ಯೂಟ್ಯೂಬ್ ಬಳಸುವವರು ಕಡ್ಡಾಯವಾಗಿ ತಿಳಿದಿರಲೇಬೇಕಾದ ಫೀಚರ್‌ಗಳಿವು!
ಯೂಟ್ಯೂಬ್ ಬಳಸುವವರು ಕಡ್ಡಾಯವಾಗಿ ತಮ್ಮ ಮೊಬೈಲ್ ಡಾಟಾ ಕಡಿಮೆ ಮಾಡಿಕೊಳ್ಳಲು ಮತ್ತು ಉತ್ತಮ ಅನುಭವಕ್ಕಾಗಿ ತಿಳಿದಿರಲೇ ಬೇಕಾದ ಫೀಚರ್‌ಗಳು ಯಾವುವು ಎಂದು ತಿಳಿಯಿರಿ.
ಸಣ್ಣವರು, ದೊಡ್ಡವರು, ಇಂಟರ್ನೆಟ್ ಇದ್ರೆ ಮಿಸ್ ಮಾಡದೇ ನೋಡುವವರು. ಖಂಡಿತ ಉಚಿತ ಸಿನಿಮಾಗಳು, ಶೀಘ್ರವಾಗಿ HD ವೀಡಿಯೋಗಳನ್ನು ಮತ್ತು ಇತರೆ ಹೆಚ್ಚಿನ ಮನರಂಜನಾತ್ಮಕ ಫೀಚರ್‌ಗಳನ್ನು ಯೂಟ್ಯೂಬ್‌ನಲ್ಲಿ ನೋಡಿರುತ್ತೀರಿ. ಆಗಾಗ ಕ್ಲಿಕ್ ಮಾಡುತ್ತಿದ್ದರೇ ಹೊಸ ಹೊಸ ಲೇಟೆಸ್ಟ್ ವೀಡಿಯೊಗಳಿಗೆ ಯೂಟ್ಯೂಬ್‌ನಲ್ಲಿ ಬರವಿಲ್ಲ.
ಯೂಟ್ಯೂಬ್ ಖಾತೆ ಒಂದಿದ್ದರೆ ಸಾಕು ಜೇಬು ತುಂಬಾ ದುಡ್ಡು
ಅಂದಹಾಗೆ ಯೂಟ್ಯೂಬ್ ಆಪ್(YouTube) ಬಳಸುವ ಬಹುಸಂಖ್ಯಾತರು ಸ್ಟ್ರೈಟ್‌ಫಾರ್ವರ್ಡ್ ಯೂಟ್ಯೂಬ್'ನಲ್ಲಿನ ಹಲವು ಫೀಚರ್‌ಗಳನ್ನು ಇನ್ನೂ ಪತ್ತೆ ಮಾಡಿಲ್ಲ. ಇನ್ನೂ ಸಹ ಬಳಸಲು ಆರಂಭಿಸದ ಹಲವು ಇಂಟರೆಸ್ಟಿಂಗ್ ಆಫ್‌ಗಳು ಮತ್ತು ಅವುಗಳ ಟ್ರಿಕ್ಸ್‌ಗಳನ್ನು ಇಂದಿನ ಲೇಖನದಲ್ಲಿ ಬಳಕೆದಾರರಿಗೆ ತಿಳಿಸುತ್ತಿದ್ದೇವೆ. ಮಿಸ್ ಮಾಡದೇ ಒಮ್ಮೆ ಓದಿ ತಿಳಿದುಕೊಳ್ಳಿ.
ಬ್ಲಾಕ್ ಮಾಡಿದ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?

ಯೂಸೇಜ್ ಲಿಮಿಟ್ ಮಾಡಿ ಮೊಬೈಲ್ ಡಾಟಾ ಸೇವ್ ಮಾಡಿ
ಯೂಟ್ಯೂಬ್ ವೀಡಿಯೊ ಸ್ಟ್ರೀಮಿಂಗ್ ಮಾಡುವುದರಿಂದ ಹೆಚ್ಚು ಡಾಟಾ ಖಾಲಿಯಾಗುವುದರ ಜೊತೆಗೆ ಬಿಲ್ ಸಹ ಹೆಚ್ಚಾಗುತ್ತದೆ. ಆದರೆ ಕಂಪನಿ ಈಗ ಡಾಟಾ ಉಳಿಸಲು ಸಹಾಯಕ ಫೀಚರ್ ಅಭಿವೃದ್ದಿಪಡಿಸಿದೆ. ಸೆಟ್ಟಿಂಗ್‌ನಲ್ಲಿ 'Limit Mobile Data Usage' ಆಪ್ಶನ್‌ನೊಂದಿಗೆ ಯೂಟ್ಯೂಬ್ ವೀಡಿಯೊವನ್ನು ಸೇವ್ ಮಾಡಿ, ವೈಫೈ ನೆಟ್‌ವರ್ಕ್‌ನಲ್ಲಿ ಪ್ಲೇ ಆಗುವಂತೆ ಆಯ್ಕೆ ಮಾಡಬಹುದು. ಈ ರೀತಿಯಲ್ಲಿ ಡಾಟಾ ಬಳಕೆ ಕಡಿಮೆ ಮಾಡಬಹುದು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೀಡಿಯೊ ರೆಸಲ್ಯೂಶನ್ ಬದಲಿಸಿ
ಸಾಮಾನ್ಯವಾಗಿ ವೀಡಿಯೊ ಗುಣಮಟ್ಟ ಕಡಿಮೆ ಮಾಡುವುದು ಯೂಟ್ಯೂಬ್‌ನಲ್ಲಿ ಬಹಳ ಸುಲಭ. ಆದರೆ ನೀವು ಅಂದಕೊಂಡಹಾಗೆ ವೀಡಿಯೊದ ಎಲ್ಲಾ ಗುಣಮಟ್ಟವನ್ನು ಲಾಕ್ ಮಾಡಲು ಸಾಧ್ಯವಿಲ್ಲ. ವೀಡಿಯೊ URL ಮುಂದೆ ಕೆಲವು ಕೋಡ್‌ಗಳ ಮೂಲಕ ಗುಣಮಟ್ಟ ಲಾಕ್ ಮಾಡಬಹುದು. ಉದಾಹರಣೆಗೆ 'fmt=18' URL ಮುಂದೆ ಟೈಪಿಸಿ ಸ್ಟೀರಿಯೊ ಸೌಂಡ್ ಮತ್ತು 480*270 ರೆಸಲ್ಯೂಶನ್ ಪಡೆಯಿರಿ. '&fmt=22' ಎಂದು URL ಮುಂದೆ ಟೈಪಿಸಿ 1280*720 ರೆಸಲ್ಯೂಶನ್ ಅನ್ನು HD ಗುಣಮಟ್ಟದಲ್ಲಿ ಪಡೆಯಿರಿ.

ಲೇಟಾಗಿ ನೋಡಲು ಆಡ್ ಮಾಡಿ
'Add to Watch Later' ಆಪ್ಶನ್ ನೀವು ಯೂಟ್ಯೂಬ್ ಮೆನು ಬಾರ್ ಕ್ಲಿಕ್ ಮಾಡಿದಾಗ ಪ್ರದರ್ಶನವಾಗುತ್ತದೆ. ಈ ಆಪ್ಶನ್ ಕ್ಲಿಕ್ ಮಾಡಿದರೆ ವೀಡಿಯೊ ಇಲ್ಲಿಗೆ ಆಡ್ ಆಗುತ್ತದೆ. ನಂತರ ಯಾವಾಗಲಾದರೂ ಇಲ್ಲಿಗೆ ಬಂದು ಆಡ್ ಆದ ವೀಡಿಯೊ ನೋಡಬಹುದು. ಈ ಆಪ್ಶನ್ ಅನ್ನು ಆಪ್‌ನಲ್ಲಿ ಮಾತ್ರವಲ್ಲದೇ, ಡೆಸ್ಕ್‌ಟಾಪ್‌ನಲ್ಲಿಯೂ ಸಹ ಪಡೆಯಬಹುದು.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾಹಿರಾತು ರಹಿತವಾಗಿ ವೀಡಿಯೊ ಡೌನ್‌ಲೋಡ್ ಮಾಡಿರಿ
ಇದಕ್ಕೆ ಸ್ವಲ್ಪ ಹಣ ವೆಚ್ಚವಾಗಬಹುದು. ಯೂಟ್ಯೂಬ್ ಮ್ಯೂಸಿಕ್ ಕೀ ತಿಂಗಳ ಸಬ್‌ಸ್ಕ್ರಿಪ್ಶನ್ ಸರ್ವೀಸ್ ಆಗಿದ್ದು, ಯಾವುದೇ ಜಾಹಿರಾತು ಇಲ್ಲದೇ ಹೆಚ್ಚಿನ ಮ್ಯೂಸಿಕ್ ವೀಡಿಯೊಗಳನ್ನು ತೋರಿಸುತ್ತದೆ. ಅಲ್ಲದೇ ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗೆ ಡೌನ್‌ಲೋಡ್ ಸಹ ಮಾಡಬಹುದು.
ಅಂದಹಾಗೆ ಯೂಟ್ಯೂಬ್ ವೀಡಿಯೊಗಳನ್ನು ಯಾವುದೇ ಸಬ್‌ಸ್ಕ್ರಿಪ್ಶನ್ ಇಲ್ಲದೇ ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಉಚಿತವಾಗಿ ಡೌನ್‌ಲೋಡ್ ಮಾಡಲು www. ಮತ್ತು Youtube ನಡುವೆ ss ಎಂದು ಟೈಪಿಸಿ ಎಂಟರ್ ಮಾಡಿ. ನಂತರ ವೀಡಿಯೊ ಡೌನ್‌ಲೋಡ್‌ನ ಇನ್ನೊಂದು ಪೇಜ್ ಓಪನ್ ಆಗುತ್ತದೆ.

360 ಡಿಗ್ರಿ ಟಿವಿ ನೋಡಿ
ಕಳೆದ ದಶಕಕ್ಕೆ ಹೋಲಿಸಿದರೆ ಯೂಟ್ಯೂಬ್ ಹಲವು ಅಭಿವೃದ್ದಿಗಳನ್ನು ಹೊಂದಿದೆ. ಈ ಬೆಳವಣಿಗೆಯಲ್ಲಿ 360 ಡಿಗ್ರಿ ವೀಡಿಯೊಗಳು ಸಹ ಒಂದಾಗಿದೆ. ಯೂಟ್ಯೂಬ್ ಆಪ್ ಮೆನುವಿನಲ್ಲಿ ನೀವು ವೀಡಿಯೊಗಳನ್ನು 360 ಡಿಗ್ರಿ ಆಗಿ ತಿರುಗಿಸುತ್ತಾ ವಿವಿಧ ಆಂಗಲ್‌ಗಳಲ್ಲಿ ನೋಡಬಹುದು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








