ಉಚಿತವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಮತ್ತು ಆಕ್ಟಿವೇಟ್ ಹೇಗೆ?

By Suneel
|

ಅತಿ ವೇಗದ ಡೌನ್‌ಲೋಡ್‌ ಮತ್ತು ಸೂಪರ್‌ ಬಜೆಟ್ ಬೆಲೆಯಲ್ಲಿ ಡಾಟಾ ಪ್ಯಾಕ್‌ ಖರೀದಿಸಲು ಈಗ ಒಳ್ಳೆಯ ಸಮಯ. ಅದು ಕೇವಲ 'ರಿಲಾಯನ್ಸ್‌ ಜಿಯೋ' ಸೇವೆ ಮೂಲಕ. ಅಂದಹಾಗೆ ರಿಲಾಯನ್ಸ್‌ ಜಿಯೋ ಅತಿ ವೇಗದ ಇಂಟರ್ನೆಟ್‌ ಸೇವೆ ಅನುಭವಕ್ಕಾಗಿ ಹಲವು ಜನರು ತಮ್ಮ ಲೈಫ್‌ ಸ್ಮಾರ್ಟ್‌ಫೋನ್‌ ಮತ್ತು ವೈಫೈ ಅನ್ನು ಖರೀದಿಸದೆ ಕಾತುರರಾಗಿ ಕಾಯುತ್ತಿದ್ದರು. ಇಂದು ರಿಲಾಯನ್ಸ್‌ ಜಿಯೋ 4G ನೆಟ್‌ವರ್ಕ್‌ನ ಸಿಮ್ ಎಲ್ಲರಿಗೂ ಲಭ್ಯವಿದ್ದು, ಸ್ಯಾಮ್‌ಸಂಗ್‌ ಮತ್ತು ಎಲ್‌ಜಿ ಸ್ಮಾರ್ಟ್‌ಫೋನ್‌ ಬಳಕೆದಾರರು ಸಹ ಖರೀದಿಸಿ ಬಳಸಬಹುದಾಗಿದೆ.

ಅಂದಹಾಗೆ ಇಂದಿನ ಲೇಖನದಲ್ಲಿ ರಿಲಾಯನ್ಸ್‌ ಜಿಯೋಫೈ ಡಿವೈಸ್‌ (ಸಿಮ್‌) ಅನ್ನು ಉಚಿತವಾಗಿ ಖರೀದಿಸುವುದು ಹೇಗೆ, ಆಕ್ಟಿವೇಟ್ ಮಾಡುವುದು ಹೇಗೆ ವೆರಿಫೈ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದು, ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳನ್ನು ಕ್ಲಿಕ್ಕಿಸಿ ಓದಿರಿ.

ರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಅನುಸರಿಸಬೇಕಾದ ಹಂತಗಳು

 ರಿಲಾಯನ್ಸ್ ಜಿಯೋ ಸಿಮ್ ಉಚಿತ

ರಿಲಾಯನ್ಸ್ ಜಿಯೋ ಸಿಮ್ ಉಚಿತ

ರಿಲಾಯನ್ಸ್‌ ಜಿಯೋಫೈ ಡಿವೈಸ್‌ ಬೆಲೆ ರೂ. 2,899 ಆಗಿದ್ದು, ಈ ಬೆಲೆಯು ಸಿಮ್ ಬೆಲೆಯಾಗಿದೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್‌ 4G ಸಪೋರ್ಟ್‌ ಆಗಿದ್ದಲ್ಲಿ ಸಿಮ್‌ ಉಚಿತವಾಗಿ ದೊರೆಯಲಿದೆ. ರಿಲಾಯನ್ಸ್ ಜಿಯೋ ಸಿಮ್ ಖರೀದಿಸಲು ಅಧಿಕೃತ ಫೋಟೋ ಐಡಿ, ಪಾಸ್‌ಪೋರ್ಟ್‌ ಸೈಜ್‌ ಫೋಟೋವನ್ನು ನೀಡಬೇಕು. ಫೋಟೋ ಹಿಂದಿನ ಮೂರು ತಿಂಗಳೊಳಗೆ ತೆಗೆಸಿದ್ದಾಗಿರಬೇಕು.

ಪ್ರಿವೀವ್‌ ಆಫರ್‌

ಪ್ರಿವೀವ್‌ ಆಫರ್‌

ಪ್ರಿವೀವ್‌ ಆಫರ್‌ನಲ್ಲಿ ಪಡೆದ ರಿಲಾಯನ್ಸ್ ಜಿಯೋ ಸಿಮ್‌ ಆಕ್ಟಿವೇಟ್‌ ಆದ ನಂತರ 90 ದಿನಗಳ ಕಾಲ ಅನ್‌ಲಿಮಿಟೆಡ್‌ 4G ಡಾಟಾ, ಕರೆ ಮತ್ತು ಮೆಸೇಜ್‌ಗಳ ಸೇವೆ ಉಚಿತ.

ಅರ್ಜಿ

ಅರ್ಜಿ

ಸಿಮ್ ಖರೀದಿಸುವಾಗ ಅರ್ಜಿಗೆ ಸಹಿ ಮಾಡಲು ಹಾಜರಿರಬೇಕು, ಅಲ್ಲದೇ ಫೋಟೋ ಐಡಿಯಲ್ಲಿರುವಂತೆಯೇ ಸಿಮ್‌ ಖರೀದಿದಾರರ ಸಹಿ ಇರಬೇಕು.

ಆನ್‌ಲೈನ್‌ ಬಿಲ್‌

ಆನ್‌ಲೈನ್‌ ಬಿಲ್‌

ಆನ್‌ಲೈನ್‌ ಬಿಲ್‌ ಪ್ರಕ್ರಿಯೆ ಮುಗಿದ ನಂತರ ಖರೀದಿದಾರರು ನಿಮ್ಮ ಇಮೇಲ್‌ನಲ್ಲಿ ರಶೀದಿ ಪಡೆಯುತ್ತೀರಿ. ಕೆಲವು ಗಂಟೆಗಳ ನಂತರ ಎಲ್ಲಾ ಪ್ರಕ್ರಿಯೆಗಳು ಮುಗಿದ ಮೇಲೆ ನಿಮ್ಮ ವಿವರಗಳ ಪರಿಶೀಲನೆಗಾಗಿ ಒಂದು ಮೆಸೇಜ್‌ ಪಡೆಯುತ್ತೀರಿ.

 ವಾಯ್ಸ್‌ ಮತ್ತು ಡಾಟಾ

ವಾಯ್ಸ್‌ ಮತ್ತು ಡಾಟಾ

ನೀವು ಖರೀದಿಸಿದ ಸಿಮ್‌ನಲ್ಲಿ ವಾಯ್ಸ್‌ ಮತ್ತು ಡಾಟಾ ಬಳಕೆಗಾಗಿ 1977 ಗೆ ಕರೆಮಾಡಿ ಪ್ರಕ್ರಿಯೆ ಆರಂಭಿಸಿ. ಕೇವಲ ಡಾಟಾ ಸೇವೆಗಾಗಿ 1800-890-1977 ನಂಬರ್‌ಗೆ ನಿಮ್ಮ ನೋಂದಾಯಿತ ಸಂಖ್ಯೆಯಿಂದ ಕರೆ ಮಾಡಿ. ಅಂದಹಾಗೆ 1977 ರಿಲಾಯನ್ಸ್ ತನ್ನ ಮೊದಲ ಸಾರ್ವಜನಿಕ ಸೇವೆ ಆರಂಭಿಸಿದ ವರ್ಷವಾಗಿದೆ.

ಕರೆ

ಕರೆ

ಕರೆಯಲ್ಲಿ ಸಿಮ್‌ ಪ್ಯಾಕ್‌ ಮೇಲೆ ಇರುವ ರಿಲಾಯನ್ಸ್ ಜಿಯೋ ನಂಬರ್‌ನ ಕೀ ಅನ್ನು ಹೇಳಬೇಕು. ನಂತರ ನೀವು ನೀಡಿರುವ ಐಡಿ ಡಾಕ್ಯುಮೆಂಟ್‌ನ 4 ಡಿಜಿಟ್ ನಂಬರ್‌ಗಳನ್ನು ನೀಡಬೇಕು. ಆದರೆ ಸಿಮ್ ಟೆಲಿವೆರಿಫಿಕೇಶನ್‌ ಆದ ನಂತರದಲ್ಲಿ ಆಕ್ಟಿವೇಟ್ ಆಗಿರುತ್ತದೆ. ಅಪ್ಲಿಕೇಶನ್‌ ನೀಡಿದ 4 ಗಂಟೆಗಳಲ್ಲಿ ಸಿಮ್‌ ಆಕ್ಟಿವೇಟ್‌ ಆಗುತ್ತದೆ.

Best Mobiles in India

Read more about:
English summary
Reliance Jio 4G SIM: Here’s how to purchase, verify and activate. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X