Home
Gadgets

ಶಿಯೋಮಿಯಿಂದ ರೂ.799ಕ್ಕೆ 10000mAh ಪವರ್ ಬ್ಯಾಂಕ್ ಬಿಡುಗಡೆ..!

By Srinidhi

ಸದ್ಯ ಮಾರಕಟ್ಟೆಯಲ್ಲಿ ಹೆಚ್ಚಿನ ಸಾಮಾರ್ಥ್ಯದ ಬ್ಯಾಟರಿ ಇರುವ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡರೂ ಸಹ ಪವರ್ ಬ್ಯಾಂಕ್ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ದಿನೇ ದಿನೇ 4G ಡೇಟಾ ಬಳಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ತೀರಾ ವೇಗವಾಗಿ ಇಳಿಕೆಯಾಗುತ್ತಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಪವರ್ ಬ್ಯಾಂಕ್ ಬೇಡಿಕೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.

ಶಿಯೋಮಿಯಿಂದ ರೂ.799ಕ್ಕೆ 10000mAh ಪವರ್ ಬ್ಯಾಂಕ್ ಬಿಡುಗಡೆ..!

ಓದಿರಿ: ಐಡಿಯಾ ಬಳಕೆದಾರರು ಆಧಾರ್ ಲಿಂಕ್ ಮಾಡಿದರೆ ಬಂಪರ್ ಆಫರ್: ರೂ.20000 ಮೌಲ್ಯದ ಮೂವಿ ವೋಚರ್


ನಿನ್ನೇ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರು ತಯಾರಕ ಟೆಲ್ಸಾ ತನ್ನ ನೂತನ ಪವರ್ ಬ್ಯಾಂಕ್ ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ ಬೆನ್ನಲೇ ಚೀನಾ ಮೂಲದ ಶಿಯೋಮಿ ಸಹ ಎರಡು ಹೊಸ ಪವರ್ ಬ್ಯಾಂಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ, ಅದುವೇ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್‌ಗಳಾಗಿದೆ.

ಮೇಡ್‌ ಇನ್ ಇಂಡಿಯಾ:

ಮೇಡ್‌ ಇನ್ ಇಂಡಿಯಾ:

ಈ ಪವರ್ ಬ್ಯಾಂಕ್‌ಗಳು ಮೇಡ್‌ ಇನ್ ಇಂಡಿಯಾ ಎನ್ನಲಾಗಿದ್ದು, ಇದಕ್ಕಾಗಿಯೇ 'i' ಸರಣಿಯ ಪವರ್ ಬ್ಯಾಂಕ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಇವುಗಳನ್ನು ಉತ್ತರ ಪ್ರದೇಶದ ಮಿ ಫ್ಯಾಟರಿಯಲ್ಲಿ ನಿರ್ಮಿಸಲಾಗಿದೆ.

ಶಿಯೋಮಿ MI ಪವರ್ ಬ್ಯಾಂಕ್ 2i:

ಶಿಯೋಮಿ MI ಪವರ್ ಬ್ಯಾಂಕ್ 2i:

ಶಿಯೋಮಿ MI ಪವರ್ ಬ್ಯಾಂಕ್ 2i ಒಟ್ಟು ಎರಡು ಮಾದರಿಯಲ್ಲಿ ಕಾಣಿಕೊಂಡಿದ್ದು, ಒಂದು 10000mAh ಮತ್ತೊಂದು 20000mAh ಬ್ಯಾಟರಿಯನ್ನು ಹೊಂದಿದೆ ಎನ್ನಲಾಗಿದೆ. ಈ ಪವರ್‌ ಬ್ಯಾಂಕ್‌ಗಳು ಭಾರತದಲ್ಲಿ ನಿರ್ಮಿಸಿರುವುದು ಎನ್ನಲಾಗಿದೆ.

 ಶಿಯೋಮಿ MI ಪವರ್ ಬ್ಯಾಂಕ್ 2i(10000mAh):

ಶಿಯೋಮಿ MI ಪವರ್ ಬ್ಯಾಂಕ್ 2i(10000mAh):

ಅಲ್ಯೂಮಿನಿಯಮ್ ಬಾಡಿಯನ್ನು ಹೊಂದಿದ್ದು, ಡ್ಯುಯಲ್ USB ಪೋರ್ಟ್ ಸಪೋರ್ಟ್ ಮಾಡಲಿದೆ. ಅಲ್ಲದೇ ಇದು 10000mAh ಸಾಮರ್ಥ್ಯವನ್ನು ಹೊಂದಿದ್ದು, ರೂ. 799ಕ್ಕೆ ದೊರೆಯಲಿದೆ.

ಶಿಯೋಮಿ MI ಪವರ್ ಬ್ಯಾಂಕ್ 2i(20000mAh):

ಶಿಯೋಮಿ MI ಪವರ್ ಬ್ಯಾಂಕ್ 2i(20000mAh):

ಈ ಪವರ್ ಬ್ಯಾಂಕ್ ಕ್ವೀಕ್ ಚಾರ್ಜರ್ ಆಯ್ಕೆಯನ್ನು ಒಳಗೊಂಡಿದ್ದು, ಇದು ರೂ.1499ಕ್ಕೆ ಮಾರಾಟವಾಗುತ್ತಿದೆ. ಇದು 20000mAh ಸಾಮಾರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ನವೆಂಬರ್ 23 ರಿಂದ ಮಿ.ಕಾಮ್ ಮತ್ತು ಮಿ ಸ್ಟೋರಿನಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Xiaomi Mi Power Bank 2i launched: Will be ‘Made in India’, price starts at Rs 799. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+