ಆನ್‌ಲೈನ್ ಬ್ಯಾಂಕಿಂಗ್ ವಂಚನೆ ಹಣಕ್ಕೆ ಯಾರು ಜವಬ್ದಾರರು? ಗ್ರಾಹಕರು ಏನು ಮಾಡಬೇಕು?
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯ ಮಾರ್ಗದರ್ಶಿ ಸೂತ್ರಗಳನ್ನು ಆರ್‌ಬಿಐ ಪರಿಷ್ಕರಣೆ ಮಾಡಿದೆ.!!
ಬ್ಯಾಂಕಿಂಗ್ ವಹಿವಾಟಿನಲ್ಲಿ ಹೆಚ್ಚುತ್ತಿರುವ ವಂಚನೆಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಅಂಶಗಳನ್ನು ಜಾರಿಗೆ ತಂದಿದೆ.! ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯ ಮಾರ್ಗದರ್ಶಿ ಸೂತ್ರಗಳನ್ನು ಆರ್‌ಬಿಐ ಪರಿಷ್ಕರಣೆ ಮಾಡಿದೆ.!!
ಬ್ಯಾಂಕ್ ಮತ್ತು ಬ್ಯಾಂಕ್ ಗ್ರಾಹಕರೀರ್ವರಿಗೂ ಬ್ಯಾಂಕಿಂಗ್ ವಹಿವಾಹಿಟಿನ ಪಾಲುದಾರಿಕೆಯಡಿಯಲ್ಲಿ ಬ್ಯಾಕಿಂಗ್ ವಹಿವಾಟಿನ ನೂತನ ಪರಿಷ್ಕರಣೆ ತರಲಾಗಿದೆ.! ಬ್ಯಾಂಕಿಂಗ್ ವಂಚನೆ ನಡೆದರೆ ಬ್ಯಾಂಕ್ ಗ್ರಾಹಕ ಏನು ಮಾಡಬೇಕು? ಮತ್ತು ಬ್ಯಾಂಕ್ ಕಾರ್ಯಗಳೇನು ಎಂಬುದಕ್ಕೆ ಆರ್‌ಬಿಐ ನಿರ್ದೇಶನ ನೀಡಿದೆ.!!
ಹಾಗಾದರೆ, ಬ್ಯಾಂಕಿಂಗ್ ವಂಚನೆ ಆದರೆ ಬ್ಯಾಂಕ್ ಗ್ರಾಹಕರು ಏನು ಮಾಡಬೇಕು? ಇದಕ್ಕೆ ಬ್ಯಾಂಕ್ ಸಹಕಾರ ಹೇಗಿರಬೇಕು? ವಂಚನೆಯ ಹಣಕ್ಕೆ ಯಾರು ಜವಬ್ದಾರರು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಎಸ್ಎಂಎಸ್ ಅಲರ್ಟ್ ಸೇವೆ ಕಡ್ಡಾಯ
ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ನಡೆಯಲ್ಲಿ ಕಡ್ಡಾಯವಾಗಿ ಎಸ್ಎಂಎಸ್ ಅಲರ್ಟ್ ಪಡೆಯಲು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳಬೇಕು ಮತ್ತು ಇಂತಹ ಗ್ರಾಹಕರಿಗೆ ಎಸ್ಎಂಎಸ್ ಸೌಲಭ್ಯವನ್ನು ಬ್ಯಾಂಕ್‌ಗಳು ಕಡ್ಡಾಯವಾಗಿ ಕಲ್ಪಿಸಬೇಕು. ಇ-ಮೇಲ್ ಇದ್ದಲ್ಲಿ ಅದಕ್ಕೂ ಅಲರ್ಟ್ ಸಂದೇಶ ಕಳುಹಿಸಬಹುದು ಎಂದು ಆರ್‌ಬಿಐ ತಿಳಿಸಿದೆ.

ಬ್ಯಾಂಕ್‌ಗಳೇ ಸುರಕ್ಷಿತೆ ಒದಗಿಸಬೇಕು.!
ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ನಡೆಸುವ ಗ್ರಾಹಕರಿಗೆ ಬ್ಯಾಂಕ್‌ಗಳೇ ಸುರಕ್ಷತೆಯ ವ್ಯವಸ್ಥೆ ಕಲ್ಪಿಸಬೇಕು. ಬ್ಯಾಂಕ್ ಅಕೌಂಟ್ ಹೊಂದಿರುವ ಗ್ರಾಹಕನಿಗೆ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಬಗ್ಗೆ ಸಂಪೂರ್ಣ ವಿವರ ನೀಡುವ ಕಾರ್ಯವನ್ನು ಬ್ಯಾಂಕ್‌ಗಳು ಮಾಡಬೇಕು ಎಂದು ಸೂಚಿಸಿದೆ.!!

ಬ್ಯಾಂಕ್ ಗಮನಕ್ಕೆ ತರಲೇಬೇಕು.!!
ಒಂದು ವೇಳೆ ಗ್ರಾಹಕನಿಗೆ ತನಗೆ ವಂಚನೆಯಾಗಿದೆ ಎಂದು ಬ್ಯಾಂಕ್ ಗ್ರಾಹಕನಿಗೆ ತಿಳಿದರೆ ಮೂರು ದಿನಗಳೊಳಗಾಗಿ ಸಂಬಂಧಪಟ್ಟ ಬ್ಯಾಂಕ್‌ಗೆ ಮಾಹಿತಿ ನೀಡಬೇಕು.ಇಲ್ಲದಿದ್ದರೆ ಆತನ ಹೊಣೆಗಾರಿಕೆ ಶೂನ್ಯ ಎಂಬ ಕಾರಣದಿಂದ ಗ್ರಾಹಕನಿಗೆ ಹಣ ವಾಪಸ್ ಸಿಗುವ ಸಾಧ್ಯತೆ ಕಡಿಮೆ!!

ಮೂರು ದಿನಗಳ ಒಳಗಾಗಿ ಉತ್ತರಿಸಬೇಕು.!!
ವಂಚನೆಯಾದ ಸಂದರ್ಭದಲ್ಲಿ ಬ್ಯಾಂಕ್ನಿಂದ ಸೂಚನೆ ಬಂದ ಬಳಿಕ ಮೂರು ದಿನಗಳ ಒಳಗಾಗಿ ಬ್ಯಾಂಕ್ ಗ್ರಾಹಕ ಅದಕ್ಕೆ ಉತ್ತರಿಸಬೇಕು. ಬ್ಯಾಂಕ್ ಸೂಚನೆಗೆ ಉತ್ತರಿಸದೇ ಇದ್ದರೆ ಇದರ ಹೊಣೆಗಾರಿಕೆ ಕೂಡ ಗ್ರಾಹಕನದ್ದೆ ಆಗಿರುತ್ತದೆ. ಹಾಗಾಗಿ, ಬ್ಯಾಂಕ್ ಸೂಚನೆಗಳನ್ನು ಪಾಲಿಸುವುದು ಬಹಳ ಮುಖ್ಯ.!!

25,000 ರೂಪಾಯಿಗಳಿಗೆ ಮಿತಿ.!!
ಅನಧಿಕೃತ ವಹಿವಾಟು ನಡೆದ ಬಗ್ಗೆ ವ್ಯಕ್ತಿಯೊಬ್ಬ ಏಳು ಕೆಲಸದ ದಿನಗಳ ಒಳಗಾಗಿ ವರದಿ ಮಾಡಿದಲ್ಲಿ ಗ್ರಾಹಕನ ಹೊಣೆಗಾರಿಕೆಯನ್ನು 25,000 ರೂಪಾಯಿಗಳಿಗೆ ಮಿತಿಗೊಳಿಸಬೇಕು. ಅದಕ್ಕಿಂತ ಹೆಚ್ಚಿನ ದಿನಗಳಲ್ಲಿ ಗ್ರಾಹಕನ ನಷ್ಟಕ್ಕೆ ಪರಿಹಾರ ಸಾಧ್ಯವಿಲ್ಲಾ ಎಂದು ಆರ್‌ಬಿಐ ಹೇಳಿದೆ.!!
ಓದಿರಿ:ಆಧಾರ್ ಮಾಹಿತಿ ಲೀಕ್ ಆದರೆ ಏನೆಲ್ಲಾ ತೊಂದರೆ ಆಗುತ್ತೆ?!!.ಇದಕ್ಕೆ ಪರಿಹಾರವೇನು?


Click it and Unblock the Notifications








