Home
ಟೆಕ್ ನೌಕರಿ

ಅಗ್ನಿವೀರ್ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ!?

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬುದು ಬಹುಪಾಲು ಯುವಕರ ಕನಸು. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಅಗ್ನಿವೀರ್ ಯೋಜನೆಯನ್ನು ಜಾರಿ ಮಾಡಿದ್ದು, ಈ ಮೂಲಕ ಹಲವು ಯುವಕರು ಭಾರತ ಮಾತೆಯ ಸೇವೆಗೆ ಅರ್ಹರಾಗುತ್ತಿದ್ದಾರೆ. ಈ ನಡುವೆ ಭಾರತೀಯ ನೌಕಾಪಡೆಯು ಅಗ್ನಿವೀರ್ 02/2023 ರ ನವೆಂಬರ್ 23 ನೇ ಬ್ಯಾಚ್‌ಗಾಗಿ ಆನ್‌ಲೈನ್ ಅರ್ಜಿಗಳನ್ನು ಕರೆದಿದೆ.

ಹೌದು, ನೌಕಾಪಡೆಯಲ್ಲಿ ಖಾಲಿ ಇರುವ 1,365 ಅಗ್ನಿವೀರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಆಗಿರುವ agniveernavy.cdac.in ಗೆ ಭೇಟಿ ನೀಡಿ ಜೂನ್ 15 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಿದ್ರೆ, ಬನ್ನಿ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?, ಏನೆಲ್ಲಾ ದಾಖಲೆಗಳು ಬೇಕು, ಏನೆಲ್ಲಾ ಅರ್ಹತೆ ಇರಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಅಗ್ನಿವೀರ್ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ!?

ಅರ್ಹತೆ ಏನಿರಬೇಕು?: ನೌಕಾಪಡೆಯಲ್ಲಿ 1,365 ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಅದರಲ್ಲಿ 273 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. 1ನೇ ನವೆಂಬರ್ 2002 ಮತ್ತು 30ನೇ ಏಪ್ರಿಲ್ 2006 ರ ನಡುವೆ ಜನಿಸಿದ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಹಾಗೆಯೇ 12 ನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹರು.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?: ಮೊದಲಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಇದರ ನಂತರ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇನ್ನು ಲಿಖಿತ ಪರೀಕ್ಷೆಯು ಒಟ್ಟು 100 ಅಂಕಗಳಿದ್ದು, ಪ್ರತಿ ಪ್ರಶ್ನೆಯು ಒಂದು ಅಂಕವನ್ನು ಹೊಂದಿದೆ. ಇದಾದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು 30,000 ಸಾವಿರ ರೂಪಾಯಿಗಳವರೆಗೆ ವೇತನವನ್ನು ಪಡೆದುಕೊಳ್ಳಬಹುದು. ಹಾಗಿದ್ರೆ, ಬನ್ನಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ ಎಂದು ತಿಳಿಯೋಣ.

ಹಂತ 1 : ಮೊದಲು ನೀವು https://agniveernavy.cdac.in/sailorscycle2/ಲಿಂಕ್‌ ಅನ್ನು ಬಳಕೆ ಮಾಡುವ ಮೂಲಕ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಮೇಲೆ ಕಾಣಿಸಿಕೊಳ್ಳುವ ರಿಜಿಸ್ಟರ್‌ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಅದರಲ್ಲಿ ನಿಮ್ಮ ಇಮೇಲ್‌ ವಿವರ, ಫೋನ್‌ ಸಂಖ್ಯೆ ಹೆಸರು ಹಾಗೂ ರಾಷ್ಟ್ರೀಯತೆ ಬಗ್ಗೆ ಮಾಹಿತಿ ಭರ್ತಿ ಮಾಡಿ.

ಅಗ್ನಿವೀರ್ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ!?

ಹಂತ 2 : ಇದಾದ ಬಳಿಕ ನಿಮ್ಮ ಇಮೇಲ್‌ಗೆ ಅಧಿಕೃತವಾದ ಒಂದು ಸಂದೇಶ ಬರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನಿಮ್ಮ ಫೋನ್‌ ನಂಬರ್‌ ಪರಿಶೀಲನೆ ಹಾಗೂ ಪಾಸ್‌ವರ್ಡ್‌ ಕ್ರಿಯೇಟ್‌ ಮಾಡುವ ಆಯ್ಕೆ ಇರುತ್ತದೆ. ಈ ಪ್ರಕ್ರಿಯೆ ಓಟಿಪಿ ಆಧಾರದಲ್ಲಿ ನಡೆಯುತ್ತದೆ. ಬಳಿಕ ಲಾಗಿನ್‌ ಪ್ರಕ್ರಿಯೆ ನಡೆಸಿ. ಅದರಲ್ಲಿ ನಿಮಗೆ ಪಾಸ್‌ವರ್ಡ್‌ ಬದಲಾವಣೆ ಮಾಡುವ ಆಯ್ಕೆ ಕಾಣಿಸಿಕೊಳ್ಳುತ್ತದೆ.

ಹಂತ 3 : ಇದೆಲ್ಲಾ ಆದ ಮೇಲೆ ನಿಮ್ಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡುವ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಹೆಸರು, ಮೊಬೈಲ್‌ ಸಂಖ್ಯೆ, ಪೋಷಕರ ವಿವರ, ಪಾನ್ ನಂಬರ್‌, ಜನ್ಮ ದಿನಾಂಕ, ಲಿಂಗ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಜೊತೆಗೆ ಇದೇ ಪುಟದಲ್ಲಿ ಫೋಟೋ ಹಾಗೂ ಸಹಿ ಅನ್ನು ಸಹ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಇದನ್ನು ಸಲ್ಲಿಕೆ ಮಾಡಿದ ನಂತರ ವಿಳಾಸವನ್ನು ಭರ್ತಿ ಮಾಡಿ.

ಅಗ್ನಿವೀರ್ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ!?

ಹಂತ 4 : ನಿಮ್ಮ ಸಂಪೂರ್ಣ ವಿಳಾಸವನ್ನು ಎಂಟ್ರಿ ಮಾಡಿದ ತರುವಾಯ ನಿಮ್ಮ ಶೈಕ್ಷಣಿಕ ಅರ್ಹತೆಯ ಮಾಹಿತಿಯನ್ನು ಭರ್ತಿ ಮಾಡಿ. ಇದಾದ ನಂತರದಲ್ಲಿ ಎಲ್ಲಿ ಪರೀಕ್ಷೆ ಬರೆಯಲು ಯೋಗ್ಯ ಎಂಬುದನ್ನು ಆಯ್ಕೆ ಮಾಡಿಕೊಂಡು ಆ ಜಿಲ್ಲೆಯ ಮೇಲೆ ಕ್ಲಿಕ್‌ ಮಾಡಿ. ನಂತರದಲ್ಲಿ ಹೆಚ್ಚುವರಿ ಮಾಹಿತಿ ಇದ್ದರೆ ಅದರಲ್ಲಿ ಭರ್ತಿ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಇದೆಲ್ಲಾ ಆದ ಮೇಲೆ ಪಾವತಿ ಪ್ರಕ್ರಿಯೆ ನಡೆಸಿ.

ಇನ್ನು ಮೇಲೆ ತಿಳಿಸಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 200ರೂ.ಗಳನ್ನು ಪಾವತಿ ಮಾಡಬೇಕು. ಬಳಿಕ ಅರ್ಜಿಯನ್ನು ಮುದ್ರಿಸಿಕೊಳ್ಳಿ. ಇನ್ನು ಈ ಅರ್ಜಿ ಸಲ್ಲಿಕೆ ಮಾಡಲು 15ನೇ ಜೂನ್ 2023 ಕೊನೆಯ ದಿನವಾಗಿರುತ್ತದೆ.

ಇನ್ನು ಅರ್ಜಿ ಸಲ್ಲಿಕೆ ಮಾಡುವಾಗ ನಿಮಗೆ ಏನಾದರೂ ಗೊತ್ತಿಲ್ಲದಿದ್ದರೆ ಅಥವಾ ಗೊಂದಲ ಉಂಟಾದರೆ ನೇರವಾಗಿ [email protected] ಇಮೇಲ್‌ ಗೆ ಮೆಸೆಜ್‌ ಮಾಡಬಹುದು ಅಥವಾ 9363322818, 011 21410669 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

Best Mobiles in India

English summary
Applications are invited for 1,365 Agniveer vacancies in the Navy, interested and eligible candidates can visit the official website agniveernavy.cdac.in and apply online till June 15.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+