Subscribe to Gizbot

ಆಧಾರ್ ಮಾಹಿತಿ ಲೀಕ್ ಆದರೆ ಏನೆಲ್ಲಾ ತೊಂದರೆ ಆಗುತ್ತೆ?!!.ಇದಕ್ಕೆ ಪರಿಹಾರವೇನು?

Written By:

ಜಿಯೋವಿನಿಂದ ಆಧಾರ್‌ ಕಾರ್ಡ್ ಮಾಹಿತಿಗಳೆಲ್ಲವೂ ಲೀಕ್ ಆಗಿದೆ ಎಂಬ ಸುದ್ದಿ ಈಗಾಗಲೇ ಎಲ್ಲೆಡೇ ಹರಿದಾಡಿದ್ದು, ಆಧಾರ್ ಕಾರ್ಡ್‌ ಮಾಹಿತಿ ಬಗ್ಗೆ ಜನರು ಭಯಭೀತರಾಗಿದ್ದಾರೆ.! ಇದೇ ಮೊದಲ ಭಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಧಾರ್ ಕಾರ್ಡ್ ಮಾಹಿತಿ ಲೀಕ್ ಆಗಿದ್ದು, ಇದೀಗ ಜಿಯೋ ಜೊತೆಗೆ ಗ್ರಾಹಕರ ಮೇಲೂ ಸಹ ತೂಗುಗತ್ತಿ ನೇತಾಡುತ್ತಿದೆ.!!

ಹೌದು, ಈ ಸುದ್ದಿಯ ಜೊತೆಯಲ್ಲಿಯೇ ಆಧಾರ್‌ ಕಾರ್ಡ್ ಮಾಹಿತಿ ಲೀಕ್ ಆಗಿರುವುದರಿಂದ ಆಗಬಹುದಾದ ತೊಂದರೆಗಳ ಬಗ್ಗೆಯೂ ವಿಷಯಗಳು ಹೆಚ್ಚು ಮನ್ನಣೆ ಪಡೆದಿದ್ದು, ಆಧಾರ್ ಮೂಲಕ ಪ್ರತಿಯೊಬ್ಬರ ಮಾಹಿತಿಯೂ ಬೇರೆಯವರ ಕೈ ಸೇರುವುದರಿಂದ ಆಗಬಹುದಾದ ತೊಂದರೆಗಳೇನು ಎಂಬುದು ಎಲ್ಲರ ಪ್ರಶ್ನೆಯಾಗಿದೆ.!!

ಹಾಗಾಗಿ, ಆಧಾರ್ ಕಾರ್ಡ್ ಮಾಹಿತಿ ಸೋರಿಕೆಯಿಂದ ಆಗಬಹುದಾದ ತೊಂದರೆಗಳೆನು? ನಮ್ಮದಲ್ಲದ ತಪ್ಪಿಗೂ ನಾವು ತೊಂದರೆ ಸಿಲುಕುವ ಸಾಧ್ಯತೆ ಹೆಚ್ಚು ಏಕೆ? ಮತ್ತು ಆಧಾರ್‌ ಕಾರ್ಡ್ ಲಾಕ್ ಮಾಡುವುದು ಹೇಗೆ? ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆನ್‌ಲೈನ್ ಭವಿಷ್ಯಕ್ಕೆ ಮಾರಕ!!

ಆನ್‌ಲೈನ್ ಭವಿಷ್ಯಕ್ಕೆ ಮಾರಕ!!

ಆಧಾರ್ ಕಾರ್ಡ್ ಮಾಹಿತಿ ಇದೀಗ ಎಲ್ಲಾ ಸರ್ಕಾರಿ ಸೇವೆ ಮತ್ತು ಆನ್‌ಲೈನ್ ಸೇವೆಗಳಿಗೂ ಒಂದೇ ಆಗಿದ್ದು, ಇಂದು ಆಧಾರ್ ಕಾರ್ಡ್ ಮಾಹಿತಿ ಏನಾದರೂ ಲೀಕ್ ಆದರೆ ನಿಮ್ಮೆಲ್ಲಾ ಆನ್‌ಲೈನ್ ಭದ್ರತೆಗಳು ಕೊನೆಗೊಂಡತೆಯೇ ಸರಿ. ಹಾಗಾಗಿ, ಇಂದಿನ ಆನ್‌ಲೈನ್ ಯುಗದಲ್ಲಿ ಆಧರ್‌ಗೆ ಆಧಾರವೇ ನೀವು.!!

ನಿಮ್ಮ ಫೋನ್ ನಂಬರ್ ಮಾಹಿತಿ ಲೀಕ್!!

ನಿಮ್ಮ ಫೋನ್ ನಂಬರ್ ಮಾಹಿತಿ ಲೀಕ್!!

ಆಧಾರ್‌ ಕಾರ್ಡ್ ಮಾಹಿತಿ ಲೀಕ್ ಆಗುವುದರ ಜೊತೆಗೆ ನಿಮ್ಮ ಫೋನ್ ನಂಬರ್ ಸಹ ಕ್ರಿಮಿನಲ್‌ಗಳಿಗೆ ದೊರೆಯುತ್ತದೆ. ನಿಮ್ಮ ಫೋನ್‌ ನಂಬರ್ ಮೂಲಕ ನಿಮ್ಮ ಚಟುವಟಿಗೆಗಳನ್ನು ಹ್ಯಾಕ್ ಮಾಡಿ ನಿಮ್ಮನ್ನು ಮೋಸಗೊಳಿಸುವುದು ಕಷ್ಟಸಾಧ್ಯವೇನಲ್ಲ.!!

ಕ್ರಿಮಿನಲ್ ಕಾರ್ಯಕ್ಕೆ ಬಳಕೆಯಾಗುವ ಸಾಧ್ಯತೆ ಹೆಚ್ಚು.!!

ಕ್ರಿಮಿನಲ್ ಕಾರ್ಯಕ್ಕೆ ಬಳಕೆಯಾಗುವ ಸಾಧ್ಯತೆ ಹೆಚ್ಚು.!!

ಆಧಾರ್‌ ಕಾರ್ಡ್ ಮಾಹಿತಿ ಕ್ರಿಮಿನಲ್‌ಗಳಿಗೆ ಸಿಲುಕುವುದರಿಂದ ನಿಮ್ಮನ್ನು ಅವರು ಮೋಸ ಮಾಡುವ ಸಂಭವ ಹೆಚ್ಚಿರುತ್ತದೆ. ಕೆಲವು ಕ್ರಿಮಿನಲ್ ಕಾರ್ಯಗಳಿಗೆ ನಿಮ್ಮ ಆಧಾರ್ ಮಾಹಿತಿ ಬಳಸಿ ನಿಮ್ಮದಲ್ಲದ ತಪ್ಪಿಗೆ ನೀವು ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.!!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ತೊಂದರೆ.!!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ತೊಂದರೆ.!!

ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಆಗಿರುವುದರಿಂದ ಆಧಾರ್ ಕಾರ್ಡ್ ಮಾಹಿತಿ ಸೈಬರ್ ಕ್ರಿಮಿನಲ್‌ಗಳಿಗೆ ದೊರೆತರೆ ಆಗಬಹುದಾದ ತೊಂದರೆ ಹೆಚ್ಚು ಎನ್ನಬಹುದು.!! ಇಂದು ಎಲ್ಲಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಆಧಾರ್ ಮಾಹಿತಿಯನ್ನು ಹೊತ್ತಿವೆ!!

ಆಧಾರ್ ಕಾರ್ಡ್‌ ಲಾಕ್ ಮಾಡಿ.!!

ಆಧಾರ್ ಕಾರ್ಡ್‌ ಲಾಕ್ ಮಾಡಿ.!!

ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್ ಮಾಹಿತಿಯು ದುರ್ಬಳಕೆಯಾಗದಂತೆ ತಡೆಯಲು ಆನ್‌ಲೈನ್‌ನಲ್ಲಿಯೇ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಬಹುದು. ಲಾಕ್ ಮಾಡಿದರೆ ಯಾರೇ ಆಗಲಿ ನಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಬಳಸಲು ಅಥವಾ ಕದಿಯಲು ಸಾಧ್ಯವಿಲ್ಲಾ.!!

ಆಧಾರ್ ಕಾರ್ಡ್‌ ಲಾಕ್ ಮಾಡುವುದು ಹೇಗೆ?

ಆಧಾರ್ ಕಾರ್ಡ್‌ ಲಾಕ್ ಮಾಡುವುದು ಹೇಗೆ?

ಗುರುತಿನ ಚೀಟಿ ಪ್ರಾಧಿಕಾರದ ಅಫಿಶಿಯಲ್ ವೆಬ್‌ಸೈಟ್‌ ತೆರೆದು ಆಧಾರ್‌ ಸರ್ವಿಸಸ್ ಎಂಬ ಆಯ್ಕೆ ಕಾಣಿಸುತ್ತದೆ. ನಂತರ ಅದರಲ್ಲಿ ಲಾಕ್/ ಅನ್‌ಲಾಕ್ ಬಯೋಮೆಟ್ರಿಕ್ ಎಂಬ ಆಯ್ಕೆ ಒತ್ತಿದರೆ ನಿಮಗೆ ಆಧಾರ್‌ ಕಾರ್ಡ್‌ ಲಾಕ್ ಮಾಡಬಹುದಾದ ಹೊಸ ಪೇಜ್ ತೆರೆಯುತ್ತದೆ.!!

ನಿಮ್ಮ ನಂಬರ್ ನೀಡಿ ಕ್ಯಾಪ್ಚಾ ಎಂಟರ್ ಮಾಡಿ!!

ನಿಮ್ಮ ನಂಬರ್ ನೀಡಿ ಕ್ಯಾಪ್ಚಾ ಎಂಟರ್ ಮಾಡಿ!!

ಹೊಸ ಪೇಜ್ ತೆರೆದ ನಂತರ ನಿಮ್ಮ ನಂಬರ್ ನೀಡಿ ಕ್ಯಾಪ್ಚಾ ಎಂಟರ್ ಮಾಡಲು ತೀರಿಸುತ್ತದೆ. ಅಲ್ಲಿನ ಸೂಚನೆಗಳನ್ನು ಓದಿಕೊಂಡು ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನೀಡಿ. ನಂತರ ನಿಮಗೆ ಒನ್ ಟೈಮ್ ಪಾಸ್‌ವರ್ಡ್ ಬರುತ್ತದೆ. ಅದನ್ನು ಹಾಕಿ ಎಂಟರ್ ಒತ್ತಿರಿ

ಆಧಾರ್ ಕಾರ್ಡ್‌ ಲಾಕ್ ಆಗಿದೆ.!!

ಆಧಾರ್ ಕಾರ್ಡ್‌ ಲಾಕ್ ಆಗಿದೆ.!!

ಒನ್ ಟೈಮ್ ಪಾಸ್‌ವರ್ಡ್ ನೀಡಿ ಎಂಟರ್ ಒತ್ತಿದ ನಂತರ ನಿಮ್ಮ ಆಧಾರ್ ಕಾರ್ಡ್‌ ಲಾಕ್ ಆಗುತ್ತದೆ. ನಂತರ ನಿವು ಲಾಕ್ ಓಪನ್ ಮಾಡುವುದು ಇದೇ ರೀತಿಯಲ್ಲಿಯೇ ಇರುತ್ತದೆ. ಹಾಗೆಯೇ ನಿಮ್ಮ ಆಧಾರ್ ಕಾರ್ಡ್ ಸೇಫ್ ಆಗಿಯೂ ಇರುತ್ತದೆ.!!

ಓದಿರಿ:ಆನ್‌ಲೈನ್ ಬ್ಯಾಂಕಿಂಗ್ ವಂಚನೆ ಹಣಕ್ಕೆ ಯಾರು ಜವಬ್ದಾರರು? ಗ್ರಾಹಕರು ಏನು ಮಾಡಬೇಕು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Centralization of data will create various kind of problems to government and people.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot