Home
ಟೆಕ್ ನೌಕರಿ

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

By Shwetha

ನಿಮ್ಮ ಸ್ಮಾರ್ಟ್‌ಫೋನ್ ಕಳೆದು ಹೋಗುವ ಇಲ್ಲವೇ ಕದ್ದು ಹೋಗುವ ಸಂದರ್ಭದಲ್ಲಿ ನಿಮ್ಮ ಫೋನ್‌ನ ಕಾಳಜಿಯನ್ನು ಹೇಗೆ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ಅರಿತುಕೊಳ್ಳೋಣ.

ಇದನ್ನೂ ಓದಿ: ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

ನಿಮ್ಮ ಫೋನ್‌ನ ಕಾಳಜಿಯನ್ನು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ನಡೆಸಬಹುದಾಗಿದೆ. ಆಂಡ್ರಾಯ್ಡ್ ಫೋನ್‌ನಲ್ಲಿ ಕೆಲವೊಂದು ಕಾಳಜಿಗಳನ್ನು ಅನುಸರಿಸುವ ಮೂಲಕ ಫೋನ್‌ನ ಭದ್ರತೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಅರಿತುಕೊಳ್ಳೋಣ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಹೆಚ್ಚು ಜನಪ್ರಿಯಾಗಿರುವ ಮೊಬೈಲ್ ಪ್ಲಾಟ್‌ಫಾರ್ಮ್ ಆಗಿದ್ದು ಕಸ್ಟಮೈಸೇಶನ್ ಮತ್ತು ಮಿಲಿಯಗಟ್ಟಲೆ ಇರುವ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳಿಗಾಗಿ ಹೆಚ್ಚು ಪ್ರಚಲಿತದಲ್ಲಿದೆ. ಇದು ಹೆಚ್ಚು ಹೆಚ್ಚು ಸಂಗ್ರಹಣಾ ಸಾಮರ್ಥ್ಯವನ್ನು ಫೋನ್ ಟ್ಯಾಬ್ಲೆಟ್‌ಗಳಲ್ಲಿ ಒದಗಿಸಿದಂತೆ ಉಂಟುಮಾಡುವ ಅಪಾಯ ಕೂಡ ಹೆಚ್ಚು. ಇಂದಿನ ಲೇಖನದಲ್ಲಿ ನಾವು ಚರ್ಚಿಸುವ ಫೋನ್ ಟ್ರಿಕ್‌ಗಳು ನಿಮಗೆ ಹೆಚ್ಚು ಉಪಯೋಗಕಾರಿಯಾಗಿದ್ದು ಪ್ರತಿಯೊಬ್ಬರೂ ಇದನ್ನು ಸುಲಭದಲ್ಲಿ ಅನುಸರಿಸಬಹುದಾಗಿದೆ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್‌ಗಳು ಬಳಕೆದಾರರಿಗೆ ವಿವಿಧ ರೀತಿಯ ಸ್ಕ್ರೀನ್ ಲಾಕ್‌ಗಳನ್ನು ಒದಗಿಸುತ್ತಿದ್ದು ಪ್ಯಾಟ್ರನ್, ಪಿನ್, ವಾಯ್ಸ್ ಲಾಕ್, ಫೇಸ್‌ ಲಾಕ್ ಮೊದಲಾದ ಭದ್ರತಾ ಅಳವಡಿಕೆಗಳನ್ನು ಬಳಸಿ ಫೋನ್ ಅನ್ನು ಮುಂಜಾಗ್ರತೆಯಿಂದ ಇರಿಸಬಹುದಾಗಿದೆ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಭದ್ರವಾದ ಫೋನ್ ಭದ್ರತೆಗೆ ಹೆಸರುವಾಸಿಯಾಗಿರುವ ಆಂಡ್ರಾಯ್ಡ್ ಫೋನ್‌ಗಳು ಎನ್‌ಕ್ರಿಪ್ಶನ್‌ಗೂ ಪ್ರಸಿದ್ಧವಾಗಿದೆ. ಅಂದರೆ ಮೂರನೇ ವ್ಯಕ್ತಿಯ ಕೈಗೆ ನಿಮ್ಮ ಫೋನ್ ಹೋದ ಸಂದರ್ಭದಲ್ಲಿ ಅವರಿಗೆ ನಿಮ್ಮ ಫೋನ್ ಅಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪಿನ್ ಅಥವಾ ಪಾಸ್‌ವರ್ಡ್ ಹೊರತು ಡಿವೈಸ್ ಅನ್ನು ಸ್ಪರ್ಶಿಸಲೂ ಅವರಿಗೆ ಸಾಧ್ಯವಾಗುವುದಿಲ್ಲ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ನಿಮ್ಮ ವೈಯಕ್ತಿಕ ಡಿವೈಸ್ ಅನ್ನು ಕಚೇರಿಯಲ್ಲಿ ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಕಚೇರಿಯ ಐಟಿ ಸಿಬ್ಬಂದಿಯೊಂದಿಗೆ ಚರ್ಚಿಸಿ ಮತ್ತು ಕೆಲಸಕ್ಕೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸುವಾಗ ಎಚ್ಚರಿಕೆಯಿಂದಿರಿ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ನಿಮ್ಮ ಡಿವೈಸ್ ಅನ್ನು ಕಳೆದುಕೊಂಡ ಸಂದರ್ಭದಲ್ಲಿ, ಗೂಗಲ್ ನಕ್ಷೆಯಲ್ಲಿ ನಿಮ್ಮ ಕಳೆದು ಹೋದ ಡಿವೈಸ್ ಅನ್ನು ಟ್ರ್ಯಾಕ್ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಇದನ್ನು ಸಕ್ರಿಯಗೊಳಿಸಲು ಸೆಟ್ಟಿಂಗ್ಸ್> ಸೆಕ್ಯುರಿಟಿ>ಡಿವೈಸ್ ಅಡ್‌ಮಿನಿಸ್ಟ್ರೇಶನ್ ಇದಕ್ಕೆ ಹೋಗಿ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಎಸ್‌ಡಿ ಕಾರ್ಡ್‌ನಲ್ಲಿ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಿರಿ ಇದು ಫೋನ್ ಬಳಕೆದಾರರಿಗೆ ಅಪಾಯವನ್ನುಂಟುಮಾಡಬಹುದೆಂಬುದು ಟೆಕ್ ತಜ್ಞರ ಅಭಿಪ್ರಾಯವಾಗಿದೆ. ಇನ್ನು ಇಂಟರ್ನಲ್ ಸ್ಟೋರೇಜ್ ಅನ್ನು ಬಳಸಿಕೊಂಡು ಮುಖ್ಯವಾಗಿರುವ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಪಲ್‌ನ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಲಭ್ಯವಿರುವಂತೆ ಆಂಡ್ರಾಯ್ಡ್ ಗೂಗಲ್ ಪ್ಲೇನಲ್ಲಿ ನಿಷ್ಟೆಯಿಂದ ಸಂಗ್ರಹಿಸದೇ ಇದ್ದರೂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಇದು ಸುರಕ್ಷಿತ ತಾಣವಾಗಿದೆ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ನಿಮ್ಮ ಫೋನ್‌ನಲ್ಲಿರುವ ಯಾವುದೇ ಅಪ್ಲಿಕೇಶನ್‌ಗಳಿಗೆ ಲಾಕ್ ಅನ್ನು ಬಳಸಿ. ಇದರಿಂದ ಅಪ್ಲಿಕೇಶನ್ ಅನ್ನು ಅನಗತ್ಯ ಅಗತ್ಯಗಳಿಗೆ ಬಳಸುವ ದುರುಳರ ವರ್ತನೆಗೆ ಖಡಿವಾಣ ಹಾಕಿದಂತಾಗುತ್ತದೆ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಫೋನ್ ರೂಟಿಂಗ್ ಮಾಡುವುದು ನಿಮ್ಮ ಫೋನ್‌ಗೆ ಹೆಚ್ಚಿನ ಅಪಾಯಗಳನ್ನು ಉಂಟುಮಾಡಬಹುದು. ಆದ್ದರಿಂದ ರೂಟಿಂಗ್ ಮಾಡುವುದನ್ನು ಆದಷ್ಟು ನಿಲ್ಲಿಸಿ.

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ಆಂಡ್ರಾಯ್ಡ್ ಫೋನ್ ಸುರಕ್ಷತೆಗೆ ಟಾಪ್ ಟಿಪ್ಸ್‌ಗಳು

ನಿಮ್ಮ ಫೋನ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುವುದು ಫೋನ್‌ನ ಸುರಕ್ಷತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅಪ್‌ಡೇಟ್ ಮಾಡುವುದು ನಿಮ್ಮ ಫೋನ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುತ್ತದೆ. ಇದನ್ನು ಮಾಡಲು ಸೆಟ್ಟಿಂಗ್ಸ್>ಸಿಸ್ಟಮ್ ಅಪ್‌ಡೇಟ್‌ಗಳು>ಅಬೌಟ್ ಡಿವೈಸ್ ಇಲ್ಲಿಗೆ ಹೋಗಿ.

Best Mobiles in India

English summary
There have been many incidents regarding the corruption of smartphones via malware or hackers who try to hack into smartphones to retrieve data and destroy it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+