ಸ್ಮಾರ್ಟ್‌ಫೋನ್ ಅನ್ನು ಪಳಪಳ ಹೊಳೆಯಿಸುವ ವಿಧಾನ ಗೊತ್ತೇ?

By Shwetha
|

ಟೆಕ್ ಉತ್ಪನ್ನಗಳ ಪ್ರೇಮಿಗಳೇ? ಗ್ಯಾಜೆಟ್‌ಗಳೆಂದರೆ ಅಷ್ಟು ಪ್ರೀತಿಯೇ? ನೀವು ನಿಜವಾಗಿಯೂ ಗ್ಯಾಜೆಟ್ ಪ್ರೇಮಿಗಳು ಹೌದು ಎಂದಾದಲ್ಲಿ ಅವುಗಳ ಸುರಕ್ಷತೆಯ ಕಡೆಗೂ ಗಮನ ನೀಡಬೇಕಾದ್ದು ಕರ್ತವ್ಯವಾಗಿದೆ.

ಇದನ್ನೂ ಓದಿ: ನಿಮ್ಮ ಫೋನ್‌ನ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ನಿಮ್ಮ ಬಳಿ ಇರುವ ಟೆಕ್ ಪರಿಕರಗಳಿಗೆ ಧೂಳು ಹಿಡಿಯುತ್ತದೆ ಎಂದಾದಲ್ಲಿ ಇಲ್ಲವೇ ಅವುಗಳನ್ನು ಜಾಗರೂಕತೆಯಿಂದ ತೆಗೆದಿರಿಸುವುದು ಇಲ್ಲವೇ ಸ್ವಚ್ಛಗೊಳಿಸುವುದು ಹೇಗೆ ಎಂಬುದು ತಿಳಿಯದೇ ಹೋದಲ್ಲಿ ಈ ಲೇಖನ ನಿಮಗೆ ಖಂಡಿತ ಸಹಕಾರಿಯಾಗಲಿದೆ. ಸ್ಮಾರ್ಟ್‌ಫೋನ್, ಕ್ಯಾಮೆರಾ, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಹೀಗೆ ಯಾವುದೇ ಇಲೆಕ್ಟ್ರಾನಿಕ್ ಪರಿಕರಗಳನ್ನು ಹೆಚ್ಚಾಗಿ ನೀವು ಬಳಸುತ್ತೀರಿ ಎಂದಾದಲ್ಲಿ ಅವುಗಳ ಸುರಕ್ಷತೆಯ ಕಡೆಗೂ ನೀವು ಗಮನ ನೀಡಬೇಕು. ಇಂದಿನ ಲೇಖನದಲ್ಲಿ ಈ ವಸ್ತುಗಳ ಸ್ವಚ್ಛತೆಯನ್ನು ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಸ್ಕ್ರೀನ್ ಜೆಲ್ ಸ್ಪೇ

ಸ್ಕ್ರೀನ್ ಜೆಲ್ ಸ್ಪೇ

ಆಲ್ಕೋಹಾಲ್ ರಹಿತ ಕ್ಲೀನರ್ ಇದಾಗಿದ್ದು ಪರದೆಗಳನ್ನು ಸ್ವಚ್ಛಪಡಿಸಲೆಂದೇ ವಿಶೇಷವಾಗಿ ತಯಾರಿಸಲಾಗಿದೆ.

ಡಿಸ್‌ಪೋಸೇಬಲ್ ಸ್ಕ್ರೀನ್ ವೈಪ್ಸ್

ಡಿಸ್‌ಪೋಸೇಬಲ್ ಸ್ಕ್ರೀನ್ ವೈಪ್ಸ್

ನಿಮ್ಮ ಪರ್ಸ್‌ನಲ್ಲಿ ಇರಿಸಲು ಸೂಕ್ತವಾಗಿರುವ ಇದು ನಿಮ್ಮ ಫೋನ್‌ನ ಸ್ವಚ್ಛತೆಗೆ ಸಹಕಾರಿ.

ಕ್ಯಾನ್ಡ್ ಏರ್

ಕ್ಯಾನ್ಡ್ ಏರ್

ಸಣ್ಣ ಪ್ರದೇಶಗಳಲ್ಲಿ ಧೂಳು ತೆಗೆಯಲು ಇದು ಸಹಕಾರಿ.

ಕಾಟನ್ ಪ್ಯಾಡ್ಸ್

ಕಾಟನ್ ಪ್ಯಾಡ್ಸ್

ಇದು ಮೃದುವಾದ ಸ್ವಚ್ಛತಾ ಪರಿಕರವಾಗಿದ್ದು ನೀರು ಬಳಸಿ ಈ ಹತ್ತಿಯೊಂದಿಗೆ ನಿಮ್ಮ ಉತ್ಪನ್ನಗಳನ್ನು ನೀಟಾಗಿ ಇರಿಸಬಹುದು.

ರಬ್ಬಿಂಗ್ ಆಲ್ಕೋಹಾಲ್

ರಬ್ಬಿಂಗ್ ಆಲ್ಕೋಹಾಲ್

ಇದನ್ನು ಬಳಸುವಾಗ ಹೆಚ್ಚು ಜಾಗರೂಕರಾಗಿರಬೇಕು ಅಂತೆಯೇ ಕೈಪಿಡಿಯನ್ನು ಓದಿಕೊಳ್ಳಿ.

ಮೈಕ್ರೋಫೈಬರ್ ಬಟ್ಟೆಗಳು

ಮೈಕ್ರೋಫೈಬರ್ ಬಟ್ಟೆಗಳು

ಗೆರೆಗಳನ್ನು ತಡೆಯುವ ಮೃದು ಬಟ್ಟೆಗಳು ಇವುಗಳಾಗಿದ್ದು ಮಾನಿಟರ್ ಅಂತೆಯೇ ಇತರ ಪರದೆಗಳ ಸ್ವಚ್ಛತೆಗೆ ಸಹಕಾರಿಯಾಗಿದೆ.

ಮೃದು ಬ್ರಶ್‌ಗಳು

ಮೃದು ಬ್ರಶ್‌ಗಳು

ನಿಮ್ಮ ಹಳೆಯ ಮೇಕಪ್ ಬ್ರಶ್ ಅನ್ನು ಕೂಡ ಟೆಕ್ ಪರಿಕರವನ್ನು ಸ್ವಚ್ಛಮಾಡಲು ನೆರವಾಗಿದೆ. ಕ್ಯಾಮೆರಾಗಳು ಮತ್ತು ಕೀಬೋರ್ಡ್‌ಗಳಿಗೆ ಇದು ಹೇಳಿಮಾಡಿಸಿದ್ದಾಗಿದೆ.

ಟ್ವೀಜರ್ಸ್

ಟ್ವೀಜರ್ಸ್

ಡಿವೈಸ್‌ಗಳಲ್ಲಿ ಗಾಢವಾಗಿ ಕುಳಿತಿರುವ ಧೂಳು ತೆಗೆಯಲು ಇದು ಉತ್ತಮವಾಗಿದೆ.

ಟೂತ್ ಪಿಕ್ಸ್

ಟೂತ್ ಪಿಕ್ಸ್

ನಿಮ್ಮ ಡಿವೈಸ್‌ಗಳ ಸಣ್ಣ ಸ್ಥಳಗಳನ್ನು ಸ್ವಚ್ಛಗೊಳಿಸಲು ಟೂತ್ ಪಿಕ್ಸ್ ಸಹಕಾರಿಯಾಗಿದೆ.

ಲಿಂಟ್ ರಹಿತ ಲೆನ್ಸ್ ಬಟ್ಟೆಗಳು

ಲಿಂಟ್ ರಹಿತ ಲೆನ್ಸ್ ಬಟ್ಟೆಗಳು

ಇದರಿಂದ ನಿಮ್ಮ ಕ್ಯಾಮೆರಾಗಳನ್ನು ಸ್ವಚ್ಛಗೊಳಿಸಬಹುದಾಗಿದೆ.

ಸ್ಕ್ರೀನ್ ಇರೇಸರ್ಸ್

ಸ್ಕ್ರೀನ್ ಇರೇಸರ್ಸ್

ಸ್ಕ್ರೀನ್ ಇರೇಸರ್‌ಗಳು ಕೂಡ ಟೆಕ್ ಉತ್ಪನ್ನಗಳನ್ನು ಸ್ಚಚ್ಛಗೊಳಿಸಲು ಹೇಳಿಮಾಡಿಸಿದ್ದಾಗಿದೆ.

Best Mobiles in India

English summary
The arrival of Spring ushers in my deepest desires for a thoroughly cleaned house, inside and out. Shelves and cupboards organized. Base boards and walls washed. Windows that are streak free to let in the sunshine. the technological devices every single day and might need sprucing up the most.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X