Home
ಟೆಕ್ ನೌಕರಿ

ದೀಪಾವಳಿ ಆಫರ್: ಏರ್‌ಟೆಲ್‌ನಿಂದ ಉಚಿತ 2ಜಿಬಿ 4ಜಿ ಡೇಟಾ

ಉಚಿತ 2ಜಿಬಿ 4ಜಿ ಇಂಟರ್ನೆಟ್ ಅನ್ನು ಈಗ ಬಳಕೆದಾರರಿಗೆ ನೀಡುತ್ತಿದ್ದು ಏರ್‌ಟೆಲ್ 4ಜಿ ಸಿಮ್ ಅನ್ನು ಅಪ್‌ಗ್ರೇಡ್ ಮಾಡುತ್ತಿರುವವರು ಈ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.

By Shwetha

ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ, ಅದಾಗ್ಯೂ ಹೆಚ್ಚಿನ ಆಫರ್‌ಗಳು ಬಳಕೆದಾರರುನ್ನು ಸಮೀಪಿಸುತ್ತಿದೆ. ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳ ಮೇಲೆ ನಿಮಗೆ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದೇ ಸಮಯಕ್ಕೆ ಟೆಲಿಕಾಮ್ ಕಂಪೆನಿಗಳು ಕೂಡ ಅತ್ಯದ್ಭುತ ಆಫರ್‌ಗಳನ್ನು ಬಳಕೆದಾರರಿಗೆ ಪ್ರಸ್ತುತಪಡಿಸುತ್ತಿದ್ದು ಜಿಯೋದ ಇಫೆಕ್ಟ್ ಇದಾಗಿದೆ ಎಂದೂ ಹೇಳಬಹುದಾಗಿದೆ.

ಓದಿರಿ: ಜಿಯೋ ಸಿಮ್: ಅನುಕೂಲ ಮತ್ತು ಅನಾನುಕೂಲಗಳು

ಈಗ ಏರ್‌ಟೆಲ್ ದೀಪಾವಳಿ ಆಫರ್‌ಗಳಿಂದ ಜನಸಾಮಾನ್ಯರ ಗಮನವನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಉಚಿತ 2ಜಿಬಿ 4ಜಿ ಇಂಟರ್ನೆಟ್ ಅನ್ನು ಈಗ ಬಳಕೆದಾರರಿಗೆ ನೀಡುತ್ತಿದ್ದು ಏರ್‌ಟೆಲ್ 4ಜಿ ಸಿಮ್ ಅನ್ನು ಅಪ್‌ಗ್ರೇಡ್ ಮಾಡುತ್ತಿರುವವರು ಈ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಏರ್‌ಟೆಲ್ ಸಿಮ್ ಅನ್ನು ಅಪ್‌ಗ್ರೇಡ್ ಮಾಡುವುದು ಹೇಗೆ ಎಂಬುದಕ್ಕೆ ಸಲಹೆಗಳನ್ನು ನಾವಿಲ್ಲಿ ನೀಡುತ್ತಿದ್ದು ಇಲ್ಲಿದೆ ಹಂತಗಳು

ಓದಿರಿ: ಜಿಯೋ ಸಿಮ್ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲವೇ? ಇಲ್ಲಿದೆ ಸರಳ ಹಂತಗಳು

ಏರ್‌ಟೆಲ್ ಸಿಮ್ ಅಪ್‌ಗ್ರೇಡ್

ಏರ್‌ಟೆಲ್ ಸಿಮ್ ಅಪ್‌ಗ್ರೇಡ್

ನಿಮ್ಮ ಪ್ರಸ್ತುತ ಸಿಮ್ ಅನ್ನು ಏರ್‌ಟೆಲ್ 4ಜಿ ಗೆ ಅಪ್‌ಗ್ರೇಡ್ ಮಾಡಲು WWW.airtel.in/4g/sim-swap ವೆಬ್‌ಸೈಟ್‌ಗೆ ಹೋಗಿ. ನಿಮ್ಮ ಹೆಸರನ್ನು ನಮೂದಿಸಬೇಕು ನಿಮ್ಮ ಏರ್‌ಟೆಲ್ ಸಂಖ್ಯೆಯನ್ನು ಇಲ್ಲಿ ಹಾಕಿ ತದನಂತರ ಇಮೇಲ್ ಐಡಿ, ಶಿಪ್ಪಿಂಗ್ ವಿಳಾಸವನ್ನು ನಮೂದಿಸಿ. ನಂತರ ಬಟನ್ ಒತ್ತಿರಿ ಇದು 'ಸೆಂಡ್ ಮಿ ಎ 4ಜಿ ಸಿಮ್' ಎಂದು ಹೇಳುತ್ತದೆ.

ಸಂದೇಶವನ್ನು ಕಳುಹಿಸಿ

ಸಂದೇಶವನ್ನು ಕಳುಹಿಸಿ

ಒಮ್ಮೆ ನೀವು ಏರ್‌ಟೆಲ್ 4ಜಿ ಸಿಮ್ ಕಾರ್ಡ್ ಅನ್ನು ಪಡೆದುಕೊಂಡ ನಂತರ, 20 ಅಂಕೆಯುಳ್ಳ ಸಿಮ್ ಸಂಖ್ಯೆಯೊಂದಿಗೆ ಎಸ್‌ಎಮ್‌ಎಸ್ ಅನ್ನು ಕಳುಹಿಸಬೇಕು ಇದು 2ಜಿ ಅಥವಾ 3ಜಿ ಸಿಮ್‌ನ ಹಿಂಭಾಗದಲ್ಲಿ ಮುದ್ರಿತವಾಗಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏರ್‌ಟೆಲ್ ವಿಜ್ಞಾಪನೆ

ಏರ್‌ಟೆಲ್ ವಿಜ್ಞಾಪನೆ

ಸಂದೇಶವನ್ನು ಕಳುಹಿಸಿದ ನಂತರ, ಏರ್‌ಟೆಲ್‌ನಿಂದ ನೀವು ಎಸ್‌ಎಮ್‌ಎಸ್ ಅನ್ನು ಪಡೆದುಕೊಳ್ಳುತ್ತೀರಿ. ಇದು ಏರ್‌ಟೆಲ್‌ನಿಂದ ಬಂದ ವಿಜ್ಞಾಪನೆಯಾಗಿರುತ್ತದೆ ಇದನ್ನು ದೃಢೀಕರಿಸಲು ನೀವು '1' ಅನ್ನು ಒತ್ತಿರಿ.

ಹಳೆಯ ಸಿಮ್ ಕಾರ್ಡ್ ರದ್ದಾಗುತ್ತದೆ

ಹಳೆಯ ಸಿಮ್ ಕಾರ್ಡ್ ರದ್ದಾಗುತ್ತದೆ

ಹೀಗೆ ಮಾಡುವುದರಿಂದ, ಕೆಲವೇ ನಿಮಿಷಗಳಲ್ಲಿ ನೆಟ್‌ವರ್ಕ್‌ನಿಂದ ಹಳೆಯ ಏರ್‌ಟೆಲ್ ಸಿಮ್ ಡಿಸ್‌ಕನೆಕ್ಟ್ ಆಗುತ್ತದೆ. ಒಮ್ಮೇ ಸೇವೆಯು ಡಿಸ್‌ಕನೆಕ್ಟ್ ಆದಲ್ಲಿ, ನಿಮ್ಮ ಫೋನ್‌ಗೆ ಹೊಸ ಏರ್‌ಟೆಲ್ ಸಿಮ್ ಕಾರ್ಡ್ ಅನ್ನು ನೀವು ಅಳವಡಿಸಬೇಕು. ನೀವು ಇದಕ್ಕಾಗಿ 4ಜಿ ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ

ಉಚಿತ 2ಜಿಬಿ ಏರ್‌ಟೆಲ್ 4ಜಿ ಡೇಟಾ ಪಡೆದುಕೊಳ್ಳಿ

ಉಚಿತ 2ಜಿಬಿ ಏರ್‌ಟೆಲ್ 4ಜಿ ಡೇಟಾ ಪಡೆದುಕೊಳ್ಳಿ

ಸಿಮ್ ಅಪ್‌ಗ್ರೇಡ್ ಪ್ರೊಸೆಸ್ ನಂತರ, ಏರ್‌ಟೆಲ್‌ನಿಂದ ನೀವು ಉಚಿತ 2ಜಿಬಿ 4ಜಿ ಡೇಟಾವನ್ನು ಪಡೆದುಕೊಳ್ಳುತ್ತೀರಿ. ಯಾರು 4ಜಿ ಗೆ ಅಪ್‌ಗ್ರೇಡ್ ಮಾಡಿಕೊಳ್ಳುತ್ತಾರೋ ಅವರಿಗೆ ಈ ಆಫರ್ ಲಭ್ಯವಿರುತ್ತದೆ. ಉಚಿತ ಡೇಟಾವನ್ನು ಪಡೆದುಕೊಳ್ಳಲು, ನೀವು ಏರ್‌ಟೆಲ್‌ 4ಜಿ ಗೆ ಅಪ್‌ಗ್ರೇಡ್ ಮಾಡಿದ ಐದು ದಿನದೊಳಗೆ 52122 ಗೆ ಮಿಸ್ ಕಾಲ್ ನೀಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here, GizBot has come up with the steps involved in upgrading your existing Airtel SIM to 4G and getting 2 GB of free Airtel 4G data. Take a look at the same from here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+