Subscribe to Gizbot

ಕೇವಲ 899 ರೂ. ಗೆ ಶಿಯೋಮಿ ಲ್ಯಾಪ್‌ಟಾಪ್ ಬ್ಯಾಗ್!!

Written By:

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಶಿಯೋಮಿ ಮೊಬೈಲ್ ಕಂಪೆನಿ ಇದೀಗ ಕೇವಲ 899 ರೂಪಾಯಿಗಳಿಂದ ಶುರುವಾಗಿರುವ ಲ್ಯಾಪ್‌ಟಾಪ್ ಇಡಬಹುದಾದ ಬ್ಯಾಗ್‌ಗಳನ್ನು ಪರಿಚಯಿಸಿದೆ. ಸ್ಟೈಲಿಶ್ ಹಾಗೂ ಗುಣಮಟ್ಟದ ಲ್ಯಾಪ್‌ಟಾಪ್ ಬ್ಯಾಗ್‌ಗಳು ಶಿಯೋಮಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸೇರಿಕೊಂಡಿವೆ.!!

ಮಿ ಟ್ರಾವೆಲ್ ಬ್ಯಾಕ್‌ಪ್ಯಾಕ್, ಮಿ ಸಿಟಿ ಬ್ಯಾಕ್‌ಪ್ಯಾಕ್ ಹಾಗೂ ಮಿ ಕ್ಯಾಶುವಲ್ ಬ್ಯಾಕ್‌ಪ್ಯಾಕ್ ಮೂರು ಮಾದರಿಗಳಲ್ಲಿ ಶಿಯೋಮಿ ಕಂಪೆನಿ ತನ್ನ ಬ್ಯಾಗ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು, ಕೇವಲ 899 ರೂ.ಗಳಿಂದ ಪ್ರಾರಂಭವಾಗಿರುವ ಶಿಯೋಮಿಯ ನೂತನ ಮೂರು ಲ್ಯಾಪ್‌ಟಾಪ್ ಬ್ಯಾಗ್‌ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. !!

ಕೇವಲ 899 ರೂ. ಗೆ ಶಿಯೋಮಿ ಲ್ಯಾಪ್‌ಟಾಪ್ ಬ್ಯಾಗ್!!

ಮಿ ಟ್ರಾವೆಲ್ ಬ್ಯಾಕ್‌ಪ್ಯಾಕ್
ಹೆಸರೇ ಹೇಳುವಂತೆ ಮಿ ಟ್ರಾವೆಲ್ ಬ್ಯಾಕ್‌ಪ್ಯಾಕ್ ವಿಶೇಷವಾಗಿ ಟ್ರಾವೆಲ್ ಮಾಡುವವರಿಗಾಗಿಯೇ ಬಿಡುಗಡೆ ಮಾಡಿರುವ ಬ್ಯಾಗ್ ಆಗಿದೆ. ಬೆನ್ನಿಗೆ ಹಾಕಿಕೊಳ್ಳುವಂತೆ ಇರುವ ಈ ಬ್ಯಾಗ್ ಆಧುನಿಕ ಮೆಶ್ ಸ್ಟೈಲಿಂಗ್ ಹೊಂದಿದ್ದು, ಜಲನಿರೋಧಕ ಹೊದಿಕೆಯನ್ನು ಹೊಂದಿದೆ. 14 ಇಂಚಿನ ಲ್ಯಾಪ್‌ಟಾಪ್ ಇಡಬಹುದಾದ ಈ ಬ್ಯಾಗ್ ಎರಡು ಕಪಾಟುಗಳನ್ನು ಹೊಂದಿದ್ದು, ಬೆಲೆ 1999ರೂ.ಗಳಾಗಿವೆ.!!

ಮಿ ಸಿಟಿ ಬ್ಯಾಕ್‌ಪ್ಯಾಕ್!!
ನಾಲ್ಕು ಕಂಪಾರ್ಟ್ಮೆಂಟ್‌ಗಳೊಂದಿಗೆ ನಯವಾದ ವಿನ್ಯಾಸವನ್ನು ಹೊಂದಿರುವ ಮಿ ಸಿಟಿ ಬ್ಯಾಕ್‌ಪ್ಯಾಕ್. ಎರಡು ಪ್ರತ್ಯೇಕ ವಿಭಾಗಗಳನ್ನು ಹೊಂದಿದೆ. 14 ಇಂಚಿನ ಲ್ಯಾಪ್‌ಟಾಪ್ ಅನ್ನು ಸುಲಭವಾಗಿ ಇಡಬಹುದಾದ ಈ ಬ್ಯಾಗ್ ಪ್ರೀಮಿಯಂ ಫೀಲ್ ನೀಡಲಿದೆ. ಭುಜದ ಭಾರವನ್ನು ಕಡಿಮೆಗೊಳಿಸಲು ಇಪಿಎಸ್ ತುಂಬಿರುವ ಈ ಬ್ಯಾಗ್ ಬೆಲೆ 1,599ರೂ. ಗಳಾಗಿವೆ

How To Link Aadhaar With EPF Account Without Login (KANNADA)

ಮಿ ಕ್ಯಾಶುವಲ್ ಬ್ಯಾಕ್‌ಪ್ಯಾಕ್
ಶಿಯೋಮಿಯ ಮೂರು ಮಾದರಿ ಬ್ಯಾಗ್‌ಗಳಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಆಗಿ ಮಿ ಕ್ಯಾಶುವಲ್ ಬ್ಯಾಕ್‌ಪ್ಯಾಕ್ ಬಿಡುಗಡೆಯಾಗಿದೆ. 15.6-ಇಂಚಿನ ಲ್ಯಾಪ್‌ಟಾಪ್ ಅನ್ನು ಇಡಬಹುದಾದ ಈ ಬ್ಯಾಗ್‌ನಲ್ಲಿ YKK ಗುಣಮಟ್ಟದ ಜಿಪ್‌ಗಳನ್ನು ಅಳವಡಿಸಲಾಗಿದೆ. ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಮಿ ಕ್ಯಾಶುಯಲ್ ಬ್ಯಾಗ್ ಅನ್ನು 899 ರೂ. ಪಾವತಿಸಿ ಖರೀದಿಸಬಹುದಾಗಿದೆ.!!

ಓದಿರಿ: ಇನ್ಮುಂದೆ ಕೇವಲ 20 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಫುಲ್ ಆಗಲಿದೆ!!

English summary
Xiaomi Announces Three Backpacks in India, Prices Start at Rs 899. Read more about this in kaqnnadaGizBot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot