ಮನೆಯಲ್ಲೇ ಕುಳಿತು ಮೊಬೈಲ್‌ ಕವರ್‌ ಪ್ರಿಂಟ್‌ ತೆಗೆಯಿರಿ

Posted By:

ಇನ್ನು ಮುಂದೆ ನೀವು ಮೊಬೈಲ್‌ ಕವರ್‌ಗಾಗಿ ಅಲೆದಾಡಬೇಕಿಲ್ಲ. ನಿಮ್ಮ ಮನೆಯಲ್ಲೇ ಮೊಬೈಲ್‌ ಕವರ್‌ನ್ನು ವಿನ್ಯಾಸ ಮಾಡಬಹುದು. ನಿಮಗೆ ಇಷ್ಟಬಂದ ಕಲರ್‌ನ್ನು ಹಾಕಿ ವಿನ್ಯಾಸ ಮಾಡಿ ಪ್ರಿಂಟ್‌ ಹಾಕಬಹುದು. ಹೌದು ಈ ಸ್ಮಾರ್ಟ್‌ಫೋನ್‌ ಯುಗದಲ್ಲಿ ಕವರ್‌ ಪ್ರಿಂಟ್‌ ಮಾಡಬಹುದು, ಮನೆಯಲ್ಲೇ ಸಿನಿಮಾ ಥಿಯೇಟರನ್ನಾಗಿ ಮಾಡಬಹುದು.

ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ವಿವಿಧ ಸ್ಮಾರ್ಟ್‌ಫೋನ್‌ ತಂತ್ರಜ್ಞಾನ ಮತ್ತು ಸ್ಮಾರ್ಟ್‌ಫೋನ್‌ ಸಹಾಯದಿಂದ ಕೆಲಸ ಮಾಡುವ ಗ್ಯಾಡ್ಜೆಟ್‌ಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂದು ಹೋಗಿ.

ಲಿಂಕ್‌ : ವಿಶ್ವದ ದೊಡ್ಡ ಜೆರಾಕ್ಸ್ ಕಂಪೆನಿಯನ್ನು ನೋಡಿದ್ದೀರಾ ?

ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ನಲ್ಲೇ ಕಾಫಿ ಬಿಸಿ ಮಾಡಿ.!

ಮೊಬೈಲ್‌ನಲ್ಲೇ ಕಾಫಿ ಬಿಸಿ ಮಾಡಿ.!

ಚಿಪ್‌ ತಯಾರಿಸುವ ಕ್ವಾಲಕಂ ಕಂಪೆನಿ ಹೊಸದಾಗಿ ಕಾಫಿ ಬಿಸಿ ಮಾಡುವ ಯಂತ್ರವನ್ನು ಕಂಡು ಹಿಡಿದಿದೆ. ಇಂಟರ್‌ನೆಟ್‌ ಮುಖಾಂತರ ಈ ಯಂತ್ರವನ್ನು ನಿಯಂತ್ರಣ ಮಾಡಬಹುದು. ಸ್ಯಾಮ್‌ಸಂಗ್‌ ಟ್ಯಾಬ್ಲೆಟ್‌ನಲ್ಲಿ ಇದರ ಪ್ರಯೋಗ ಯಶಸ್ವಿಯಾಗಿದ್ದುದೆ . ಟ್ಯಾಬ್ಲೆಟ್‌ನಲ್ಲಿ ಇರುವ ಅಪ್ಲಿಕೆಶನ್‌ ಆನ್‌ ಮಾಡಿಕೊಂಡು ಎಷ್ಟು ಡಿಗ್ರಿಯಲ್ಲಿ ಕಾಫಿ ಬಿಸಿಯಾಗಬೇಕು ಎಂದು ನಿಗದಿ ಪಡಿಸಿದ್ರೆ ಅಷ್ಟೇ ಡಿಗ್ರಿಯಲ್ಲಿ ಕಾಫಿ ಬಿಸಿಯಾಗಿ ರೆಡಿಯಾಗಯತ್ತದೆ.

ಸ್ನಾನ ಮಾಡಿಕೊಂಡೇ ಮೊಬೈಲ್‌ನಲ್ಲಿ ಮಾತನಾಡಿ

ಸ್ನಾನ ಮಾಡಿಕೊಂಡೇ ಮೊಬೈಲ್‌ನಲ್ಲಿ ಮಾತನಾಡಿ

ಸೋನಿ ಕಂಪೆನಿ ಹೊಸದಾಗಿ ಬಿಡುಗಗಡೆ ಮಾಡಿದ ಎಕ್ಸ್‌ಪೀರಿಯಾ ಝಡ್‌ ವಾಟರ್‌ ಪ್ರೂಫ್‌ ತಂತ್ರಜ್ಞಾನದೊಂದಿಗೆ ಹೊರ ಬಂದಿದೆ.30 ನಿಮಿಷ ಈ ಮೊಬೈಲ್‌ನ್ನು ನೀರಿನಲ್ಲಿಟ್ಟರೂ ಏನ್‌ ಆಗುವುದಿಲ್ಲ.ಶವರ್‌ ಬಳಸಿ ಸ್ನಾನ ಮಾಡಿದ್ರೂ ಮೊಬೈಲ್‌ ಏನು ಆಗುದಿಲ್ಲ ಎಂದು ಸೋನಿ ಕಂಪೆನಿ ತಿಳಿಸಿದೆ.

ನೋಕಿಯಾ 3D ಪ್ರಿಂಟರ್‌

ನೋಕಿಯಾ 3D ಪ್ರಿಂಟರ್‌

ನಿಮಗೆ ಇಷ್ಟವಿರುವಂತಹ ಮೊಬೈಲ್‌ ಕವರ್‌ನ್ನು ಮುಂದೆ ನೀವೇ ವಿನ್ಯಾಸ ಮಾಡಬಹುದು. ನೋಕಿಯಾ ಕಂಪೆನಿ ಈ 3ಡಿ ಪ್ರಿಂಟರ್‌ನ್ನು ಕಂಡುಹಿಡಿದಿದ್ದು. ಇದರಲ್ಲಿ ನಿಮಗೆ ಬೇಕಾದ ಬಣ್ಣಗಳನ್ನು ಆರಿಸಿ ಹ್ಯಾಂಡ್‌ಸೆಟ್‌ ಕವರ್‌ನ್ನು ಪ್ರಿಂಟ್‌ತೆಗೆಯಬಹುದು.

ಮನೆಯಲ್ಲೇ ಸಿನಿಮಾ ಥಿಯೇಟರ್‌

ಮನೆಯಲ್ಲೇ ಸಿನಿಮಾ ಥಿಯೇಟರ್‌

ಇನ್ನು ಮುಂದೆ ನೀವು ಥಿಯೇಟರ್‌ಗೆ ಹೋಗದೇ ಮನೆಯಲ್ಲೇ ಕುಳಿತು ಥಿಯೇಟರ್‌ ಅನುಭವ ಪಡೆಯಬಹುದು. ಚೀನಾದ ಡೋಲ್‌ಬೈ ಸೌಂಡ್‌ (Dolby Sound) ಕಂಪೆನಿ ಹೊಸ ಸೌಂಡ್‌ ಸಿಸ್ಟಂ ವಿನ್ಯಾಸ ಮಾಡಿದ್ದು, ಸ್ಮಾರ್ಟ್‌ಫೋನ್‌ ಕನೆಕ್ಟ್‌ ಮಾಡಿದ್ರೆ ಥೀಯೇಟರ್‌ನಲ್ಲಿ ಹೇಗೆ ಸುತ್ತಲೂ ಶಬ್ಧ ಕೇಳುತ್ತದೋ ಅದೇ ರೀತಿಯಲ್ಲಿ ಮನೆಯಲ್ಲಿ ಕೇಳಬಹುದು ಎಂದು ಕಂಪೆನಿ ತಿಳಿಸಿದೆ.

ಹಿರಿಯ ವ್ಯಕ್ತಿಗಳಿಗಾಗಿ ಸ್ಮಾರ್ಟ್‌ಫೋನ್‌

ಹಿರಿಯ ವ್ಯಕ್ತಿಗಳಿಗಾಗಿ ಸ್ಮಾರ್ಟ್‌ಫೋನ್‌

ಜಪಾನಿನ Fujitsu ಕಂಪೆನಿ ಹಿರಿಯ ವ್ಯಕ್ತಿಗಳಿಗಾಗಿ ಸ್ಮಾರ್ಟ್‌ಫೋನ್‌ ತಯಾರಿಸಿದೆ.50 ವರ್ಷದ ಮೇಲ್ಪಟ್ಟವರಿಗೆ ಈ ಸ್ಮಾರ್ಟ್‌ಫೋನ್‌ ವಿನ್ಯಾಸ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ನಲ್ಲಿ ಅಕ್ಷರಗಳು ದೊಡ್ಡ ಗಾತ್ರದಲ್ಲಿ ಡಿಸ್ಪ್ಲೇ ಆಗುವಂತೆ ರೂಪಿಸಿದ್ದಾರೆ. ಅಷ್ಟೇ ಅಲ್ಲದೇ ಮೂವತ್ತು ನಿಮಿಷಗಳ ಕಾಲ ಇದನ್ನು ನೀರಿನಲ್ಲಿಟ್ಟರೂ ಏನು ಆಗುದಿಲ್ಲ ಎಂದು ಕಂಪೆನಿ ತಿಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot