ಇಷ್ಟು ದಿನ ಫ್ಲಿಪ್‌ಕಾರ್ಟ್-ಅಮೆಜಾನ್ ಬಳಕೆದಾರರಿಗೆ ಕಲ್ಲು-ಸೋಪು ಕಳುಹಿಸಿದ ಸುದ್ದಿಗಳೇ ವರದಿಯಾಗುತಿತ್ತು. ಆದರೆ ದೆಹಲಿಯಲ್ಲಿ ನಡೆದಿರುವ ಘಟನೆಯೂ ಇದಕ್ಕೆ ವಿರುದ್ಧವಾಗಿದ್ದು, ಮೊಬೈಲ್ ಫೋನ್ ಅನ್ನು ಲೇಟ್‌ಆಗಿ ಡಿಲಿವರಿ ಮಾಡಿದ ಕಾರಣಕ್ಕೆ ಫ್ಲಿಪ್‌ಕಾರ್ಡ್ ಡೆಲಿವರಿ ಬಾಯ್‌ಗೆ ಮಹಿಳೆಯೊಬ್ಬರು ಚಾಕುವಿನಿಂದ 20 ಬಾರಿ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೈಲು ಪಾಲಾಗಿದ್ದಾರೆ.

ಫ್ಲಿಪ್‌ಕಾರ್ಟಿನಲ್ಲಿ ಮೊಬೈಲ್ ಫೋನ್ ಬುಕ್ ಮಾಡಿದ 30 ವರ್ಷ ಕಮಲ್ ದೀಪ್ ಎನ್ನುವ ಮಹಿಳೆ, ಸ್ಮಾರ್ಟ್‌ಫೋನ್ ಅನ್ನು ಸರಿಯಾದ ಸಮಯಕ್ಕೆ ಡೆಲಿವರಿ ಮಾಡದೆ ನಿಧಾನ ಮಾಡಿದ ಎನ್ನುವ ಒಂದೇ ಕಾರಣಕ್ಕೆ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ 28 ವರ್ಷದ ಕೇಶವ್ ಎನ್ನುವ ಯುವಕನಿಗೆ ಹಲವು ಬಾರಿ ಹರಿತವಾಗಿ ಚೂಕುವಿನಿಂದ ಇರಿದಿದ್ದಾರೆ ಎನ್ನಲಾಗಿದ್ದು, ಗಾಯಾಳು ಕೇಶವ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.
ದೆಹಲಿಯಾ ನಿಹಾಲ್ ವಿಹಾರ ಪ್ರದೇಶದ ಪೊಲೀಸರು ಈ ಘಟನೆ ಸಂಬಂಧ ಕಮಲ್ ದೀಪ್ ಮತ್ತು ಆಕೆಯ ಸಹೋದರ ಜತಿಂದರ್ ಸಿಂಗ್ ಅವನ್ನು ಬಂಧಿಸಿದ್ದಾರೆ ಎನ್ನಲಾಗಿದ್ದು, ಕೊಲೆ ಯತ್ನ ಮತ್ತು ದರೋಡೆ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಘಟನೆ ಬುದುವಾರ ರಾತ್ರಿ ನಡೆದಿದ್ದು, ಗಾಯಾಳು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾರ್ಚ್ 21ರ ರಾತ್ರಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಕೇಶವ್, ದೀಪ್ ಬುಕ್ ಮಾಡಿದ್ದ ರೂ.11,000 ಬೆಲೆ ಬಾಳುವ ಸ್ಮಾರ್ಟ್‌ಫೋನ್ ಅನ್ನು ಡೆಲಿವರಿ ಮಾಡಲು ಹೋಗಿದ್ದ ಸಂದರ್ಭದಲ್ಲಿ, ನಿಧಾವಾಗಿ ಆಗಿ ಬಂದಿದ್ದಕ್ಕೆ ಅಡುಗೆ ಮನೆಯಿಂದಲೇ ಕೋಪದಿಂದ ಕೂಗಾಡಿಕೊಂಡು ಬಂದು ಮಹಿಳೆ ಏಕಾಏಕಿ ಕೈನಲ್ಲಿದ್ದ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಡೆಲಿವರಿ ಬಾಯ್ ಮೇಲೆ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ದಾಳಿ ನಡೆಸಿ, ಆತನಲ್ಲಿದ್ದ ರೂ.40000 ಗಳನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಆತನನ್ನು ಅಲ್ಲಯೇ ಚರಂಡಿ ಬಳಿ ತಳ್ಳಿ ಹೋಗಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.