'ಐಫೋನ್ 8' ರೂಮರ್ಸ್: ಡಿವೈಸ್‌ನ ಅತ್ಯಾಧುನಿಕ ಫೀಚರ್‌ಗಳು ಏನು ಗೊತ್ತೇ?

Written By:

ಆಪಲ್ 'ಐಫೋನ್ 7' ಶುಕ್ರವಾರ ಹಲವು ದೇಶಗಳನ್ನು ತಲುಪಿದೆ. ಆದರೆ ಭಾರತದಲ್ಲಿ ಖರೀದಿಗೆ ಇನ್ನೂ ಲಭ್ಯವಿಲ್ಲ. 'ಐಫೋನ್ 7' ಅನ್ನು ಭಾರತದಲ್ಲಿ ಅಕ್ಟೋಬರ್ 7 ರಿಂದ ಖರೀದಿಸಬಹುದು. ಆಪಲ್ ಬಗೆಗಿನ ವಿಶೇಷತೆ ಎಂದರೆ ಇನ್ನೂ ಸಹ ಹಲವು ದೇಶಗಳು 'ಐಫೋನ್ 7' ಫೋನ್‌ ಅನ್ನು ಸ್ಟೋರ್‌ಗಳಿಗೆ ಪಡೆದಿಲ್ಲ. ಆದರೆ ಈಗಾಗಲೇ 'ಐಫೋನ್ 8' ಬಗೆಗಿನ ಗಾಳಿಸುದ್ದಿ ಹರಿದಾಡುತ್ತಿದೆ.

ಆಪಲ್‌ 'ಐಫೋನ್ 7'(iphone 7) ಮತ್ತು 'ಐಫೋನ್ 7 ಪ್ಲಸ್' ಬಿಡುಗಡೆ ಮಾಡಿದ ನಂತರ ಈ ಡಿವೈಸ್‌ಗಳು ನೀರು ನಿರೋಧಕ, ಹೊಸ ಹೋಮ್‌ ಬಟನ್‌, ಅಭಿವೃದ್ದಿ ಹೊಂದಿದ ಕ್ಯಾಮೆರಾ ಜೊತೆಗೆ ಹೆಡ್‌ಫೋನ್ ಜಾಕ್‌ ಇಲ್ಲಿದಿರುವ ಫೀಚರ್ ಬಗ್ಗೆ ಮಾಹಿತಿ ನೀಡಿತ್ತು. ಈ ಮಾಹಿತಿ ಕೇಳಿದ ನಂತರದಲ್ಲಿ ಐಫೋನ್‌ ಪ್ರಿಯರಿಗೆ ಈಗಾಗಲೇ ಮುಂದಿನ ಬಹು ನಿರೀಕ್ಷಿತ ಐಫೋನ್ ಯಾವ ಫೀಚರ್‌ಗಳನ್ನು ಹೊಂದಬಹುದು ಎಂಬ ನಿರೀಕ್ಷೆ ಹೆಚ್ಚಾಗುತ್ತಿರುತ್ತದೆ.

ಅಂತೆಯೇ ಈಗಾಗಲೇ 'ಐಫೋನ್ 8' ಹೇಗಿರಬಹುದು, ಫೀಚರ್‌ಗಳು ಯಾವುದು ಎಂಬ ಬಗ್ಗೆ ಗಾಳಿಸುದ್ದಿ ಹರಿದಾಡುತ್ತಿದ್ದು, ಗಾಳಿಸುದ್ದಿ ಫೀಚರ್‌ಗಳನ್ನು ಕೆಳಗಿನ ಲೇಖನದ ಸ್ಲೈಡರ್‌ನಲ್ಲಿ ಓದಿರಿ.

'ಐಫೋನ್ 7' ರೇಜರ್ ಗೀಚು, ಬೆಂಡ್‌ ಟೆಸ್ಟ್‌ ವೀಡಿಯೊ ರಿವೀವ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಂಪೂರ್ಣ ಗಾಜಿನಲ್ಲಿ ಐಫೋನ್ 8

ಸಂಪೂರ್ಣ ಗಾಜಿನಲ್ಲಿ ಐಫೋನ್ 8

ಅಂದಹಾಗೆ ಆಪಲ್‌ ತನ್ನ ಮುಂದಿನ ಐಫೋನ್‌ಗೆ ಸಂಪೂರ್ಣ 'ಗಾಜಿನ ಕವರ್‌ ಹೊದಿಕೆ'ಗೆ ಪೇಟೆಂಟ್‌ಗಾಗಿ ಜುಲೈ 30, 2014 ರಲ್ಲಿ ಅರ್ಜಿ ಸಲ್ಲಿಸಿ 2016 ರ ಸೆಪ್ಟೆಂಬರ್ 6 ರಂದು ಅನುಮೋದನೆ ಪಡೆದಿದೆ.

ಪೇಟೆಂಟ್ ಪ್ರಕಾರ 'ಐಫೋನ್ 8' ಸಂಪೂರ್ಣವಾಗಿ ಗಾಜಿನ ಹೊದಿಕೆ ಹೊಂದಲಿದ್ದು, ರೇಡಿಯೋ ಪಾರದರ್ಶಕತೆ ಹೊಂದಿರುತ್ತದೆ. ಅಲ್ಲದೇ ಎರಡು ಗಾಜಿನ ಉದ್ಯಮಗಳು ಸೇರಿ ನೀರು ನಿರೋಧಕ ಎಲೆಕ್ಟ್ರಾನಿಕ್‌ ಡಿವೈಸ್‌ ಅನ್ನು ಅಭಿವೃದ್ದಿ ಪಡಿಸಲಾಗುತ್ತದೆ ಎನ್ನಲಾಗಿದೆ.

ಎಡ್ಜ್‌ ಟು ಎಡ್ಜ್ ಡಿಸ್‌ಪ್ಲೇ

ಎಡ್ಜ್‌ ಟು ಎಡ್ಜ್ ಡಿಸ್‌ಪ್ಲೇ

ಐಫೋನ್ 8 ಮೇಲ್ಭಾಗದಿಂದ ಕೆಳಭಾಗದವರೆಗೆ, ಅಂಚಿನ ಪಟ್ಟಿ, ಹೋಮ್‌ ಬಟನ್‌, ಸ್ಪೀಕರ್‌ ಮತ್ತು ಫ್ರಂಟ್‌ ಕ್ಯಾಮೆರಾ ಸೇರಿದಂತೆ ಎಡ್ಜ್‌ ಟು ಎಡ್ಜ್ ಡಿಸ್‌ಪ್ಲೇಯನ್ನು ಹೊಂದಲಿದೆ. ಬಳಕೆದಾರರು ವಿಶಾಲವಾದ ಸ್ಕ್ರೀನ್‌ ಅನ್ನು ವರ್ಕ್‌ ಮಾಡಲು ಪಡೆಯಬಹುದು.

10-ನ್ಯಾನೋಮೀಟರ್ A11 ಚಿಪ್

10-ನ್ಯಾನೋಮೀಟರ್ A11 ಚಿಪ್

ಈ ಹಿಂದಿನ ಐಫೋನ್ 6S A8 ಪ್ರೊಸೆಸರ್‌ನಿಂದ ಆಕರ್ಷಕವಾಗಿತ್ತು, ಹಾಗೆ ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ ಡಿವೈಸ್‌ಗಳು A10 ಫ್ಯೂಷನ್ ಚಿಪ್ ಫೀಚರ್‌ ಹೊಂದಿವೆ. ಮುಂಬರು ಐಫೋನ್ 8 ಮಾಡೆಲ್‌ 10-ನ್ಯಾನೋಮೀಟರ್ A11 ಚಿಪ್ ಹೊಂದುವ ನಿರೀಕ್ಷೆಯಿದೆ ಎನ್ನಲಾಗಿದೆ.

ವೈರ್‌ಲೆಸ್‌ ಚಾರ್ಜಿಂಗ್‌

ವೈರ್‌ಲೆಸ್‌ ಚಾರ್ಜಿಂಗ್‌

ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ ಡಿವೈಸ್‌ಗಳಿಂದ ಹೆಡ್‌ಫೋನ್‌ ಜಾಕ್‌ ಇರುವುದಿಲ್ಲ. ಹಾಗೂ ಏನಾದರೂ ಲೈಟಿಂಗ್‌ ಪೋರ್ಟ್‌ಗೆ ವೈರ್‌ ಹೆಡ್‌ಫೋನ್ಸ್ ಇನ್‌ಸರ್ಟ್‌ ಮಾಡಿದಲ್ಲಿ ಏಕಕಾಲದಲ್ಲಿ ಫೋನ್‌ ಚಾರ್ಜ್‌ ಮಾಡಲು ಆಗುವುದಿಲ್ಲ. ಐಫೋನ್ 8 ಬಗ್ಗೆ ಹರಿದಾಡುತ್ತಿರುವ ವದಂತಿಗಳ ಪ್ರಕಾರ, ಡಿವೈಸ್ ಯಾವುದೇ ವೈರ್‌ಗಳಿಲ್ಲದೇ ಚಾರ್ಜ್‌ ಆಗುತ್ತದೆ.

'ಸ್ಯಾಮ್‌ಸಂಗ್‌ ಗ್ಯಾಲಕ್ಸಿ S6' ಚಾರ್ಜಿಂಗ್‌ ಪ್ಯಾಡ್‌ ಮೇಲೆ ಇಡುವುದರಿಂದ ಚಾರ್ಜ್‌ ಆಗುತ್ತದೆ, ಆದರೆ ಐಫೋನ್ 8 ಡಿವೈಸ್‌ನ ವೈರ್‌ಲೆಸ್‌ ಚಾರ್ಜಿಂಗ್ ಟೆಕ್ನಾಲಜಿಯು ಗಾಳಿಯಿಂದ ಚಾರ್ಜ್‌ ಆಗಲಿದೆ.

ಡಿಜಿಟಲ್‌ ಕ್ರೌನ್‌

ಡಿಜಿಟಲ್‌ ಕ್ರೌನ್‌

ಐಫೋನ್ 8'ನ ಮತ್ತೊಂದು ಆಸಕ್ತದಾಯಕ ವದಂತಿ ಎಂದರೇ ಡಿವೈಸ್‌ ಡಿಜಿಟಲ್‌ ಕ್ರೌನ್ ಹೊಂದಲಿದೆ ಎಂಬುದು. ಡಿಜಿಟಲ್‌ ಕ್ರೌನ್ ಫೀಚರ್ ಹೇಗೆ ವರ್ಕ್‌ ಆಗುತ್ತದೆ ಎಂಬುದನ್ನು ಪ್ರದರ್ಶಿಸಲು ಈಗಾಗಲೇ 3D ವಿನ್ಯಾಸಕಾರರೊಬ್ಬರು ವೀಡಿಯೊ ರಚಿಸಿದ್ದಾರೆ.

ಸಿರಾಮಿಕ್‌ ಐಫೋನ್

ಸಿರಾಮಿಕ್‌ ಐಫೋನ್

ಆಪಲ್‌ ಎರಡು ಸೀರೀಸ್‌ನ ಸಿರಾಮಿಕ್ ವಾಚ್‌ ಬಿಡುಗಡೆ ಮಾಡಿದ ನಂತರ, ಈಗ ಸಿರಾಮಿಕ್ ಐಫೋನ್ ಅನ್ನು ಪರಿಚಯಿಸಲಿದೆಯಂತೆ. ಮ್ಯಾಕ್ಸ್‌ನ ಕಲ್ಟ್ 'ಕಿಲ್ಲಿಯನ್‌ ಬೆಲ್‌'ರವರು "ನಾಲ್ಕು ಪಟ್ಟು ಸ್ಟೀಲ್ ಕಠಿಣತೆಗಿಂತ, ಒಂದು ಬಾರಿಯ ಸಿರಾಮಿಕ್‌ ಮುಂದಿನ ಜೆನೆರೇಷನ್‌ ಐಫೋನ್‌ಗೆ ಮಾದರಿ ವಸ್ತುವಾಗಿದೆ ಎಂದಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Forget the iPhone 7, the iPhone 8 rumors have already arrived. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot