ವೈಫೈ ಖರೀದಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳೇನು?

Written By:

ಮನೆಗೆ ಅಥವಾ ಕಚೇರಿಗೆ ವೈಫೈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದೀರಾ? ಅಥವಾ ಹೊಸದಾಗಿ ಖರೀದಿಸುತ್ತಿದ್ದೀರಾ? ಹಾಗಿದ್ದರೆ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸುವ ಮೂಲಕ ಸೂಕ್ತ ವೈಫೈ ಸಂಪರ್ಕ ಅಂತೆಯೇ ಅತ್ಯುತ್ತಮ ವೈಫೈ ಸೇವೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನೀವು ನೋಡಲಿದ್ದೀರಿ.

ಓದಿರಿ: ಮನೆಯ ವೈಫೈ ಸೌಲಭ್ಯದ ಪ್ರಬಲತೆಗಾಗಿ ಟಿಪ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂಟರ್ ವಿಧ

ಸಂಪರ್ಕದ ವಿಧ ಅರಿತುಕೊಳ್ಳಿ

ನಿಮ್ಮ ಕನೆಕ್ಶನ್ ಅನ್ನು ಅನುಸರಿಸಿ ರೂಟರ್ ವಿಧವನ್ನು ಆರಿಸಿಕೊಳ್ಳಿ. ಎಮ್‌ಟಿಎನ್‌ಎಲ್ ಅಥವಾ ಬಿಎಸ್‌ಎನ್‌ಎಲ್ ಮುಂತಾದ ಸರ್ವೀಸ್ ಪ್ರೊವೈಡರ್‌ನಿಂದ ನೀವು ಸಂಪರ್ಕವನ್ನು ಪಡೆದುಕೊಳ್ಳುತ್ತಿದ್ದೀರಿ ಎಂದಾದಲ್ಲಿ ಎಡಿಎಸ್‌ಎಲ್ ರೂಟರ್ ನಿಮಗೆ ಅಗತ್ಯ.

ಸ್ಟೋರೇಜ್ ಹಂಚಿಕೊಳ್ಳಲು

ಸ್ಟೋರೇಜ್ ಹಂಚಿಕೊಳ್ಳಲು

ನಿಮ್ಮ ಸಂಪರ್ಕದೊಂದಿಗೆ ನಿಮಗೆ ಒದಗಿಸಲಾದ ಹಾರ್ಡ್‌ವೇರ್ ಅನ್ನು ಬಳಸಿಕೊಳ್ಳಬಹುದು. ಇನ್ನು ಸುಧಾರಿತ ರೂಟರ್ ಅನ್ನು ನಿಮಗೆ ಖರೀದಿಸಬಹುದಾಗಿದ್ದು ಇದು ಸ್ಟೋರೇಜ್ ಹಂಚಿಕೊಳ್ಳಲು ಬಳಸಬಹುದಾಗಿದೆ

ಎಸಿ ಸ್ಟ್ಯಾಂಡರ್ಡ್

ಸ್ಟ್ಯಾಂಡರ್ಡ್

802.11 ಎಸಿ ಸ್ಟ್ಯಾಂಡರ್ಡ್‌ಗೆ ಇದು ಬೆಂಬಲವನ್ನು ಒದಗಿಸುತ್ತದೆ. ಎಸಿ ಸ್ಟ್ಯಾಂಡರ್ಡ್ ಹೊಸದಾಗಿರುತ್ತದೆ ಮತ್ತು ಇದು ಡೇಟಾ ವರ್ಗಾವಣೆ ವೇಗವನ್ನು ದ್ವಿಗುಣಗೊಳಿಸುತ್ತದೆ. ಉತ್ತಮ ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಇದು ಒದಗಿಸುವುದರ ಜೊತೆಗೆ ಮೀಡಿಯಾ ಕಂಟೆಂಟ್ ಅನ್ನು ಸ್ಟ್ರೀಮ್ ಕೂಡ ಮಾಡುತ್ತದೆ.

ಹಣವನ್ನು ಉಳಿಸಬಹುದು

ಹಣವನ್ನು ಉಳಿಸಬಹುದು

ಈ ರೂಟರ್‌ಗಳು ಎನ್ ಸ್ಟ್ಯಾಂಡರ್ಡ್‌ನೊಂದಿಗೆ ಸಂಯೋಜನೆಯನ್ನು ಹೊಂದುತ್ತದೆ. ಇದರಿಂದ ನಿಮ್ಮ ಹಳೆಯ ಡಿವೈಸ್‌ಗಳು ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ. ನೀವು ಹಣವನ್ನು ಉಳಿಸಬಹುದು.

ಫ್ರಿಕ್ವೆನ್ಸಿ ಬ್ಯಾಂಡ್‌

ಡ್ಯುಯಲ್ ಬ್ಯಾಂಡ್

ಹೆಚ್ಚಿನ ಸ್ಟ್ಯಾಂಡರ್ಡ್ ರೂಟರ್‌ಗಳು 2.4GHZ ಫ್ರಿಕ್ವೆನ್ಸಿ ಬ್ಯಾಂಡ್‌ನಲ್ಲಿ ಆಪರೇಟ್ ಮಾಡುತ್ತದೆ. ಮೈಕ್ರೋವೇವ್ ಓವನ್ಸ್, ಕೋರ್ಡ್‌ಲೆಸ್ ಫೋನ್‌ಗಳು ಮತ್ತು ಬ್ಲ್ಯೂಟೂತ್ ಡಿವೈಸ್‌ಗಳು ಇದೇ ಸ್ಪೆಕ್ಟ್ರಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಡ್ಯುಯಲ್ ಬ್ಯಾಂಡ್ ರೂಟರ್

ಡ್ಯುಯಲ್ ಬ್ಯಾಂಡ್ ರೂಟರ್

ಇಂತಹ ಸಂದರ್ಭಗಳಲ್ಲಿ ನೀವು ಡ್ಯುಯಲ್ ಬ್ಯಾಂಡ್ ರೂಟರ್ ಅನ್ನು ಬಳಸುವುದು ಉತ್ತಮವಾಗಿರುತ್ತದೆ. ಇದು 5GHZ ಬ್ಯಾಂಡ್‌ಗೆ ಬೆಂಬಲವನ್ನು ನೀಡುತ್ತದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ 5GHZ ಅನ್ನು ಸಂಪರ್ಕಪಡಿಸಿ 2.4GHZ ನಲ್ಲಿ ನಿಮ್ಮ ಕೆಲಸ ನಡೆಸಿಕೊಳ್ಳಬಹುದಾಗಿದೆ.

ಯುಎಸ್‌ಬಿ ಪೋರ್ಟ್

ಯುಎಸ್‌ಬಿ ಪೋರ್ಟ್

ರೂಟರ್‌ಗಳೊಂದಿಗೆ ಯುಎಸ್‌ಬಿ ಪೋರ್ಟ್‌ಗಳು ಫ್ಲ್ಯಾಶ್ ಡ್ರೈವ್‌ಗಳನ್ನು ಸಂಪರ್ಕಪಡಿಸಲು ನಿಮಗೆ ಅನುಮತಿಸುತ್ತಿದ್ದು ನೆಟ್‌ವರ್ಕ್‌ನಾದ್ಯಂತ ಈ ಸಂಪನ್ಮೂಲಗಳನ್ನು ಹಂಚಿಕೊಳ್ಳಬಹುದು. ಸಣ್ಣ ಕಚೇರಿಗಳಿಗೆ ಇದು ಹೇಳಿಮಾಡಿಸಿರುವಂಥದ್ದಾಗಿದೆ.

3ಜಿ ಸಂಪರ್ಕ

3ಜಿ ಸಂಪರ್ಕ

ಕೆಲವೊಂದು ರೂಟರ್‌ಗಳನ್ನು 3ಜಿ ಸಂಪರ್ಕದಲ್ಲೂ ಪಡೆದುಕೊಳ್ಳಬಹುದಾಗಿದೆ. ನಿರ್ದಿಷ್ಟ ಬ್ರ್ಯಾಂಡ್‌ಗಳೊಂದಿಗೆ ಮಾತ್ರವೇ ಇದು ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ರೂಟರ್ ಖರೀದಿಸುವ ಮುನ್ನ ನೀವು ಬಳಸುವ ಡಾಂಗಲ್‌ಗೂ ಅದು ಬೆಂಬಲವನ್ನು ಒದಗಿಸುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಬಹು ಆಂಟೆನಾಗಳು

ಬಹು ಆಂಟೆನಾಗಳು

ಬಾಹ್ಯ ಆಂಟೆನಾಗಳು ನಿಮ್ಮ ರೂಟರ್‌ನ ಸಂಪೂರ್ಣ ರೇಂಜ್ ಅನ್ನು ಹೆಚ್ಚಿಸುತ್ತದೆ ಅಂತೆಯೇ ಹೆಚ್ಚಿನ ಗೋಡೆಗಳು ಅಥವಾ ಗ್ಲಾಸ್ ಡೋರ್‌ಗಳಿರುವಲ್ಲಿ ಇದು ಸೂಕ್ತ.

ಖರೀದಿಸಬಹುದಾಗಿದೆ

ಖರೀದಿಸಬಹುದಾಗಿದೆ

ADSL ರೂಟರ್ಸ್ D-Link DSL-2750U N300 (Rs 2,000): ಯುಎಸ್‌ಬಿ ಪೋರ್ಟ್‌ನೊಂದಿಗೆ ಈ ಬಜೆಟ್ ರೂಟರ್ ಬರಲಿದೆ.
TP-Link Archer C7 AC1750 (Rs 8,500): ಮೂರು ಆಂಟೆನಾಗಳು ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಇದರೊಂದಿಗೆ ನೀವು ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Need to need to set up Wi-Fi in your house that also doubles up as office space, but not sure what to consider when making the purchase? Worry not, as we list down 5 things you should check for while buying a Wi-Fi router for your home office.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot