ಐಡಿಯಾ ಬಳಕೆದಾರರು ಆಧಾರ್ ಲಿಂಕ್ ಮಾಡಿದರೆ ಬಂಪರ್ ಆಫರ್: ರೂ.20000 ಮೌಲ್ಯದ ಮೂವಿ ವೋಚರ್
ಕೇಂದ್ರ ಸರಕಾರವೂ ಈಗಾಗಲೇ ಮೊಬೈಲ್ ನಂಬರ್ ಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿಸಿ ಎನ್ನುವ ಸೂಚನೆಯನ್ನು ನೀಡಿದ್ದು, ಈಗಾಗಲೇ ಟೆಲಿಕಾಂ ಕಂಪನಿಗಳು ಈ ಕಾರ್ಯದಲ್ಲಿ ನಿರತವಾಗಿವೆ, ಇದೇ ಮಾದರಿಯಲ್ಲಿ ಐಡಿಯಾ ತನ್ನ ಬಳಕೆದಾರರನ್ನು ಆಧಾರ್ ಲಿಂಕ್ ಮಾಡಲಿಸಲು ಹೊಸದೊಂದು ಆಫರ್ ನೀಡಿದೆ. ಈ ಮೂಲಕ ಹೆಚ್ಚಿನ ಜನರನ್ನು ಆಧಾರ್ ಲಿಂಕ್ ಮಾಡುವಂತೆ ಪ್ರೇರೆಪಿಸುತ್ತಿದೆ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಏರ್‌ಟೆಲ್ ಸಿಮ್ ಬಳಕೆ ಮಾಡುತ್ತಿದ್ದಿರಾ? ಹಾಗಿದ್ರೆ ಈ ಆಪ್ ಇರಲೇ ಬೇಕು..!
ಐಡಿಯಾ ತನ್ನ ಗ್ರಾಹಕರನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಪ್ರೇರೆಪಿಸುವ ಸಲುವಾಗಿ ರೂ.250 ಪೇಟಿಎಂ ವೋಚರ್ ನೀಡಲು ಮುಂದಾಗಿದ್ದು, ಇದನ್ನು ಪದ್ಮಾವತಿ ಚಿತ್ರದ ಟಿಕೇಟ್ ಕೊಳ್ಳಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಅದುವೇ ಎಲ್ಲಾರಿಗೂ ನೀಡುವುದಿಲ್ಲ ಬದಲಾಗಿ ಅಧೃಷ್ಠಶಾಲಿಗಳಿಗೆ ಮಾತ್ರವೇ ಎನ್ನಲಾಗಿದೆ.

ನವೆಂಬರ್ 24 ಕೊನೆ ದಿನಾಂಕ:
ಐಡಿಯಾ ಬಳಕೆದಾರರು ತಮ್ಮ ಮೊಬೈಲ್ ನಂಬರ್ ಗಳನ್ನು ಆಧಾರ್ ನೊಂದಿಗೆ ಲಿಂಕ್ ಅನ್ನು ನವೆಂಬರ್ 24ರ ಒಳಗೆ ಮಾಡಿಕೊಂಡರೆ ರೂ.250 ಪೇಟಿಎಂ ಕೂಪನ್ ನೀಡಲಿದೆ. ಇದು ಅದೃಷ್ಠಶಾಲಿಗಳ ಮೊಬೈಲ್ ನಂಬರ್ ಗೆ ಬರಲಿದೆ. ಅಲ್ಲದೇ ಇದು ನವೆಂಬರ್ 29ರ ಒಳಗೆ ದೊರೆಯಲಿದೆ.

ರೂ.20,000 ಮೂವಿ ವೋಚರ್ :
ಒಟ್ಟು ರೂ.20000ದ ಮೂವಿ ವೋಚರ್ ಗಳನ್ನು ಐಡಿಯಾ ತನ್ನ ಬಳಕೆದಾರರಿಗೆ ನೀಡಲಿದೆ. ಇದಕ್ಕಾಗಿ ಐಡಿಯಾ ಬಳಕೆದಾರರು ಏನು ಮಾಡುವ ಅಗತ್ಯವಿಲ್ಲ. ಇದಕ್ಕಾಗಿ ಕೇವಲ ಆಧಾರ್ -ಮೊಬೈಲ್ ನಂಬರ್ ಜೋಡಣೆ ಮಾಡಬೇಕಾಗಿದೆ.

ಫೆ. 6 ಲಿಂಕ್ ಮಾಡಲು ಕಡೆಯ ದಿನಾಂಕ:
ಮೊಬೈಲ್ ನಂಬರ್ ನೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು 2018ರ ಫೆಬ್ರವರಿ 8 ನೇ ತಾರೀಕು ಕಡೆಯ ದಿನಾಂಕವಾಗಿದೆ. ಇದಕ್ಕಿಂತ ಮುಂಚಿತವಾಗಿ ಆಧಾರ್ ನಂಬರ್ ನೊಂದಿಗೆ ಮೊಬೈಲ್ ನಂಬರ್ ಗಳನ್ನು ಲಿಂಕ್ ಮಾಡಬೇಕಾಗಿದೆ ಎನ್ನಲಾಗಿದೆ.


Click it and Unblock the Notifications








