Home
ಟೆಕ್ ನೌಕರಿ

ಆಧಾರ್‌ ಬಳಕೆದಾರರಿಗೆ ಗಡುವು ವಿಸ್ತರಣೆ: ನಿಮ್ಮ ಫೋನ್‌ನಲ್ಲಿ ಈ ಕೆಲಸ ಮಾಡಿ!

ಆಧಾರ್ ಇಂದು ಯಾವುದೇ ವ್ಯಕ್ತಿಯ ಅತ್ಯಗತ್ಯ ದಾಖಲೆಯಾಗಿ ಮಾರ್ಪಟ್ಟಿದ್ದು, ಈ ಕಾರಣಕ್ಕೆ ಬಹಳ ಮಹತ್ವಪೂರ್ಣ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ನೀವು ಹಲವಾರು ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಬಹುದು. ಇದರ ನಡುವೆ ಆಧಾರ್‌ ಬಳಕೆದಾರರಿಗೆ ನೀಡಿದ್ದ ಗಡುವನ್ನು ವಿಸ್ತರಣೆ ಮಾಡಲಾಗಿದೆ.

ಹೌದು, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ನೀಡಲಾಗಿದ್ದ ಗಡುವನ್ನು ವಿಸ್ತರಣೆ ಮಾಡಲಾಗಿದೆ. ಇನ್ನು ಕಳೆದ ವರ್ಷವಷ್ಟೇ ಚುನಾವಣಾ ಆಯೋಗವು ನೋಂದಾಯಿತ ಮತದಾರರಿಂದ ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್‌ ಮಾಡುವ ಅಭಿಯಾನವನ್ನು ಪ್ರಾರಂಭಿಸಿತು. ಹಾಗಿದ್ರೆ, ಇದನ್ನು ಹೇಗೆ ಮಾಡುವುದು?, ಕೊನೆ ದಿನಾಂಕ ಯಾವುದು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಧಾರ್‌ ಬಳಕೆದಾರರಿಗೆ ಗಡುವು ವಿಸ್ತರಣೆ: ನಿಮ್ಮ ಫೋನ್‌ನಲ್ಲಿ ಈ ಕೆಲಸ ಮಾಡಿ!

ಆಧಾರ್‌ ಲಿಂಕ್‌ ಮಾಡಲು ದಿನಾಂಕ ವಿಸ್ತರಣೆ: ಇನ್ನೇನು ಕೆಲವು ತಿಂಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಘೋಷಣೆ ಆಗುತ್ತಿದ್ದು, ಈ ಮೊದಲೇ ನೀವು ನಿಮ್ಮ ವೋಟರ್‌ ಐಡಿ ಕಾರ್ಡ್‌ಗೆ ಆಧಾರ್‌ ಅನ್ನು ಲಿಂಕ್‌ ಮಾಡಬೇಕಿದೆ. ಇನ್ನು ಏಪ್ರಿಲ್ 1, 2023 ಕ್ಕೆ ಇದ್ದ ಕೊನೇ ಗಡುವು ಇದೀಗ ಮಾರ್ಚ್ 31, 2024 ರವರೆಗೆ ವಿಸ್ತರಣೆ ಆಗಿದೆ. ಈ ಮೂಲಕ ಯಾರ್ಯಾರು ಈವರೆಗೆ ಆಧಾರ್‌ ಲಿಂಕ್‌ ಮಾಡಿಲ್ಲವೋ ತಕ್ಷಣವೇ ಲಿಂಕ್‌ ಮಾಡಿ.

ಲಿಂಕ್ ಪ್ರಕ್ರಿಯೆ ಹೇಗಿರಲಿದೆ?: ಕಳೆದ ವರ್ಷ ಜೂನ್ 17 ರಂದು ಕಾನೂನು ಸಚಿವಾಲಯವು ಏಪ್ರಿಲ್ 1, 2023 ರ ಒಳಗೆ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಮತದಾರರ ಗುರುತಿನ ಚೀಟಿಗಳೊಂದಿಗೆ ಲಿಂಕ್ ಮಾಡಿಕೊಳ್ಳಿ ಎಂದು ಸೂಚಿಸಿತ್ತು. ಆದರೆ ಈಗ ಹಲವಾರು ಆಯ್ಕೆಗಳನ್ನು ನೀಡಿದೆ. ಜೊತೆಗೆ ಇದು ಕಡ್ಡಾಯವಲ್ಲ ಎಂದೂ ಸಹ ಹೇಳಿದೆ.

ಆಧಾರ್‌ ಬಳಕೆದಾರರಿಗೆ ಗಡುವು ವಿಸ್ತರಣೆ: ನಿಮ್ಮ ಫೋನ್‌ನಲ್ಲಿ ಈ ಕೆಲಸ ಮಾಡಿ!

ಉದ್ದೇಶ ಏನು?: ದೇಶದಲ್ಲಿ ನಡೆಯುವ ಹಲವಾರು ಚುನಾವಣೆ ಅಕ್ರಮಗಳನ್ನು ತಡೆಯಲು ಇದು ಸಹಾಯಕವಾಗಲಿದೆ. ಅಂದರೆ ನಕಲಿ ವೋಟರ್‌ ಐಡಿ ಮೂಲಕ ಮತದಾನ ಮಾಡುವುದು ಪ್ರತಿ ಬಾರಿ ನಡೆಯುವ ಪ್ರಕ್ರಿಯೆಯಾಗಿದೆ. ಹೀಗಾಗಿ ವೋಟರ್‌ ಐಡಿಯಲ್ಲಿ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಂಡುಕೊಳ್ಳುವ ಉದ್ದೇಶದಿಂದ ಚುನಾವಣಾ ಆಯೋಗ ಈ ನಿರ್ಧಾರ ಮಾಡಿದೆ. ಹಾಗಿದ್ರೆ, ನೀವು ಮನೆಯಲ್ಲೇ ಕುಳಿತು ಈ ಲಿಂಕ್‌ ಪ್ರಕ್ರಿಯೆ ನಡೆಸಲು ಈ ಕ್ರಮ ಅನುಸರಿಸಿ.

ಹಂತ 1 : ಮೊದಲು ನಿಮ್ಮ ಸ್ಮಾರ್ಟ್‌ಡಿವೈಸ್‌ ಬಳಕೆ ಮಾಡಿಕೊಂಡು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ನೀವು ಗೂಗಲ್‌ನಲ್ಲಿ nvsp.in ಎಂದು ಟೈಪ್ ಮಾಡಿದರೆ ಸಾಕು ಅಧಿಕೃತ ಪುಟ ತೆರೆದುಕೊಳ್ಳುತ್ತದೆ. ನಂತರ ಮೇನ್‌ ಪೇಜ್‌ನಲ್ಲಿ ಕಂಡು ಬರುವ ಪಟ್ಟಿಯಲ್ಲಿ ಹುಡುಕಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಗಮನಿಸಿ.

ಹಂತ 2 : ಬಳಿಕ ಈ ವಿಭಾಗದಲ್ಲಿ ನಿಮ್ಮ ಆಧಾರ್ ಸಂಖ್ಯೆ, ರಾಜ್ಯ , ಜಿಲ್ಲೆ ಸೇರಿದಂತೆ ಅಗತ್ಯ ವೈಯುಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ ಸರ್ಚ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಇದಾದ ನಂತರ ನಿಮ್ಮ ಸ್ಮಾರ್ಟ್‌ಫೋನ್‌ಗೆ ಅಥವಾ ನಿಮ್ಮ ಮೇಲ್‌ ಐಡಿಗೆ ಓಟಿಪಿ ಬರುತ್ತದೆ ಗಮನಿಸಿ.

ಆಧಾರ್‌ ಬಳಕೆದಾರರಿಗೆ ಗಡುವು ವಿಸ್ತರಣೆ: ನಿಮ್ಮ ಫೋನ್‌ನಲ್ಲಿ ಈ ಕೆಲಸ ಮಾಡಿ!

ಹಂತ 3: ನಿಮ್ಮ ಫೋನ್‌ಗೆ ಬಂದ ಓಟಿಪಿಯನ್ನು ಕೇಳಲಾದ ವಿಭಾಗದಲ್ಲಿ ಭರ್ತಿ ಮಾಡಿ. ಇದಾದ ನಂತರ ನಿಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ನಿಮ್ಮ ಆಧಾರ್ ಕಾರ್ಡ್‌ ಲಿಂಕ್‌ ಆಗುತ್ತದೆ. ಅದಾಗ್ಯೂ ನಿಮ್ಮ ಬಳಿ ಸ್ಮಾರ್ಟ್‌ಫೋನ್‌ ಇಲ್ಲ ಎಂದರೂ ಸಹ ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಲಿಂಕ್‌ ಮಾಡಬಹುದು.

ಹಂತ 1: ಈ ವಿಭಾಗದಲ್ಲಿ ನೀವು ಎಸ್‌ಎಮ್‌ಎಸ್‌ ಮೂಲಕ ಈ ಪ್ರಕ್ರಿಯೆ ನಡೆಸಬಹುದಾಗಿದೆ. ಅದರಂತೆ ನಿಮ್ಮ ಫೋನ್‌ನಲ್ಲಿ ವೋಟರ್ ಐಡಿಸಂಖ್ಯೆ ಹಾಗೂ ಆಧಾರ್‌ ಸಂಖ್ಯೆಯನ್ನು ಬರೆದು 166 ಅಥವಾ 51969 ಸಂಖ್ಯೆಗೆ ಎಸ್‌ಎಮ್‌ಎಸ್‌ ಕಳುಹಿಸಬಹುದು. ಈ ವೇಳೆ ನಿಮಗೆ ಕೆಲವು ಮಾಹಿತಿಯನ್ನು ಕೇಳಲಾಗುತ್ತದೆ, ಅದಕ್ಕೆ ತಕ್ಕ ಉತ್ತರಗಳನ್ನು ನೀಡುತ್ತಾ ಹೋಗಿ.

ಹಂತ 2 : ಅದಾಗ್ಯೂ ಈ ಮೇಲೆ ತಿಳಿಸಿದ ಮಾರ್ಗ ಸರಿಯಾಗಿ ಗೊತ್ತಾಗುವುದಿಲ್ಲ ಎಂದಾದರೆ ನೀವು ಕರೆ ಮಾಡುವ ಮೂಲಕ ನಿಮ್ಮ ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಮಾಡಬಹುದು ಇದಕ್ಕಾಗಿ ನೀವು ಸಹಾಯವಾಣಿ ಸಂಖ್ಯೆಯಾದ 1950 ಗೆ ಕರೆ ಮಾಡಬಹುದು. ಇದರಲ್ಲಿ ಕೇಳಲಾಗುವ ಮಾಹಿತಿಯನ್ನು ನೀಡಿದರೆ ಲಿಂಕ್‌ ಕಾರ್ಯ ಮುಗಿದಂತೆ.

Best Mobiles in India

English summary
deadline for linking Aadhaar number with Voter ID Card has been extended. here we explained how to link.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+