಕೊಳ್ಳುತ್ತದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಯಾವೆಲ್ಲಾ ಡಿವೈಸ್‌ಗಳು ಈ ಕೆಲಸ ಮಾಡುತ್ತವೆ ನೋಡೋಣ.

ಕ್ಯೂಬೋ ಸ್ಮಾರ್ಟ್ ವೈ-ಫೈ ಡೋರ್‌ಬೆಲ್: ಈ ಕ್ಯೂಬೋ ಸ್ಮಾರ್ಟ್ ವೈ-ಫೈ ಡೋರ್‌ಬೆಲ್ ಅನ್ನು ಅಮೆಜಾನ್‌ನಲ್ಲಿ 5,989 ರೂ.ಗೆ ಖರೀದಿಸಬಹುದು. ಯಾವುದೇ ಸ್ಥಳದಿಂದ ನಿಮ್ಮ ಬಾಗಿಲಲ್ಲಿ ಯಾರಿದ್ದಾರೆ ಎಂಬುದನ್ನು ನೋಡಲು ಇದು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿಯೂ ಸಹ ಉತ್ತಮ ಗುಣಮಟ್ಟದ ಹೆಚ್‌ಡಿ ವಿಡಿಯೋ ಮತ್ತು ಸ್ಪಷ್ಟ ಚಿತ್ರಗಳನ್ನು ನೀಡುವ ಸಾಮರ್ಥ್ಯ ಪಡೆದಿದೆ.ಇದರೊಂದಿಗೆ ಎಲ್ಲಾ ಸಂದರ್ಶಕರ ದೈನಂದಿನ ಲಾಗ್ ಅನ್ನು ಸೇವ್‌ ಮಾಡಿಕೊಳ್ಳುತ್ತದೆ. ಈ ಮೂಲಕ ನಿಮ್ಮ ಮನೆಗೆ ಅಥವಾ ಕಚೇರಿಗೆ ಯಾರು ಬರುತ್ತಾರೆ ಮತ್ತು ಹೋಗುತ್ತಾರೆ ಎಂಬುದನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಝೆಬ್ರಾನಿಕ್ಸ್ VDB200 : ಈ ಡಿವೈಸ್‌ ಅನ್ನು ಅಮೆಜಾನ್‌ ಮೂಲಕ 4,598 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಬಜೆಟ್ ಸ್ನೇಹಿ ಸ್ಮಾರ್ಟ್ ಡೋರ್‌ಬೆಲ್ ಆಗಿದ್ದು, ಇದು ಎರಡು-ಮಾರ್ಗದ ಟಾಕ್‌ಬ್ಯಾಕ್ ವ್ಯವಸ್ಥೆಯನ್ನು ಹೊಂದಿದೆ ಮತ್ತು ಸ್ಪ್ಲಾಶ್‌ ನಿರೋಧಕವಾಗಿದೆ. ಡೋರ್‌ಬೆಲ್ 1080p ರೆಸಲ್ಯೂಶನ್ ಕ್ಯಾಮೆರಾವನ್ನು ಹೊಂದಿದ್ದು, ಇದು ಚಲನೆಯ ಪತ್ತೆ, ರಾತ್ರಿ ದೃಷ್ಟಿ ಮತ್ತು ಟ್ಯಾಂಪರ್ ಅಲಾರಂ ಫೀಚರ್ಸ್‌ ಪಡೆದಿದ್ದು, 60 ವಿವಿಧ ಚೈಮ್ ಸೌಂಡ್‌ಗಳನ್ನು ನೀಡುತ್ತದೆ.

ಇಲ್ಲಿವೆ ನೋಡಿ ಕ್ಯಾಮೆರಾ ಆಯ್ಕೆಯ ಅತ್ಯುತ್ತಮ ಸ್ಮಾರ್ಟ್ ಡೋರ್‌ಬೆಲ್‌

ಟಿಪಿ-ಲಿಂಕ್ ಟ್ಯಾಪೋ ಸ್ಮಾರ್ಟ್ ವಿಡಿಯೋ ಡೋರ್‌ಬೆಲ್: ಈ ಡಿವೈಸ್‌ (TP-Link Tapo Smart Battery Video Doorbell) ಅನ್ನು ನೀವು 8,999 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದು. ಇದು ಸ್ಟಾರ್‌ಲೈಟ್ ಸೆನ್ಸರ್‌ ಆಯ್ಕೆ ಪಡೆದಿದ್ದು, 2K 5 ಮೆಗಾಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ D230S1 ಎಂಬೆಡೆಡ್ ಸ್ಪಾಟ್‌ಲೈಟ್ ಮತ್ತು ಸ್ಟಾರ್‌ಲೈಟ್ ಸೆನ್ಸರ್‌ ಹೊಂದಿದ್ದು ರಾತ್ರಿಯ ಸಮಯದಲ್ಲಿಯೂ ಸಹ ಉತ್ತಮ-ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಅಲ್ಟ್ರಾ-ವೈಡ್ ಫೀಲ್ಡ್ ಆಫ್ ವ್ಯೂ ಮತ್ತು 4:3 ಲೈವ್ ವ್ಯೂ ಫೀಚರ್‌ನೊಂದಿಗೆ ವಿಶೇಷ ಪ್ರಯೋಜನ ನೀಡುತ್ತದೆ.

ಸಿಪಿ ಪ್ಲಸ್ ಸ್ಮಾರ್ಟ್ ವೈ-ಫೈ ಡೋರ್‌ಬೆಲ್‌: ಈ ಡಿವೈಸ್‌ ಅನ್ನು ನೀವು ಅಮೆಜಾನ್‌ ಮೂಲಕ 4,999ರೂ.ಗಳ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ. ಇದು ಸ್ಥಳೀಯ ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಿಸಬಹುದಾದ ಡೋರ್‌ಬೆಲ್‌ಗಳಲ್ಲಿ ಒಂದಾಗಿದ್ದು, ಇದು ಕ್ಲೌಡ್‌ಗೆ ಆಟೋಮ್ಯಾಟಿಕ್‌ ಆಗಿ ಸಂಪರ್ಕಗೊಳ್ಳುತ್ತದೆ ಮತ್ತು ನಿಖರ ಮಾಹಿತಿಯನ್ನು ಬಳಕೆದಾರರಿಗೆ ನೀಡುತ್ತದೆ. ಈ ಮೂಲಕ ಪ್ರಪಂಚದಾದ್ಯಂತ ಎಲ್ಲಿಂದಲಾದರೂ ನಿಮ್ಮ ಮನೆಯ ಹೊರಗಿನ ನೋಟವನ್ನು ಟ್ರ್ಯಾಕ್‌ ಮಾಡಬಹುದು.

ಇಲ್ಲಿವೆ ನೋಡಿ ಕ್ಯಾಮೆರಾ ಆಯ್ಕೆಯ ಅತ್ಯುತ್ತಮ ಸ್ಮಾರ್ಟ್ ಡೋರ್‌ಬೆಲ್‌

HIKVISION ಅನಲಾಗ್ ವಿಡಿಯೋ ಇಂಟರ್ಕಾಮ್ ಸಿಸ್ಟಮ್: ಈ ಡಿವೈಸ್‌ಗೆ ಅಮೆಜಾನ್‌ನಲ್ಲಿ 4,999 ರೂ.ಗಳನ್ನು ನಿಗದಿ ಮಾಡಲಾಗಿದೆ. ಇದು TFT LCD ಡಿಸ್‌ಪ್ಲೇ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಹೊರಾಂಗಣ ಬೆಲ್ 1/2.7″ CMOS ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ 1080p ವಿಡಿಯೋವನ್ನು ಸೆರೆಹಿಡಿಯಲಿದ್ದು, ನಾಯ್ಸ್‌ ಕ್ಯಾನ್ಸಲಿಂಗ್‌ ತಂತ್ರಜ್ಞಾನವನ್ನು ಹೊಂದಿದೆ. ಇದರೊಂದಿಗೆ VDP ಯಲ್ಲಿನ ಎಕೋ ಕಂಟ್ರೋಲ್‌ ಫೀಚರ್ಸ್‌ ಪ್ರತಿಧ್ವನಿಯನ್ನು ತಡೆಯಲು ಸಹಾಯ ಮಾಡುತ್ತದೆ.

Best Mobiles in India

English summary
Nowadays smart doorbells also work in the same way as CCTV works in homes or offices. These bells have optional camera features that make it easy to know who is hovering around the house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+