ಪವರ್ ಕಟ್ ಮೊದಲು ಮೆಸೇಜ್‌ ಬರುತ್ತೆ

Posted By:

ಯಾವಾಗ ವಿದ್ಯುತ್ ಕಡಿತಗೊಳ್ಳುತ್ತದೆ ಎಂದು ತಿಳಿಯುವುದಿಲ್ಲ ಎಂದು ಗೊಣಗುವ ಜನರಿಗೆ ಸಿಹಿ ಸುದ್ದಿಯೊಂದು ಬಂದಿದೆ. ವಿದ್ಯುತ್ ಕಡಿತದ ಬಗ್ಗೆ ಮಾಹಿತಿ ನೀಡಿಲು ಎಸ್ಎಂಎಸ್ ಸೇವೆ ಆರಂಭಿಸಲು ಬೆಸ್ಕಾಂ ಸಿದ್ಧತೆ ನಡೆಸಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಫಾಲ್ಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಯೋಜನೆಯಡಿ ವಿದ್ಯುತ್ ಕಡಿತವನ್ನು ಮೊದಲೇ ತಿಳಿಯಿರಿ ಎಂಬ ಎಸ್ಎಂಎಸ್ ಸೇವೆ ಮೂಲಕ ಪವರ್ ಕಟ್ ಮಾಹಿತಿಯನ್ನು ಗ್ರಾಹಕರಿಗೆ ಹತ್ತು ನಿಮಿಷ ಮೊದಲು ನೀಡಲಿದೆ. ಈ ಯೋಜನೆಯ ಪ್ರಾಯೋಗಿಕ ಜಾರಿಗಾಗಿ ಈಗಾಗಲೇ ರೂಪುರೇಷೆ ತಯಾರಾಗಿದ್ದು, ಜೂನ್‌ನಿಂದ ಈ ಸೇವೆ ಬೆಂಗಳೂರು ಜನತೆಗೆ ಲಭ್ಯವಾಗಲಿದೆ.

ಪವರ್ ಕಟ್ ಮೊದಲು ಮೆಸೇಜ್‌ ಬರುತ್ತೆ

ಎಸ್ಎಂಎಸ್ ಪಡೆಯಲು ನೀವು ಮಾಡಬೇಕಾದ್ದು ಇಷ್ಟೇ:

ನೀವು ಮೊದಲು ಸಂಸ್ಥೆಯ ವೆಬ್ ಸೈಟ್ www.bescom.orgಗೆ ಭೇಟಿ ನೀಡಬೇಕು.ವೆಬ್‌ಸೈಟ್‌ನ  ಮುಖಪುಟದಲ್ಲಿರುವ ಫಾಲ್ಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಕ್ಲಿಕ್ ಮಾಡಿ ನಿಮ್ಮ ಹೆಸರು, ಮೊಬೈಲ್ ನಂ, ಮನೆ ವಿಳಾಸ,ಇ ಮೇಲ್ ಐಡಿ, ಆರ್.ಆರ್.ನಂ ಭರ್ತಿಮಾಡಿದರೆ ನೀವು ನಿಮ್ಮ ಬಡಾವಣೆಯಲ್ಲಿ ಯಾವಾಗ ಕರೆಂಟ್ ಕಟ್ ಆಗುತ್ತದೆ ಎಂಬ ಮಾಹಿತಿ ಮೊಬೈಲ್ ಗೆ ಹತ್ತು ನಿಮಿಷಗಳ ಮೊದಲೆ ಬಂದು ಬೀಳುತ್ತದೆ.

ಇ ಮೇಲ್‌ನಲ್ಲೂ ವಿದ್ಯುತ್‌ ಕಡಿತದ ಮಾಹಿತಿ ಬರುತ್ತೆ :

ಕೇವಲ ಮೊಬೈಲ್ ಮೂಲಕ ಸಂದೇಶ ತಲುಪಿಸುವ ಕೆಲಸವನ್ನು ಬೆಸ್ಕಾಂ ಮಾಡುತ್ತಿಲ್ಲ. ನಿಮ್ಮ ಇ ಮೇಲ್‌ ಐಡಿಗೆ ವಿದ್ಯುತ್ ಕಡಿತದ ಕುರಿತು ಮಾಹಿತಿ ತಲುಪಿಸಲಿದೆ. ಇದಕ್ಕಾಗಿ ನೀವು ನಿಮ್ಮ ಮೊಬೈಲ್‌ ಸಂಖ್ಯೆಯ ಜೊತೆಗೆ ಇ ಮೇಲ್ ವಿಳಾಸವನ್ನು ಬೆಸ್ಕಾಂ ವೆಬ್ ಸೈಟ್ ನಲ್ಲಿ ಭರ್ತಿ ಮಾಡಿರಬೇಕು ಅಷ್ಟೆ.

ಫೇಸ್‌ಬುಕ್ ಫ್ಯಾನ್‌ ಪೇಜ್‌ :

ಬಳಕೆದಾರರೊಂದಿಗಿನ ಸಂವಹನ ನಡೆಸಲು ಮತ್ತು ತನ್ನ ಬೆಸ್ಕಾಂ ಈಗಾಗಲೇ ಫೇಸ್‌ಬುಕ್ ಫ್ಯಾನ್‌ ಪೇಜ್‌ ಆರಂಭಿಸಿದೆ.ವ್ಯವಸ್ಥಾಪಕ ನಿರ್ದೇಶಕರೂ ಸೇರಿದಂತೆ ಬೆವಿಕಂ ಅಧಿಕಾರಿಗಳು ಫೇಸ್‌ಬುಕ್‌ನಲ್ಲಿದ್ದು ಗ್ರಾಹಕರು ತಮ್ಮ ಸಮಸ್ಯೆಯನ್ನು ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿ ಉತ್ತರ ಪಡೆಯಬಹುದಾಗಿದೆ.

ಇದನ್ನೂ ಓದಿ : ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಮಾಹಿತಿ ತಿಳಿಯಿರಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot