ರಾತ್ರಿಯಿಡಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಬೇಡಿ: ಯಾಕೆ..?

|

ದಿನ ಕಳೆದಂತೆ ಸ್ಮಾರ್ಟ್‌ಫೋನ್ ಬಳಕೆಯೂ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನಿನಲ್ಲಿರುವ ತೊಂದರೆಗಳು ಅಧಿಕವಾಗುತ್ತಿದೆ. ಇದರಲ್ಲಿ ಪ್ರಮುಖವಾಗಿರುವುದು ಎಂದರೆ ಬ್ಯಾಟರಿ ಸಮಸ್ಯೆ ಮತ್ತು ಬ್ಯಾಟರಿ ಸ್ಫೋಟವಾಗುವ ಸಂದರ್ಭದಗಳು. ಈ ಸಮಸ್ಯೆಗೆ ಸ್ಮಾರ್ಟ್‌ಫೋನ್‌ಗಳು ಒಂದು ಮಾದರಿಯಲ್ಲಿ ಕಾರಣವಾಗಬಹುದು, ಇದರೊಂದಿಗೆ ಸ್ಮಾರ್ಟ್‌ಫೋನ್ ಬಳಕೆಯ ವಿಧಾನವು ಸಹ ಇದಕ್ಕೆ ಪ್ರಮುಖ ಕಾರಣವಾಗುವ ಸಾಧ್ಯತೆ ಇದೆ.

ರಾತ್ರಿಯಿಡಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಬೇಡಿ: ಯಾಕೆ..?

ಈ ಹಿನ್ನಲೆಯಲ್ಲಿ ನೀವು ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ವಿಧಾನವನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಹೀಗೆ ಮಾಡಿದಲ್ಲಿ ಮಾತ್ರವೇ ಬ್ಯಾಟರಿ ಸಮಸ್ಯೆ ಮತ್ತು ಬ್ಯಾಟರಿ ಸ್ಪೋಟವಾಗುವುದನ್ನು ತಡೆಯಬಹುದು. ಇದರೊಂದಿಗೆ ಸ್ಮಾರ್ಟ್‌ಫೋನ್ ಬಾಳಿಕೆಯನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ. ನಮ್ಮ ಅಭ್ಯಾಸಗಳೇ ನಮ್ಮ ಸ್ಮಾರ್ಟ್‌ಫೋನ್ ಬಾಳಿಕೆಯನ್ನು ನಿರ್ಧರಿಸಲಿವೆ.

ಸುಮ್‌ಸುಮ್ನೆ ಚಾರ್ಜ್ ಬೇಡ:

ಸುಮ್‌ಸುಮ್ನೆ ಚಾರ್ಜ್ ಬೇಡ:

ಚಾರ್ಚರ್ ಕಂಡರೆ ಸಾಕು ಸ್ಮಾರ್ಟ್‌ಫೋನಿನಲ್ಲಿ ಚಾರ್ಜ್ ಇದಿಯೋ, ಇಲ್ಲವೋ ನೋಡದೆ ಚಾರ್ಜಿಗೆ ಸಿಕ್ಕಿಸುವುದು ಉತ್ತಮ ಅಭ್ಯಾಸವಲ್ಲ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬ್ಯಾಟರಿ ಖಾಲಿಯಾಗುವವವರೆಗೂ ಬಳಕೆ ಮಾಡಿ ಮತ್ತು ಸಂಫೂರ್ಣವಾಗಿ ಚಾರ್ಜ್ ಆಗುವವರೆಗೂ ಚಾರ್ಜ್ ಮಾಡಿ. ಅದನ್ನು ಬಿಟ್ಟು ಸುಮ್ಮನೆ ಚಾರ್ಜ್ ಗೆ ಹಾಕಿ-ತೆಗೆದು ಮಾಡಬೇಡಿ.

ಫುಲ್‌ ನೈಟ್ ಚಾರ್ಜ್ ಬೇಡ:

ಫುಲ್‌ ನೈಟ್ ಚಾರ್ಜ್ ಬೇಡ:

ಮಲಗುವ ಸಮಯದಲ್ಲಿ ಮಾತ್ರವೇ ಮೊಬೈಲ್ ದೂರ ಇಡುವ ನಾವು, ಆಸಂಧರ್ಬದಲ್ಲಿ ಚಾರ್ಜ್ ಆದರೂ ಆಗಲಿ ಎಂದು ನೈಟ್ ಫುಲ್ ಚಾರ್ಜ್ ಗೆ ಇಡುತ್ತೇವೆ. ಆದರೆ ಇದು ಸರಿಯಾದ ಅಭ್ಯಾಸವಲ್ಲ. ಈ ಸಂದರ್ಭದಲ್ಲಿ ಬ್ಯಾಟರಿ ಅಗತ್ಯಕ್ಕಿಂತ ಹೆಚ್ಚಾಗಿ ಚಾರ್ಜ್ ಆಗಲಿದ್ದು, ಬ್ಯಾಟರಿ ಬಾಳಿಕೆಯ ಅವಧಿ ಕುಂಠಿತವಾಗುತ್ತೆ,

ಚಾರ್ಜ್ ಸಮಯದಲ್ಲಿ ಫೋನ್ ಬಳಕೆ ಬೇಡ:

ಚಾರ್ಜ್ ಸಮಯದಲ್ಲಿ ಫೋನ್ ಬಳಕೆ ಬೇಡ:

ಇದಲ್ಲದೇ ಇನೇನು ಬ್ಯಾಟರಿ ಮುಗಿಯುವ ಹಂತಕ್ಕೆ ಬಂದ ಸಂದರ್ಭದಲ್ಲಿ ಫೋನ್ ಚಾರ್ಜಿಗೆ ಹಾಕುವ ನಾವು, ಆ ಸಂದರ್ಭದಲ್ಲಿಯೂ ಮೊಬೈಲ್ ಬಳಕೆ ಮಾಡುತ್ತವೆ. ಇದು ಉತ್ತಮವಾದ ಅಭ್ಯಾಸವಲ್ಲ. ಚಾರ್ಜ್ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಿದರೆ ಸ್ಮಾರ್ಟ್‌ಫೋನ್ ಹಾರ್ಡ್‌ವೇರ್-ಸಾಫ್ಟ್‌ವೇರ್‌ಗೆ ಹೆಚ್ಚು ಹೊಡೆತ ನೀಡಲಿದೆ. ಇದರಿಂದಾಗಿ ಚಾರ್ಜ್ ಸಮಯದಲ್ಲಿ ಫೋನ್ ಬಳಕೆ ಬೇಡ. ಬಳಸಲೇ ಬೇಕಾದರೆ ಚಾರ್ಜ್ ನಿಂದ ತೆಗೆದು ಬಳಕೆ ಮಾಡಿ.

ಬೇರೆ ಬೇರೆ ಚಾರ್ಜರ್ ಬೇಡ:

ಬೇರೆ ಬೇರೆ ಚಾರ್ಜರ್ ಬೇಡ:

ಅನಿವಾರ್ಯವಲ್ಲದ ಸಂದರ್ಭಗಳನ್ನು ಹೊರತು ಪಡಿಸಿದರೆ ನಿಮ್ಮ ಸ್ಮಾರ್ಟ್‌ಫೋನಿನೊಂದಿಗೆ ನೀಡಿರುವ ಚಾರ್ಜರ್ ಅನ್ನು ಬಿಟ್ಟು ಬೇರೆ ಚಾರ್ಜರ್ ಗಳನ್ನು ಬಳಕೆಮಾಡಬೇಡಿ. ಹೀಗೆ ಮಾಡಿದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಆಗುವ ಸಂದರ್ಭದಲ್ಲಿ ಹಾರ್ಡ್‌ವೇರ್‌ಗೆ ಹಾನಿಯಾಗಲಿದ್ದು, ಪೋನ್ ಸ್ಪೋಟವಾಗುವ ಸಾಧ್ಯತೆ ಹೆಚ್ಚಾಗಿರುವುದು.

ಎಲ್ಲಾ ಸಮಯದಲ್ಲಿಯೂ ಫಾಸ್ಟ್‌ ಚಾರ್ಜಿಂಗ್ ಬೇಡ:

ಎಲ್ಲಾ ಸಮಯದಲ್ಲಿಯೂ ಫಾಸ್ಟ್‌ ಚಾರ್ಜಿಂಗ್ ಬೇಡ:

ಇಂದಿನ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ನೀಡಿರುತ್ತಾರೆ. ಆದರೆ ಇದನ್ನು ಅನಿವಾರ್ಯ ಸಂದರ್ಭದಲ್ಲಿ ಮಾತ್ರವೇ ಬಳಕೆ ಮಾಡುವುದು ಉತ್ತಮ. ಸಾಮಾನ್ಯ ಪರಿಸ್ಥಿತಿಯಲ್ಲಿ ಫಾಸ್ಟ್ ಚಾರ್ಜಿಂಗ್ ಅವಲಂಬಿಸುವುದರಿಂದ ಬ್ಯಾಟರಿ ಮತ್ತು ಫೋನ್ ಬಾಳಿಕೆ ಕುಂಠಿತವಾಗಲಿದೆ.

ಲೋಕಲ್ ಪವರ್ ಬ್ಯಾಂಕ್ ಬೇಡ:

ಲೋಕಲ್ ಪವರ್ ಬ್ಯಾಂಕ್ ಬೇಡ:

ಮಾರುಕಟ್ಟೆಯಲ್ಲಿ ಉತ್ತಮವಾದ ಪವರ್ ಬ್ಯಾಂಕ್‌ಗಳು ಲಭ್ಯವಿದೆ. ಅದನ್ನು ಬಿಟ್ಟು ಕಡಿಮೆ ಬೆಲೆಗೆ ದೊರೆಯುವ ಲೋಕಲ್ ಪವರ್ ಬ್ಯಾಂಕ್‌ಗಳನ್ನು ಬಳಸಿಕೊಳ್ಳಬೇಡಿ. ಇವುಗಳು ಸರಿಯಾಗಿ ಚಾರ್ಜ್ ಮಾಡುವ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಹಾನಿ ಮಾಡಲಿವೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಓದಿರಿ: ಏರ್‌ಟೆಲ್‌ನಿಂದ ಮತ್ತೊಂದು ಭರ್ಜರಿ IPL ಪ್ಲಾನ್: ಹೆಚ್ಚು ಡೇಟಾ, ಉಚಿತ IPL, ಮತ್ತಷ್ಟು..!

Best Mobiles in India

English summary
charging smartphone overnight Is harmful. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X