ಗೂಗಲ್‌ನಲ್ಲಿ ಸುಲಭವಾಗಿ ಸರ್ಚ್‌ ಮಾಡುವುದು ಹೇಗೆ?

Posted By:

  ಇಂದು ನಾವು ಯಾವುದೇ ವಿಷಯವನ್ನು ಗೂಗಲ್‌ ಸರ್ಚ್‌ ಇಂಜಿನ್‌ಲ್ಲಿ ಹುಡುಕಬಹುದು. ವಿಶ್ವದ ಎಲ್ಲಾ ಮಾಹಿತಿಗಳು ಕ್ಷಣ ಮಾತ್ರದಲ್ಲಿ ನಮ್ಮ ಪರದೆಯ ಮುಂದೆ ಕಾಣಿಸುತ್ತದೆ. ಈ ಹಿನ್ನೆಲೆಯಲ್ಲಿ ಗೂಗಲ್‌ ಈ ಮಾಹಿತಿಗಳನ್ನು ಮತ್ತಷ್ಟು ಸುಲಭವಾಗಿ ಜನರಿಗೆ ಸಿಗುವಂತೆ ಮಾಡಲು ವಿವಿಧ ರೀತಿಯ ವಿಶಿಷ್ಟ ಸೌಲಭ್ಯಗಳನ್ನು,ಕಮ್ಯಾಂಡ್‌ಗಳನ್ನು ಈ ಹಿಂದೆಯೇ ಆರಂಭಿಸಿದೆ. ಆದರೆ ಸೌಲಭ್ಯಗಳ ಮಾಹಿತಿ ಬಹಳಷ್ಟು ಜನರಿಗೆ ಇನ್ನೂ ತಿಳಿದಿಲ್ಲ.

  ಹೀಗಾಗಿ ಇಲ್ಲಿ ಗೂಗಲ್‌ನಲ್ಲಿ ಹೇಗೆ ಸುಲಭವಾಗಿ,ನಿಖರವಾಗಿ ಬೇಕಾದ ಮಾಹಿತಿ ಪಡೆಯುವುದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಗೂಗಲ್‌ ವಿಶಿಷ್ಟ ಸೌಲಭ್ಯಗಳನ್ನು ಓದಿಕೊಂಡು ಹೋಗಿ.ನಂತರ ಈ ಸೇವೆಯನ್ನು ಬಳಸಿಕೊಂಡು ಸುಲಭವಾಗಿ ಗೂಗಲ್‌ನಲ್ಲಿ ಮಾಹಿತಿಗಳನ್ನು ಹುಡುಕಿ.

  Click Here For New Google Gadgets Gallery

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ನಿಮಗೆ ಸದ್ಯ ಈಗ ಯಾವ ದೇಶದಲ್ಲಿ ಹೆಚ್ಚು ಮಂದಿ ಯಾವ ವಿಚಾರಕ್ಕೆ ಸಂಬಂಧಿಸಿ ಮಾಹಿತಿಗಳನ್ನು ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ ಎನ್ನುವುದನ್ನು ಗೂಗಲ್‌ ಸರ್ಚ್‌ನಲ್ಲಿ ತಿಳಿಯಬಹುದು

  ಈಗಿನ ಟ್ರೆಂಡ್‌ಗೆ ಸರ್ಚ್‌ ನೋಡಲು ಇಲ್ಲಿ ಭೇಟಿ ನೀಡಿ: hottrends
  ಈ ವಾರದ ಹೆಚ್ಚು ಸರ್ಚ್ ಆದ ವಿಷಯಗಳನ್ನು ತಿಳಿಯಲು ಇಲ್ಲಿ ಭೇಟಿ ನೀಡಿ: Hot Searches

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಒಂದು ದೇಶದ ಕರೆನ್ಸಿಯ ಬೆಲೆ ಭಾರತದ ಇವತ್ತಿನ ರೂಪಾಯಿ ಬೆಲೆಯಲ್ಲಿ ಎಷ್ಟಾಗುತ್ತದೆ ಎಂದು ತಿಳಿಯಲು ಹೀಗೆ ಟೈಪಿಸಿ
  ಉದಾಹರಣೆ: dollars to rupees

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಮೈಲಿಗಳನ್ನು ಕಿಲೋಮೀಟರ್‌ಗೆ ಪರಿವರ್ತ‌ನೆ ಮಾಡಿ ಲೆಕ್ಕ ಹಾಕಬೇಕಿದ್ದರೆ ಹೀಗೆ ಟೈಪಿಸಿ :miles to km

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಒಂದುದೇಶದ ಸಮಯವನ್ನು ತಿಳಿಯಬೇಕಿದ್ದರೆ ಹೀಗೆ ಟೈಪಿಸಿ
  ಉದಾಹರಣೆಗೆ : time india

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ವಿವಿಧ ಸ್ಥಳಗಳ ಹವಮಾನದ ಮಾಹಿತಿ ತಿಳಿಯಲು ಹೀಗೆ ಟೈಪಿಸಿ
  ಉದಾಹರಣೆ: weather bangalore

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಇಂಗ್ಲಿಷ್‌ನ ಒಂದು ಪದಗಳ ಸಂಪೂರ್ಣ‌ ಅರ್ಥ ತಿಳಿಯಲು 'define' ಎಂಬ ಕಮ್ಯಾಂಡ್‌ ಬಳಸಿ ಮಾಹಿತಿ ಹುಡುಕಬಹುದು

  ಉದಾಹರಣೆ: define love

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಕ್ಯಾಲ್ಕ್ಯುಲೇಟರ್‌ನಲ್ಲಿ ಮಾಡುವ ಲೆಕ್ಕಗಳನ್ನು ಸುಲಭವಾಗಿ ಗೂಗಲ್‌ ಸರ್ಚ್‌ನಲ್ಲಿ ಮಾಡಬಹುದು.

  ಉದಾಹರಣೆ: 950*240-300 ?

  ಇಷ್ಟೇ ಅಲ್ಲದೇ ಕ್ಯಾಲ್ಕ್ಯುಲೇಟರ್‌ ಬಳಸಿ ಬೇರೆ ಏನೆಲ್ಲ ಲೆಕ್ಕ ಮಾಡಬಹುದು ಎಂಬುದನ್ನು ತಿಳಿಯಲು ಇಲ್ಲಿ ಭೇಟಿ ನೀಡಿ: www.googleguide.com/help/calculator.

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಒಂದು ಪ್ರದೇಶದ ಸೂರ್ಯೋದಯ, ಸೂರ್ಯಾಸ್ತಮಾನ ಸಮಯವನ್ನು ತಿಳಿಯುವುದು ಸುಲಭ
  ಉದಾಹರಣೆ: sunset mangalore

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಒಂದು ದೇಶದ ಜಿಡಿಪಿ,ಜನಸಂಖ್ಯೆ ಮಾಹಿತಿಯನ್ನು ಸುಲಭವಾಗಿ ಪತ್ತೆ ಮಾಡಲು ಹೀಗೆ ಟೈಪಿಸಿ
  ಉದಾಹರಣೆ: population growth rate india,gdp india

  ಇನ್ನೂ ಎಲ್ಲಾ ದೇಶಗಳ ವಿವಿಧ ರೀತಿಯ ಅಂಕಿ ಅಂಶಗಳನ್ನು ತಿಳಿಯಲು ಈ ತಾಣಕ್ಕೆ ಭೇಟಿ ನೀಡಬಹುದು: Google Public Data Explorer

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ವಿಳಾಸದಲ್ಲಿ 'ಇಂಡಿಯಾ' ಹೆಸರಿರುವ ವೆಬ್‌ಸೈಟ್‌‌ಗಳು ಮಾತ್ರ ಸಿಗಬೇಕು ಎಂದು ಯೋಚಿಸಿದ್ದಲ್ಲಿ'allinurl:'ಕಮ್ಯಾಂಡ್‌ ಬಳಸಿ ಸರ್ಚ್‌ ಮಾಡಬಹುದು

  ಉದಾಹರಣೆ:allinurl:india

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಬೇಕಾದ ತಾಣದಲ್ಲಿ ನಿರ್ಧಿಷ್ಟ ವಿಷಯಗಳನ್ನು ಹುಡುಕುಲು 'site:' ಕಮ್ಯಾಂಡ್‌ ಬಳಸಿ ಸರ್ಚ್‌ ಮಾಡಬಹುದು.
  ಉದಾಹರಣೆಗೆ ಬೆಂಗಳೂರಿನ ಬಗ್ಗೆ ಒನ್‌ ಇಂಡಿಯಾ ಕನ್ನಡದಲ್ಲಿ ಹುಡುಕಬೇಕಾದರೆ ಹೀಗೆ ಟೈಪಿಸಬಹುದು

  ಬೆಂಗಳೂರು site:kannada.oneindia.in

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಗೂಗಲ್‌ನಲ್ಲಿ ಒಂದೇ ವಿಷಯವನ್ನು ನೀವು ಸರ್ಚ್‌ ಮಾಡುತ್ತೀರಿ ಎಂದಾದ್ದಲ್ಲಿ ಅದನ್ನೂ ನೀವು ಗೂಗಲ್‌ನಿಂದ ಪಡೆಯಬಹುದು. ಅದಕ್ಕಾಗಿ ಗೂಗಲ್‌ ಅಲರ್ಟ್‌ ಸೇವೆಯನ್ನು ಆರಂಭಿಸಿದ್ದು ಇಲ್ಲಿ ನಿಮ್ಮ ಇಮೇಲ್‌ನ್ನು ದಾಖಲಿಸಿದ್ದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮ್ಮ ಇಮೇಲ್‌ಗೆ ಬರುತ್ತವೆ.

  ಗೂಗಲ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕಿ!

  ಇನ್ನಷ್ಟು ಗೂಗಲ್‌ ಸರ್ಚ್‌ನಲ್ಲಿ ಸುಲಭವಾಗಿ ಮಾಹಿತಿ ಹುಡುಕುವುದಾಗಿ ಇಲ್ಲಿ ನೀವು ಭೇಟಿ ನೀಡಬಹುದು: google.com/insidesearch/tipstricks

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Click Here For List of New Smartphones And Tablets Price & Specs

  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more