ಕಂಪ್ಯೂಟರ್‌ನಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ಬ್ಲಾಕ್‌ ಹೇಗೆ?

By Suneel
|

ಕಂಪ್ಯೂಟರ್‌ಯುಗ ಪ್ರಾರಂಭವಾದಾಗಿನಿಂದಲೂ ಇಂದು ಮನೆಗಳಲ್ಲೂ ಕಂಪ್ಯೂಟರ್‌ ಬಳಸುತ್ತಿದ್ದಾರೆ. ಅಲ್ಲದೇ ಬಹುಸಂಖ್ಯಾತ ಪೋಷಕರು ಇಂದು ತಮ್ಮ ಮಕ್ಕಳ ಶಿಕ್ಷಣದ ಅಭಿವೃದ್ದಿಯ ಬೆಳವಣಿಗೆಯನ್ನು ಹೆಚ್ಚು ಮಾಡಲು ಅವರಿಗೂ ಸಹ ಒಂದು ಕಂಪ್ಯೂಟರ್‌ ಅನ್ನು ನೀಡುತ್ತಿದ್ದಾರೆ. ಆದರೆ ಅಂತಹ ಫೊಷಕರು ಇಂದು ಎಚ್ಚರ ವಹಿಸಬೇಕಾಗಿದೆ. ಅವರಿಗೆ ಹೇಳುವ ಕಿವಿಮಾತೆಂದರೆ ಇಂದು ಮಕ್ಕಳು ಹಲವು ವೇಳೆ ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಅಥವಾ ಹಿಂಸಾತ್ಮಕ ವೀಡಿಯೋಗಳನ್ನು ನೋಡುವಲ್ಲಿ ತೊಡಗಬಹುದು. ಇದರಿಂದ ನೀವು ತಿಳಿದ ಹಾಗೆ ನಿಮ್ಮ ಮಕ್ಕಳ ಭವಿಷ್ಯದಲ್ಲಿ ಏಳಿಗೆ ಕುಂಟಿತಗೊಳ್ಳಬಹುದು. ಆದ್ದರಿಂದ ನೀವೆ ಕಂಪ್ಯೂಟರ್‌ಗಳಲ್ಲಿ ಅಶ್ಲೀಲ ಸೈಟ್‌ಗಳು ಮತ್ತು ಹಿಂಸಾತ್ಮಕ ಸೈಟ್‌ಗಳು ಓಪೆನ್‌ ಆಗದಂತೆ ಬ್ಲಾಕ್‌ ಮಾಡಿ.

ಓದಿರಿ: ಮನೆಯಲ್ಲಿ ವೈಫೈ ಬಳಕೆ: ಪಾಲಿಸಲೇ ಬೇಕಾದ ನಿಯಮಗಳು

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಕಂಪ್ಯೂಟರ್‌ಗಳಲ್ಲಿ ಅಶ್ಲೀಲ ವೆಬ್‌ಸೈಟ್‌ಗಳು ಹಾಗೂ ಹಿಂಸಾತ್ಮಕ ವೆಬ್‌ಸೈಟ್‌ಗಳು ಓಪೆನ್‌ ಆಗದಂತೆ ಅಂತಹ ಸೈಟ್‌ಗಳನ್ನು ಬ್ಲಾಕ್‌ ಮಾಡುವ ಸರಳ ವಿಧಾನವನ್ನು ತಿಳಿಸುತ್ತಿದೆ. ಮಾಹಿತಿಯನ್ನು ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಗೂಗಲ್‌ ಸರ್ಚ್‌

ಗೂಗಲ್‌ ಸರ್ಚ್‌

ಗೂಗಲ್‌ ಸರ್ಚ್‌ನಲ್ಲಿ ಅಸಂಬದ್ದ ಚಿತ್ರಗಳು, ಫೋಟೋಗಳನ್ನು ಹಾಗೂ ಹಿಂಸಾತ್ಮಕ ಮತ್ತು ಅಶ್ಲೀಲ ಚಿತ್ರಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಬ್ಲಾಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮೊಜಿಲ್ಲಾ ಫೈಯರ್‌ಫಾಕ್ಸ್‌

ಮೊಜಿಲ್ಲಾ ಫೈಯರ್‌ಫಾಕ್ಸ್‌

ಮೊಜಿಲ್ಲಾ ಫೈಯರ್‌ ಫಾಕ್ಸ್‌ ಸಹ ಫೋಷಕರು ಅಶ್ಲೀಲ ಚಿತ್ರಗಳು ಹಾಗೂ ವೀಡಿಯೋಗಳನ್ನು ಬ್ಲಾಕ್‌ ಮಾಡಲು ಅವಕಾಶ ನೀಡುತ್ತದೆ. ಮೊಜಿಲ್ಲಾ ಫೈಯರ್‌ಫಾಕ್ಸ್‌ ವೆಬ್‌ ಬ್ರೌಸರ್‌ನಲ್ಲಿ ಬ್ಲಾಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಇಂಟರ್ನೆಟ್‌ ಎಕ್ಸ್‌ಫ್ಲೋರ್‌

ಇಂಟರ್ನೆಟ್‌ ಎಕ್ಸ್‌ಫ್ಲೋರ್‌

ಇಂಟರ್ನೆಟ್‌ ಎಕ್ಸ್‌ಫ್ಲೋರ್‌ನಲ್ಲಿ ಅಶ್ಲೀಲ ಮತ್ತು ಹಿಂಸಾತ್ಮಕ ವಿಷಯಗಳನ್ನು ಬ್ಲಾಕ್ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ.
ಇಂಟರ್ನೆಟ್‌ ಎಕ್ಸ್‌ಫ್ಲೋರ್‌ ಓಪೆನ್‌ ಮಾಡಿ
ಟೂಲ್ಸ್‌ಗೆ ಹೋಗಿ>>ಇಂಟರ್ನೆಟ್‌ ಆಪ್‌ಶನ್‌>>ಕಂಟೆಂಟ್‌- ಅಲ್ಲಿ ರೇಟಿಂಗ್ಸ್‌ ಬಳಸಿ ಕಂಟೆಂಟ್‌ ಅಡ್ವೈಸರ್‌ ಅನ್ನು ಎನೇಬಲ್‌ ಮಾಡಿ. language, nudity, sex, violence ಗಳನ್ನು ರೇಟಿಂಗ್‌ ಲೆವೆಲ್ಸ್‌ನಿಂದ ಸೆಟ್‌ ಮಾಡಿ.

ಮೈಕ್ರೋಸಾಫ್ಟ್ ಫ್ಯಾಮಿಲಿ ಸೇಫ್ಟಿ

ಮೈಕ್ರೋಸಾಫ್ಟ್ ಫ್ಯಾಮಿಲಿ ಸೇಫ್ಟಿ

ಮೈಕ್ರೋಸಾಫ್ಟ್‌ ಫ್ಯಾಮಿಲಿ ಸೇಫ್ಟಿಯು ಫೋಷಕರು ನಿಯಂತ್ರಿಸ ಬಹುದಾದ ಉಚಿತ ಸಾಫ್ಟ್‌ವೇರ್‌. ಇದರಿಂದ ಬೇಡವಾದ ಸೈಟ್‌ಗಳನ್ನು ಬ್ಲಾಕ್‌ ಮಾಡಬಹುದು. ಬ್ಲಾಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಲು.

ಫ್ಯಾಮಿಲಿಶೀಲ್ಡ್‌ ಸಾಫ್ಟ್‌ವೇರ್‌

ಫ್ಯಾಮಿಲಿಶೀಲ್ಡ್‌ ಸಾಫ್ಟ್‌ವೇರ್‌

ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಬದಲು ಇನ್ನು ಸರಳವಾದ ಮಾರ್ಗ ಬೇಕಾದಲ್ಲಿ ನಿಮ್ಮ ಮಕ್ಕಳ ಕಂಪ್ಯೂಟರ್‌ಗೆ ಫ್ಯಾಮಿಲಿಶೀಲ್ಡ್‌ ಸಾಫ್ಟ್‌ವೇರ್‌ ಇನ್ಸ್ಟಾಲ್‌ ಮಾಡಿ. ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Best Mobiles in India

English summary
If you want to protect your kids from seeing adult content or violent sites, then this post will give you all the methods to block such sites from your kids computer. Read on to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X