ಆನ್‌ಲೈನ್‌ಲ್ಲಿ ಖರ್ಚಿ‌ಲ್ಲದೇ ಕಲಿಯುವುದು ಹೇಗೆ?

Posted By:

ಇಂಟರ್‌ನೆಟ್‌ ಬಂದ ಮೇಲೆ ನಮ್ಮ ಕಲಿಯುವ ಕ್ರಮವೇ ಬದಲಾಗಿದೆ. ಯಾವುದೇ ವಿಚಾರ ಗೊತ್ತಿಲ್ಲದ್ದಿದ್ದರೂ ಇಂಟರ್‌ನೆಟ್‌ಗೆ ಹೋಗಿ ಮಾಹಿತಿ ಪಡೆಯಬಹುದಾಗಿದೆ.ಕಲಿಯುವ ಮನಸ್ಸಿದ್ದರೆ ಮತ್ತು ಇಂಟರ್‌ನೆಟ್‌ನಲ್ಲಿ ಮಾಹಿತಿ ಹುಡುಕುವ ಕಲೆ ಗೊತ್ತಿದ್ದರೆ ಆಯ್ತು ಕ್ಷಣದಲ್ಲೇ ನಮಗೆ ಬೇಕಾದ ಮಾಹಿತಿ ನಮ್ಮ ಕಂಪ್ಯೂಟರ್‌ ಸ್ಕ್ರೀನ್‌ ಕಾಣುತ್ತಿರುತ್ತದೆ.

ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಒಂದೇ ವಿಚಾರಕ್ಕೆ ಸಂಬಂಧಿಸಿದ ಅನೇಕ ವೆಬ್‌ಸೈಟ್‌‌ಗಳಿವೆ. ಇದರಲ್ಲಿ ನಮಗೆ ಬೇಕಾದ ಮಾಹಿತಿ ಆ ವೆಬ್‌ಸೈಟ್‌ನಲ್ಲಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ಇದರಿಂದಾಗಿ ಸಾಕಷ್ಟು ಸಮಯವನ್ನು ಗೊತ್ತಿಲ್ಲದ ವೆಬ್‌ಸೈಟ್‌ನ್ನು ಹುಡುಕಿ ಹಾಳು ಮಾಡುತ್ತಿದ್ದೇವೆ.ಹೀಗಾಗಿ ಇಲ್ಲಿ ಆನ್‌ಲೈನ್‌‌ನಲ್ಲಿ ನೃತ್ಯ,ಭಾಷೆ,ಶಿಕ್ಷಣ,ಫೋಟೋಗ್ರಫಿ, ಅಡುಗೆ ವಿಚಾರಗಳಿಗೆ ಸರಿಯಾದ ಮಾಹಿತಿ ನೀಡಬಲ್ಲ ವೆಬ್‌ಸೈಟ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಫೋಟೋಗ್ರಫಿ

ಫೋಟೋಗ್ರಫಿ

ಆನ್‌ಲೈನ್‌ಲ್ಲಿ ಉಚಿತವಾಗಿ ಮಾಹಿತಿ ಪಡೆಯಿರಿ

ಫೋಟೋಗ್ರಫಿ ಆಸಕ್ತರಿಗಾಗಿ ಇಂಟರ್‌ನೆಟ್‌ನಲ್ಲಿ ವಿಶೇಷವಾದ ವೆಬ್‌ಸೈಟ್‌‌ಗಳಿವೆ.photo.net ಮತ್ತು dpreview.comಗೆ ಭೇಟಿ ನೀಡಿ ಫೋಟೋಗ್ರಫಿ. ಕ್ಯಾಮೆರಾ,ಲೆನ್ಸ್‌ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

ಇನ್ನೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಲ್ಲಿ ಫೋಟೋಗ್ರಫಿ ಬಗ್ಗೆ ಮಾಹಿತಿ ತಿಳಿದುಕೊಳ್ಳಲು Photography Tutorials ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

 ಹೊಸ ಭಾಷೆ

ಹೊಸ ಭಾಷೆ

ಆನ್‌ಲೈನ್‌ಲ್ಲಿ ಉಚಿತವಾಗಿ ಮಾಹಿತಿ ಪಡೆಯಿರಿ


ಹೊಸ ಭಾಷೆಯನ್ನು ಕಲಿಯಬೇಕು ಎನ್ನುವ ಆಸೆ ಇರುವವರಿಗೆ ಒಂದು ವೆವ್‌ಸೈಟ್‌ ಇದೆ.www.openculture.com ಹೋಗಿ ನಿಮಗೆ ಬೇಕಾದ ಭಾಷೆಯ ವಿಡಿಯೋ, ಎಂಪಿ3 ಡೌನ್‌ಲೋಡ್‌ ಮಾಡಿ ಕಲಿತುಕೊಳ್ಳಬಹುದು.

 ಅಡುಗೆ

ಅಡುಗೆ

ಆನ್‌ಲೈನ್‌ಲ್ಲಿ ಉಚಿತವಾಗಿ ಕಲಿಯಿರಿ

ಹೊಸ ಹೊಸ ತಿಂಡಿ, ರೆಸಿಪಿಗಳನ್ನು ಮಾಡುವರಿಗೆ ಒಂದು ಅಡುಗೆ ವೆಬ್‌ಸೈಟ್‌ ಇದೆ. simplyrecipes.comನಲ್ಲಿ ಸಸ್ಯಾಹಾರ,ಮಾಂಸಹಾರ ಅಡುಗೆ ವಿಧಾನಗಳನ್ನು ಸುಲಭವಾಗಿ ತಿಳಿಯಬಹುದು.

 ಕಲಾತ್ಮಕ ಕೌಶಲ್ಯಗಳು

ಕಲಾತ್ಮಕ ಕೌಶಲ್ಯಗಳು

ಆನ್‌ಲೈನ್‌ಲ್ಲಿ ಉಚಿತವಾಗಿ ಕಲಿಯಿರಿ

ನಿಮಗೆ ಡ್ರಾಯಿಂಗ್‌‌ ಬಗ್ಗೆ ಮತ್ತಷ್ಟು ಕಲಿಯಬೇಕು ಎನ್ನುವ ಆಸಕ್ತಿ ಇದ್ದರೆ artyfactory.com ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ತಂತ್ರಜ್ಞಾನ ಬಳಸಿ ತಯಾರಿಸಲಾಗುವ ಜುವೆಲ್ಲರಿ,ಗೊಂಬೆಗಳು, ಬಟ್ಟೆಗಳ ಫ್ಯಾಶನ್‌ಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಯೋಚಿಸಿದ್ದಲ್ಲಿ instructables.com ಭೇಟಿ ನೀಡಬಹುದು.

 ಸ್ವಯಂ ರಕ್ಷಣೆ:

ಸ್ವಯಂ ರಕ್ಷಣೆ:

ಆನ್‌ಲೈನ್‌ಲ್ಲಿ ಉಚಿತವಾಗಿ ಕಲಿಯಿರಿ


ಅಪಾಯ ಬಂದಾಗ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳುವುದು ಹೇಗೆ? ಈ ವಿಚಾರ ಕಲಿತುಕೊಳ್ಳಲು ಒಂದು ವೆಬ್‌ಸೈಟ್‌ ಇದೆ.Lifehacker ವೆಬ್‌ಸೈಟ್‌ಗೆ ಭೇಟಿ ನೀಡಿ, ವಿಡಿಯೋದೊಂದಿಗೆ ಸ್ವಯಂ ರಕ್ಷಣೆಯ ಪಾಠವನ್ನು ಕಲಿಯಬಹುದು.

 ನೃತ್ಯ:

ನೃತ್ಯ:

ಆನ್‌ಲೈನ್‌ಲ್ಲಿ ಉಚಿತವಾಗಿ ಕಲಿಯಿರಿ


ಟಿವಿ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳ ಆರಂಭವಾದ ಮೇಲೆ ನೃತ್ಯ ತರಬೇತಿಗಳಿಗೆ ಭಾರೀ ಡಿಮ್ಯಾಂಡ್‌. ಹೀಗಾಗಿ ಫಿಲ್ಮ್‌ ಡ್ಯಾನ್ಸ್‌ಗಳನ್ನು ಕಲಿಯವ ಆಸಕ್ತಿರಿಗಾಗಿ dancetothis.com ಇದೆ. ಈ ವೆಬ್‌ಸೈಟ್‌ಗೆ ಭೇಟಿ ನೀಡಿ ವಿಡಿಯೋ ಮೂಲಕ ವಿವಿಧ ರೀತಿಯ ಫಿಲ್ಮ್‌ ನೃತ್ಯ ಪ್ರಕಾರಗಳನ್ನು ಕಲಿಯಬಹುದು.

 ಶಿಕ್ಷಣ

ಶಿಕ್ಷಣ

ಆನ್‌ಲೈನ್‌ಲ್ಲಿ ಉಚಿತವಾಗಿ ಕಲಿಯಿರಿ


ವಿಶ್ವದ ಶ್ರೇಷ್ಟ ವಿಶ್ವ ವಿದ್ಯಾನಿಲಯಗಳಲ್ಲಿ ಕೆಲವು ವಿವಿಗಳು ಆನ್‌ಲೈನ್‌ನಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತವೆ. ಆದರೆ ಯಾವ ವಿವಿಯಲ್ಲಿ ಯಾವ ಶಿಕ್ಷಣ ಎನ್ನುವ ವಿಚಾರ ಬಹುತೇಕ ಜನರಿಗೆ ತಿಳಿದಿಲ್ಲ. ಹೀಗಾಗಿ ಬಹಳಷ್ಟು ಮಂದಿ ವಿವಿಗಳ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಆದರೆ ಇದು ತ್ರಾಸದಾಯಕ ಕೆಲಸ. ಅದಕ್ಕಾಗಿ ಕಷ್ಟ ಪಡಬೇಕಿಲ್ಲ.ಒಂದೇ ವೆಬ್‌ಸೈಟ್‌‌ನಲ್ಲಿ ಮಾಹಿತಿ ಪಡೆಯಬಹುದು. edx.org ಸೈಟ್‌‌‌ನಲ್ಲಿ ಯಾವ ವಿವಿ ಯಾವ ವಿಷಯದ ಬಗ್ಗೆಆನ್‌ಲೈನ್‌ಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತದೆ ಎನ್ನುವುದನ್ನು ತಿಳಿಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot