Smartwatches: 5 ಸಾವಿರಕ್ಕಿಂತ ಕಡಿಮೆ ಬೆಲೆಯ ಉತ್ತಮ ಬ್ಯಾಟರಿ ಇರುವ ಟಾಪ್ ಸ್ಮಾರ್ಟ್‌ವಾಚ್‌ಗಳು!
ಸ್ಮಾರ್ಟ್‌ವಾಚ್‌ಗಳು (Smartwatches) ಇಂದು ಅಗತ್ಯವಾದ ಡಿವೈಸ್‌ಗಳಾಗಿವೆ. ಅದರಲ್ಲೂ ಕೆಲವು ವಾಚ್‌ಗಳ ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಘಟನೆಗಳು ವರದಿಯಾದ ಬೆನ್ನಲ್ಲೇ ಸಾಕಷ್ಟು ಜನರು ಉತ್ತಮ ಸ್ಮಾರ್ಟ್‌ವಾಚ್ ಖರೀದಿ ಮಾಡಲು ಮುಂದಾಗಿದ್ದಾರೆ. ಆದರೆ, ಎಲ್ಲರಿಗೂ ಹೆಚ್ಚಿನ ಬೆಲೆಯ ಸ್ಮಾರ್ಟ್‌ವಾಚ್ ಅನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಅಂತಹವರು ಬಜೆಟ್ ಬೆಲೆಯ ವಾಚ್‌ಗಳನ್ನು ಖರೀದಿ ಮಾಡಬಹುದು.
ಹೌದು, ವಿವಿಧ ಕಂಪೆನಿಗಳು ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇವೆ. ಈ ನಡುವೆ ರೆಡ್ಮಿ, ಫೈರ್ ಬೋಲ್ಟ್, ಸಿಎಮ್‌ಎಫ್, ನಾಯ್ಸ್ ಹಾಗೂ ಫಾಸ್ಟ್‌ಟ್ರಾಕ್ (Redmi, Fire Boltt, CMF, Noise and Fastrack) ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಂತೆ ನೀವು ಈಗ 5,000 ರೂ.ಗಿಂತ ಕಡಿಮೆ ಬೆಲೆ ಇರುವ ಹಾಗೂ ಉತ್ತಮ ಬ್ಯಾಟರಿ ಬ್ಯಾಕಪ್ ಇರುವ ವಾಚ್‌ಗಳಲ್ಲಿ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಲಿಸ್ಟ್.

ರೆಡ್ಮಿ ವಾಚ್ 3 ಆಕ್ಟಿವ್: ಈ ಸ್ಮಾರ್ಟ್‌ವಾಚ್ (Redmi Watch 3 Active) 289mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 12 ದಿನಗಳವರೆಗೆ ಬ್ಯಾಕಪ್ ನೀಡಲಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್ 1.83 ಇಂಚಿನ ಎಲ್‌ಸಿಡಿ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 450 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಈ ವಾಚ್‌ನಲ್ಲಿ ನೀವು 200 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಕಾಣಬಹುದಾಗಿದೆ. ಈ ವಾಚ್ ಅನ್ನು ಆನ್‌ಲೈನ್ ಮೂಲಕ 2,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಫೈರ್-ಬೋಲ್ಟ್ ಕೊಲೈಡ್: ಈ ಸ್ಮಾರ್ಟ್‌ವಾಚ್(Fire-Bolt Collide) ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಏಳು ದಿನಗಳವರೆಗೆ ಬ್ಯಾಕಪ್ ನೀಡಲಿದೆ. ಅಂದರೆ ಈ ವಾಚ್ 300mAh ಸಾಮರ್ಥ್ಯದ ಬ್ಯಾಟರಿ ಮೂಲಕ ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ಚಾರ್ಜಿಂಗ್ ಆಗಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಉಳಿದಂತೆ ಈ ವಾಚ್ 1.39 ಇಂಚಿನ ಹೆಚ್‌ಡಿ ರೆಟಿನಾ ಡಿಸ್‌ಪ್ಲೇ ಹೊಂದಿದ್ದು, 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ 100+ ಇನ್ ಬಿಲ್ಟ್ ವಾಚ್ ಫೇಸ್‌ಗಳನ್ನು ಹೊಂದಿದ್ದು, 3,499 ರೂ.ಗಳಲ್ಲಿ ಖರೀದಿ ಮಾಡಬಹುದು.

ಸಿಎಮ್‌ಎಫ್ ವಾಚ್ ಪ್ರೊ: ಈ ಸ್ಮಾರ್ಟ್‌ವಾಚ್ (CMF Watch Pro) ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಬರೋಬ್ಬರಿ 13 ದಿನಗಳವರೆಗೆ ಬ್ಯಾಕಪ್ ನೀಡಲಿದೆ. ಈ ವಾಚ್ 410×502 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಇರುವ 1.96 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 600+ ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದರೊಂದಿಗೆ ಎಐ ಚಾಲಿತ ಕರೆ ಸಾಮರ್ಥ್ಯ, 24ಗಂಟೆಗಳ ಹೃದಯ ಬಡಿತದ ಮೇಲ್ವಿಚಾರಣೆ, SpO2, ನಿದ್ರೆ ಮತ್ತು ಒತ್ತಡದ ಟ್ರ್ಯಾಕಿಂಗ್ ಸೇರಿದಂತೆ ಅನೇಕ ಪ್ರೀಮಿಯಂ ಫೀಚರ್ಸ್ ಅನ್ನು ಈ ವಾಚ್ ಹೊಂದಿದೆ. ಈ ವಾಚ್ ಬೆಲೆ 4,499 ರೂ.ಗಳಾಗಿದೆ.
ನಾಯ್ಸ್‌ಫಿಟ್ ಫೋರ್ಸ್ ಪ್ಲಸ್: ಈ ಸ್ಮಾರ್ಟ್‌ವಾಚ್ (Noisefit Force Plus) ಅನ್ನು ಒಂದು ಬಾರಿ ಪೂರ್ಣವಾಗಿ ಚಾರ್ಜಿಂಗ್ ಮಾಡಿದ್ರೆ ಏಳು ದಿನಗಳ ಬ್ಯಾಕಪ್ ನೀಡಲಿದೆ. ಇದರೊಂದಿಗೆ ಸ್ಪೋರ್ಟಿ ವಿನ್ಯಾಸ ಮತ್ತು ಶಾರ್ಟ್‌ಕಟ್ ಬಟನ್ ಆಯ್ಕೆಯನ್ನು ಈ ವಾಚ್‌ನಲ್ಲಿ ನೀಡಲಾಗಿದ್ದು, ನಿಮ್ಮನ್ನು ತ್ವರಿತವಾಗಿ ಸ್ಪೋರ್ಟ್ಸ್ ಮೋಡ್‌ಗೆ ಕೊಂಡೊಯ್ಯುತ್ತದೆ. ಈ ವಾಚ್ 1.46 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 550 ನಿಟ್ಸ್ ಪೀಕ್ ಬ್ರೈಟ್ನೆಸ್ ಮೂಲಕ ಉತ್ತಮ ಎನಿಸಿದೆ. ಇದನ್ನು ನೀವು 3,999 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಫಾಸ್ಟ್ರಕ್ ರಿವೋಲ್ಟ್ FS1 : ಈ ಸ್ಮಾರ್ಟ್‌ವಾಚ್ (Fastrack Revolt FS1) ಒಂದೇ ಚಾರ್ಜ್‌ನಲ್ಲಿ ಏಳು ದಿನಗಳವರೆಗೆ ಇರುತ್ತದೆ. ಈ ವಾಚ್‌ನಲ್ಲಿ ಟ್ರ್ಯಾಕಿಂಗ್ ಹಂತಗಳು, ಜಿಮ್ ತಾಲೀಮು ಮತ್ತು ನೋಟಿಫಿಕೇಶನ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿದೆ. ಜೊತೆಗೆ ಈ ವಾಚ್ 1.96 ಇಂಚಿನ ಸೂಪರ್ ಅಮೋಲೆಡ್ ಆರ್ಚ್ಡ್ ಡಿಸ್‌ಪ್ಲೇ ವಿನ್ಯಾಸ ಪಡೆದಿದ್ದು, 410 X 502 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ .200 ಕ್ಕೂ ಹೆಚ್ಚು ವಾಚ್ ಫೇಸ್ ಆಯ್ಕೆಯನ್ನು ಈ ವಾಚ್ ನಲ್ಲಿ ಕಾಣಬಹುದು. ಇದರ ಬೆಲೆ 1,995 ರೂ.ಗಳಾಗಿದೆ.


Click it and Unblock the Notifications








