ಕೋವಿಡ್-19: ಆರೋಗ್ಯ ಸೇತು ಆಪ್ ಬಳಕೆ ಮಾಡುವುದು ಹೇಗೆ?
ಡೆಡ್ಲಿ ಕೊರೊನಾ ವೈರಾಣು ದೇಶದಲ್ಲಿ ವ್ಯಾಪಕವಾಗಿ ಹರಡದಂತೆ ತಡೆಯುವುದಕ್ಕಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಹಾಗೆಯೇ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜನರಿಗೆ ಸೂಕ್ತ ಮಾಹಿತಿ ಒದಗಿಸಲು ಮತ್ತು ಕೊರೊನಾ ವೈರಸ್ ಸೋಂಕಿತರನ್ನು ಟ್ರಾಕ ಮಾಡಲು ಸರ್ಕಾರ 'ಆರೋಗ್ಯ ಸೇತು' ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿರುವುದು ನಿಮಗೆ ಗೂತ್ತೆ ಇದೆ. ಈ ಆಪ್ ಬಳಕೆ ಮಾಡಲು ಮೋದಿ ಸಹ ಸೂಚಿಸಿದ್ದಾರೆ.
ಆರೋಗ್ಯ ಸೇತು ಆಪ್ ಮೊಬೈಲ್ ಲೊಕೇಶನ್ ಮತ್ತು ಬ್ಲೂಟೂತ್ ಆಕ್ಸಸ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತೆ. ಈ ಆಪ್ ಬಳಕೆ ಮಾಡುವ ಬಳಕೆದಾರರ ಸ್ಥಳದ ಸುತ್ತಮುತ್ತ ಕೋವಿಡ್-19 ಸೋಂಕಿತರು ಬಂದರೇ ಹಾಗೂ ಬಳಕೆದಾರರು ಸೋಂಕು ಹೆಚ್ಚು ಇರುವ ಪ್ರದೇಶದಲ್ಲಿದ್ದರೆ ಅಲರ್ಟ್ ಮಾಹಿತಿ ನೀಡುತ್ತದೆ. ಐಒಎಸ್ ಮತ್ತು ಆಂಡ್ರಾಯ್ಡ್ ಓಎಸ್ ಬಳಕೆದಾರರಿಬ್ಬರೂ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಗಾದರೆ ಈ ಆಪ್ ಬಳಕೆ ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಆರೋಗ್ಯ ಸೇತು ಆಪ್ ಇನ್‌ಸ್ಟಾಲ್ ಬಗ್ಗೆ ಮಾಹಿತಿ
ಹಂತ 1: ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹಂತ 2: ಡೌನ್‌ಲೋಡ್ ಆದ ನಂತರ, ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮಗೆ ಅನುಕೂಲಕರವಾದ ಭಾಷೆಯನ್ನು ಆರಿಸಿ.
ಹಂತ 3: ಆ ನಂತರ ಅಲ್ಲಿನ ಕೇಳಲಾಗುವ ಹಂತಗಳನ್ನು ಅನುಸರಿಸಿ, ಅಪ್ಲಿಕೇಶನ್ ಬೇಡುವ ಅನುಮತಿಯನ್ನು ಒಪ್ಪಿರಿ.
ಹಂತ 4: ನಂತರ ನಿಮ್ಮ ಸ್ಮಾರ್ಟ್‌ಫೋನ್ ಲೊಕೇಶನ್ ಮತ್ತು ಬ್ಲೂಟೂತ್ ಆನ್ ಇರುವಂತೆ ನೋಡಿಕೊಳ್ಳಿ.(ಜಿಪಿಎಸ್ ಮತ್ತು ಬ್ಲೂಟೂತ್ ಅಗತ್ಯ)

ಹಂತ 5: ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ. OTP ಬರುತ್ತದೆ ಅದನ್ನು ನಮೂದಿಸಿ.
ಹಂತ 6: ಆ ನಂತರ ನಿಮ್ಮ ಲಿಂಗ, ಪೂರ್ಣ ಹೆಸರು, ವಯಸ್ಸು, ವೃತ್ತಿಯಂತಹ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಕಳೆದ 30 ದಿನಗಳಲ್ಲಿ ನೀವು ವಿದೇಶ ಪ್ರಯಾಣ ಮಾಡಿರುವ ಬಗ್ಗೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. (ಸ್ವ-ಮೌಲ್ಯಮಾಪನ ಪರೀಕ್ಷೆ) ಈ ಹಂತಗಳನ್ನು ಪೂರ್ಣಗೊಳಿಸಿ. ಈ ಆಯ್ಕೆಯನ್ನು(ಸ್ವ-ಮೌಲ್ಯಮಾಪನ ಪರೀಕ್ಷೆ)ನೀವು ನಂತರದಲ್ಲಿಯೂ ಪೂರ್ಣಗೊಳಿಸಬಹುದು.
ಹಂತ 7: ಬಳಕೆದಾರರು ತೆಗೆದುಕೊಳ್ಳಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ. ಹಾಗೂ ಕೊರೊನಾ ವಿರುದ್ಧ ಹೋರಾಟಕ್ಕೆ ಆಸಕ್ತರು PM CARES ಖಾತೆಗೆ ದೇಣಿಗೆ/ದಾನ ಮಾಡಬಹುದಾದ ಸೂಚಿಸುತ್ತದೆ.

ಅಪಾಯದ ಮಟ್ಟ ಸೂಚಿಸುತ್ತದೆ
ಈ ಆಪ್ ಭಾರತದಲ್ಲಿನ ಕೊರೊನಾ ಸೋಂಕಿತರ ಅಂಕಿ-ಸಂಖ್ಯೆಯ ಪೂರ್ಣ ಮಾಹಿತಿ ಒಳಗೊಂಡಿದೆ. ಆಪ್ ಬಳಕೆ ಮಾಡುವ ವ್ಯಕ್ತಿಯು/ಬಳಕೆದಾರ ಯಾವ ಸ್ಥಳದಲ್ಲಿ ಇದ್ದಾರೆ ಎಂಬುದನ್ನು ಗುರುತಿಸಲು ಜಿಪಿಎಸ್ ಲೊಕೇಶನ್ ಆಕ್ಸಸ್ ಮಾಡಿಕೊಳ್ಳುತ್ತದೆ. ಹಾಗೂ ಕೊರೊನಾ ಸೋಂಕಿತರೇನಾದರೂ ಸುಮಾರು 6 ಅಡಿ ಅಂತರದಲ್ಲಿ ಇದ್ದಾರಾ ಇಲ್ಲವೇ ಎಂಬುದನ್ನು ತಿಳಿಸಲು ಬ್ಲೂಟೂತ್ ಸಂಕರ್ಪ ಬಳಕೆ ಆಗುತ್ತದೆ. ಲೊಕೇಶನ್ ಮತ್ತು ಬ್ಲೂಟೂತ್ ಈ ಆಧಾರದ ಮೇಲೆ ಬಳಕೆದಾರರ ಅಪಾಯ ಇದ್ದಾರಾ ಅಥವಾ ಇಲ್ಲವೇ ಎಂಬುದನ್ನು ತೋರಿಸುತ್ತದೆ.

ಟೋಲ್-ಫ್ರೀ ಸಂಖ್ಯೆ 1075
ಬಳಕೆದಾರರು ಕೊರೊನಾ ಸೋಂಕು ತಗಲುವ ಹೆಚ್ಚಿನ ಅಪಾಯದ ಪ್ರದೇಶದಲ್ಲಿದ್ದರೆ, ಆರೋಗ್ಯ ಪರೀಕ್ಷೆಗೆ ಹೋಗಲು ಸೂಚಿಸುತ್ತದೆ. ಮತ್ತು ನಿಮ್ಮ ಸ್ಥಳದ ಹತ್ತಿರದ ಆರೋಗ್ಯ ಪರೀಕ್ಷಾ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಲು ಟೋಲ್-ಫ್ರೀ ಸಂಖ್ಯೆ 1075 ಗೆ ಕರೆ ಮಾಡಲು ಈ ಅಪ್ಲಿಕೇಶನ್ ಬಳಕೆದಾರರಿಗೆ ಸಲಹೆ ನೀಡುತ್ತದೆ. ಹಾಗೂ ಈ ಆರೋಗ್ಯ ಸೇತು ಆಪ್ ಕೊರೊನಾ ವೈರಾಣು ಸೋಂಕು ತಗುಲದಂತೆ ತಡೆಯುವ ಬಗ್ಗೆ ಮಾಹಿತಿ ನೀಡುತ್ತದೆ.

ಆರೋಗ್ಯ ಸಹಾಯವಾಣಿ ಸಂಖ್ಯೆ
ಒಂದು ವೇಳೆ ಆಪ್ ಬಳಕೆದಾರರು COVID-19 ಪರೀಕ್ಷಗೆ ಒಳಗಾಗಿದ್ದರೇ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದರೆ ಅವರ ಮಾಹಿತಿ/ಡೇಟಾವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳುತ್ತದೆ. ಅಲ್ಲದೇ ಕೊರೊನಾ ವೈರಸ್ ಸೋಂಕಿನ ಬಗ್ಗೆ ಬಳಕೆದಾರರಲ್ಲಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಚಾಟ್ ಬಾಟ್ ವ್ಯವಸ್ಥೆಯನ್ನು ಅನ್ನು ಅಪ್ಲಿಕೇಶನ್ ಒಳಗೊಂಡಿದೆ, ಚಾಟ್ ಬಾಟ್ ಮೂಲಕ ರೋಗಲಕ್ಷಣಗಳ ಬಗ್ಗೆ ತಿಳಿಯಬಹುದಾಗಿದೆ. ಹಾಗೂ ಆರೋಗ್ಯ ಸಹಾಯವಾಣಿ ಸಂಖ್ಯೆಗಳನ್ನು ನೀಡುತ್ತದೆ.


Click it and Unblock the Notifications








