ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್!
ಸುಮಾರು 1.5 ಮಿಲಿಯನ್‌ಗಿಂತಲೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್', ಈಗಾಗಲೇ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರ ಹಾಟ್ ಫೇವರೇಟ್ ಆಗಿದೆ. ಅದೆ ರೀತಿ ಸಂಸ್ಥೆಯು ಸಹ ತನ್ನ ಬಳಕೆದಾರರ ಪ್ರೈವೆಸಿ ಸುರಕ್ಷತೆಗಾಗಿ ಸತತ ಹೊಸ ಫೀಚರ್ಸ್‌ಗಳನ್ನು ಅಪ್‌ಡೇಟ್ ವರ್ಷನ್‌ನಲ್ಲಿ ಅಳವಡಿಸಿಕೊಳ್ಳುತ್ತಲೆ ಸಾಗಿದೆ. ಹಾಗೆಯೇ ವಾಟ್ಸಪ್‌ನಲ್ಲಿ ಬಳಕೆದಾರರಿಗೆ ಅಚ್ಚರಿ ಮೂಡಿಸುವ ಕೆಲವು ಫೀಚರ್ಸ್‌ಗಳು ಇವೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಆಪ್‌ನಲ್ಲಿ ಹಲವು ಬಳಕೆದಾರರ ಸ್ನೇಹಿ ಫೀಚರ್ಸ್‌ಗಳಿದ್ದು, ಅವುಗಳ ನಡುವೆ ಇನ್ನಷ್ಟು ಉಪಯುಕ್ತ ಫೀಚರ್ಸ್‌ಗಳು ಸಹ ಇವೆ. ಆದ್ರೆ ಆ ಫೀಚರ್ಸ್‌ಗಳ ಬಗ್ಗೆ ಬಳಕೆದಾರರಿಗೆ ಹೆಚ್ಚಾಗಿ ತಿಳಿದಿಲ್ಲ. ಬದಲಾಗಿ ಅವು ವಾಟ್ಸಪ್ ಟ್ರಿಕ್ಸ್ ಎಂದು ಗುರುತಿಸಿಕೊಂಡಿದ್ದು, ಬಳಕೆದಾರರು ಫಾಂಟ್ ಬದಲಿಸಬಹುದು, ಮೆಸೆಜ್ ಅನ್‌ರಿಡ್ ಮಾಡಬಹುದು, ವಾಟ್ಸಪ್ ತೆರೆಯದೆ ಮೆಸೆಜ್ ರೀಡ್ ಮಾಡಬಹುದಾದ ಆಯ್ಕೆಗಳಿವೆ. ಹಾಗಾದರೇ ವಾಟ್ಸಪ್ ಆಪ್‌ನಲ್ಲಿರುವ ಆ ಟಿಕ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಮಾರ್ಕ್ ಚಾಟ್ ಅನ್‌ರೀಡ್ ಆಯ್ಕೆ
ವಾಟ್ಸಪ್ ಸದ್ಯ ಹೆಚ್ಚು ಚಾಲ್ತಿಯಲ್ಲಿರುವ ಸಂವಹನ ಮಾಧ್ಯಮವಾಗಿದ್ದು, ಹೀಗಾಗಿ ವಾಟ್ಸಪ್‌ಗೆ ಹೆಚ್ಚಿನ ಮೆಸೆಜ್‌ಗಳು ಸಾಮಾನ್ಯ. ಕೆಲವೊಮ್ಮೆ ನೀವು ಮೆಸೆಜ್ ನೋಡಿರುತ್ತಿರಿ ಆದರೆ, ಗಡಿಬಿಡಿಯಲ್ಲಿ ಮೆಸೆಜ್‌ಗೆ ಪ್ರಿತಿಕ್ರಿಯಿಸುವುದನ್ನು ಮರೆತಿರುತ್ತಿರಿ. ಇಂಥ ಸಮಯದಲ್ಲಿ ಮಾರ್ಕ್ ಚಾಟ್ ಅನ್‌ರೀಡ್ ಆಯ್ಕೆ ಉಪಯುಕ್ತ ಎನಿಸಲಿದ್ದು, ಈ ಆಯ್ಕೆಯಲ್ಲಿ ನೀವು ಮೆಸೆಜ್ ನೋಡಿದರೂ ಸೆಂಡ್ ಮಾಡಿದವರಿಗೆ ನೀವಿನ್ನೂ ಮೆಸೆಜ್ ನೋಡಿಲ್ಲ ಎಂದು ಸೂಚಿಸುತ್ತದೆ. ಈ ಆಯ್ಕೆ ಸೆಟ್ ಮಾಡಲು ಆಂಡ್ರಾಯ್ಡ್ ಬಳಕೆದಾರರು ಹೀಗೆ ಮಾಡಿ - ಬೇಕಾದ ಕಾಂಟ್ಯಾಕ್ಟ್ ಅನ್ನು ಒತ್ತಿ ಹಿಡಿಯಿರಿ, ಆನಂತರ ಮೆನು ಲಿಸ್ಟ್‌ನಲ್ಲಿ ಅನ್‌ರೀಡ್ ಐಕಾನ್ ಸೆಲೆಕ್ಟ್ ಮಾಡಿ.

ಟೈಪ್ ಮಾಡದೇ ಮೆಸೆಜ್ ಸೆಂಡ್ ಮಾಡಿ
ವಾಟ್ಸಪ್‌ನಲ್ಲಿ ಟೈಪ್ ಮಾಡದೇ ಮೆಸೆಜ್ ಸೆಂಡ್ ಮಾಡಬಹುದಾಗಿದ್ದು, ಆದ್ರೆ ಅದಕ್ಕಾಗಿ ಕಂಪೆನಿ ಯಾವುದೇ ಫೀಚರ್ ನೀಡಿಲ್ಲ. ಬದಲಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ 'ಸಿರಿ' ಮತ್ತು 'ಗೂಗಲ್ ಅಸಿಸ್ಟಂಟ್' ವಾಯಿಸ್ ಅಸಿಸ್ಟಂಟ್‌ಗಳನ್ನು ಬಳಸುವ ಮೂಲಕ ವರ್ಬಲ ಕಮಾಂಡ್ ನೀಡಬಹುದು. ಹೀಗಾಗಿ ವಾಯಿಸ್ ಅಸಿಸ್ಟಂಟ್ ಸೇವೆ ಬಳಸಿದರೇ ಮೆಸೆಜ್ ಟೈಪ್ ಮಾಡುವ ಅಗತ್ಯ ಇರುವುದಿಲ್ಲ.

ಚಾಟ್ ಫಾಂಟ್ ಬದಲಿಸಬಹುದು
ವಾಟ್ಸಪ್‌ನಲ್ಲಿ ಕಳುಹಿಸುವ ಮತ್ತು ಸ್ವೀಕರಿಸುವ ಮೆಸೆಜ್‌ಗಳ ಫಾಂಟ್‌ಗಳು ನಾರ್ಮಲ್ ಆಗಿರುತ್ತವೆ. ಆದ್ರೆ ಮೆಸೆಜ್ ಟೈಪ್ ಮಾಡುವಾಗ ನೀವು ಫಾಂಟ್ ಅನ್ನು ಇಟಲಿಕ್ ಮತ್ತು ದಪ್ಪ ಅಕ್ಷರಗಳ ರೂಪಕ್ಕೆ ಬದಲಿಸುವ ಅವಕಾಶವಿದೆ. ಮೆಸೆಜ್ ಟೈಪ್ ಮಾಡುವಾಗ ಮೊದಲಿಗೆ ಮತ್ತು ಕೊನೆಗೆ asterisk ಸ್ಟಾರ್ ಚಿಹ್ನೆ ಬಳಸಿ ಅಕ್ಷರಗಳು ದಕ್ಷವಾಗಿ ಕಾಣಿಸುತ್ತವೆ. ಹಾಗೆಯೇ underscore ಚಿಹ್ನೆ ಬಳಸಿದರೇ ಅಕ್ಷರಗಳಿ ಇಟಾಲಿಯನ್ ಫಾಂಟ್ ರೂಪದಲ್ಲಿ ಕಾಣಿಸುತ್ತವೆ.

ಮೆಮೊರಿ ಸ್ಟೋರೇಜ್ ಫುಲ್ ಮಾಹಿತಿ
ಮೀಡಿಯಾ ಫೈಲ್ ಸೆಂಡ್ ಮಾಡಲು ವಾಟ್ಸಪ್ ಅತ್ಯುತ್ತಮ ಪ್ಲಾಟ್‌ಫಾರ್ಮ್ ಒದಗಿಸಿದ್ದು, ಎಷ್ಟೋ ಬಾರಿ ಬಹುಬೇಗನೆ ಸ್ಟೋರೇಜ್ ಫುಲ್ ಆಗುತ್ತದೆ. ಆದ್ರೆ ಯಾವ ವಾಟ್ಸಪ್ ಕಾಂಟ್ಯಾಕ್ಟ್‌ನ ಸ್ಟೋರೇಜ್ ಫುಲ್ ಆಗುವಲ್ಲಿ ಹೆಚ್ಚಿನ ಪಾಲು ಹೊಂದಿದೆ ಎಂದು ತಿಳಿಯಬಹುದಾಗಿದೆ. ಅದಕ್ಕಾಗಿ ವಾಟ್ಸಪ್ ಸೆಟ್ಟಿಂಗ್ ತೆರೆದು, ಡಾಟಾ ಮತ್ತು ಸ್ಟೋರೇಜ್ ಆಯ್ಕೆ ಸೆಲೆಕ್ಟ್ ಮಾಡಿರಿ. ಆಗ ಸ್ಟೋರೇಜ್ ಬಳಕೆ ಮತ್ತು ಕಾಂಟ್ಯಾಕ್ಟ್, ಆನಂತರದಲ್ಲಿ ಸ್ಟೋರೇಜ್ ಬಳಕೆಯ ಮಾಹಿತಿ ಕಾಣುವಿರಿ.

ಬ್ರಾಡ್‌ಕಾಸ್ಟ್ ಮೆಸೆಜ್ ಆಯ್ಕೆ
ವಾಟ್ಸಪ್‌ನಲ್ಲಿ ಗ್ರೂಪ್ ಕ್ರಿಯೆಟ್ ಮಾಡದೇ ಒಂದು ಮೆಸೆಜ್ ಅನ್ನು ಒಂದೇ ವೇಳೆಗೆ ಹಲವರಿಗೆ ಸೆಂಡ್ ಮಾಡಬಹುದಾಗ ಅವಕಾಶ ವಾಟ್ಸಪ್‌ನಲ್ಲಿದೆ. ಅದಕ್ಕಾಗಿ ಬ್ರಾಡ್‌ಕಾಸ್ಟ್ ಆಯ್ಕೆ ನೀಡಲಾಗಿದ್ದು, ಈ ಆಯ್ಕೆ ಮೂಲಕ ಬಳಕೆದಾರರು ಒಂದು ಮೆಸೆಜ್ ಅನ್ನು ಹಲವರಿಗೆ ಸೆಂಡ್ ಮಾಡಬಹುದಾಗಿದೆ. ಆಂಡ್ರಾಯ್ಡ್ ಬಳಕೆದಾರರು ವಾಟ್ಸಪ್ ಬಲ ಭಾಗದ ಮೆನು ಆಯ್ಕೆಯಲ್ಲಿ ಈ ಫೀಚರ್ ಕಾಣಬಹುದು.


Click it and Unblock the Notifications








