ಮನೆಯ ವೈಫೈ ಸೌಲಭ್ಯದ ಪ್ರಬಲತೆಗಾಗಿ ಟಿಪ್ಸ್

By Shwetha
|

ನಿಮ್ಮ ನಿವಾಸದಲ್ಲಿ ವೈಫೈಯನ್ನು ಬಳಸುತ್ತಿದ್ದೀರಿ ಮತ್ತು ಅದು ಚೆನ್ನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕೊರಗು ನಿಮ್ಮಲ್ಲಿದೆಯೇ? ಇಂದಿನ ಲೇಖನದಲ್ಲಿ ನಿಮ್ಮ ನಿವಾಸದ ವೈಫೈಯನ್ನು ಉತ್ತಮಗೊಳಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಇದರಿಂದ ನಿಮ್ಮಷ್ಟಕ್ಕೆ ನಿಮಗೆ ಈ ಸಮಸ್ಯೆಗಳನ್ನು ನೀಗಿಸಿಕೊಳ್ಳಬಹುದಾಗಿದೆ.

ಓದಿರಿ: ಆಂಡ್ರಾಯ್ಡ್ ಬಳಕೆದಾರರು ಹೆಚ್ಚು ಸುಖಿಗಳು

ಸರ್ವೀಸ್ ಪ್ರೊವೈಡರ್ ಅಥವಾ ಐಟಿ ಹುಡುಗ ನಿಮ್ಮ ವೈಫೈ ರೂಟರ್ ಅನ್ನು ಹೊಂದಿಸಿದ್ದು ನೀವು ಇದು ಸರಿಯಾಗಿದೆ ಎಂದು ಭಾವಿಸಿದ್ದಲ್ಲಿ ಅದನ್ನು ಖಾತ್ರಿಪಡಿಸಿಕೊಳ್ಳುವ ಮುಂಚೆ ನಿಮ್ಮ ರೂಟರ್‌ನಲ್ಲಿರುವ ದೋಷಗಳನ್ನು ನಿಮಗೆ ಸರಿಪಡಿಸಿಕೊಳ್ಳಬಹುದಾಗಿದೆ. ಕಡಿಮೆ ಕವರೇಜ್, ವೈಫೈ ಸೆಟಪ್‌ಗೆ ಫೀಚರ್ ಅನ್ನು ಸೇರಿಸುವುದು ಮೊದಲಾದ ಸಮಸ್ಯೆಗಳಿಗೆ ಇತಿಶ್ರೀ ಹಾಡಬಹುದಾಗಿದೆ.

ರೂಟರ್ ಸ್ಥಾನ

ರೂಟರ್ ಸ್ಥಾನ

ನಿಮ್ಮ ನಿವಾಸದಲ್ಲಿ ವೈಫೈ ಕವರೇಜ್ ಸಮಸ್ಯೆ ಇದೆ ಎಂದಾದಲ್ಲಿ ರೂಟರ್ ಅನ್ನು ನಿಖರವಾದ ಸ್ಥಳದಲ್ಲಿ ಇರಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಕೇಂದ್ರ ಸ್ಥಾನ

ಕೇಂದ್ರ ಸ್ಥಾನ

ವೈಫೈ ರೂಟರ್ ಕೇಂದ್ರ ಸ್ಥಾನದಲ್ಲಿರಬೇಕು, ಗೋಡೆ, ಕನ್ನಡಿ ಮತ್ತು ಇತರ ಇಲೆಕ್ಟ್ರಿಕ್ ಉಪಕರಣಗಳಿಂದ ರೂಟರ್ ಅನ್ನು ದೂರವಿರಿಸಿ. ಇನ್ನು ರೂಟರ್ ಅನ್ನು ಕೇಂದ್ರದಲ್ಲಿರಿಸುವುದು ನಿಮ್ಮ ಮನೆಯಾದ್ಯಂತ ಕವರೇಜ್ ಅನ್ನು ಹೆಚ್ಚಿಸಬಹುದು.

ದೊಡ್ಡ ಆಂಟೆನಾಗಳನ್ನು ಖರೀದಿಸಿ

ದೊಡ್ಡ ಆಂಟೆನಾಗಳನ್ನು ಖರೀದಿಸಿ

ನಿಮ್ಮ ರೂಟರ್‌ನಲ್ಲಿ ಕಳಪೆ ಆಂಟೆನಾವನ್ನು ಬಳಸುತ್ತಾರೆ. ಸುಧಾರಿತ ಆವೃತ್ತಿಗಳೊಂದಿಗೆ ಹೆಚ್ಚಿನ ರೂಟರ್‌ಗಳಲ್ಲಿ ಡೀಫಾಲ್ಟ್ ಆಂಟೆನಾವನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

ಬೂಸ್ಟರ್ ಆಂಟೆನಾ

ಬೂಸ್ಟರ್ ಆಂಟೆನಾ

ನಿಮ್ಮ ರೂಟರ್ ಅನ್ನು ನಿಖರವಾಗಿ ಇರಿಸುವುದು ಅತಿಮುಖ್ಯ ಅಂಶವಾಗಿದೆ. ಬೂಸ್ಟರ್ ಆಂಟೆನಾವನ್ನು ಬಳಸಿಕೊಂಡು ನಿಮ್ಮ ಸಿಗ್ನಲ್ ಅನ್ನು ಹೆಚ್ಚಿಸಿಕೊಳ್ಳಿ.

ರೂಟರ್ ಸಾಫ್ಟ್‌ವೇರ್ ಸರಿಹೊಂದಿಸಿ

ರೂಟರ್ ಸಾಫ್ಟ್‌ವೇರ್ ಸರಿಹೊಂದಿಸಿ

ವೈಫೈ ಸೆಟ್ಟಿಂಗ್ಸ್ ಸರಿಯಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಟ್ರಾನ್ಸ್‌ಮಿಶನ್ ಪವರ್ ಅನ್ನು ಹೆಚ್ಚಿಸುವುದು ಕವರೇಜ್ ಪ್ರದೇಶಗಳಲ್ಲಿ ಸುಧಾರಣೆಗಳನ್ನು ತರುತ್ತದೆ.

ರಿಪೀಟರ್ಸ್ ಬಳಸಿ

ರಿಪೀಟರ್ಸ್ ಬಳಸಿ

ನಿಮ್ಮ ವೈಫೈ ಸಿಗ್ನಲ್ ಅನ್ನು ಹೆಚ್ಚಿಸುವ ವಿಧಾನವೆಂದರೆ ನಿಮ್ಮ ಮನೆಯಲ್ಲಿ ರಿಪೀಟರ್ಸ್ ಅನ್ನು ಇನ್‌ಸ್ಟಾಲ್ ಮಾಡುವುದಾಗಿದೆ. ನಿಮ್ಮ ವೈಫೈ ರೂಟರ್‌ನಿಂದ ಸಿಗ್ನಲ್ ಅನ್ನು ಪಡೆದುಕೊಂಡು ರೇಂಜ್ ಹೆಚ್ಚಿಸಲು ನೆರವಾಗುತ್ತದೆ.

ಒಂದೇ ಮಾದರಿಯ ವೈಫೈ SSID

ಒಂದೇ ಮಾದರಿಯ ವೈಫೈ SSID

ರೂಟರ್ ಮತ್ತು ರಿಪೀಟರ್ ಒಂದೇ ಮಾದರಿಯ ವೈಫೈ SSID ಹೆಸರು ಮತ್ತು ಭದ್ರತಾ ಸೆಟ್ಟಿಂಗ್‌ಗಳನ್ನು ಪಡೆದುಕೊಂಡಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಮೂರನೇ ವ್ಯಕ್ತಿ ಹ್ಯಾಕ್‌ಗಳು

ಮೂರನೇ ವ್ಯಕ್ತಿ ಹ್ಯಾಕ್‌ಗಳು

ರೂಟರ್‌ನ ಸಿಗ್ನಲ್ ಮತ್ತು ಕವರೇಜ್ ಪ್ರದೇಶವನ್ನು ಸುಧಾರಿಸಲು ಸಹಾಯ ಮಾಡುವಂತೆ ಥರ್ಡ್ ಪಾರ್ಟಿ ಹ್ಯಾಕ್‌ಗಳು ಇವೆ. ಅಲ್ಯುಮಿನಿಯಮ್ ಕ್ಯಾನ್‌ನ ಅರ್ಧ ಭಾಗದಷ್ಟು ತುಂಡು ಮಾಡಿ ಮತ್ತು ವೈಫೈ ಆಂಟೆನಾದ ಸುತ್ತಲೂ ಅದನ್ನು ಇರಿಸಿ. ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಿಗ್ನಲ್ ಅನ್ನು ದೂಡುತ್ತದೆ ಮತ್ತು ವರ್ಧಿಸುತ್ತದೆ ಸಹ.

ರೂಟರ್ ಭದ್ರತೆ

ರೂಟರ್ ಭದ್ರತೆ

ರೂಟರ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿ ನೀವು ಹೊಸಬರಾಗಿದ್ದಲ್ಲಿ, ನಿಮಗೆ ರೂಟರ್ ಐಪಿ ವಿಳಾಸ ಗೊತ್ತಿರಬೇಕು. ವೆಬ್ ಬ್ರೌಸರ್‌ನಲ್ಲಿ ರೂಟರ್ ಐಪಿ ವಿಳಾಸವನ್ನು ನೀವು ಟೈಪ್ ಮಾಡಿದ ನಂತರ ನಿಮ್ಮಲ್ಲಿ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಅನ್ನು ಇದು ಕೇಳುತ್ತದೆ.

ವೈಫೈ ಭದ್ರತೆ

ವೈಫೈ ಭದ್ರತೆ

ನಿಮ್ಮ ವೈಫೈಯನ್ನು ದುರುದ್ದೇಶಕ್ಕೆ ಇತರರು ಬಳಸಿಕೊಳ್ಳದಂತೆ ಸಂರಕ್ಷಿಸುವ ಜವಬ್ದಾರಿ ನಿಮ್ಮದಾಗಿದೆ. ವೈರ್‌ಲೆಸ್ ನೆಟ್‌ವರ್ಕ್ ವಾಚರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದು ಉಚಿತವಾಗಿದ್ದು ನೀವು ಸಂಪರ್ಕಿತಗೊಂಡಿರುವ ವೈಫೈಯನ್ನು ಸ್ಕ್ಯಾನ್ ಮಾಡುತ್ತದೆ. ನೆಟ್‌ವರ್ಕ್‌ಗೆ ಕನೆಕ್ಟ್ ಆಗಿರುವ ಎಲ್ಲಾ ಡಿವೈಸ್‌ಗಳ ಪಟ್ಟಿಯನ್ನು ಇದು ನಿಮಗೆ ನೀಡುತ್ತದೆ.

Best Mobiles in India

English summary
Most people don't bother with the Wi-Fi router -- it's typically set up by the service provider or IT guy and it remains in that state for its usable life.However, you can fix many issues like low coverage, add features to your Wi-Fi setup and stop people from stealing your Wi-Fi quite easily.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X