2G ಫೋನ್‌ನಲ್ಲಿ ರಿಲಾಯನ್ಸ್ ಜಿಯೋ 4G ಸಿಮ್ ವರ್ಕ್ ಆಗುತ್ತದೆಯೇ?
ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರು ಉತ್ತಮ ಫೀಚರ್‌ಗಳುಳ್ಳ 3G, 2G ಫೋನ್‌ಗಳನ್ನು ಖರೀದಿಸಿದ್ದಾರೆ. ಆದರೆ ಇತ್ತೀಚೆಗೆ ಟೆಲಿಕಾಂ ಆಪರೇಟರ್‌ಗಳಿಂದ 4G ಸಿಮ್ ಮೇಲೆ ಉತ್ತಮ ಆಫರ್‌ಗಳು ಹರಿದು ಬರುತ್ತಿವೆ. ಟೆಲಿಕಾಂ ಆಪರೇಟರ್‌ಗಳು 4G ಸಿಮ್ ಮತ್ತು 4G ನೆಟ್‌ವರ್ಕ್ ಆಧಾರಿತ ಉತ್ತಮ ಆಫರ್‌ಗಳನ್ನು ನೀಡಿದರೆಂದು ಸಡೆನ್ ಆಗಿ ಸ್ಮಾರ್ಟ್‌ಫೋನ್ ಅನ್ನು ಬದಲಿಸಲು ಆಗುವುದಿಲ್ಲ.
ಆದ್ದರಿಂದ ಹಲವು ಸ್ಮಾರ್ಟ್‌ಫೋನ್ ಬಳಕೆದಾರರು 2G, 3G ಮೊಬೈಲ್‌ಗಳಲ್ಲಿ 4G ಸಿಮ್ ಬಳಸಬಹುದೇ, ರಿಲಾಯನ್ಸ್ ಜಿಯೋ 4G ಸಿಮ್ ಬಳಸಬಹುದೇ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರವನ್ನು ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಸ್ಲೈಡರ್ ಓದಿ ತಿಳಿಯಿರಿ.
ಉಚಿತವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಮತ್ತು ಆಕ್ಟಿವೇಟ್ ಹೇಗೆ?

ರಿಲಾಯನ್ಸ್ ಜಿಯೋ 4G
ವೆಲ್, ಜಿಯೋ ಭಾರತದ ಮೊಟ್ಟ ಮೊದಲ ವಾಯ್ಸ್ ಓವರ್ (VoLTE) ನೆಟ್‌ವರ್ಕ್. VoLTE ಎಂದರೆ 4G ನೆಟ್‌ವರ್ಕ್ ಆಧಾರದಿಂದ ಕರೆ ಮಾಡುವುದು. ಅಂದಹಾಗೆ ಎಲ್ಲಾ ಕರೆಗಳು 4G ನೆಟ್‌ವರ್ಕ್ ಆಧಾರಿತವಾಗಿವೆ. ರಿಲಾಯನ್ಸ್ ಜಿಯೋ ಸಿಮ್ ಅನ್ನು 2G, 3G ಫೋನ್‌ಗಳಲ್ಲೂ ಬಳಸಬಹುದು. ಆದರೆ 4G ಇಂಟರ್ನೆಟ್ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ.

ಸಿಮ್‌ಗಳ ಕಾರ್ಯನಿರ್ವಹಣೆ
ಒಂದು ಸಿಮ್ ಎಲ್ಲಾ ಫೋನ್‌ಗಳಲ್ಲೂ ವರ್ಕ್ ಆಗುತ್ತದೆ. ಒಂದು 4G ಸಿಮ್ ಜಸ್ಟ್ ಇತರೆ ಸಾಧಾರಣ ಸಿಮ್ ಇದ್ದಂತೆ. ಯಾವುದೇ ಸಿಮ್ ಅನ್ನು 2G, 3G ಫೋನ್‌ಗಳಲ್ಲೂ ಬಳಸಬಹುದು. ಕರೆ ಮಾಡಬಹುದು, ಕರೆ ಸ್ವೀಕರಿಸಬಹುದಾಗಿದೆ. ಆದರೆ 4G ಸಿಮ್ 2G, 3G ಫೋನ್‌ಗಳಲ್ಲಿ 4G ನೆಟ್‌ವರ್ಕ್ ಅನ್ನು ಕನೆಕ್ಟ್ ಆಗುವುದಿಲ್ಲ.

4G ಇಂಟರ್ನೆಟ್ ಬಳಕೆ
ರಿಲಾಯನ್ಸ್ ಜಿಯೋ 4G ಸಿಮ್‌ನಲ್ಲಿ ಇಂಟರ್ನೆಟ್ ಬಳಸಲು ಅಗತ್ಯವಾಗಿ 4G ಫೋನ್, 4G ಸಿಮ್, 4G ನೆಟ್‌ವರ್ಕ್ ವ್ಯಕ್ತಿ ಇರುವ ಪ್ರದೇಶದಲ್ಲಿ ಇರಲೇಬೇಕು.

VoLTE ಉಪಯೋಗ
2G, 3G ಫೋನ್ ಮತ್ತು ನೆಟ್‌ವರ್ಕ್‌ನಲ್ಲಿ ಕರೆ ಮಾಡಿದಾಗ ಫೋನ್ ರಿಂಗ್ ಆಗಲು 4-5 ಸೆಕೆಂಡ್‌ಗಳು ಬೇಕು. ಆದರೆ ರಿಲಾಯನ್ಸ್ ಜಿಯೋ 4G ಸಿಮ್ ಬಳಕೆಯನ್ನು 4G ನೆಟ್‌ವರ್ಕ್‌ನಲ್ಲಿ ಬಳಸಿದಾಗ ಜಿರೋ ಸಮಯದಲ್ಲಿ ಪೋನ್ ರಿಂಗ್ ಆಗುತ್ತದೆ.

4 ಸಿಮ್‌ಗಳ ಬಳಕೆ 2G,3G ಫೋನ್‌ಗಳಲ್ಲಿ
ಅಂದಹಾಗೆ ಯಾವುದೇ 4G ಸಿಮ್ ಅನ್ನು 2G, 3G ಫೋನ್‌ಗಳಲ್ಲಿ ಬಳಸಬಹುದು. ಆದರೆ 4G ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಸಿಮ್ ಬಳಸುವ ಪ್ರದೇಶದಲ್ಲಿ 4G ಸಿಮ್ 3G, 2G ಇಂಟರ್ನೆಟ್ ಕನೆಕ್ಟ್ ಆಗುತ್ತದೆ. ಅಲ್ಲದೇ ಕರೆಗಳನ್ನು ಸಹ ಮಾಡಬಹುದು.

ಸಿಮ್‌ಗಳ ವಿಧಗಳು
* ಸ್ಟ್ಯಾಂಡರ್ಡ್ ಸಿಮ್ (Standard SIM)
* ಮೈಕ್ರೋ ಸಿಮ್ (Micro SIM)
* ನ್ಯಾನೋ ಸಿಮ್ (Nano SIM)
* ಕಾಂಬಿ ಸಿಮ್ (Combi SIM)

ಗಿಜ್‌ಬಾಟ್



Click it and Unblock the Notifications








