ವಾಯಮಾಲಿನ್ಯದಿಂದ ರಕ್ಷಣೆ ಶಿಯೋಮಿಯಿಂದ ಭರ್ಜರಿ ಆಫರ್...!
ಶಿಯೋಮಿ ಕಂಪನಿಯೂ ಈಗಾಗಲೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಮಿ ಏರ್ ಪ್ಯೂರಿಫೈರ್ 2 ಲಾಂಚ್ ಮಾಡಿದ್ದು, ದೆಹಲಿಯ ವಾಯಮಾಲಿನ್ಯದಿಂದ ರಕ್ಷಣೆ ಪಡೆಯುವ ಸಲುವಾಗಿ ಮಿ ಏರ್ ಪ್ಯೂರಿಫೈರ್ 2 ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಿದೆ. ರೂ. 8,999ಕ್ಕೆ ಮಾರಾಟ ಮಾಡುತ್ತಿದೆ.

ಓದಿರಿ: ಜಿಯೋ ಪ್ರೈಮ್ ಸದಸ್ಯರಿಗೆ ಅದ್ಧೂರಿ ಆಫರ್: ರೂ.399ಕ್ಕೆ ರಿಚಾರ್ಜ್ ಮಾಡಿಸಿದರೆ ರೂ.2599 ಕ್ಯಾಷ್ ಬ್ಯಾಕ್
ಈಗಾಗಲೇ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಜನ ಸಾಮಾನ್ಯರು ಉಸಿರಾಡುವುದಕ್ಕೂ ಕಸ್ಟ ಪಡುತ್ತಿದ್ದಾರೆ. ಕಣ್ಣು, ಗಂಟಲು ಮತ್ತು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಮನೆಯ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳಲು ಮಿ ಏರ್ ಪ್ಯೂರಿಫೈರ್ 2 ಬಳಕೆ ಮಾಡಿಕೊಳ್ಳಬಹುದಾಗಿದೆ.

ಮೂರು ವಿಧದ ಫಿಲ್ಟರ್:
ಮಿ ಏರ್ ಪ್ಯೂರಿಫೈರ್ 2 ಮೂರು ವಿಧದ ಫಿಲ್ಟರ್ ಅನ್ನು ಅಳವಡಿಸಲಾಗಿದೆ. ಇದು ಸಿಲೆಂಡರ್ ಶೇಪ್ ನಲ್ಲಿ ವಿನ್ಯಾಸವನ್ನು ಹೊಂದಿದೆ. ಅಲ್ಲದೇ ಇದು 360 ಡಿಗ್ರಿ ಮಾದರಿಯಲ್ಲಿ ಏರ್ ಫಿಲ್ಟರ್ ಮಾಡಲಿದೆ. ಇದರಿಂದ ಮನೆಯ ವಾತಾವರಣವನ್ನು ಶುದ್ಧವಾಗಿಡಲಿದೆ.


ಆಂಡ್ರಾಯ್ಡ್-IOS ಆಪ್ ಲಭ್ಯವಿದೆ:
ಮಿ ಹೋಮ್ ಆಪ್ ಮೂಲಕ ಮಿ ಏರ್ ಪ್ಯೂರಿಫೈರ್ 2 ಸ್ಮಾರ್ಟ್‌ಫೋನ್ ನೊಂದಿಗೆ ಕನೆಕ್ಟ್ ಆಗಲಿದೆ. ಇದಕ್ಕಾಗಿ ಆಂಡ್ರಾಯ್ಡ್ -IOS ಆಪ್ ಲಭ್ಯವಿದೆ. ವೈಫೈ ಮೂಲಕ ಕನೆಕ್ಟ್ ಆಗಲಿದ ಎನ್ನಲಾಗಿದೆ.

ವಿವಿಧ ಮೋಡ್ ಗಳು ಲಭ್ಯ:
ಇದಲ್ಲದೇ ಮಿ ಏರ್ ಪ್ಯೂರಿಫೈರ್ 2 ಬಳಕೆಯಲ್ಲಿ ವಿವಿಧ ವಿಧಗಳನ್ನು ಕಾಣಬಹುದಾಗಿದೆ. ಆಟೋ, ನೈಟ್ ಮತ್ತು ಮ್ಯಾನುಯಲ್ ಮೋಡ್ ಗಳನ್ನು ಕಾಣಬಹುದಾಗಿದೆ. ಇದು ಮನೆಯ ವಾತಾವರಣವನ್ನು ಅನುಸರಿಸಿ ಕಾರ್ಯನಿರ್ಹಿಸಲಿದೆ.


Click it and Unblock the Notifications








