Home
ಟೆಕ್ ನೌಕರಿ

ಹೊಸದಾಗಿ ಬಂದಿರುವ ಈ 10 ವಾಟ್ಸ್‌ಆಪ್‌ ಫೀಚರ್ ಗಳನ್ನು ಯೂಸ್‌ ಮಾಡಿದ್ದಿರಾ..?

By Srinidhi

ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಬಳಕೆದಾರರಲ್ಲಿ ಭಾರತೀಯರ ಪಾಲು ದೊಡ್ಡದಾಗಿದೆ. ಸುಮಾರು 200 ಮಿಲಿಯನ್‌ಗೂ ಅಧಿಕ ಮಂದಿ ದೇಶದಲ್ಲಿ ವಾಟ್ಸ್‌ಆಪ್ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ವಾಟ್ಸ್‌ಆಪ್ ದಿನೇ ದಿನೇ ಹೊಸ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಇದರಿಂದಾಗಿ ಹೆಚ್ಚಿನ ಮಂದಿ ವಾಟ್ಸ್‌ಆಪ್ ಬಳಕೆ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.

ಹೊಸದಾಗಿ ಬಂದಿರುವ ಈ 10 ವಾಟ್ಸ್‌ಆಪ್‌ ಫೀಚರ್ ಗಳನ್ನು ಯೂಸ್‌ ಮಾಡಿದ್ದಿರಾ..?

ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಬಳಕೆದಾರರು ಒಮ್ಮೆಯಾದರು ಬಳಕೆ ಮಾಡಲೇ ಬೇಕಾದ ವಿಷಯಗಳ ಕುರಿತ ಮಾಹಿತಿಯೂ ಇಲ್ಲಿದ್ದು, ಇಲ್ಲಿರುವ 10 ಫೀಚರ್ ಗಳನ್ನು ಬಳಕೆದಾರರು ಬಳಕೆ ಮಾಡಿಕೊಂಡರೆ ಬೇರೆ ಆಪ್‌ಗಳನ್ನು ಈ ಕಾರ್ಯಗಳಿಗಾಗಿ ಬಳಸುವ ಪ್ರಮೇಯ ಬರುವುದಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಫೀಚರ್ ಗಳ ಬಗ್ಗೆ ಮಾಹಿತಿಯೂ ಮುಂದಿನಂತಿದೆ.

ವಾಟ್ಸ್‌ಆಪ್ ನಲ್ಲಿಯೇ ಹಣ ಪಾವತಿಸಿ:

ವಾಟ್ಸ್‌ಆಪ್ ನಲ್ಲಿಯೇ ಹಣ ಪಾವತಿಸಿ:

ವಾಟ್ಸ್ಆಪ್ ಬಳಕೆದಾರರಿಗೆ ನೀಡಿರುವ ಹೊಸ ಸೇವೆಯೂ ಇದಾಗಿದ್ದು, UPI ಬಳಕೆಯ ಮೂಲಕ ವಾಟ್ಸ್‌ಆಪ್ ನಲ್ಲಿ ನಿಮ್ಮ ಸ್ನೇಹಿತರಿಗೆ ಹಣವನ್ನು ಕಳುಹಿಸಬಹುದು ಮತ್ತು QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ವ್ಯಾಪಾರಿಗಳಿಗೆ ಪೇಮೆಂಟ್ ಸಹಮಾಡಬಹುದಾಗಿದೆ.

ಮೇಸೆಜ್ ಡಿಲೀಟ್ ಮಾಡಿ:

ಮೇಸೆಜ್ ಡಿಲೀಟ್ ಮಾಡಿ:

ಇದಲ್ಲದೇ ನೀವು ಗ್ರೂಪ್‌ನಲ್ಲಿ ಇಲ್ಲವೇ ಸ್ನೇಹಿತರೊಂದಿಗೆ ಚಾಟ್ ಮಾಡುವ ಸಂದರ್ಭದಲ್ಲಿ ತಿಳಿಯದೆ ತಪ್ಪಾಗಿ ಮೇಸೆಜ್ ಗಳನ್ನು ಸೆಂಡ್ ಮಾಡಿದ ಸಂದರ್ಭದಲ್ಲಿ ಅವರು ನೋಡುವ ಮೊದಲೇ ನೀವು ಅದನ್ನು ಡಿಲೀಟ್ ಮಾಡಬಹುದಾಗಿದೆ. ಇದಕ್ಕಾಗಿ ಒಂದು ಗಂಟೆಗೂ ಹೆಚ್ಚು ಕಾಲಾವಕಾಶವನ್ನು ನೀಡಲಾಗಿದೆ. ಇದು ವಾಟ್ಸ್‌ಆಪ್ ನೀಡಿರುವ ಹೊಸ ಆಯ್ಕೆಯಾಗಿದೆ.

ಗ್ರೂಪ್ ಬಗ್ಗೆ ಮಾಹಿತಿ:

ಗ್ರೂಪ್ ಬಗ್ಗೆ ಮಾಹಿತಿ:

ಇದಲ್ಲದೇ ನೀವು ಆಡ್ಮಿನ್ ಆಗಿರುವ ಗ್ರೂಪ್‌ ಬಗ್ಗೆ ನೀವು ಮಾಹಿತಿಯನ್ನು ನೀಡಬಹುದಾಗಿದೆ. ನಿಮ್ಮ ಗ್ರೂಪ್ ಯಾವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ, ಉದ್ದೇಶಗಳೇನು, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಸದಸ್ಯರಿಗೆ ತಿಳಿಸಲು ಇದು ವೇದಿಕೆಯಾಗಲಿದೆ.

ಗ್ರೂಪ್ ವಿಡಿಯೋ ಕಾಲಿಂಗ್:

ಗ್ರೂಪ್ ವಿಡಿಯೋ ಕಾಲಿಂಗ್:

ಮೊದಲು ವಾಟ್ಸ್‌ಆಪ್ ಬಳಕೆದಾರರಿಗೆ 'ಒನ್ ಆನ್ ಒನ್' ವಿಡಿಯೋ ಕಾಲಿಂಗ್ ಮಾಡುವ ಆಯ್ಕೆಯನ್ನು ಮಾತ್ರವೇ ನೀಡಲಾಗಿತ್ತು. ಆದರೆ ಈಗ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವ ಹೊಸ ಆಯ್ಕೆಯೊಂದನ್ನು ನೀಡಲಾಗಿದೆ. ಇದರಲ್ಲಿ ನಿಮ್ಮ ಸ್ನೇಹಿತರೊಂದಿಗೆ ಒಟ್ಟಾಗಿ ಮಾತನಾಡಬಹುದಾಗಿದೆ.

ವಾಟ್ಸ್‌ಆಪ್ ಬಿಸ್ನೆಸ್:

ವಾಟ್ಸ್‌ಆಪ್ ಬಿಸ್ನೆಸ್:

ಇದಲ್ಲದೇ ನಿಮ್ಮ ವ್ಯವಹಾರವನ್ನು ಉತ್ತಮ ರೀತಿಯಲ್ಲಿ ಬೆಳಸಲು ವಾಟ್ಸ್ಆಪ್ ಸಹಾಯವನ್ನು ಮಾಡಲಿದ್ದು, ಇದಕ್ಕಾಗಿ ಬೆಸ್ನೆಸ್ ಆಪ್ ವೊಂದನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದರಲ್ಲಿ ನಿಮ್ಮ ಬಿಸ್ನೆಸ್ ಬಗ್ಗೆ ಸಂಫೂರ್ಣ ಮಾಹಿತಿಯನ್ನು ನೀಡುವುದಲ್ಲದೇ ಗ್ರಾಹಕರೊಂದಿಗೆ ಸಂವಹನ ನಡೆಸಲು ಸಹಾಯಕಾರಿಯಾಗಿದೆ.

ವಿಡಿಯೋ ಕಾಲ್‌ನಿಂದ ಆಡಿಯೋ ಕಾಲ್‌:

ವಿಡಿಯೋ ಕಾಲ್‌ನಿಂದ ಆಡಿಯೋ ಕಾಲ್‌:

ನಿಮ್ಮ ಸ್ನೇಹಿತರಿಗೆ ಆಡಿಯೋ ಕಾಲ್ ಮಾಡಿ ಮಾತನಾಡುವ ಸಂದರ್ಭದಲ್ಲಿಯೇ ಆಡಿಯೋ ಕಾಲ್ ಅನ್ನು ವಿಡಿಯೋ ಕಾಲ್ ಆಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದ್ದು, ಇದ್ಕಕಾಗಿಯೇ ವಾಟ್ಸ್ ಆಪ್ ಅವಕಾಶವನ್ನು ಮಾಡಿಕೊಟ್ಟಿದೆ. ಇಂದರಿಂದಾಗಿ ವಾಟ್ಸ್‌ಆಪ್ ಕಾಲಿಂಗ್ ಅನುಭವ ಉತ್ತಮವಾಗಲಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ವಾಟ್ಸ್‌ಆಪ್ ನಲ್ಲಿಯೇ ಯೂಟ್ಯೂಬ್:

ವಾಟ್ಸ್‌ಆಪ್ ನಲ್ಲಿಯೇ ಯೂಟ್ಯೂಬ್:

ಈ ಹಿಂದೆ ನಿಮ್ಮ ಸ್ನೇಹಿತರು ಯೂಟ್ಯೂಬ್ ವಿಡಿಯೋ ಲಿಂಕ್ ಶೇರ್ ಮಾಡಿದ ಸಂದರ್ಭದಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅದು ಯೂಟ್ಯೂಬ್ ಆಪ್‌ನಲ್ಲಿ ತೆರೆದುಕೊಳ್ಳುತಿತ್ತು. ಆದರೆ ಈಗ ಅದು ಬದಲಾಗಿದ್ದು, ನಿಮ್ಮ ಚಾಟ್ ವಿಂಡೋದಲ್ಲಿಯೇ ಯೂಟ್ಯೂಬ್ ವಿಡಿಯೋವನ್ನು ಪ್ಲೇ ಮಾಡಬಹುದಾಗಿದೆ.

ವಾಟ್ಆಪ್ ಐಕಾನ್ ಬದಲಾಯಿಸಿ:

ವಾಟ್ಆಪ್ ಐಕಾನ್ ಬದಲಾಯಿಸಿ:

ಇದಲ್ಲದೇ ಆಂಡ್ರಾಯ್ಡ್ ಒರಿಯೋ ಬಳಕೆದಾರರು ತನ್ನ ವಾಟ್ಸ್ ಆಪ್ ಐಕಾನ್ ಅನ್ನು ಬದಲಾಯಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ ಮತ್ತು ಅದನ್ನು ಸ್ನೇಹಿತರೊಂದಿಗೆ ಶೇರ್ ಸಹ ಮಾಡಬಹುದಾಗಿದೆ.

ಲೈವ್ ಲೋಕೆಷನ್ ಶೇರ್:

ಲೈವ್ ಲೋಕೆಷನ್ ಶೇರ್:

ಇದಲ್ಲದೇ ನಿಮ್ಮ ವಾಟ್ಸ್‌ಆಪ್ ಮೂಲಕ ನೀವು ಲೈವ್ ಲೋಕೆಷನ್ ಅನ್ನು ಶೇರ್ ಮಾಡಬಹುದಾಗಿದೆ. ನೀವು ಎಲ್ಲಿದ್ದೀರಿ ಎಂಬುದನ್ನು ಸ್ನೇಹಿತರು ರಿಯಲ್ ಟೈಮಿನಲ್ಲಿ ನೋಡಬಹುದಾಗಿದೆ.

ಸ್ಟೇಟಸ್ :

ಸ್ಟೇಟಸ್ :

ಇದಲ್ಲದೇ ಫೇಸ್‌ಬುಕ್‌ನಲ್ಲಿ ಇದ್ದಂತಹ ಬಣ್ಣಬಣ್ಣದ ಸ್ಟೆಟಸ್ ಬ್ಯಾಕ್‌ ಗ್ರೌಂಡ್ ಅನ್ನು ವಾಟ್ಸ್‌ಆಪ್ ನಲ್ಲಿಯೂ ಬಳಕೆ ಮಾಡಿಕೊಳ್ಳುವ ಅವಕಾಶವು ಇದೆ. ಅಲ್ಲದೇ ಫಾಂಟ್ ಗಳನ್ನು ಬದಲಾಯಿಸಿಕೊಳ್ಳೂವ ಅವಕಾಶವನ್ನು ಮಾಡಿಕೊಡಲಾಗಿದೆ.

ಓದಿರಿ: ಪೋನ್ ಡಿಲಿವರಿ ಲೇಟ್ ಮಾಡಿದ್ದಕ್ಕೆ 20 ಬಾರಿ ಚಾಕುವಿನಿಂದ ಇರಿದ ಮಹಿಳೆ..!

Best Mobiles in India

English summary
10 new WhatsApp features you should try. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+