ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಮಾಹಿತಿ ತಿಳಿಯಿರಿ

Posted By:

ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಟ್ರಾಫಿಕ್‌ ಪೊಲೀಸರು ಮೊಬೈಲ್‌ನಲ್ಲಿ ಲೈವ್‌ ಮೆಸೇಜ್‌ ಕಳುಹಿಸಿ ಟ್ರಾಫಿಕ್‌ ಮಾಹಿತಿ ನೀಡುವ ಸೇವೆಯನ್ನುಈ ವಾರದಿಂದ ಆರಂಭಿಸಿದ್ದಾರೆ. ಆದರೆ ಆಂಡ್ರಾಯ್ಡ್‌ ಮೊಬೈಲ್‌ ಹೊಂದಿರುವ ಬಳಕೆದಾರರಿಗೆ ಈಗಾಗಲೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬೆಂಗಳೂರಿನ ಟ್ರಾಫಿಕ್‌ಗೆ ಸಂಬಂಧಿಸಿದ ಕೆಲವು ಅಪ್ಲಿಕೇಶನ್‌ಗಳಿವೆ.ಹೀಗಾಗಿ ನಿಮ್ಮ ಸಹಾಯಕ್ಕೆ ಗಿಜ್ಬಾಟ್‌ ಈ ಅಪ್ಲಿಕೇಶನ್‌ಗಳ ಮಾಹಿತಿಯನ್ನು ತಂದಿದೆ .ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ : ಮೊಬೈಲ್‌ ಕಳ್ಳರನ್ನು ಪತ್ತೆಹಚ್ಚುವ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Traffic Genie - Bangalore

Traffic Genie - Bangalore

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಮಾಹಿತಿ ತಿಳಿಯಿರಿ

ಬೆಂಗಳೂರಿನ ಟ್ರಾಫಿಕ್‌ ಮಾಹಿತಿಯನ್ನು ತಿಳಿಯುವ ಸಲುವಾಗಿ ಜೀನಿ ಟ್ರಾಫಿಕ್‌ ಟ್ರಾಫಿಕ್‌ ಪೋಲೀಸ್‌ ಇಲಾಖೆಯ ನೆರವಿನೊಂದಿಗೆ ಈ ಆಪ್‌ ಸಿದ್ಧ ಪಡಿಸಿದ್ದು, ಈ ಆಪ್‌ನ ಮೂಲಕ ನೀವು ಕ್ರಮಿಸ ಬೇಕಾದ ಮಾರ್ಗ, ಕ್ರಮಿಸ ಬೇಕಾದ ಹಾಗೂ ತಗಲುವ ಸಮಯ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಉಚಿತವಾಗಿ ನೀಡುತ್ತದೆ.
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍

Traffic Tickets

Traffic Tickets

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಮಾಹಿತಿ ತಿಳಿಯಿರಿ

ಈ ಆಪ್‌ನ ಮೂಲಕ ನೀವು ಬೆಂಗಳೂರಿನಲ್ಲಿ ಎಲ್ಲಾದರೂ ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದಲ್ಲಿ ಅದರ ಸಂಪೂರ್ಣ ವಿವರವನ್ನು ಪಡೆಯಬಹುದಾಗಿದೆ.
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍

Auto Complaint Bangalore

Auto Complaint Bangalore

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಮಾಹಿತಿ ತಿಳಿಯಿರಿ

ಆಟೋ ಚಾಲಕರಿಂದ ಪ್ರಯಾಣಿಕರ ಮೇಲಿನ ದೌರ್ಜನ್ಯ ತಡೆಯುವ ಸಲುವಾಗಿ ಈ ಆಪ್‌ ಸಿದ್ಧ ಪಡಿಸಲಾಗಿದ್ದು ಬಳಕೆದಾರರು ಎಸ್‌ಎಂಎಸ್‌ ಮೂಲಕ ಆಟೋ ಚಾಲಕನ ವಿರುದ್ಧ ದೂರು ದಾಖಲಿಸಲು ಈ ಆಪ್‌ ನೆರವಾಗುತ್ತದೆ.
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍

Bangalore BMTC Info Skoogle

Bangalore BMTC Info Skoogle

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಮಾಹಿತಿ ತಿಳಿಯಿರಿ

ಈ ಆಪ್‌ನ ಮೂಲಕ ಬಳಕೆದಾರರು ಬಿಎಂಟಿಸಿ ಬಸ್‌ ಮಾರ್ಗ ಕುರಿತಾಗಿ ಮಾಹಿತಿ ಪಡೆಯ ಬಹುದಾಗಿದೆ. ಬಸ್‌ನ ನಂಬರ್‌ ಅಥವಾ ಮಾರ್ಗವನ್ನು ಸೆಲೆಕ್ಟ್‌ ಮಾಡಿದಲ್ಲಿ ಸಂಪೂರ್ಣ ವಿವರವನ್ನು ಈ ಆಪ್‌ ನೀಡುತ್ತದೆ.
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍

Traffic Fines India

Traffic Fines India

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಮಾಹಿತಿ ತಿಳಿಯಿರಿ

ಈ ಆಪ್‌ನ ಮೂಲಕ ನೀವು ಟ್ರಾಫಿಕ್‌ ನಿಯಮ ಉಲ್ಲಂಘಿಸಿದಂತಹ ಸಮಯದಲ್ಲಿ ಟ್ರಾಫಿಕ್‌ ಫೋಲೀಸರಿಗೆ ದಂಡದ ಮೊತ್ತ ಪಾವತಿಸುವಾಗ ಎಷ್ಟು ಮೊತ್ತ ಪಾವತಿಸ ಬೇಕೆಂದು ಮಾಹಿತಿ ಪಡೆಯಬಹುದಾಗಿದೆ. ಈ ಆಪ್‌ನಲ್ಲಿ ಯಾವ ಯಾವ ನಿಯಮದಲ್ಲಿ ಉಲ್ಲಂಘನೆಗೆ ಎಷ್ಟು ದಂಡ ಪಾವತಿಸ ಬೇಕೆಂಬ ಮಾಹಿತಿ ನೀಡಲಾಗಿದೆ. ಇದರಿಂದ ಟ್ರಾಫಿಕ್‌ ಪೋಲೀಸರು ಹೆಚ್ಚು ದಂಡದ ಮೊತ್ತಕಲೆ ಹಾಕಿ ಕೊಳ್ಳುವುದಕ್ಕೆ ಕಡಿವಾಣ ಹಾಕಬಹುದಾಗಿದೆ. ಅಂದಹಾಗೆ ಶೇ.80 ನಿಯಮ ಉಲ್ಲಂಘನೆಗಳಿಗೆ 100 ರೂ. ದಂಡ ಮಾತ್ರ ವಿಧಿಸಲಾಗುತ್ತದೆ.
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot