Subscribe to Gizbot

ಇನ್ಮುಂದೆ ಕೇವಲ 20 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಫುಲ್ ಆಗಲಿದೆ!!

Written By:

ಒಂದು ಸ್ಮಾರ್ಟ್‌ಫೋನ್ ಖರೀದಿಸುವಾಗ ಆ ಸ್ಮಾರ್ಟ್‌ಫೋನಿನ ಪ್ರೊಸೆಸರ್ , RAM ಮತ್ತು ಕ್ಯಾಮೆರಾ ಹೇಗಿದೆ ಎನ್ನುವುದರ ಜೊತೆಗೆ ಆ ಸ್ಮಾರ್ಟ್‌ಫೋನಿನ ಬ್ಯಾಟರಿ ಶಕ್ತಿ ಹಾಗೂ ತಂತ್ರಜ್ಞಾನ ಹೇಗಿದೆ ಎಂಬುದು ಕೂಡ ಮುಖ್ಯವಾಗುತ್ತದೆ. ಹಾಗಾಗಿಯೇ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್ ಸಂಸ್ಥೆಗಳು ಬ್ಯಾಟರಿ ತಂತ್ರಜ್ಞಾನದ ಅಭಿವೃದ್ದಿ ಮಾಡಲು ಪೈಪೋಟಿಗೆ ಬಿದ್ದಿವೆ.!!

ಸ್ಮಾರ್ಟ್‌ಫೋನಿನ ಬ್ಯಾಟರಿ ಶಕ್ತಿ ಜೊತೆಗೆ ಅತಿ ವೇಗವಾಗಿ ಚಾರ್ಜ್ ಆಗುವ, ದೀರ್ಘ ಕಾಲ ಚಾರ್ಜ್ ಉಳಿಸಿಕೊಳ್ಳುವ ಅಥವಾ ಕಡಿಮೆ ಚಾರ್ಜ್ ಬಳಸುವ ತಂತ್ರಜ್ಞಾನ ಅಭಿವೃದ್ಧಿ ಕಡೆಗೆ ಎಲ್ಲಾ ಸ್ಮಾರ್ಟ್‌ಫೋನ್ ಕಂಪೆನಿಗಳು ಗಮನ ನೀಡಿವೆ. ಅಂತರ್ಜಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ಮುಳುಗಿರುವಾಗ ಇಂತಹ ತಂತ್ರಜ್ಞಾನ ಬೆಳವಣಿಗೆ ಆಗಬೇಕಿರುವುದು ಕೂಡ ಅವಶ್ಯಕವಾಗಿದೆ.!!

ಇನ್ಮುಂದೆ ಕೇವಲ 20 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಫುಲ್ ಆಗಲಿದೆ!!

ಪ್ರಸ್ತುತ ಫಾಸ್ಟ್ ಚಾರ್ಜಿಂಗ್, ವೈರ್‌ಲೆಸ್‌ ತಂತ್ರಗಳ ಜತೆಗೆ ಲೇಸರ್ ಜಾರ್ಜಿಂಗ್ ತಂತ್ರಜ್ಞಾನಗಳು ಬ್ಯಾಟರಿ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಸೇರ್ಪಡೆಯಾಗುತ್ತಿದ್ದು, ಹಾಗಾದರೆ, ಮುಂದಿನ ದಿನಗಳಲ್ಲಿ ಬಳಕೆಗೆ ಬರುವ ಬ್ಯಾಟರಿ ತಂತ್ರಜ್ಞಾನಗಳು ಯಾವುವು? ಹೊಸದಾಗಿ ಅಭಿವೃದ್ದಿಯಾಗಿರುವ ತಂತ್ರಜ್ಞಾನಗಳ ವಿಶೇಷತೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟರ್ಬೊ ಪವರ್ ಚಾರ್ಜಿಂಗ್!!

ಟರ್ಬೊ ಪವರ್ ಚಾರ್ಜಿಂಗ್!!

ಕೇವಲ ಹದಿನೈದು ನಿಮಿಷ ಚಾರ್ಜ್ ಮಾಡಿದರೆ 15 ಗಂಟೆಯಷ್ಟು ಬ್ಯಾಟರಿ ಕಾರ್ಯಾಚರಣೆಗೆ ಲಭ್ಯವಿರುವ ಬ್ಯಾಟರಿ ತಂತ್ರಜ್ಞಾನವಿರುವ ಟರ್ಬೊಪವರ್ ಚಾರ್ಜಿಂಗ್ ವ್ಯವಸ್ಥೆಯನ್ನು ಮೋಟೊರೋಲಾ ಕಂಪೆನಿ ತಂದಿದೆ. ಮೋಟೊರೋಲಾದ ಮೋಟೊ ಝಡ್2 ಫೋರ್ಸ್ ಮತ್ತು ಮೋಟೊ ಜಿ5 ಪ್ಲಸ್ ಸ್ಮಾರ್ಟ್‌ಪೋನ್‌ಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.!!

ಒನ್‍ಪ್ಲಸ್ ‘ಡ್ಯಾಷ್’ ಚಾರ್ಜ್!!

ಒನ್‍ಪ್ಲಸ್ ‘ಡ್ಯಾಷ್’ ಚಾರ್ಜ್!!

ಒನ್‍ಪ್ಲಸ್ ಕಂಪೆನಿಯ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅತಿ ವೇಗವಾಗಿ ಚಾರ್ಜ್ ಆಗುವುದು ಒನ್‍ಪ್ಲಸ್ ಕಂಪೆನಿ ಬಳಸುತ್ತಿರುವ ಡ್ಯಾಷ್ ಚಾರ್ಜ್ ವ್ಯವಸ್ಥೆಯಿದೆ. ಉಳಿದ ಎಲ್ಲ ವೇಗದ ಚಾರ್ಜ್ ವ್ಯವಸ್ಥೆಗಳಿಗಿಂತಲೂ 10 ನಿಮಿಷ ವೇಗವಾಗಿ ಚಾರ್ಜ್ ತಂತ್ರಜ್ಞಾನ ಡ್ಯಾಷ್ ಚಾರ್ಜ್ ವ್ಯವಸ್ಥೆಯಲ್ಲಿದ್ದು, ಸ್ಮಾರ್ಟ್‌ಫೋನ್ ಕೇವಲ 30 ನಿಮಿಷಗಳಲ್ಲಿ ಶೇ 60 ಚಾರ್ಜ್ ಆಗಲಿದೆ.!!

ಮೀಡಿಯಾಟೆಕ್ ಪಂಪ್!!

ಮೀಡಿಯಾಟೆಕ್ ಪಂಪ್!!

ಬಜೆಟ್ ಆಧಾರಿತ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಚಿಪ್ ಮಾರಾಟ ಮಾಡುತ್ತಿರುವ ಮೀಡಿಯಾಟೆಕ್ ಕಂಪೆನಿ ಪಂಪ್ ಎಕ್ಸ್‌ಪ್ರೆಸ್‌ ಚಾರ್ಜಿಂಗ್ ವ್ಯವಸ್ಥೆಯನ್ನು ರೂಪಿಸಿದೆ.ಮೀಡಿಯಾಟೆಕ್ ಅಭಿವೃದ್ದಿಪಡಿಸಿರುವ ಪಂಪ್ ಎಕ್ಸ್‌ಪ್ರೆಸ್‌ ತಂತ್ರಜ್ಞಾನದಿಂದ ಡಿವೈಸ್‌ಗಳು ಕೇವಲ 20 ನಿಮಿಷಗಳಲ್ಲಿ ಶೇ 75ರಷ್ಟು ಚಾರ್ಜ್ ಆಗುತ್ತವಂತೆ.!!

ಅಡಾಪ್ಟೀವ್ ಫಾಸ್ಟ್ ಚಾರ್ಜಿಂಗ್!!

ಅಡಾಪ್ಟೀವ್ ಫಾಸ್ಟ್ ಚಾರ್ಜಿಂಗ್!!

ಸ್ಯಾಮ್‌ಸಂಗ್ ಕಂಪೆನಿ ತನ್ನ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿಕೊಂಡಿರುವ ಅಡಾಪ್ಟೀವ್ ಫಾಸ್ಟ್ ಚಾರ್ಜಿಂಗ್ 3000 ಎಂಎಎಚ್ ಬ್ಯಾಟರಿಯನ್ನು 2 ಗಂಟೆಯಲ್ಲಿ ಪೂರ್ತಿ ಚಾರ್ಜ್ ಮಾಡುತ್ತದೆ. ಆಂಪ್ಸ್ 9ವೋಲ್ಟ್ ವಿದ್ಯುತ್ ಹರಿಸುವ ಈ ವ್ಯವಸ್ಥೆಯಲ್ಲಿ ಕ್ವಿಕ್ ಚಾರ್ಜಿಂಗ್‌ನಷ್ಟು ವೇಗವಾಗಿ ಬ್ಯಾಟರಿ ಚಾರ್ಜ್ ಆಗುವುದಿಲ್ಲ.!!

Here's how the Face ID of the newly launched Oppo A83 works (KANNADA)
ಕ್ವಾಲ್ಕಮ್ ಕ್ವಿಕ್ ಚಾರ್ಜ್!!

ಕ್ವಾಲ್ಕಮ್ ಕ್ವಿಕ್ ಚಾರ್ಜ್!!

ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್ 9, ಗ್ಯಾಲಕ್ಸಿ ನೋಟ್ 8, ಎಚ್‍ಟಿಸಿ ಯು ಅಲ್ಟ್ರಾನಂತಹ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಾಗಿರುವ ಕ್ವಾಲ್ಕಮ್ ಕ್ವಿಕ್ ಚಾರ್ಜ್ ವ್ಯವಸ್ಥೆ ಜನಪ್ರಿಯ ಪ್ರೊಸೆಸರ್ ಉತ್ಪಾದಕ ಸಂಸ್ಥೆ ಕ್ವಾಲ್ಕಮ್‌ನಿಂದ ಅಭಿವೃದ್ದಿಯಾಗಿದೆ. ಈ ತಂತ್ರಜ್ಞಾನದಲ್ಲಿ ಕೇವಲ 30 ನಿಮಿಷದಲ್ಲಿ 60 ಪರ್ಸೆಂಟ್ ಬ್ಯಾಟರಿ ಚಾರ್ಜ್ ಆಗಲಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
A new study has introduced a new battery charging technology that uses light to charge batteries. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot