vivo: ವಿವೋದ ಈ ಫೋನ್ ಮೇಲೆ 38% ಡಿಸ್ಕೌಂಟ್! 64GB ಸ್ಟೋರೇಜ್... ಡ್ಯುಯಲ್ ಕ್ಯಾಮೆರಾ
ವಿವೋ ಫೋನ್‌ಗಳು (Vivo phones) ಸುಧಾರಿತ ಫೀಚರ್ಸ್ ಅನ್ನು ಹೊಂದಿರುವ ಪರಿಣಾಮ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಇತ್ತೀಚಿಗೆ ವಿವೋ ಸಾಕಷ್ಟು ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ ಬಹಳ ಸದ್ದು ಮಾಡಿದ್ದು, ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ.
ಹೌದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆ ವಿಭಾಗದಲ್ಲಿ ಹೆಚ್ಚು ಸೇಲ್ ಆಗುತ್ತಿರುವ ವಿವೋ Y16 (vivo Y16) ಸ್ಮಾರ್ಟ್‌ಫೋನ್‌ಗೆ ಇದೀಗ ಭರ್ಜರಿ ಆಫರ್ ನೀಡಲಾಗಿದೆ. ಅಂದರೆ ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ಬೆಲೆ 15,999 ರೂ.ಗಳಾಗಿದೆ. ಇನ್ನು ಈ ಫೋನ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಉತ್ತಮ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ Y16 ಸ್ಮಾರ್ಟ್‌ಫೋನ್ ಆಪರ್ ವಿವರ: ಮೊದಲೇ ತಿಳಿಸಿದಂತೆ ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 15,999 ರೂ.ಗಳಾಗಿದೆ. ಆದರೆ, ನೀವು ಇದನ್ನು 9,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ (Flipkart) ಈ ಫೋನ್‌ಗೆ 38% ಡಿಸ್ಕೌಂಟ್ ಘೋಷಣೆ ಮಾಡಿದೆ. ಇದರೊಂದಿಗೆ ನೀವು ಕಡಿಮೆ ಮೊತ್ತದ ಹಣ ಪಾವತಿ ಮಾಡುವ ಮೂಲಕ ಇಎಮ್‌ಐ ಆಯ್ಕೆಯಲ್ಲೂ ಸಹ ಖರೀದಿ ಮಾಡಬಹುದು. ಇದರೊಂದಿಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ ಕ್ಯಾಶ್ ಬ್ಯಾಕ್ ಸಹ ಲಭ್ಯ ಇದೆ.
ವಿವೋ Y16 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 651 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 20:9 ಅಕಾರ ಅನುಪಾತ ಹಾಗೂ 270 ppi ಸಾಂದ್ರತೆ ಪಡೆದಿದೆ. ಈ ಮೂಲಕ ಅತ್ಯುತ್ತಮ ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್ ಅನುಭವ ಪಡೆದುಕೊಳ್ಳಬಹುದಾಗಿದೆ.

ವಿವೋ Y16 ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ MT6765 ಹಿಲಿಯೋ P35 (12nm) ಪ್ರೊಸೆಸರ್ ಬಲ ಪಡೆದಿದ್ದು, ಆಂಡ್ರಾಯ್ಡ್ 12, ಫನ್‌ಟಚ್ 12 ಓಎಸ್ ನಲ್ಲಿ ರನ್ ಆಗಲಿದೆ. ಇದರೊಂದಿಗೆ ಪವರ್‌ವಿಆರ್ GE8320 ಜಿಪಿಯು ಬಲ ಪಡೆದಿದ್ದು, 4GB RAM ಆಯ್ಕೆ ಹಾಗೂ 64GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂದಿದೆ. ಅದಾಗ್ಯೂ ನೀವು ಹೆಚ್ಚಿನ ಸ್ಟೋರೇಜ್‌ಗಾಗಿ ಮೈಕ್ರೋ ಎಸ್‌ಡಿಎಕ್ಸ್‌ಸಿ ಕಾರ್ಡ್ ಬಳಕೆ ಮಾಡಿಕೊಳ್ಳಬಹುದು.
ವಿವೋ Y16 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದಿದ್ದು, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹೊಂದಿದೆ. ಇದರೊಂದಿಗೆ ಎಲ್ಇಡಿ ಫ್ಲ್ಯಾಶ್ ಫೀಚರ್ಸ್ ಆಯ್ಕೆ ಹಾಗೂ 1080p@30fps ನಲ್ಲಿ ವಿಡಿಯೋ ರೆಕಾರ್ಡ್ ಮಾಡುವ ಸಾಮರ್ಥ್ಯ ನೀಡಲಾಗಿದೆ. ಇದರ ಜೊತೆಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಈ ಮೂಲಕ ವಿಡಿಯೋ ಕರೆ ಹಾಗೂ ಉತ್ತಮ ಸೆಲ್ಫಿ ಫೋಟೋ ತೆಗೆದುಕೊಳ್ಳಬಹುದಾಗಿದೆ.

ವಿವೋ Y16 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 10W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಹಾಗೆಯೇ ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಬಿಡಿಎಸ್ ಸ್ಥಾನೀಕರಣ
ಎಫ್‌ಎಮ್ ರೇಡಿಯೋ, ಯುಎಸ್‌ಬಿ ಟೈಪ್-ಸಿ, ಓಟಿಜಿ, ಫಿಂಗರ್‌ಪ್ರಿಂಟ್ ಸೆನ್ಸರ್ ಸೇರಿದಂತೆ ಅನೇಕ ಅಗತ್ಯ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








