Subscribe to Gizbot

ಜಿಯೋ DTH ಶುರುವಾಗಲಿಲ್ಲ ಎಂದ್ರೂ ಚಿಂತೆ ಬೇಡ: 2020ಕ್ಕೆ ಟಿವಿ ಚಾನಲ್‌ಗಳೇ ಉಚಿತವಾಗಲಿದೆ..!!!

Written By:

ಸದ್ಯ ಭಾರತೀಯ DTH ಮಾರುಕಟ್ಟೆಯಲ್ಲಿ ದರ ಸಮರ ಆರಂಭವಾಗುವ ಲಕ್ಷಣಗಳು ಎದ್ದು ಕಾಣುತ್ತಿದ್ದು, ಇದರ ಆಧಾರ ಮೇಲೆ 4G ಡೇಟಾ ಉಚಿತವಾದ ರೀತಿಯಲ್ಲಿಯೇ ಟಿವಿ ಚಾನಲ್‌ಗಳನ್ನು ಉಚಿತವಾಗಿ ನೋಡುವ ದಿನಗಳು ಹತ್ತಿರದಲ್ಲೇ ಇದೆ. ಮೂಲಗಳ ಪ್ರಕಾರ 2020ಕ್ಕೆ ಬಹುತೇಕ ಟಿವಿ ಚಾನಲ್ ಗಳು ಉಚಿತ ಸೇವೆಯನ್ನು ಆರಂಭಿಸಲಿದೆ.

ಜಿಯೋ DTH ಶುರುವಾಗಲಿಲ್ಲ ಎಂದ್ರೂ ಚಿಂತೆ ಬೇಡ: ಚಾನಲ್‌ಗಳೇ ಉಚಿತವಾಗಲಿದೆ..!!!

ಓದಿರಿ: ಧನ್ ಧನಾ ಧನ್ ಮುಗಿಯುವ ವೇಳೆಗೆ ಮತ್ತೊಂದು ಜಿಯೋ ಆಫರ್ ..!!

ಸರಿ ಸುಮಾರು 46 ಮಿಲಿಯನ್ ಕುಟುಂಬಗಳು ಉಚಿತ ಟಿವಿ ಚಾನಲ್ ಗಳನ್ನು ನೋಡುವ ಅವಕಾಶವನ್ನು ಪಡೆದುಕೊಳ್ಳಲಿದೆ ಎಂದು ಮಾಹಿತಿ ಲಭ್ಯವಾಗಿದ್ದು, ಸದ್ಯ ಉಚಿತ ಟಿವಿ ಚಾನಲ್ ಗಳ ಸಂಖ್ಯೆಯೂ ಕಡಿಮೆ ಇದ್ದು, ಮುಂದಿನದಲ್ಲಿ ಇವುಗಳ ಸಂಖ್ಯೆ ಹೆಚ್ಚಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ರಿ ಟೆಲಿವಿಷನ್ ಇಂಡಸ್ಟ್ರಿ:

ಫ್ರಿ ಟೆಲಿವಿಷನ್ ಇಂಡಸ್ಟ್ರಿ:

ಸದ್ಯ ದೇಶದಲ್ಲಿ ಹೆಚ್ಚಿನ ಚಾನಲ್ ಗಳು ಪೇಯ್ಡ್ ಆಗಿದ್ದು, ಫ್ರೀ ಚಾನಲ್ ಗಳ ಸಂಖ್ಯೆಯೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಸ್ಪರ್ಧೆಯೂ ಹೆಚ್ಚಾಗಲಿದ್ದು, ಎಲ್ಲಾ ಚಾನಲ್ ಗಳು ಮತ್ತೇ ಉಚಿತ ಸೇವೆಯನ್ನು ನೀಡಲು ಶುರು ಮಾಡಲಿವೆ.

ಎಲ್ಲಾ ಭಾಷೆಯಲ್ಲಿಯೂ ದೊರೆಯಲಿದೆ:

ಎಲ್ಲಾ ಭಾಷೆಯಲ್ಲಿಯೂ ದೊರೆಯಲಿದೆ:

ದೇಶದ ಪ್ರಮುಖ ನೆಟ್‌ವರ್ಕ್ ಗಳಾದ ಸ್ಟಾರ್, ಜೀ, ಸೋನಿ, ವೈಕಾಮ್ ಗಳು ಎಲ್ಲಾ ಭಾಷೆಯ ಚಾನಲ್ ಗಳ ಒಡೆತನವನ್ನು ಹೊಂದಿದ್ದು, ಇವುಗಳೇಲ್ಲವೂ ಉಚಿತವಾಗಿ ತಮ್ಮ ಚಾನಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವೀಕ್ಷಕರನ್ನು ಆಕರ್ಷಿಸಲು:

ವೀಕ್ಷಕರನ್ನು ಆಕರ್ಷಿಸಲು:

ಸದ್ಯ ಸ್ಮಾರ್ಟ್ ಫೋನ್, ಕಂಪ್ಯೂಟರ್ ಬಂದ ಮೇಲೆ ಟಿವಿ ವೀಕ್ಷಣೆಯೂ ಕಡಿಮೆ ಯಾಗುತ್ತಿದ್ದು, ಇದನ್ನು ಏರಿಕೆ ಮಾಡುವ ಸಲುವಾಗಿ ಉಚಿತ ಸೇವೆಯೂ ದೊರೆಯಲಿದೆ ಎನ್ನಲಾಗಿದೆ. ಇದಕ್ಕಾಗಿ ಜಿಯೋ ಟಿವಿ ಆರಂಭವಾಗಿಲ್ಲ ಎಂದರೂ ನೀವು ಚಿಂತಿಸುವ ಅಗತ್ಯವಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
the free-television industry (FreeDish and terrestrial) could grow to as many as 46 million households by 2020. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot