ಯೂಟ್ಯೂಬ್ ವಿಡಿಯೊ ಡೌನ್‌ಲೋಡ್ ಮಾಡಲು ಯಾವ ಆಪ್ ಬೆಸ್ಟ್ ಗೊತ್ತಾ?
ಗೂಗಲ್ ಮಾಲೀಕತ್ವದ ಯೂಟ್ಯೂಬ್ ಪ್ಲಾಟ್‌ಫಾರ್ಮ್ ಎಲ್ಲ ಬಗೆಯ ವಿಡಿಯೊ ಕಂಟೆಂಟ್ ವೀಕ್ಷಣೆಗೆ ಅತ್ಯುತ್ತಮ ತಾಣವಾಗಿ ಗುರುತಿಸಿಕೊಂಡಿದೆ. ಸದ್ಯ ಹಲವು OTT ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಇದ್ದರೂ, ಯೂಟ್ಯೂಬ್ ಇಂದಿಗೂ ಜನಪ್ರಿಯ ಹಂತವನ್ನು ಉಳಿಸಿಕೊಂಡಿದೆ. ಬಳಕೆದಾರರು ಯೂಟ್ಯೂಬ್ ನಲ್ಲಿ ವಿಡಿಯೊಗಳನ್ನು ನೋಡುವ ಜೊತೆಗೆ ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ.

ಹೌದು, ಯೂಟ್ಯೂಬ್ ಪ್ಲಾಟ್‌ಫಾರ್ಮ್ ನಲ್ಲಿ ವಿಡಿಯೊಗಳನ್ನು ವೀಕ್ಷಣೆ ಮಾಡುವ ಜೊತೆಗೆ ಬೇಕಾದ ವಿಡಿಯೊವನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ವಿಡಿಯೊ ಡೌನ್‌ಲೋಡ್ ಮಾಡಲು ಹಲವು ಮಾರ್ಗಗಳಿದ್ದು, ಅವುಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು ಉತ್ತಮ ಎಂದೆನಿಸಿಕೊಂಡಿವೆ. ಹಾಗಾದರೇ ಯೂಟ್ಯೂಬ್ ವಿಡಿಯೊಗಳನ್ನು ಅತೀ ಸುಲಭವಾಗಿ ಡೌನ್‌ಲೋಡ್ ಮಾಡಲು ಯಾವ ಆಪ್‌ಗಳು ಬೆಸ್ಟ್ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

KeepVid ಆಪ್
ಈ ಆಪ್ ಸಹ ವಿಡಿಯೊ ಡೌನ್‌ಲೋಡ್ ಮಾಡಲು ಬೆಸ್ಟ್ ಆಗಿದ್ದು, ವಿಡಿಯೊಗಳನ್ನು ವೇಗವಾಗಿ ಡೌನ್‌ಲೋಡ್ ಮಾಡಲು ಬೆಂಬಲ ನೀಡುತ್ತದೆ. ಇತರೆ ಸಾಮಾಜಿಕ ತಾಣಗಳ ವಿಡಿಯೊಗಳನ್ನು ಸಹ ಡೌನ್‌ಲೋಡ್ ಮಾಡಲು ಈ ಆಪ್ ಸಫೋರ್ಟ್ ಮಾಡುತ್ತದೆ. ಎಂಪಿ3, ಎಂಪಿ4 ಫಾರ್ಮೇಟ್ ಆಯ್ಕೆಗಳು ಸಹ ಇವೆ.

Snaptube ಆಪ್
ಸ್ನ್ಯಾಪ್‌ಟ್ಯೂಬ್ ಆಪ್ ಬಳಕೆದಾರ ಸ್ನೇಹಿ ಅನಿಸಲಿದ್ದು, ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಹ ಉತ್ತಮ ಅನಿಸಲಿದೆ. ಕೇವಲ ಯೂಟ್ಯೂಬ್ ಮಾತ್ರವಲ್ಲದೇ ಜನಪ್ರಿಯ ಸಾಮಾಜಿಕ ಜಾಲತಾಣಗಳ ವಿಡಿಯೊಗಳನ್ನು ಸಹ ಡೌನ್‌ಲೋಡ್ ಮಾಡಲು ನೆರವು ನೀಡಲಿದೆ.

Videoder ಆಪ್
ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಲು Videoder ಅಪ್ಲಿಕೇಶನ್ ಒಂದು ಉತ್ತಮ ತಾಣವಾಗಿದೆ. ಹಾಗೆಯೇ ಈ ಆಪ್ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಸೇರಿದಂತೆ ಇತರೆ ಸೋಶಿಯಲದ ತಾಣಗಳಲ್ಲಿನ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಹಕಾರಿಯಾಗಿದೆ.

InsTube ಆಪ್
ಇನ್ಸ್‌ಟ್ಯೂಬ್ ಸಹ ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಒಂದು ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಫಾಸ್ಟ್ ಡೌನ್‌ಲೋಡ್ ಆಯ್ಕೆಯು ಈ ಆಪ್‌ನಲ್ಲಿ ಕಾಣಿಸಿಲಿದೆ. ಅದರೊಂದಿಗೆ ಸಾಕಷ್ಟು ಹೊಸ ಆಯ್ಕೆಗಳು ಸಹ ಈ ಆಪ್‌ನಲ್ಲಿ ಕಾಣಬಹುದಾಗಿದೆ.

TubeMate ಆಪ್
ಟ್ಯೂಬ್‌ಮೇಟ್ ಆಪ್ ಸಹ ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಫೋರ್ಟ್ ಮಾಡುತ್ತದೆ. ಡೌನ್‌ಲೋಡ್ ಮಾಡುವಾಗ ವಿಡಿಯೊ ಕ್ವಾಲಿಟಿ ಮತ್ತು ಯಾವ ಫಾರ್ಮೇಟ್‌ನಲ್ಲಿ ಬೇಕು ಎನ್ನುವ ಆಯ್ಕೆಗಳು ಕಾಣಿಸುತ್ತವೆ.


Click it and Unblock the Notifications








