ಸ್ಮಾರ್ಟ್‌ಫೋನ್ ಫೋಟೋಗ್ರಫಿಗಾಗಿ ಟಾಪ್ ಆಪ್ಸ್
ಸ್ಮಾರ್ಟ್‌ಫೋನ್ ಕ್ಯಾಮೆರಾವನ್ನು ನೀವೆಲ್ಲಾ ದಿನನಿತ್ಯ ಬಳಸುತ್ತಲೇ ಇದ್ದೀರಿ. ಆದರೆ ಕೆಲವೊಮ್ಮೆ ನೀವು ತೆಗೆದ ಫೋಟೋಗಳೇ ನಿಮಗೆ ಎಷ್ಟೋ ವೇಳೇ ಕ್ಲಾರಿಟಿ ವಿಷಯದಲ್ಲಿ ಬೇಸರ ತರಿಸಬಹದು. ಆದಕ್ಕೆ ಪರಿಹಾರವಾಗಿ ಇಂದು ಟೆಕ್ ಸಂಶೋಧಕರು ನಿಮ್ಮ ಬೇಸಿಕ್ ಫೋಟೊ ಮತ್ತು ವೀಡಿಯೊಗಳನ್ನು ಅತ್ಯುತ್ತಮಗೊಳಿಸುವ ಕೆಲವು ಸೂಪರ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಅಭಿವೃದ್ದಿ ಪಡಿಸಿದ್ದಾರೆ.
ಓದಿರಿ: ಮಾನಸಿಕ ಖಿನ್ನತೆಗೆ ಫೇಸ್‌ಬುಕ್ ಪರಿಹಾರ
ಸ್ಮಾರ್ಟ್‌ಫೋನ್ ಬೇಸಿಕ್ ವೀಡಿಯೊ ಮತ್ತು ಫೋಟೋಗಳನ್ನು ಉತ್ತಮಗೊಳಿಸುವ ಸೂಪರ್ ಅಪ್ಲಿಕೇಶನ್‌ಗಳು.

Vintique (ಐಒಎಸ್‌ಮತ್ತು ಆಂಡ್ರಾಯ್ಡ್)
ಅತ್ಯುತ್ತಮ ಆದರ್ಶ ಆಫ್ ಇದಾಗಿದ್ದ, ಇದರಲ್ಲಿ ವಿಂಟೇಜ್ ಎಫೆಕ್ಟ್ ನೀಡಬಹುದಾಗಿದೆ. ರಿಯಲ್ ಟೈಮ್ ಎಫೆಕ್ಟ್ ನೀಡುವ ಫೀಚರ್ ಹೊಂದಿದ್ದು, 100ಕ್ಕಿಂತ ಹೆಚ್ಚು ಫಿಲ್ಟರ್, ಫ್ರೇಮ್ಸ್, ಟೆಕ್ಚರ್ ಮತ್ತು ಪ್ಲೇರ್ ಎಫೆಕ್ಟ್ ಹೊಂದಿದೆ.

Boomerang (ಐಒಎಸ್‌ಮತ್ತು ಆಂಡ್ರಾಯ್ಡ್)
ಇದು ಇನ್ಸ್ಟಿಗ್ರಾಮ್ ಟೀಮ್ ಅಭಿವೃದ್ದಿಗೊಳಿಸಿರುವ ಅಪ್ಲಿಕೇಶನ್ ಆಗಿದ್ದು, ಇದರಲ್ಲಿ ಹಿಂದಕ್ಕೆ ಮತ್ತು ಮುಂದಕ್ಕೆ ವೀಡಿಯೊಗಳನ್ನು ಲೂಪ್ ಮಾಡುತ್ತಾ ಮಿನಿ ವೀಡಿಯೊಗಳನ್ನು ರಚಿಸಬಹುದಾಗಿದೆ. ಇದರಲ್ಲಿ ಒಮ್ಮೆಯೇ 10 ಫೋಟೋಗಳನ್ನು ಸ್ಟಿಚ್‌ಮಾಡಿ ವಿಡಿಯೋ ಕ್ರಿಯೇಟ್ ಮಾಡಬಹುದಾಗಿದೆ.

Fyuse (ಐಒಎಸ್‌ಮತ್ತು ಆಂಡ್ರಾಯ್ಡ್)
ಈ ಅಪ್ಲಿಕೇಶನ್‌ನಲ್ಲಿ ನೀವು ಯಾವುದೇ ವಸ್ತುವನ್ನು 3D ಫೋಟೋ ಆಗಿ ಕ್ಯಾಪ್ಚರ್ ಮಾಡಬಹುದಾಗಿದೆ. ಅಲ್ಲದೇ ಇದು ಸ್ವತಃ ಸಾಮಾಜಿಕ ತಾಣ ಹೊಂದಿದ್ದು, ಅದರಲ್ಲಿ ನಿಮ್ಮ ಫೋಟೋ ಶೇರ್ ಮಾಡಬಹುದಾಗಿದೆ.

Horizon Camera (ಐಒಎಸ್‌ಮತ್ತು ಆಂಡ್ರಾಯ್ಡ್)
ಈ ಆಪ್ 4K ವೀಡಿಯೊ ರೆಕಾರ್ಡಿಂಗ್ ಮತ್ತು ಸ್ಲೋ ಮೋಶನ್ ರೆಕಾರ್ಡಿಂಗ್ ಫೀಚರ್ ಹೊಂದಿದೆ. ಒಂದೇ ಆಂಗಲ್‌ನಲ್ಲಿ ನಿಮ್ಮ ಫೋನ್ ಹಿಡಿದು ಯಾವುದೇ ಆಂಗಲ್‌ನಲ್ಲಿ ಕ್ಯಾಪ್ಚರ್ ಮಾಡಲು ಫೀಚರ್ ಹೊಂದಿದೆ.

LiveBlend (ಐಒಎಸ್)
ಡಬಲ್ ಎಕ್ಸ್‌ಪೋಜರ್‌ನಲ್ಲಿ ಫೋಟೋ ಮತ್ತು HD ವೀಡಿಯೊ ಮಾಡಬಹುದಾಗಿದೆ. ನಿಮ್ಮ ಗ್ಯಾಲರಿಯಲ್ಲಿ ಒಂದು ಫೋಟೋ ಸೆಲೆಕ್ಟ್ ಮಾಡಿದರೆ ಅಪ್ಲಿಕೇಶನ್ ಡಬಲ್ ಎಕ್ಸ್‌ಪೋಜರ್‌ನಲ್ಲಿ ರಿಯಲ್ ಟೈಮ್ ಕ್ಯಾಪ್ಚರ್ ಮಾಡುತ್ತದೆ.

Paper Camera (ಐಒಎಸ್‌ಮತ್ತು ಆಂಡ್ರಾಯ್ಡ್)
ಅಪ್ಲಿಕೇಶನ್ ನೀವು ಸೆರೆಹಿಡಿಯುವ ಫೋಟೋಗಳಿಗೆ ರಿಯಲ್ ಟೈಮ್ ಕಾರ್ಟೂನ್ ಎಫೆಕ್ಟ್ ನೀಡುತ್ತದೆ. ಹಾಗೆ ರಿಯಲ್ ಟೈಮ್ ಸ್ಕೆಚ್ ಕೂಡ ಸಾಧ್ಯ.

Candy Camera (ಐಒಎಸ್‌ಮತ್ತು ಆಂಡ್ರಾಯ್ಡ್)
ಸೆಲ್ಫೀ ಗೆಳೆಯರಿಗೆ ಇದು ಅತ್ಯುತ್ತಮ ಅಪ್ಲಿಕೇಶನ್ ಆಗಿದ್ದು, ಸೆಲ್ಫೀ ತೆಗೆಯುವ ವೇಳೆಯಲ್ಲಿ ರಿಯಲ್ ಟೈಮ್ ಫಿಲ್ಟರ್ ಮತ್ತು ಸ್ಟಿಕ್ಕರ್ ಫೀಚರ್ ಹೊಂದಿದೆ.

Camera FV-5 (ಆಂಡ್ರಾಯ್ಡ್)
ಇತ್ತೀಚಿನ ಸ್ಮಾರ್ಟ್‌ಫೋನ್ ತಯಾರಕರು ಪ್ರೊ-ಮೋಡ್ ಅಳವಡಿಸುತ್ತಿದ್ದಾರೆ. ಆದರೆ ಬಹುಸಂಖ್ಯಾತ ಮೊಬೈಲ್‌ಗಳಲ್ಲಿ ಈ ಫೀಚರ್ ಇಲ್ಲ. Camera FV-5 ಅಪ್ಲಿಕೇಶನ್ DSLR ನಿಯಂತ್ರಣ ಹೊಂದಿದ್ದು, ಐಎಸ್‌ಒ, ವೈಟ್ ಬ್ಯಾಲೆನ್ಸ್, ಎಕ್ಸ್‌ಪೋಜರ್, ಫೋಕಸ್ ಮೋಡ್ ಮತ್ತು ಲಾಂಗ್ ಎಕ್ಸ್‌ಪೋಜರ್ ಮೋಡ್ ಹೊಂದಿದೆ. ಇದರಲ್ಲಿ ಆಪ್‌ನಲ್ಲಿ ತೆಗೆದ ಎಲ್ಲಾ ಫೋಟೋಗಳು ರಲ್ಲಾ ಫೀಚರ್‌ಗಳಿಗೂ ಆಕ್ಸೆಸ್ ಆಗುತ್ತವೆ.

Snapwire (ಐಒಎಸ್‌ಮತ್ತು ಆಂಡ್ರಾಯ್ಡ್)
ಈ ಅಪ್ಲಿಕೇಶನ್ ನಿಮ್ಮ ಫೋಟೋಗಳಿಗೆ ಫೇಯ್ಡ್ ರಿಕ್ವೆಸ್ಟ್ ಆಫರ್ ನೀಡುತ್ತದೆ. ನೀವು ಸೆರೆಹಿಡಿದ ಉತ್ತಮ ಫೋಟೋಗಳನ್ನು ಸಲ್ಲಿಸಬಹುದಾಗಿದೆ. ನಿಮ್ಮ ಫೋಟೋಗಳು ಸೆಲೆಕ್ಟ್ ಆದಲ್ಲಿ ಅವುಗಳಿಗೆ ಹಣ ಪಡೆಯಬಹುದಾಗಿದೆ.

Enlight (ಐಒಎಸ್)
ಇದು ಆಲ್ ಇನ್ ಒನ್ ಎಡಿಟಿಂಗ್ ಅಪ್ಲಿಕೇಶನ್ ಅಗಿದ್ದು ಬಹುಸಂಖ್ಯಾತ ಎಫೆಕ್ಟ್ ಮತ್ತು ಫೀಚರ್‌ಗಳನ್ನು ಹೊಂದದೆ. ಬೆಲೆ ರೂ.250.


Click it and Unblock the Notifications








