ನಿಮ್ಮ ಆಂಡ್ರಾಯ್ಡ್, ಐಫೋನ್‌ಗಳು ಅಸಲಿಯೇ/ನಕಲಿಯೇ ಪತ್ತೆ ಹೇಗೆ?
ಕಡಿಮೆ ಬಜೆಟ್‌ನ ಫೋನ್‌ಗಳನ್ನು ಖರೀದಿಸುವುದು ಹೆಚ್ಚಿನ ರೀತಿಯಲ್ಲಿ ಸಮಸ್ಯೆ ಎಂದರೆ ತಪ್ಪಾಗಲಾರದು. ಕಡಿಮೆ ಖರೀದಿ ಬೆಲೆ ಇರುವ ಪೋನ್‌ಗಳು ಹಲವು ಜನರನ್ನು ಆಕರ್ಷಿಸುತ್ತವೆ. ಆದರೆ ಅದೇ ಫೋನ್‌ಗಳು ಕಡಿಮೆ ಗುಣಮಟ್ಟದ ಅಂಶಗಳನ್ನು ಹೊಂದಿರುತ್ತವೆ ಎಂಬುದನ್ನು ಮಾತ್ರ ಮರೆಯುವ ಹಾಗಿಲ್ಲ.
ಕ್ಲೋನ್ಡ್ ಫೋನ್‌ಗಳು ಟಚ್ ಸ್ಕ್ರೀನ್ ಆದರೂ ಸಹ ಇತರೆ ಫೋನ್‌ಗಳಂತೆ ವೇಗವಾಗಿ ಕಾರ್ಯನಿರ್ವಹಿಸುವುದಿಲ್ಲ. ಪ್ರೊಸೆಸರ್ ವೇಗ ಕಡಿಮೆ, ಬ್ಯಾಟರಿ ಹೇಳಿದ ಸಾಮರ್ಥ್ಯಕ್ಕಿಂತ ಕಡಿಮೆ ಉಪಯೋಗ ನೀಡುವುದು. ವಿಶೇಷವೆಂದರೆ ಹಲವು ಆನ್‌ಲೈನ್ ಮಾರುಕಟ್ಟೆಗಳು ಇತ್ತೀಚೆಗೆ 'Refurbished Phones' ಎಂಬ ವರ್ಗ ಓಪನ್ ಮಾಡಿದ್ದು, ನವೀಕರಣಗೊಂಡ ಫೋನ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ.
ನವೀಕರಣಗೊಂಡ ಫೋನ್‌ಗಳು ಸೆಕೆಂಡ್ ಹ್ಯಾಂಡ್ ಮತ್ತು ರಿಪೇರಿ ಮಾಡಲಾದ ಫೋನ್‌ಗಳಾಗಿದ್ದು, ಇವುಗಳನ್ನು ಆನ್‌ಲೈನ್ ಮಾರುಕಟ್ಟೆಯಲ್ಲಿ ''Refurbished Phones' ವರ್ಗದಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಈ ಫೋನ್‌ಗಳನ್ನು ಖರೀದಿ ಮಾಡಿ ಬಳಸುವವರು ತಾವು ಬಳಸುತ್ತಿರುವ ಆಂಡ್ರಾಯ್ಡ್ ಮತ್ತು ಐಫೋನ್ ಒರಿಜಿನಲ್ ಫೋನ್, ಕ್ಲೋನ್ಡ್ ಅಥವಾ ನವೀಕರಣಗೊಂಡ ಫೋನ್ ಹೌದೋ/ಅಲ್ಲವೋ ಎಂದು ತಿಳಿಯಲು ಸಾಧ್ಯವೇ ಆಗುವುದಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಅದನ್ನು ಕಂಡುಹಿಡಿಯುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಕೆಳಗಿನ ಸ್ಲೈಡರ್‌ನಲ್ಲಿ ಮಾಹಿತಿ ತಿಳಿಯಿರಿ.
'ಐಫೋನ್ 8' ರೂಮರ್ಸ್: ಡಿವೈಸ್‌ನ ಅತ್ಯಾಧುನಿಕ ಫೀಚರ್‌ಗಳು ಏನು ಗೊತ್ತೇ?

ಆಂಡ್ರಾಯ್ಡ್ ಫೋನ್, ಕ್ಲೋನ್ಡ್ ಅಥವಾ ಒರಿಜಿನಲ್ ಎಂದು ಚೆಕ್ ಮಾಡಿ
ಆಂಡ್ರಾಯ್ಡ್ ಬಳಕೆದಾರರು IMEI ನಂಬರ್ ಮೂಲಕ ಸರಳವಾಗಿ ತಮ್ಮ ಡಿವೈಸ್ ಒರಿಜಿನಾಲಿಟಿಯನ್ನು ಪತ್ತೆ ಮಾಡಬಹುದು.
ಹಂತ 1: *#06# ಗೆ ಡಯಲ್ ಮಾಡಿ IMEI ನಂಬರ್ ಪಡೆಯಬಹುದು. Settings>>About Device>>Status ಗೆ ಹೋಗುವುದರ ಮುಖಾಂತರವು ಚೆಕ್ ಮಾಡಬಹುದು.
ಹಂತ 2: IMEI ನಂಬರ್ ಪಡೆದ ನಂತರ IMEI.info ಗೆ ಹೋಗಿ, ಡಯಲಾಗ್ ಬಾಕ್ಸ್‌ನಲ್ಲಿ IMEI ನಂಬರ್ ಟೈಪಿಸಿ ಚೆಕ್ ಎಂಟರ್ ಮಾಡಿ.
ಹಂತ 3; ಪ್ರದರ್ಶನವಾದ ಮಾಹಿತಿ, ನಿಮ್ಮ ಫೋನ್‌ನಲ್ಲಿರುವ ಮಾಹಿತಿ ಅಲ್ಲದೇ ಭಿನ್ನವಾಗಿದ್ದರೆ ಖಂಡಿತವಾಗಿ ಅದು ಫೇಕ್ ಡಿವೈಸ್ ಎಂದರ್ಥ.

ಐಫೋನ್ ಒರಿಜಿನಲ್ ಅಥವಾ ಡೂಪ್ಲಿಕೇಟ್ ಎಂಬುದನ್ನು ಪತ್ತೆಹಚ್ಚಿ
ಐಫೋನ್ ಅನ್ನು ಆಂಡ್ರಾಯ್ಡ್ ಒರಿಜಿನಾಲಿಟಿ ಚೆಕ್ ಮಾಡಿದ ರೀತಿಯಲ್ಲೇ ಚೆಕ್ ಮಾಡಬಹುದು.
ಹಂತ 1: ನಿಮ್ಮ ಡಿವೈಸ್ ಸೀರಿಯಲ್ ನಂಬರ್ ಅನ್ನು ಸಿಮ್ ಕಾರ್ಡ್ ಸ್ಲಾಟ್ ಮೇಲೆ ಅಥವಾ Settings>>General>>About ಗೆ ಹೋಗಿ ಚೆಕ್ ಮಾಡಿ.
ಹಂತ 2: ಸೀರಿಯಲ್ ನಂಬರ್ ಪಡೆದ ನಂತರ checkcoverage.apple.com ಗೆ ಹೋಗಿ
ಹಂತ 3: ಸೀರಿಯಲ್ ನಂಬರ್ ಮತ್ತು ವೆರಿಫಿಕೇಶನ್ ಕೋಡ್ ಅನ್ನು ಟೈಪಿಸಿ Continue ಕ್ಲಿಕ್ ಮಾಡಿ. ಹ್ಯಾಂಡ್‌ಸೆಟ್ ಫೇಕ್ ಆಗಿದ್ದಲ್ಲಿ 'invalid serial number' ಎಂದು ಮಾಹಿತಿ ನೀಡುತ್ತದೆ.

ನಿಮ್ಮ ಡಿವೈಸ್‌ಗಳು ನವೀಕರಣಗೊಂಡವೇ ಪತ್ತೆ ಹೇಗೆ?
ಹಂತ 1: ನಿಮ್ಮ ಡಿವೈಸ್‌ನಲ್ಲಿ ##786# ಗೆ ಡಯಲ್ ಮಾಡಿ
ಹಂತ 2: 'View option' ಮೇಲೆ ಕ್ಲಿಕ್ ಮಾಡಿ
ಹಂತ 3: 'View option' ಡಿವೈಸ್‌ನ ದುಸ್ಥಿತಿ ಬಗ್ಗೆ ಮಾಹಿತಿ ಪ್ರದರ್ಶನ ನೀಡುತ್ತದೆ.
ಹಂತ 4: 'Yes' ಎಂದು ತೋರಿಸಿದಲ್ಲಿ ಡಿವೈಸ್ ನವೀಕರಣಗೊಂಡಿದೆ (Refurbished) ಎಂದು ತೋರಿಸುತ್ತದೆ. ನವೀಕರಣಗೊಂಡಿರದಿದ್ದಲ್ಲಿ 'No' ಎಂದು ತೋರಿಸುತ್ತದೆ.


Click it and Unblock the Notifications








