Subscribe to Gizbot

ನಿಮ್ಮ ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗಲು ಕಾರಣವೇನು ಗೊತ್ತಾ?!!

Written By:

ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸುವ ಬಹುದೊಡ್ಡ ತೊಂದರೆ ಎಂದರೆ, ಅದು ಬ್ಯಾಟರಿ ಬ್ಯಾಕಪ್ ಸಮಸ್ಯೆ.!! ಇನ್ನು ಈ ಬ್ಯಾಟರಿ ಸಮಸ್ಯೆಯಿಂದಾಗಿ ಎಲ್ಲರೂ ತೊಂದರೆ ಅನುಭವಿಸುತ್ತಿದ್ದರೆ ಕೆಲವೊಂದು ಆಪ್‌ಗಳು ನಿಮ್ಮ ಬ್ಯಾಟರಿಯನ್ನು ಅನಾವಶ್ಯಕವಾಗಿ ಖಾಲಿ ಮಾಡುತ್ತಿವೆ ಎಂದು ವರದಿಯೊಂದು ಹೇಳಿದೆ.!!

ದಿ ಇಂಡಿಪೆಂಡೆಂಟ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಹಲವು ಆಪ್‌ಗಳು ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಸರಾಗವಾಗಿ ಖಾಲಿ ಮಾಡುತ್ತಿದ್ದು, ಅದರಲ್ಲಿ ಫೇಸ್‌ಬುಕ್ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದೆ. ಇನ್ನು ಜೊತೆಗೆ ಯಾವ ಯಾವ ಆಪ್‌ಗಳು ಹೆಚ್ಚು ಬ್ಯಾಟರಿ ಕಾಲಿ ಮಾಡುತ್ತವೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದ್ದು, ಅವುಗಳು ಕೆಳಕಂಡಂತಿವೆ..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚು ಆಪ್‌ಗಳ ಬಳಕೆ ಮಾಡಬಾರದು.!!

ಹೆಚ್ಚು ಆಪ್‌ಗಳ ಬಳಕೆ ಮಾಡಬಾರದು.!!

ನೂರಾರು ಆಪ್‌ಗಳಿವೆ ಎಂದು ಹೆಚ್ಚು ಆಪ್‌ಗಳ ಬಳಕೆ ಮಾಡಿದರೆ ಬ್ಯಾಟರಿ ಬೇಗ ಮುಗಿಯುವುದರಲ್ಲಿ ಅನುಮಾನವಿಲ್ಲ.!! ಇನ್ನು ಒಂದೊಂದು ಆಪ್‌ ಅನ್ನು ತೆರೆದು ಹಾಗೆಯೇ ಬಿಟ್ಟರೆ ದಿವಸಗಳ ಬರಬೇಕಿದ್ದ ಬ್ಯಾಟರಿ ಚಾರ್ಜ್ ಕೆಲವೇ ಗಂಟೆಗಳಿಗೆ ಸೀಮಿತವಾಗುತ್ತದೆ.!!

ಹಾಗಾದರೆ ಆಪ್‌ ಬಳಕೆ ಹೇಗೆ?

ಹಾಗಾದರೆ ಆಪ್‌ ಬಳಕೆ ಹೇಗೆ?

ಯಾವುದೇ ಬ್ಯಾಟರಿ ಖಾಲಿ ಮಾಡುವಂತಹ ಆಪ್‌ ಅನ್ನು ಬಳಸುವ ಬದಲು ವೆಬ್ ಬ್ರೌಸರ್‌ನಲ್ಲಿ ಇಂಟರ್‌ನೆಟ್ ಬಳಕೆ ಮಾಡಿ. ಇದರಿಂದ ನಿಮಗೆ ಬೇಕಾದಾಗ ಅವುಗಳ ಬಳಕೆ ಮಾಡಿ ಬೇಡವಾದಾಗ ಅವುಗಳನ್ನು ಬಟ್ಟುಬಿಡಿ. ಇದರಿಂದಾಗಿ ನಿಮ್ಮ ಬ್ಯಾಟರಿ ಬಳಕೆ ಹೆಚ್ಚುತ್ತದೆ.

ಯಾವ ಯಾವ ಆಪ್‌ಗಳು ಹೆಚ್ಚು ಬ್ಯಾಟರಿ ಬಳಸುತ್ತವೆ.!!

ಯಾವ ಯಾವ ಆಪ್‌ಗಳು ಹೆಚ್ಚು ಬ್ಯಾಟರಿ ಬಳಸುತ್ತವೆ.!!

ದಿ ಇಂಡಿಪೆಂಡೆಂಟ್ ವರದಿ ಪ್ರಕಾರ ಫೇಸ್‌ಬುಕ್, ಸ್ಯಾಮ್ಸಂಗ್ ವೋಕನ್, ಸ್ಯಾಮ್ಸಂಗ್ ವಿಡಿಯೋ ಎಡಿಟರ್, ನೆಟ್ಫಿಕ್ಸ್, Spot fame ಮ್ಯೂಜಿಕ್, ಸ್ನಾಪ್‌ಚಾಟ್, ಕ್ಲೀನ್ ಮಾಸ್ಟರ್, ಮೆಸೇಂಜರ್, ಮೈಕ್ರೋಸಾಫ್ಟ್ ಔಟ್‌ಲುಕ್ ಆಪ್‌ಗಳು ಹೆಚ್ಚು ಬ್ಯಾಟರಿ ಖರ್ಚು ಮಾಡುತ್ತವೆ.

ಅತ್ಯುತ್ತಮ ಚಾರ್ಜರ್ ಬಳಕೆ ಮಾಡಿ.!!

ಅತ್ಯುತ್ತಮ ಚಾರ್ಜರ್ ಬಳಕೆ ಮಾಡಿ.!!

ಈ ವರದಿಯಲ್ಲಿ ಇದನ್ನು ಹೇಳದಿದ್ದರೂ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರುವಂತೆ ಮಾಡಲು ಮೊಬೈಲ್‌ಗೆ ನೀಡುರುವ ಚಾರ್ಜ್ರ್ ಅನ್ನು ಮಾತ್ರ ಬಳಸಿ. ಎಲ್ಲಾ ಮೊಬೈಲ್‌ ಕಂಪೆನಿಗಳು ಹೇಳುವಂತೆ ಮೊಬೈಲ್ ಮತ್ತು ಅದಕ್ಕೆ ನೀಡಿರುವ ಚಾರ್ಜರ್ ಬದಲಾದರೆ ಮೊಬೈಲ್ ಬ್ಯಾಟರಿ ಖಾಲಿಯಾಗುವುದಲ್ಲದೆ. ಮೊಬೈಲ್ ಕೂಡ ಹಾಳಾಗುತ್ತವೆ ಎಂದು ಹೇಳುತ್ತವೆ.!!

ಓದಿರಿ:ಹೊಸ ಜಿಯೋ ಸಿಮ್​ ಖರೀದಿಸಿದರೆ ಭಾರಿ ಆಫರ್...ಮತ್ತೆ ಕ್ಯಾಶ್‌ಬ್ಯಾಕ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
tips to better your smartphone battery life. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot